ಬ್ರೇಕ್ ಅಪ್ ನಿಂದ ಹುಡುಗಿಯರಿಗೆ ಮಾತ್ರವಲ್ಲ, ಹುಡುಗರಿಗೂ ತುಂಬಾನೆ ನೋವಾಗುತ್ತೆ. ಬ್ರೇಕ್ ಅಪ್ ನಿಂದ ನೊಂದ ಹುಡುಗರು ಅದರಿಂದ ಹೇಗೆ ಹೊರಬರಬೇಕು ಎಂದು ಯೋಚನೆ ಮಾಡುತ್ತಿದ್ದರೆ, ಈ ಲೇಖನ ನಿಮಗಾಗಿ.
ಪ್ರೀತಿಯಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ನಿಷ್ಠಾವಂತರಾಗಿರುತ್ತಾರೆ ಅನ್ನೋದನ್ನು ನಾವು ಯಾವಾಗಲೂ ಕೇಳಿದ್ದೇವೆ. ಇದು ಸ್ವಲ್ಪ ಮಟ್ಟಿಗೆ ನಿಜವೂ ಹೌದು. ಮೋಸ ಮಾಡೋ ಪ್ರಕರಣಗಳಲ್ಲಿ ಹೆಚ್ಚಾಗಿ ಪುರುಷರ ಹೆಸರೇ ಕೇಳಿ ಬರುತ್ತೆ, ಇದು ಮಾತ್ರವಲ್ಲ, ರಿಲೇಶನ್ ಶಿಪ್ (relationship)ನಲ್ಲಿ ಇರೋವಾಗ್ಲೇ, ಹುಡುಗರು ಇನ್ನೂ ಅನೇಕ ಹುಡುಗಿಯರೊಂದಿಗೆ ಡೇಟಿಂಗ್ ಮಾಡೋದನ್ನು ಸಹ ನಾವು ನೋಡ್ತೇವೆ. ಈ ಕಾರಣದಿಂದಾಗಿ ಬ್ರೇಕ್ ಅಪ್ ಉಂಟಾಗುತ್ತೆ.
211
ಆದರೆ ಎಲ್ಲಾ ಪುರುಷರು ಅಥವಾ ಮಹಿಳೆಯರು ಒಂದೇ ರೀತಿ ಆಗಿರೋದಿಲ್ಲ. ನಿಜವಾದ ಪ್ರೀತಿಗೆ ಹಾತೊರಿಯುವ ಅದೆಷ್ಟೋ ಪುರುಷರು ಸಹ ಇದ್ದಾರೆ. ಒಂದು ವೇಳೆ ಬ್ರೇಕ್ ಅಪ್ (breakup)ಆಗಿ ತನ್ನ ಸಂಗಾತಿಯಿಂದ ಬೇರ್ಪಟ್ಟಾಗ ಮಹಿಳೆ ಅನುಭವಿಸುವುದಕ್ಕಿಂತ ಹೆಚ್ಚಿನ ನೋವನ್ನು ಅನುಭವಿಸುವ ಪುರುಷರು ಸಹ ಇದ್ದಾರೆ. ಬ್ರೇಕ್ ಅಪ್ ನಿಂದಾಗಿ ಅನೇಕ ಹುಡುಗರ ಜೀವನವೇ ನಿಂತು ಹೋಗುತ್ತೆ. ಈ ಲೇಖನ ಬ್ರೇಕ್ ಅಪ್ ನಿಂದ ನೊಂದಿರುವ ಹುಡುಗರಿಗಾಗಿ, ಬ್ರೇಕ್ ಅಪ್ ನಂತರ ಏನು ಮಾಡಬೇಕು ತಿಳಿಯಿರಿ….
311
ಬ್ರೇಕಪ್ ಸ್ವೀಕರಿಸಿ (Accept breakup): ಬ್ರೇಕಪ್ ನಂತರ ದುಃಖ, ಒಂಟಿತನ ಮತ್ತು ಕೋಪದಂತಹ ಅನೇಕ ಭಾವನೆಗಳನ್ನು ಅನುಭವಿಸುವುದು ಸಹಜ. ಬ್ರೇಕಪ್ ಉಂಟಾದಾಗ ಆ ದುಃಖ ಹೊರಬರಲಿ ಮತ್ತು ಎಲ್ಲಾ ಭಾವನೆಗಳನ್ನು ಹೃದಯದಿಂದ ಸ್ವೀಕರಿಸಿ.
411
ತಕ್ಷಣ ಮತ್ತೊಂದು ರಿಲೇಶನ್ ಶಿಪ್ ಬೇಡವೇ ಬೇಡ: ಕೆಲವೊಮ್ಮೆ ಏನಾಗುತ್ತದೆ ಎಂದರೆ,ಬ್ರೇಕಪ್ ಮಾಡಿದ ಹುಡುಗಿಗೆ ಕೋಪ, ಅಸೂಯೆ ಹುಟ್ಟಿಸಲು ಹುಡುಗರು ತಕ್ಷಣ ಮತ್ತೊಂದು ರಿಲೇಶನ್ ಶಿಪ್ ಗೆ ಹುಡುಕುತ್ತಾರೆ . ಇದು ತುಂಬಾ ತಪ್ಪು ನಿರ್ಧಾರ. ಬ್ರೇಕಪ್ ನಂತರ ಸ್ವಲ್ಪ ಸಮಯದವರೆಗೆ ಏಕಾಂಗಿಯಾಗಿರಿ. ಮನಸ್ಸು ಶಾಂತವಾದಾಗ ಮುಂದಿನ ನಿರ್ಧಾರ ತೆಗೆದುಕೊಂಡರೆ ಉತ್ತಮ.
511
ಸಂಬಂಧವನ್ನು ಪರಿಗಣಿಸಿ: ಒಮ್ಮೆ ಬ್ರೇಕಪ್ ನಂತರ, ಒಬ್ಬಂಟಿಯಾಗಿ ಕುಳಿತು ಸಂಬಂಧದಲ್ಲಿ ಏನು ತಪ್ಪಾಗಿದೆ ಮತ್ತು ನೀವು ಏನು ಕಲಿತಿದ್ದೀರಿ ಎಂಬುದರ ಬಗ್ಗೆ ಯೋಚಿಸಿ. ನಿಮ್ಮ ಸ್ವಯಂ ಬೆಳವಣಿಗೆಗೆ (self development)ಇದು ಬಹಳ ಮುಖ್ಯ. ಇದರಿಂದ ನೀವು ಮತ್ತೆ ಅಂತಹ ತೊಂದರೆಯನ್ನು ಎದುರಿಸಬೇಕಾಗಿಲ್ಲ.
611
ನಿಮಗೆ ಸಮಯ ನೀಡಿ: ಪ್ರತಿಯೊಂದು ಗಾಯವನ್ನು ಗುಣಪಡಿಸಲು ಸಮಯ ಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬ್ರೇಕಪ್ ನಂತರ ನಿಮಗೆ ಪೂರ್ಣ ಸಮಯವನ್ನು(give time for yourself) ನೀಡಿ. ಶಾಂತ ಮನಸ್ಸಿನಿಂದ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಿ. ಮತ್ತೆ ಕೊರಗುವಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
711
ಕಡಿಮೆ ಜನರೊಂದಿಗೆ ಸಂಪರ್ಕದಲ್ಲಿರಿ: ಕನಿಷ್ಠ ಸ್ವಲ್ಪ ಸಮಯವಾದರೂ ನಿಮ್ಮ ಆಪ್ತರಿಂದ ದೂರವಿರಿ. ಇದು ನಿಮ್ಮನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಜನರ ಅಭಿಪ್ರಾಯಗಳಿಂದ ನಿಮ್ಮನ್ನು ದೂರವಿಡಿ ಏಕೆಂದರೆ ಪ್ರತಿಯೊಬ್ಬರೂ ನಿಮ್ಮ ನೋವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿಲ್ಲ. ಆದ್ದರಿಂದ ನಿಮ್ಮ ನೋವನ್ನು ಎಲ್ಲರೊಂದಿಗೂ ಹಂಚಿಕೊಳ್ಳಬೇಡಿ.
811
ನಿಮ್ಮ ಬಗ್ಗೆ ಕಾಳಜಿ ವಹಿಸಿ: ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ (physical and mental health) ಬಗ್ಗೆ ಕಾಳಜಿ ವಹಿಸಿ. ನಿಮಗೆ ಸಂತೋಷವನ್ನುಂಟುಮಾಡುವ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ವ್ಯಾಯಾಮ ಮಾಡಿ, ಚೆನ್ನಾಗಿ ತಿನ್ನಿ ಮತ್ತು ಸಾಕಷ್ಟು ನಿದ್ರೆ ಮಾಡಿ.
911
ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಿರಿ: ನಿಮ್ಮ ಬಗ್ಗೆ ಕಾಳಜಿ ವಹಿಸುವ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಿರಿ. ಅಷ್ಟೇ ಅಲ್ಲ, ಎಲ್ಲವನ್ನೂ ಮರೆತು ಅವರೊಂದಿಗೆ ಸಾಕಷ್ಟು ಮಾತನಾಡಿ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತೆ.
1011
ನಿಮ್ಮನ್ನು ಬಲಪಡಿಸಿಕೊಳ್ಳಿ: ಸಂಬಂಧ ಮುರಿದುಬಿದ್ದ ನಂತರ ನೀವು ದುರ್ಬಲರಾಗುವುದು ಸಹಜ. ಅಂತಹ ಪರಿಸ್ಥಿತಿಯಲ್ಲಿ, ನೀವು ಕುಗ್ಗದಂತೆ ನಿಮ್ಮನ್ನು ರಕ್ಷಿಸಿಕೊಳ್ಳಬೇಕು. ಯಾವುದೂ ನಿಮ್ಮ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ನಿಮ್ಮನ್ನು ಒಳಗಿನಿಂದ ಬಲಪಡಿಸುವತ್ತ ಗಮನ ಹರಿಸಿ.
1111
ಮಾನಸಿಕ ಆರೋಗ್ಯ: ಬ್ರೇಕಪ್ ಸಮಯದಲ್ಲಿ, ನಾವು ಅನೇಕ ವಿಷಯಗಳನ್ನು ಎದುರಿಸುತ್ತೇವೆ. ಇದು ನಮ್ಮ ಮಾನಸಿಕ ಆರೋಗ್ಯದ (mental health) ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಒಂಟಿತನವನ್ನು ಅನುಭವಿಸಿದರೆ, ನಿಮ್ಮ ಮನಸ್ಸಿನ ನೋವನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ಬಯಸಿದರೆ, ಉತ್ತಮ ಮನಶ್ಶಾಸ್ತ್ರಜ್ಞರನ್ನು ಸಂಪರ್ಕಿಸಿ. ಈ ನೋವಿನಿಂದ ಹೊರಬರಲು ನೀವು ಸಾಕಷ್ಟು ಸಹಾಯವನ್ನು ಸಹ ಪಡೆಯುತ್ತೀರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.