ಲ್ಯಾವೆಂಡರ್‌ ಸೀರೆಯುಟ್ಟು ಗಂಡನ ಜೊತೆ ಮುದ್ದಾದ ಫೋಟೋವನ್ನು ಶೇರ್ ಮಾಡಿದ ನಯನತಾರಾ

Published : Apr 21, 2024, 03:01 PM ISTUpdated : Apr 21, 2024, 03:09 PM IST

ದಕ್ಷಿಣದ ಲೇಡಿ ಸೂಪರ್ ಸ್ಟಾರ್ ಎಂಬ ಪಟ್ಟವನ್ನು ಅಲಂಕರಿಸಿರುವ ನಯನತಾರಾ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಅಕೌಂಟ್ ಮಾಡಿರುವ ನಯನತಾರಾ, ಫೋಟೋಗಳನ್ನು ಶೇರ್ ಮಾಡ್ತಿರ್ತಾರೆ. ಇತ್ತೀಚಿಗೆ ಗಂಡ ವಿಘ್ನೇಶ್ ಶಿವನ್ ಜೊತೆಗಿರುವ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

PREV
17
ಲ್ಯಾವೆಂಡರ್‌ ಸೀರೆಯುಟ್ಟು ಗಂಡನ ಜೊತೆ ಮುದ್ದಾದ ಫೋಟೋವನ್ನು ಶೇರ್ ಮಾಡಿದ ನಯನತಾರಾ

ದಕ್ಷಿಣದ ಲೇಡಿ ಸೂಪರ್ ಸ್ಟಾರ್ ಎಂಬ ಪಟ್ಟವನ್ನು ಅಲಂಕರಿಸಿರುವ ನಯನತಾರಾ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಅಕೌಂಟ್ ಮಾಡಿರುವ ನಯನತಾರಾ, ಫೋಟೋಗಳನ್ನು ಶೇರ್ ಮಾಡ್ತಿರ್ತಾರೆ. ಇತ್ತೀಚಿಗೆ ಗಂಡ ವಿಘ್ನೇಶ್ ಶಿವನ್ ಜೊತೆಗಿರುವ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

27

ಬಿಳಿ ಪಂಚೆ ಹಾಗೂ ಶರ್ಟ್‌ ಉಟ್ಟುಕೊಂಡಿರುವ ವಿಘ್ನೇಶ್ ಶಿವನ್‌ ಪತ್ನಿ ನಯನತಾರಾ ಜೊತೆ ಸುಂದರವಾಗಿ ಫೋಸ್ ಕೊಟ್ಟಿದ್ದಾರೆ. ಇನ್ನು ನಯನತಾರಾ ಲ್ಯಾವೆಂಡರ್‌ ಕಲರ್ ಸೀರೆಯಲ್ಲಿ ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದಾರೆ.

37

ಲ್ಯಾವೆಂಡರ್‌ ಬಣ್ಣದ ಸೀರೆಗೆ ನಯನತಾರಾ ತ್ರಿ ಲೇಯರ್‌ನ ಆಕ್ಸಿಡೈಸ್ಡ್‌ ನೆಕ್ಲೇಸ್‌ ಹಾಗೂ ಕಿವಿಯೋಲೆ ಧರಿಸಿದ್ದರು. ಮುಡಿ ತುಂಬಾ ಮಲ್ಲಿಗೆ ಮುಡಿದು ಸಾಂಪ್ರದಾಯಿಕವಾಗಿ ಕಂಗೊಳಿಸುತ್ತಿದ್ದರು.

47

2022ರಲ್ಲಿ ನಟಿ ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದ್ವೆಯಾದ ಬೆನ್ನಲ್ಲೇ  ಅವಳಿ ಮಕ್ಕಳಿಗೆ ಪೋಷಕರಾದರು.

57

ಬಾಡಿಗೆ ತಾಯ್ತನದ ಮೂಲಕ ನಯನತಾರಾ ಇಬ್ಬರು ಗಂಡು ಮಕ್ಕಳನ್ನು ಹೊಂದಿದರು.ಮಕ್ಕಳಿಗೆ ಹೆಸರು ಉಯಿರ್‌ ಮತ್ತು ಉಳಗಂ ಎಂದು ಹೆಸರಿಡಲಾಗಿದೆ. ನಯನತಾರಾ ಆಗಾಗ ತಮ್ಮ ಮಕ್ಕಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿರ್ತಾರೆ.

67

‘ಜವಾನ್’ ಚಿತ್ರದ ಸಮಯದಲ್ಲಿ ಇನ್‌ಸ್ಟಾಗ್ರಾಮ್‌ ಖಾತೆ ತೆರೆದಿದ್ದರು. ಅಲ್ಲಿಯವರೆಗೂ ಪತಿ ವಿಘ್ನೇಶ್ ಅವರ ಇನ್‌ಸ್ಟಾ ಪುಟದಿಂದಲೇ ಮಾಹಿತಿ ಶೇರ್‌ ಮಾಡುತ್ತಿದ್ದರು. 

77

ಮಾಧ್ಯಮ ವರದಿಗಳ ಪ್ರಕಾರ ನಟಿ ನಯನತಾರಾ ಟಾಟಾ ಸ್ಕೈನ 50 ಸೆಕೆಂಡ್‌ ಜಾಹೀರಾತಿಗೆ 5 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಾರೆ. ನಯನತಾರಾ ಒಂದು ಸಿನಿಮಾಗೆ ಅಂದಾಜು 10 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಾರೆ ಎಂದು ವರದಿಯಾಗಿದೆ.

Read more Photos on
click me!

Recommended Stories