Happy Married Life: ಹ್ಯಾಪಿ ಮ್ಯಾರೀಡ್ ಲೈಫ್ ಗಾಗಿ 8 ಗೋಲ್ಡನ್ ರೂಲ್ಸ್

Published : Jun 04, 2025, 03:18 PM ISTUpdated : Jun 04, 2025, 03:21 PM IST

ಸಂತೋಷದ ದಾಂಪತ್ಯ ಜೀವನಕ್ಕೆ ಕೆಲವು ಗೋಲ್ಡನ್ ರೂಲ್ಸ್ ಗಳಿವೆ, ಜೋಡಿಗಳು ಈ ರೂಲ್ಸ್ ಪಾಲಿಸಿದ್ದೇ ಆದರೆ, ನಿಮ್ಮ ಸಂಬಂಧ ಆರೋಗ್ಯಕರ ಮತ್ತು ಸಂತೋಷಕರವಾಗಿರೋದಕ್ಕೆ ಸಾಧ್ಯ ಆಗುತ್ತೆ.

PREV
18

ಮದುವೆಯನ್ನು ಯಶಸ್ವಿಗೊಳಿಸಲು ಏನು ಮಾಡಬೇಕು?

ಇತ್ತೀಚಿನ ದಿನಗಳಲ್ಲಿ ಜನರಿಗೆ ತಮ್ಮ ಮದುವೆಯನ್ನು ಉಳಿಸಿಕೊಳ್ಳೋದೆ ತುಂಬಾ ಕಷ್ಟಕರವಾಗಿದೆ. ಪ್ರತಿಯೊಂದು ಸಂಬಂಧದಲ್ಲೂ ಕೆಲವು ನ್ಯೂನತೆಗಳು ಮತ್ತು ವಿಭಿನ್ನತೆ ಇರುತ್ತೆ. ನಿಮ್ಮ ದಾಂಪತ್ಯ ಜೀವನದಲ್ಲಿ (married life) ಇದೇ ಸಮಸ್ಯೆ ಅನುಭವಿಸುತ್ತಿದ್ದರೆ, ನೀವು ಖಂಡಿತವಾಗಿಯೂ ಈ ರೂಲ್ಸ್ ಫಾಲೋ ಮಾಡಬೇಕು.

28

ಮನಸ್ಸು ಬಿಚ್ಚಿ ಮಾತನಾಡಿ

ಯಾವುದೇ ದಾಂಪತ್ಯ ಜೀವನ ಸುಖಮಯವಾಗಿರಬೇಕು ಅಂದ್ರೆ, ಮುಕ್ತ ಸಂವಹನ (communication) ಬಹಳ ಮುಖ್ಯ. ನೀವು ಇದನ್ನು ಬೇಗ ಅರ್ಥಮಾಡಿಕೊಂಡಷ್ಟೂ ಒಳ್ಳೆಯದು.

38

ಸಂಗಾತಿಯನ್ನು ಹೊಗಳಿ

ನೀವು ಸಣ್ಣ ಸಣ್ಣ ವಿಷಯಗಳನ್ನು ಹೊಗಳುವ (praise your partner) ಅಭ್ಯಾಸವನ್ನು ಮಾಡಿಕೊಂಡರೆ, ಇಬ್ಬರ ಮಧ್ಯೆ ಸಮಸ್ಯೆಗಳು ಸಣ್ಣದಾಗುತ್ತಾ ಹೋಗುತ್ತವೆ. ಅಡುಗೆ ಚೆನ್ನಾಗಿದೆ ಅಂತಲೋ, ಡ್ರೆಸ್ಸಿಂಗ್ ಚೆನ್ನಾಗಿದೆ ಅಂತಲೋ ಏನಾದರೊಂದು ವಿಷಯಕ್ಕೆ ನಿಮ್ಮ ಸಂಗಾತಿಯನ್ನು ಹೊಗಳಿ.

48

ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ

ನೀವು ಸಂಗಾತಿಯನ್ನು ಪ್ರೀತಿಸುತ್ತೀರಿ, ಆದರೆ ಅದನ್ನು ವ್ಯಕ್ತಪಡಿಸದಿದ್ದರೆ, ಅಂತಹ ಪ್ರೀತಿಗೆ ಅರ್ಥವಿಲ್ಲ. ದೈನಂದಿನ ಕೆಲಸಗಳಲ್ಲಿ ಸಹಾಯ ಮಾಡುವುದು, ಸರ್ಪ್ರೈಸ್ ನೀಡುವುದು, ಜೊತೆಯಾಗಿ ಸೇರಿ ಅಡುಗೆ ಮಾಡೋದು, ಡಿನ್ನರ್ ಡೇಟ್ ಇದೆಲ್ಲವೂ ಪ್ರೀತಿಯನ್ನು ವ್ಯಕ್ತಪಡಿಸಲು ಬೆಸ್ಟ್ ಐಡಿಯಾ.

58

ಜಗಳ ಸಾಮಾನ್ಯ

ವಿಭಿನ್ನ ವ್ಯಕ್ತಿತ್ವ ಹೊಂದಿರುವ ಇಬ್ಬರು ವ್ಯಕ್ತಿಗಳು ಒಂದೇ ಸೂರಿನಡಿ ವಾಸಿಸಲು ಪ್ರಾರಂಭಿಸಿದಾಗ, ಜಗಳಗಳು ಆಗೋದು ತುಂಬಾನೆ ಸಾಮಾನ್ಯ. ಅದರ ಅರ್ಥ ಸಂತೋಷವಾಗಿರೋದಕ್ಕೆ ಸಾಧ್ಯ ಇಲ್ಲ ಎಂದಲ್ಲ. ವಿಭಿನ್ನತೆ ಇದ್ದರೂ ಒಟ್ಟಾಗಿ ಸಾಗೋದು ಮುಖ್ಯ.

68

ಪ್ರೀತಿಯಿಂದ ಗೌರವಿಸಿ

ಸಾಮಾನ್ಯವಾಗಿ ಜೋಡಿಗಳಿಬ್ಬರು ಪ್ರೀತಿಸುತ್ತಾರೆ, ಆದರೆ ಅವರು ಪರಸ್ಪರ ಗೌರವಿಸೋದಿಲ್ಲ. ನೀವು ಒಬ್ಬರನ್ನೊಬ್ಬರು ಗೌರವಿಸಿದಾಗ, ನೀವು ಇನ್ನೊಬ್ಬ ವ್ಯಕ್ತಿಯ ಆಲೋಚನೆಗಳು, ಗೌಪ್ಯತೆ, ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳನ್ನು ಗೌರವಿಸುತ್ತೀರಿ.

78

ಫಿಸಿಕಲ್ ಇಂಟಿಮೆಸಿ

ದಾಂಪತ್ಯ ಜೀವನದಲ್ಲಿ ನಿರ್ಲಕ್ಷಿಸಲಾಗದ ಪ್ರಮುಖ ವಿಷ್ಯ ಅಂದ್ರೆ, ರೊಮ್ಯಾನ್ಸ್ ಮತ್ತು ಫಿಸಿಕಲ್ ಇಂಟಿಮೆಸಿ (physical intimacy). ನಿಮ್ಮ ನಡುವಿನ ಸ್ಪಾರ್ಕ್ ಯಾವತ್ತೂ ಕಡಿಮೆಯಾಗದಂತೆ ನೋಡಿ.

88

ಮಹಿಳೆಯರಿಗೆ ಏನು ಇಷ್ಟ?

ಒಬ್ಬ ಮಹಿಳೆ ಸಾಮಾನ್ಯವಾಗಿ ತನ್ನ ಮಾತನ್ನು ಕೇಳುವ, ತನ್ನ ಭಾವನೆಗಳಿಗೆ ಬೆಲೆ ನೀಡುವ, ಅವಳನ್ನು ನಂಬುವ ಮತ್ತು ಅವಳೊಂದಿಗೆ ನಿಜವಾದ ಕನೆಕ್ಟ್ ಆಗುವ ಸಂಗಾತಿ ಅಥವಾ ಗಂಡನೊಂದಿಗೆ ಹೆಚ್ಚು ಸಂತೋಷವಾಗಿರುತ್ತಾಳೆ.

Read more Photos on
click me!

Recommended Stories