ಅಬ್ಬಾ! ಈ ಸಂಖ್ಯೆಯ ಜನರು ಬ್ರೇಕಪ್ ಆದ್ರೂ ಬೇಜಾರು ಮಾಡಿಕೊಳ್ದೆ ಬೇಗನೆ ಮರಿತಾರೆ

Published : Jul 03, 2026, 12:47 PM IST

ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ಸಂಖ್ಯೆಗಳನ್ನು ಹೊಂದಿರುವ ಕೆಲವು ಜನರು ಬ್ರೇಕಪ್ ನಂತರ ಬೇಗ ಮೂ ಆನ್‌ ಆಗ್ತಾರೆ. ಅವರು ಭಾವನೆಗಳು ಮತ್ತು ಸಂಬಂಧಗಳನ್ನು ನಿಭಾಯಿಸುವರಲ್ಲಿ ತುಂಬಾ ಭಿನ್ನರಾಗಿದ್ದಾರೆ. 

PREV
15
ಬ್ರೇಕಪ್ ನಂತರ ಬೇಗ ಮೂ ಆನ್‌ ಆಗುವವರು

ಬ್ರೇಕಪ್ ನಂತರ ನೋವು ಪ್ರತಿಯೊಬ್ಬರಿಗೂ ಸಹಜ. ಕೆಲವರು ಹಿಂದಿನ ಸಂಬಂಧದ ನೆನಪುಗಳನ್ನು ತಿಂಗಳುಗಟ್ಟಲೆ ಮರೆಯಲು ಕಷ್ಟ ಪಡುತ್ತಾರೆ, ಇನ್ನು ಕೆಲವರು ಬೇಗನೆ ತಮ್ಮ ಜೀವನವನ್ನು ಹೊಸದಾಗಿ ಬದುಕಲು ಪ್ರಾರಂಭಿಸುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ವ್ಯಕ್ತಿಯ ರಾಡಿಕ್ಸ್ ಸಂಖ್ಯೆಯು ಅವರ ಸ್ವಭಾವ, ಭಾವನಾತ್ಮಕ ಪ್ರತಿಕ್ರಿಯೆಗಳು ಮತ್ತು ಅವರು ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದೆ.ಬ್ರೇಕಪ್ ನಂತರ ಬೇಗ ಮೂ ಆನ್‌ ಆಗುವ ರಾಡಿಕ್ಸ್ ಸಂಖ್ಯೆಯ ವ್ಯಕ್ತಿಗಳ ಬಗ್ಗೆ ನೋಡಿ.

25
ಮೂಲ ಸಂಖ್ಯೆ (5, 14, 23)

ಸಂಖ್ಯಾಶಾಸ್ತ್ರದಲ್ಲಿ 5 ನೇ ಸಂಖ್ಯೆಯನ್ನು ಬುಧ ಗ್ರಹ ಆಳುತ್ತದೆ. ಬುಧವು ಬದಲಾವಣೆಯಾದಾಗೆಲ್ಲ ಸಂವಹನ ಮತ್ತು ಹೊಸ ಸಂದರ್ಭಗಳಿಗೆ ಹೊಂದಿಕೊಳ್ಳುವುದ ಮೇಲೆ ಪ್ರಭಾವ ಭೀರುತ್ತದೆ. ಈ ವ್ಯಕ್ತಿಗಳು ಬ್ರೇಕಪ್ ನಂತರ ಬೇಜಾರ್‌ ಆಗಬಹುದು, ಆದರೆ ಅವರು ಹಳೆಯ ನೆನಪುಗಳಲ್ಲಿ ಹೆಚ್ಚು ಕಾಲ ಗೋಳಾಡುವುದಿಲ್ಲ. ಅವರು ತಮ್ಮ ಕೆಲಸ, ಸ್ನೇಹಿತರ ಜೊತೆ ಸಮಯ ಕಳೆಯುವುದುದರಿಂದ ಎಲ್ಲವನ್ನುಮರೆಯುತ್ತಾರೆ. ಅವರು ಜೀವನದ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ, ಅದಕ್ಕಾಗಿಯೇ ಜನರು ಅವರನ್ನು ಭಾವನೆರಹಿತರು ಎಂದು ತಪ್ಪಾಗಿ ಭಾವಿಸುತ್ತಾರೆ.

35
ಮೂಲ ಸಂಖ್ಯೆ (3, 12, 21 ಅಥವಾ 30)

ಈ ಸಂಖ್ಯೆಯಲ್ಲಿ ಜನಿಸಿದವರು ಗುರು ಗ್ರಹದ ಪ್ರಭಾವಕ್ಕೆ ಒಳಗಾಗುತ್ತಾರೆ. ಭಾವನಾತ್ಮಕವಾಗಿದ್ದರೂ, ಈ ವ್ಯಕ್ತಿಗಳು ಪ್ರಾಕ್ಟಿಕಲ್ ಆಗಿರುತ್ತಾರೆ. ಬ್ರೇಕಪ್ ನಂತರ ಅವರು ತಮ್ಮ ಅಧ್ಯಯನ, ವೃತ್ತಿ ಮತ್ತು ವ್ಯಕ್ತಿತ್ವದ ಮೇಲೆ ಗಮನಹರಿಸಲು ಬಯಸುತ್ತಾರೆ. ಅವರು ಕಳೆದು ಹೋದ ದಿನಗಳನ್ನು ಮೆಲುಕು ಹಾಕುವ ಬದಲು, ಭವಿಷ್ಯದ ಬಗ್ಗೆ ಹೆಚ್ಚಿನ ಯೋಚನೆ ಮಾಡುತ್ತಾರೆ, ಇದರಿಂದಾಗಿ ಅವರು ವೇಗವಾಗಿ ಮುಂದುವರಿಯುತ್ತಾರೆ.

45
ಮೂಲ ಸಂಖ್ಯೆ (1, 10, 19, 28)

ನಂಬರ್ 1 ಇರುವ ಜನರು ಸ್ವಾಭಾವಿಕವಾಗಿಯೇ ಆತ್ಮವಿಶ್ವಾಸ ಮತ್ತು ಸ್ವಾಭಿಮಾನಿಗಳಾಗಿರುತ್ತಾರೆ. ಸಂಬಂಧ ಮುರಿದುಬಿದ್ದರೂ ಸಹ, ಅವರು ನೆನಪುಗಳ ಬಗ್ಗೆ ಯೋಚಿಸುವ ಬದಲು ಅವುಗಳನ್ನು ನಿರ್ಲಕ್ಷಿಸುತ್ತಾರೆ. ಆರಂಭದಲ್ಲಿ ಅವರಿಗೆ ಬ್ರೇಕ್ ಅಪ್ ನ ನೋವು ಅನಿಸುತ್ತದೆ, ಆದರೆ ಸಮಯ ಕಳೆದಂತೆ ಹಳೆಯ ನೆನಪುಗಳು ಅವರಿಗೆ ಕಡಿಮೆ ಮುಖ್ಯವಾಗುತ್ತವೆ. ಅದಕ್ಕಾಗಿಯೇ ನಂಬರ್ 1 ಇರುವ ಜನರು ಬ್ರೇಕ್ ಅಪ್ ನಂತರ ಬೇಗನೆ ಚೇತರಿಸಿಕೊಳ್ಳುತ್ತಾರೆ.

55
ಸಂಖ್ಯಾಶಾಸ್ತ್ರ

ಸಂಖ್ಯಾಶಾಸ್ತ್ರದಲ್ಲಿ, 5 ನೇ ಸಂಖ್ಯೆ ಹೊಂದಿರುವ ವ್ಯಕ್ತಿಗಳು ಬೇಗನೆ ಮುಂದುವರಿಯುತ್ತಾರೆ, ಆದರೆ 3 ಮತ್ತು 1 ನೇ ಸಂಖ್ಯೆ ಹೊಂದಿರುವ ವ್ಯಕ್ತಿಗಳು ವಿಘಟನೆಯಿಂದ ಹೊರಬರಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ, ಆದರೆ ಅವರು ತಮ್ಮ ಜೀವನವನ್ನು ಮುಂದುವರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದು ಕೇವಲ ಸಾಮಾನ್ಯ ಪ್ರವೃತ್ತಿಯಾಗಿದ್ದರೂ, ಪ್ರತಿಯೊಬ್ಬ ವ್ಯಕ್ತಿಯ ಅನುಭವ ಮತ್ತು ಪ್ರತಿಕ್ರಿಯೆ ವಿಭಿನ್ನವಾಗಿರಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories