ಲೈಂಗಿಕವಾಗಿ ಹತಾಶರಾಗಿದ್ದೀರಾ? ಚಿಕಿತ್ಸೆ ಶುರು ಮಾಡಿ… ಇಲ್ಲಾಂದ್ರೆ ಆರೋಗ್ಯಕ್ಕೆ ಹಾನಿ

First Published | Apr 20, 2024, 5:47 PM IST

ದಾಂಪತ್ಯ ಜೀವನದಲ್ಲಿ ಆರಂಭದಲ್ಲಿದ್ದ ಲೈಂಗಿಕ ಆಸಕ್ತಿ ದಿನಕಳೆದಂತೆ ಕಡಿಮೆಯಾಗುತ್ತದೆ. ನಂತರದ ದಿನಗಳಲ್ಲಿ ವೃತ್ತಿಜೀವನದ ಗುರಿಗಳು ಮತ್ತು ಆರ್ಥಿಕ ಬೆಳವಣಿಗೆಗೆ ಆದ್ಯತೆ ಬರುತ್ತದೆ. ಆದರೆ ಒಂದು ಬಾರಿ ಸೆಕ್ಸುವಲ್ ಪ್ರಷ್ಟ್ರೇಶನ್ ನಿಮ್ಮ ವಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಗೊತ್ತಾ?
 

ನಾವು ಒಂದಲ್ಲ ಒಂದು ಕಾರಣಕ್ಕಾಗಿ ಜೀವನದಲ್ಲಿ ನಿರಾಶೆಗೊಳ್ಳುತ್ತೇವೆ, ನಾವು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಸೆಕ್ಸ್‌ ಕಾರಣದಿಂದಾಗಿಯೂ ಜೀವನದಲ್ಲಿ ಹತಾಶೆ, ನಿರಾಶೆ ಉಂಟಾಗಬಹುದು. ನಾವು ಅದನ್ನೂ ನಿರ್ಲಕ್ಷಿಸುತ್ತೇವೆ. ಆದ್ರೆ ಇದು ಸಂಬಂಧದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಅಷ್ಟೇ ಯಾಕೆ ಇದು ಒಟ್ಟಾರೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದಕ್ಕೆ ಚಿಕಿತ್ಸೆ ನೀಡದಿದ್ದರೆ, ಮಾನಸಿಕ ಆರೋಗ್ಯದ (mental health)ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. 
 

ಲೈಂಗಿಕ ಹತಾಶೆ (Sexual frustration) ಎಂದರೇನು?  
ಲೈಂಗಿಕ ಹತಾಶೆಯು ಹೆಚ್ಚಾಗಿ ಕಡೆಗಣಿಸಲ್ಪಟ್ಟಿರುವಂತಹ ಮಾನಸಿಕ ಆರೋಗ್ಯ ಸಮಸ್ಯೆ. ಲೈಂಗಿಕ ಹತಾಶೆಯು ಈಡೇರಲಾಗದ ಲೈಂಗಿಕ ಬಯಕೆಗಳು ಅಥವಾ ಲೈಂಗಿಕ ಅಗತ್ಯಗಳಿಂದ ಉದ್ಭವಿಸುವ ಭಾವನಾತ್ಮಕ ಅಥವಾ ಮಾನಸಿಕ ಒತ್ತಡ (Mental Health) ಮತ್ತು ಅತೃಪ್ತಿಯನ್ನು ಸೂಚಿಸುತ್ತದೆ. ವ್ಯಕ್ತಿಯು ಲೈಂಗಿಕತೆಯಲ್ಲಿ ಯಾವುದೇ ಸಮಸ್ಯೆ ಅನುಭವಿಸಿದಾಗ ಈ ಸಮಸ್ಯೆ ಕಂಡು ಬರುತ್ತೆ. ಕಡಿಮೆ ಲೈಂಗಿಕ ಚಟುವಟಿಕೆ, ಲೈಂಗಿಕ ತೃಪ್ತಿ ಇಲ್ಲದಿರೋದು, ಸಂಗಾತಿಯೊಂದಿಗಿನ ಲೈಂಗಿಕ ಬಯಕೆಗಳಲ್ಲಿನ ಅಸಮಾನತೆ ಸಹ ಇದಕ್ಕೆ ಕಾರಣವಾಗಬಹುದು. ಇದು ಆತಂಕ(Tension), ಕಿರಿಕಿರಿ ಮತ್ತು ಕಡುಬಯಕೆಗೆ ಕಾರಣವಾಗಬಹುದು. ಇದು ವ್ಯಕ್ತಿಯ ಆರೋಗ್ಯ ಮತ್ತು ಸಂಬಂಧಗಳ ಮೇಲೆ ಆಳವಾದ ಪರಿಣಾಮ ಬೀರುತ್ತದೆ.
 

Tap to resize

ಲೈಂಗಿಕ ಹತಾಶೆಯ ಲಕ್ಷಣಗಳು ಇವು
• ಕಿರಿಕಿರಿ ಹೆಚ್ಚುತ್ತದೆ
• ಏಕಾಗ್ರತೆ ಕಡಿಮೆಯಾಗುತ್ತದೆ
• ಆತ್ಮಗೌರವ(self respect) ಕಡಿಮೆಯಾಗುವುದು
• ಹೆಚ್ಚಿದ ಆತಂಕ ಮತ್ತು ಒತ್ತಡ
• ನಿದ್ರೆಯ ತೊಂದರೆಗಳು
• ಸಂಬಂಧಗಳು ಹದಗೆಡುತ್ತವೆ
• ತಲೆನೋವು ಅಥವಾ ಲೈಂಗಿಕ ಅಪಸಾಮಾನ್ಯ ಕ್ರಿಯೆಯಂತಹ ದೈಹಿಕ ಲಕ್ಷಣಗಳು ಕಂಡು ಬರುತ್ತವೆ.
 

ಈಡೇರದ ಲೈಂಗಿಕ ಬಯಕೆಗಳು ಅಥವಾ ಅಗತ್ಯಗಳಿಂದಾಗಿ ಭಾವನಾತ್ಮಕ ಮತ್ತು ಮಾನಸಿಕ ಒತ್ತಡ (Mental stress) ಉಂಟಾಗುತ್ತದೆ. ಇದು ಒಬ್ಬರ ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.
• ಸಂಗಾತಿಗಳ ನಡುವೆ ಲೈಂಗಿಕ ಬಯಕೆ (sexual desire) ಹೊಂದಾಣಿಕೆಯಾಗದೇ ಇರೋದು
• ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಅಥವಾ ಹಾರ್ಮೋನುಗಳ ಅಸಮತೋಲನದಂತಹ ದೈಹಿಕ ಆರೋಗ್ಯ ಸಮಸ್ಯೆಗಳು
• ಕಾಮಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಔಷಧಿಗಳು
• ಖಿನ್ನತೆ ಅಥವಾ ಆತಂಕದಂತಹ ಮಾನಸಿಕ ಆರೋಗ್ಯ ಸವಾಲುಗಳು
• ಭಾವನಾತ್ಮಕ ಅನ್ಯೋನ್ಯತೆಯ (Emotional Bonding) ಕೊರತೆ ಅಥವಾ ಇತರ ಸಮಸ್ಯೆಗಳು
• ಲೈಂಗಿಕ ಕಾರ್ಯಕ್ಷಮತೆಯ ಮೇಲೆ ಸಮಾಜ ಅಥವಾ ಸ್ವಯಂ ಹೇರುವ ಒತ್ತಡ
ಇವೆಲ್ಲವೂ ಲೈಂಗಿಕ ಹತಾಶೆಗೆ ಕಾರಣವಾಗುವ ಅಂಶಗಳು. 

ಲೈಂಗಿಕ ಹತಾಶೆಯ ಅಡ್ಡ ಪರಿಣಾಮಗಳು 
ಲೈಂಗಿಕ ಹತಾಶೆ ಬಗ್ಗೆ ನೀವು ಸರಿಯಾಗಿ ಗಮನ ಹರಿಸದೇ ಇದ್ದಾಗ ಅದು ಸಂಗಾತಿಯೊಂದಿಗಿನ ಸಂಬಂಧಗಳನ್ನು ಹಾಳುಮಾಡುತ್ತದೆ. ಆತ್ಮಗೌರವವನ್ನು ಕುಗ್ಗಿಸಬಹುದು. ಮತ್ತು ಪರಸ್ಪರ ಸಂಬಂಧಗಳನ್ನು ಹದಗೆಡಿಸಬಹುದು. ಇದು ಮಾನಸಿಕ ಆರೋಗ್ಯ ಮತ್ತು ಜೀವನದ ಗುಣಮಟ್ಟದ (quality of life)ಮೇಲೆ ಪರಿಣಾಮ ಬೀರುತ್ತದೆ.

Sex Life

ಲೈಂಗಿಕ ಹತಾಶೆಯನ್ನು ನಿವಾರಿಸೋದು ಹೇಗೆ? 
ಸಂಗಾತಿ ಜೊತೆ ಮಾತನಾಡಿ

ಲೈಂಗಿಕ ಹತಾಶೆಯನ್ನು ನಿವಾರಿಸಲು ಸಂವಹನವು ಮುಖ್ಯ ಪಾತ್ರ ವಹಿಸುತ್ತೆ. ಅದು ಸಂಗಾತಿಯೊಂದಿಗೆ ಅಥವಾ ಸೆಕ್ಸ್ ಎಕ್ಸ್ಪರ್ಟ್ ಜೊತೆಯೇ ಆಗಿರಲಿ ಮನಸು ಬಿಚ್ಚಿ ಮಾತನಾಡಿ (communication). ನಿಮ್ಮ ಬಯಕೆಗಳು, ಅಗತ್ಯಗಳು ಮತ್ತು ಕಾಳಜಿಗಳ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಮಾತನಾಡಿ. ಅದೇ ರೀತಿ ಮಾಡಲು ಅವರನ್ನು ಪ್ರೋತ್ಸಾಹಿಸಿ. ಇದರಿಂದ ಸಮಸ್ಯೆ ಬಗೆಹರಿಯಬಹುದು. 

ಆರೋಗ್ಯಕರ ಜೀವನಶೈಲಿ 
ಸಮತೋಲಿತ ಆಹಾರ (Balanced Food) ಮತ್ತು ನಿಯಮಿತ ವ್ಯಾಯಾಮ (Regular Exercise) ಸೇರಿದಂತೆ ಆರೋಗ್ಯಕರ ಜೀವನಶೈಲಿಯನ್ನು (healthy lifestyle) ಅಳವಡಿಸಿಕೊಳ್ಳುವುದರಿಂದ ಒಟ್ಟಾರೆ ಆರೋಗ್ಯವನ್ನು ಸುಧಾರಿಸಬಹುದು. ಇದು ಕಾಮಾಸಕ್ತಿಯ ಹೆಚ್ಚಳಕ್ಕೆ ಕಾರಣವಾಗಬಹುದು.
 

ಥೆರಪಿಸ್ಟ್ ಸಹಾಯ 
ಅರ್ಹ ಥೆರಪಿಸ್ಟ್ ಅಥವಾ ಸೆಕ್ಸ್ ಥೆರಪಿಸ್ಟ್  (sex therapist) ಸಹಾಯವನ್ನು ಪಡೆಯುವುದು ಮುಖ್ಯ. ಕಪಲ್ಸ್ ಈ ವಿಷಯದ ಬಗ್ಗೆ ಒಟ್ಟಿಗೆ ಮಾತನಾಡಬೇಕು. ಥೆರಪಿಸ್ಟ್ ಸಂಬಂಧ ಮತ್ತು ಲೈಂಗಿಕ ಸಮಸ್ಯೆಗಳನ್ನು ಪರಿಹರಿಸಲು ಶಾಶ್ವತ ಪರಿಹಾರಗಳನ್ನು ಸೂಚಿಸಬಹುದು. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಅಥವಾ ಹಾರ್ಮೋನುಗಳ ಅಸಮತೋಲನದಂತಹ ದೈಹಿಕ ಸಮಸ್ಯೆಗಳಿದ್ದರೆ, ಅವುಗಳನ್ನು ಚಿಕಿತ್ಸೆ ಅಥವಾ ಔಷಧಿಗಳ ಮೂಲಕ ಸರಿಪಡಿಸಬಹುದು. 

ಸ್ವಯಂ ಆರೈಕೆ ಆದ್ಯತೆ 
ನಿಮ್ಮ ದೇಹವನ್ನು ಅರ್ಥಮಾಡಿಕೊಳ್ಳಿ. ಸ್ವಯಂ ಆರೈಕೆಗೆ ಆದ್ಯತೆ ನೀಡಿ. ನಿಮ್ಮ ಲೈಂಗಿಕ ಜೀವನ ಚೆನ್ನಾಗಿರಲು ಏನು ಮಾಡಬೇಕು ಅದನ್ನು ಮಾಡಿ. ಹಸ್ತಮೈಥುನವು ಬಯಕೆಗಳನ್ನು ಪತ್ತೆಹಚ್ಚಲು ಮತ್ತು ಲೈಂಗಿಕ ಉದ್ವೇಗವನ್ನು ಕಡಿಮೆ ಮಾಡಲು ಆರೋಗ್ಯಕರ ಮಾರ್ಗವಾಗಿದೆ.

ಒತ್ತಡವನ್ನು ಕಂಟ್ರೋಲ್ ಮಾಡಿ
ಹೆಚ್ಚಿನ ಒತ್ತಡದ ಮಟ್ಟವು (stress level) ಲೈಂಗಿಕ ಹತಾಶೆಗೆ ಕಾರಣವಾಗಬಹುದು. ಧ್ಯಾನ, ಯೋಗ, ಉಸಿರಾಟದ ವ್ಯಾಯಾಮಗಳು, ನಿಯಮಿತ ದೈಹಿಕ ಚಟುವಟಿಕೆಯಂತಹ ಒತ್ತಡವನ್ನು ಕಡಿಮೆ ಮಾಡುವ ತಂತ್ರಗಳನ್ನು ಅಭ್ಯಾಸ ಮಾಡಿ. ಮಾನಸಿಕ ಆರೋಗ್ಯ ಸಮಸ್ಯೆಗಳು ಲೈಂಗಿಕ ಹತಾಶೆಗೆ ಕಾರಣವಾದರೆ, ಈ ಸಮಸ್ಯೆಗಳನ್ನು ಪರಿಹರಿಸಲು ಚಿಕಿತ್ಸೆ ಅಥವಾ ಕೌನ್ಸೆಲಿಂಗ್ ಮಾಡಿ.

ಲೈಂಗಿಕ ಶಿಕ್ಷಣ  (Sexual Education)
ಲೈಂಗಿಕ ಆರೋಗ್ಯ (sex education) ಮತ್ತು ಇಂಟಿಮೆಸಿ (Intimacy) ಹೆಚ್ಚಿಸುವ ತಂತ್ರಗಳ ಬಗ್ಗೆ ಇನ್ನಷ್ಟು ತಿಳಿಯಿರಿ. ಲೈಂಗಿಕ ಶಿಕ್ಷಣವು ಹೆಚ್ಚು ತೃಪ್ತಿದಾಯಕ ಲೈಂಗಿಕ ಅನುಭವಕ್ಕೆ ಕಾರಣವಾಗಬಹುದು. ಇದಲ್ಲದೇ ಸೆಕ್ಸ್ ಟಾಯ್ ಗಳನ್ನು ಟ್ರೈ ಮಾಡಬಹುದು, ಜೊತೆಗೆ ಪ್ರಚೋದನೆ ನಿಡುವಂತಹ ಸಾಹಿತ್ಯ ಓದುವುದು ಎಲ್ಲವೂ ಕಾಮಾಸಕ್ತಿ ಹೆಚ್ಚಿಸುವಂತೆ ಮಾಡುತ್ತೆ. 

Latest Videos

click me!