ಗರ್ಭಿಣಿ ಎಂದೆರ ಡಾಲ್ಪಿನ್ಸ್‌ಗೇಕೆ ವಿಶೇಷ ಅಕ್ಕರೆ? ಮಗುವಿನ ಇರುವಿಕೆ ಫೀಲ್ ಮಾಡಬಲ್ಲದಾ ಈ ಜೀವಿ?

First Published | Mar 4, 2024, 10:16 AM IST

ಡಾಲ್ಫಿನ್ಸ್ ಬುದ್ಧಿವಂತ ಮತ್ತು ವಿಶೇಷ ಜೀವಿಗಳು ಅನ್ನೋದನ್ನು ನೀವು ನೋಡಿರಬಹುದು, ಅವು ಅದ್ಭುತ ಸಾಹಸಗಳನ್ನು ಮಾಡಬಲ್ಲವು. ಡಾಲ್ಫಿನ್ ಗಳ ಬಗ್ಗೆ ಹಲವಾರು ಇಂಟ್ರೆಸ್ಟಿಂಗ್ ಮಾಹಿತಿ ಇದೆ, ಅದರಲ್ಲಿ ಅದ್ಭುತವಾದುದು ಏನಂದ್ರೆ, ಮಾನವ ಮತ್ತು ಡಾಲ್ಫಿನ್ ಜೊತೆಗಿನ ಸಂಬಂಧ. 
 

ಡಾಲ್ಫಿನ್ ಗಳು (Dolphin) ತಮ್ಮ ನಡುವೆ ಮತ್ತು ಮನುಷ್ಯರೊಂದಿಗೆ ಹೇಗೆ ವರ್ತಿಸುತ್ತವೆ ಎಂಬುದನ್ನು ವಿಜ್ಞಾನಿಗಳು ಇನ್ನೂ ಅಧ್ಯಯನ ಮಾಡುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ನಮಗೆ ತಿಳಿದಿರುವಂತೆ, ಮನುಷ್ಯರೊಂದಿಗೆ ಡಾಲ್ಫಿನ್ ಗಳು ವಿಶೇಷವಾದ ಸಂಬಂಧ ಹೊಂದಿವೆ. ಅದಕ್ಕಾಗಿಯೇ ಡೆಸ್ಟಿನ್ ಡಾಲ್ಫಿನ್ ಪ್ರವಾಸಗಳು ಮತ್ತು ಡಾಲ್ಫಿನ್ ವಿಹಾರ ತುಂಬಾನೇ ಜನಪ್ರಿಯವಾಗಿವೆ. 
 

ಜನರಿಗಂತೂ ಈ ಮುದ್ದಾದ ಮತ್ತು ಸೂಪರ್-ಸ್ಮಾರ್ಟ್ ಜೀವಿಗಳನ್ನು (smart animal) ಹತ್ತಿರದಿಂದ ನೋಡುವ ಅವಕಾಶ ಸಿಗೋದು ಬೆಸ್ಟ್ ಆಗಿರುತ್ತೆ. ನೀವು ಡಾಲ್ಫಿನ್ ದೋಣಿ ಪ್ರವಾಸ ಅಥವಾ ಸ್ನೋರ್ಕೆಲಿಂಗ್ ಪ್ರವಾಸಕ್ಕೆ ಹೋಗಲು ಯೋಚಿಸುತ್ತಿದ್ದರೆ, ಅದಕ್ಕೂ ಮುನ್ನ ಡಾಲ್ಫಿನ್ ಮತ್ತು ಮನುಷ್ಯರಿಗೂ ನಡುವಿನ ಸಂಬಂಧದ ಬಗ್ಗೆ ತಿಳಿಯೋಣ. 
 

Tap to resize

ಡಾಲ್ಫಿನ್ ಕುರಿತಾದ ಅದ್ಭುತ ವಿಚಾರಗಳು 
ಡಾಲ್ಫಿನ್ಸ್ ಖಂಡಿತವಾಗಿಯೂ ಇಂದು ಅಸ್ತಿತ್ವದಲ್ಲಿರುವ ಅತ್ಯಂತ ಆಕರ್ಷಕ ಜೀವಿಗಳಲ್ಲಿ ಒಂದಾಗಿದೆ. ಅವು ನೀರಿನೊಳಗೆ 1000 ಅಡಿಗಳಷ್ಟು ಆಳಕ್ಕೆ ಧುಮುಕಬಲ್ಲವು, ಅವು 50 ವರ್ಷಗಳವರೆಗೆ ಬದುಕಬಲ್ಲವು, ಮತ್ತು ಬಾಟಲ್ ಮೂಗಿನ ಡಾಲ್ಫಿನ್ಸ್ (Dolphin) ಗಂಟೆಗೆ 30 ಮೈಲಿಗಳಿಗಿಂತ ಹೆಚ್ಚಿನ ವೇಗವನ್ನು ತಲುಪಬಹುದು.

ಮೆದುಳು ಮತ್ತು ದೇಹದ ಗಾತ್ರದ ಅನುಪಾತದ ವಿಷಯದಲ್ಲಿ, ಡಾಲ್ಫಿನ್ ಮಾನವರ ನಂತರ ಎರಡನೇ ಸ್ಥಾನದಲ್ಲಿದೆ. ಆದರೆ ಡಾಲ್ಫಿನ್ ಮಿದುಳಿನಿಂದ ಮಾತ್ರ ಅವುಗಳು ಬುದ್ಧಿವಂತ ಜೀವಿ ಎಂದು ಹೇಳಲು ಸಾಧ್ಯವಿಲ್ಲ. ಈ ಪ್ರಾಣಿಗಳು ವಿಸಿಲ್ ಹಾಕುವ ಮೂಲಕ ಪರಸ್ಪರರ ಹೆಸರನ್ನು ಗುರುತಿಸುವ ಜಾಣ್ಮೆಯನ್ನು ಸಹ ಹೊಂದಿವೆ. ಇಂತಹ ಬುದ್ದಿಶಕ್ತಿ ಕೆಲವೇ ಪ್ರಾಣಿಗಳಲ್ಲಿವೆ. 

ಡಾಲ್ಫಿನ್ ಮಾನವ ಸಂವಹನ
ವೈಜ್ಞಾನಿಕ ಅಧ್ಯಯನಗಳು ಮತ್ತು ಪುರಾವೆಗಳಿಂದ, ಡಾಲ್ಫಿನ್ಸ್ ಮಾನವರ ಸಹವಾಸವನ್ನು ಎಂಜಾಯ್ ಮಾಡುತ್ತೆ ಮತ್ತು ಸಕ್ರಿಯವಾಗಿ ಮಾನವ ಸಂವಹನವನ್ನು (communication) ಹುಡುಕಲು ಇಷ್ಟಪಡುತ್ತೆ ಅನ್ನೋದು ತಿಳಿದು ಬಂದಿದೆ. ಯಾಕೆ ಅವುಗಳಿಗೆ ಮಾನವರ ಜೊತೆ ಬೆರೆಯಲು ಇಷ್ಟವಿದೆ ಅನ್ನೋದು ಮಾತ್ರ ತಿಳಿದು ಬಂದಿಲ್ಲ. ಡಾಲ್ಫಿನ್ ತನ್ನದೇ ಜಾತಿಯ ಸ್ನೇಹಿತರನ್ನು ಹುಡುಕಲು ಸಾಧ್ಯವಾಗದಿದ್ದಾಗ, ಅದು ಹೆಚ್ಚಾಗಿ  ಮನುಷ್ಯರ ಒಡನಾಟಕ್ಕೆ ಹಾತೋರಿಯುತ್ತದೆ ಎಂದು ಅನೇಕ ಅಧ್ಯಯನಗಳು ಕಂಡು ಹಿಡಿದಿವೆ. ಮೀನುಗಾರಿಕಾ ದೋಣಿಗಳು ಮತ್ತು ಸ್ನೋರ್ಕೆಲಿಂಗ್ ಮಾಡುವವರೊಂದಿಗೆ ಡಾಲ್ಫಿನ್ಗಳು ತುಂಬಾನೆ ಫ್ರೆಂಡ್ಲಿಯಾಗಿರುತ್ತೆ. 

ಡಾಲ್ಫಿನ್ಸ್ ಮತ್ತು ಗರ್ಭಿಣಿ ಮಹಿಳೆ
ಡಾಲ್ಫಿನ್ ಗಳು ಗರ್ಭಿಣಿ ಮಹಿಳೆಯರ (pregnant women) ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿರುತ್ತೆ ಅನ್ನೋದು ನಿಜ. ಅವು ಗರ್ಭಿಣಿ ಮಹಿಳೆಯೊಂದಿಗೆ ಈಜುತ್ತವೆ, ಆಕೆಯ ಹೊಟ್ಟೆಯ ಬಳಿ ಹೋಗಿ ಶಬ್ದಗಳನ್ನು ಮಾಡುತ್ತವೆ. ಡಾಲ್ಫಿನ್‌ಗಳು ಪ್ರತಿಧ್ವನಿ ಸ್ಥಳವನ್ನು ಬಳಸಿಕೊಂಡು ಗರ್ಭಿಣಿ ಮಹಿಳೆಯ ಬೆಳೆಯುತ್ತಿರುವ ಭ್ರೂಣವು ಯಾವ ಜಾಗದಲ್ಲಿದೆ ಅನ್ನೋದನ್ನು ಸಹ ಪತ್ತೆ ಮಾಡಬಹುದು. ಕೆಲವು ಅದ್ಭುತ ಸಂದರ್ಭಗಳಲ್ಲಿ, ಡಾಲ್ಫಿನ್ಸ್ ಮಗುವಿಗೆ ಜನ್ಮ ನೀಡುತ್ತಿದ್ದ ಮಹಿಳೆಯರಿಗೆ ಸಹಾಯ ಮಾಡಿದ್ದೂ ಇವೆ. ಇದನ್ನು ವೈದ್ಯಕೀಯ ವೃತ್ತಿಪರರು ಶಿಫಾರಸು ಮಾಡದಿದ್ದರೂ, ಡಾಲ್ಫಿನ್‌ಗಳು ಮಾನವರು ಮತ್ತು ಶಿಶುಗಳಿಗೆ ಎಷ್ಟು ಸೆಳೆಯಲ್ಪಡುತ್ತವೆ ಎಂಬುದಕ್ಕೆ ಇದು ಸಾಕ್ಷಿ.
 

ಡಾಲ್ಫಿನ್ಸ್ ಮಾನವರೊಂದಿಗೆ ಸಂವಹನ ನಡೆಸಬಹುದೇ?
ಅವು ಪರಸ್ಪರ ಸಂವಹನ ನಡೆಸುವ ಅತ್ಯಾಧುನಿಕ ವಿಧಾನ ಮತ್ತು ಅವುಗಳ ದೊಡ್ಡ ಮೆದುಳಿನ ಗಾತ್ರದಿಂದಾಗಿ, ಡಾಲ್ಫಿನ್‌ಗಳು ಮಾನವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆಯೇ ಎನ್ನುವ ಬಗ್ಗೆ ಕೆಲವು ತಜ್ಞರು ಚರ್ಚಿಸುತ್ತಾರೆ, ಯುಎಸ್ ನೌಕಾಪಡೆಯು ಡಾಲ್ಫಿನ್ಸ್ ಜೊತೆ ಸಂವಹನ ನಡೆಸಲು ಪ್ರಯತ್ನಿಸಿದ ವಿಶೇಷ ಯೋಜನೆಯನ್ನು ಸಹ ಕೈಗೊಂಡಿತು. ಅವರು ಮಾನವ ಸ್ವರಗಳ ಸಂಯೋಜನೆಯನ್ನು ಸೈನಸಾಯ್ಡಲ್ ಡಾಲ್ಫಿನ್ ಶಿಳ್ಳೆಗಳಾಗಿ ಭಾಷಾಂತರಿಸಲು ವ್ಯವಸ್ಥೆಯನ್ನು ಬಳಸಿದರು. ಅಚ್ಚರಿಯ ವಿಷಯ ಏನೆಂದರೆ, ಡಾಲ್ಫಿನ್‌ಗಳು ಅಂತಿಮವಾಗಿ ಆದೇಶಗಳಿಗೆ ಪ್ರತಿಕ್ರಿಯಿಸಲು ಕಲಿತವು.
 

Latest Videos

click me!