ನಟ ರವಿಕಿಶನ್ ನನ್ನ ಜೈವಿಕ ತಂದೆ, ಡಿಎನ್ಎ ಪರೀಕ್ಷೆ ನಡೆಸುವಂತೆ ಕೋರ್ಟ್ ಮೆಟ್ಟಿಲೇರಿದ ಯುವತಿ

First Published | Apr 21, 2024, 2:51 PM IST

25 ವರ್ಷದ ಯುವತಿಯೊಬ್ಬಳು ತಾನು ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಅವರ ಜೈವಿಕ ಮಗಳಾಗಿದ್ದು, ಡಿಎನ್‌ಎ ಪರೀಕ್ಷೆಗೆ ಆದೇಶಿಸುವಂತೆ ಮುಂಬೈನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. 

25 ವರ್ಷದ ಯುವತಿಯೊಬ್ಬಳು ತಾನು ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಅವರ ಜೈವಿಕ ಮಗಳಾಗಿದ್ದು, ಡಿಎನ್‌ಎ ಪರೀಕ್ಷೆಗೆ ಆದೇಶಿಸುವಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮುಂಬೈನ ಕೋರ್ಟ್‌ ಒಂದರಲ್ಲಿ ಗೋರಕ್‌ಪುರದ ಬಿಜೆಪಿ ಅಭ್ಯರ್ಥಿ ಹಾಲಿ ಸಂಸ್ ಹಾಗೂ ನಟ ರವಿಕಿಶನ್ ವಿರುದ್ಧ ಯುವತಿ ದೂರು ದಾಖಲಿಸಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಶಿನೋವಾ ಎಂಬಾಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನಟ ರವಿ ಕಿಶನ್ ಹಾಗೂ ಅಪರ್ಣಾ ಸೋನಿ  ನಡುವಿನ, ಸಂಬಂಧದಿಂದ ಜನಿಸಿದಾಕೆ ತಾನಾಗಿದ್ದು, ತನ್ನನ್ನು ರವಿಕಿಶನ್ ಅವರ ಜೈವಿಕ ಪುತ್ರಿ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. 

Tap to resize

ಅಲ್ಲದೇ ಕಿಶನ್ ಅವರು ತನ್ನನ್ನು ಜೈವಿಕ ಮಗಳಾಗಿ ಸ್ವೀಕರಿಸಲು ನಿರಾಕರಿಸದಂತೆ ಶಾಶ್ವತ ತಡೆಯಾಜ್ಞೆ ತರಲು ಆಗ್ರಹಿಸಿದ್ದಾರೆ. ಇದರ ಜೊತೆ ಉತ್ತರ ಪ್ರದೇಶದ ಲಕ್ನೋದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದು ಪಡಿಸುವಂತೆ ಅವರು ಬಾಂಬೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಮೂರು ದಿನಗಳ ಹಿಂದೆ ರವಿ ಕಿಶನ್ ಅವರ ಅಧಿಕೃತ ಪತ್ನಿ ಪ್ರೀತಿ ಶುಕ್ಲಾ ಅವರ ದೂರಿನ ಮೇರೆಗೆ ಲಕ್ನೋದಲ್ಲಿ ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 195 (ಸುಳ್ಳು ಸಾಕ್ಷ್ಯ ನೀಡುವುದು ಅಥವಾ ನಿರ್ಮಿಸುವುದು) 386 (ಸುಲಿಗೆ), 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.


ಏಪ್ರಿಲ್ 15 ರಂದು ಅಪರ್ಣಾ ಎಂಬ ಮಹಿಳೆ ಲಕ್ನೋದಲ್ಲಿ ಸುದ್ದಿಗೋಷ್ಠಿ ನಡೆಸಿ ತನ್ನ ಪುತ್ರಿಯನ್ನು  ರವಿಕಿಶನ್ ಸಾರ್ವಜನಿಕವಾಗಿ ತನ್ನ ಮಗಳೆಂದು ಒಪ್ಪಿಕೊಳ್ಳಬೇಕು ತಪ್ಪಿದಲ್ಲಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿಕೊಂಡಿದ್ದರು. 

ತಾನು 1996ರಲ್ಲಿ ರವಿಕಿಶನ್ ಅವರನ್ನು ಮದ್ವೆಯಾಗಿದ್ದೇನೆ, ನಮ್ಮಿಬ್ಬರಿಗೆ ಒಬ್ಬಳು  ಮಗಳಿದ್ದಾಳೆ. ಆಕೆಯನ್ನು ರವಿ ಕಿಶನ್ ತಮ್ಮ ಮಗಳೆಂದು ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು ಇಲ್ಲದೇ ಹೋದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದರು. ಇದಾದ ನಂತರ ರವಿ ಕಿಶನ್ ಅಧಿಕೃತ ಪತ್ನಿ ಲಕ್ನೋದಲ್ಲಿ ಇವರ ವಿರುದ್ಧ ದೂರು ದಾಖಲಿಸಿದ್ದರು.

ಇದಕ್ಕೆ ಪ್ರತಿಯಾಗಿ ರವಿ ಕಿಶನ್ ವಿರುದ್ಧ ಯುವತಿ ಶೆನೋವಾ ಮುಂಬೈನ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಡಿಎನ್‌ಎ ಪರೀಕ್ಷೆಗೆ ಆಗ್ರಹಿಸಿದ್ದಾರೆ. ರವಿ ಕಿಶನ್ ಅವರು ಉತ್ತರ ಪ್ರದೇಶದ ಗೋರಕ್‌ಪುರ ಕ್ಷೇತ್ರದ ಹಾಲಿ ಸಂಸದರಾಗಿದ್ದು, ಆ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿದಿದ್ದಾರೆ. 

ರವಿ ಕಿಶನ್ ಅವರನ್ನು ತನ್ನ ಪತಿಯೆಂದು ಹೇಳಿರುವ ಮಹಿಳೆ ಅಪರ್ಣಾ ಠಾಕೂರ್ ತಾನು ಹಾಗೂ ರವಿ ಕಿಶನ್ ಅವರು 1996ರಲ್ಲಿ ಮದ್ವೆಯಾಗಿದ್ದೇವೆ. ನಮ್ಮ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದ್ವೆ ನಡೆದಿದ್ದು, ಮಗಳೂ ಇದ್ದಾಳೆ. ಆದರೆ ಆಕೆಯನ್ನು ರವಿ ಕಿಶನ್ ಸಾಮಾಜಿಕವಾಗಿ ತನ್ನ ಮಗಳು ಎಂದು ಒಪ್ಪಿಕೊಳ್ಳುತ್ತಿಲ್ಲ ಎಂದು ಅಪರ್ಣಾ ಸುದ್ದಿಗೋಷ್ಠಿಯಲ್ಲಿ ದೂರಿದ್ದರು.


ಈ ವೇಳೆ ರವಿಕಿಶನ್ ಅವರು ಮಗಳನ್ನು ಎತ್ತಿಕೊಂಡಿರುವ ಫೋಟೋಗಳನ್ನು ಕೂಡ ಸಾಕ್ಷಿಯಾಗಿ ನೀಡಿದ್ದರು. ನನಗೆ 15 ವರ್ಷದವಳಿದ್ದಾಗ ರವಿ ಕಿಶನ್ ಅವರು ನನ್ನ ತಂದೆ ಎಂಬುದು ನನಗೆ ತಿಳಿಯಿತು ಎಂದು ಹೇಳಿದ್ದಾರೆ.

 ಅದಕ್ಕೂ ಮೊದಲು ನಾನು ಅವರನ್ನು ಅಂಕಲ್ ಎಂದು ಕರೆಯುತ್ತಿದೆ. ಅವರು ನನ್ನ ಹುಟ್ಟುಹಬ್ಬದ ಸಮಯದಲ್ಲಿ ನಮ್ಮ ಮನೆಗೆ ಬರುತ್ತಿದ್ದರು.  ಅವರ ಕುಟುಂಬವನ್ನು ಕೂಡ ನಾನು ಭೇಟಿಯಾಗಿದ್ದೇನೆ. ಓರ್ವ ತಂದೆಯಾಗಿ ಅವರು ಯಾವತ್ತೂ ನನ್ನ ಜೊತೆ ಇರಲಿಲ್ಲ, ಅವರು ನನ್ನನ್ನು ಕೂಡ ಅವರ ಮಗಳಾಗಿ ಸ್ವೀಕರಿಸಬೇಕು ಎಂದು ನಾನು ಬಯಸುತ್ತೇನೆ. ಇದೇ ಕಾರಣಕ್ಕೆ ನಾವು ಕೋರ್ಟ್‌ನಲ್ಲಿ ಕೇಸ್ ಹಾಕಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ರವಿ ಕಿಶನ್ ಶುಕ್ಲಾ ಅಲಿಯಾಸ್ ರವಿ ಕಿಶನ್ ಅವರು ನಟನಾಗಿ ನಂತರ ರಾಜಕೀಯ ಪ್ರವೇಶಿಸಿದ್ದು, ಭೋಜ್‌ಪುರಿ ಹಾಗೂ ಹಿಂದಿ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಇದರ ಜೊತೆಗೆ ಕೆಲವು ತೆಲುಗು ಹಾಗೂ ಕನ್ನಡ, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇವರಿಗೆ ಅಧಿಕೃತವಾಗಿ ಪ್ರೀತಿ ಕಿಶನ್ ಎಂಬ ಪತ್ನಿ ಇದ್ದು, ಇಶಿತಾ ಶುಕ್ಲಾ ಎಂಬ ಮಗಳಿದ್ದಾಳೆ.

Latest Videos

click me!