ಮದುವೆಯಾದ ಗಂಡಸರು ಪರ ಸ್ತ್ರೀ ಯೊಂದಿಗೆ ಪ್ರೀತಿಯಲ್ಲಿ ಬಿದ್ದಿರುವ ಲಕ್ಷಣಗಳಿವು..

First Published | Mar 4, 2024, 10:20 AM IST

ವಿವಾಹಿತ ಪುರುಷನು ಇನ್ನೊಬ್ಬ ಮಹಿಳೆಯನ್ನು ಪ್ರೀತಿಸುತ್ತಿದ್ದಾನೆ ಎಂಬುದನ್ನು ಅವನ ಈ ಬದಲಾವಣೆಗಳಿಂದ ತಿಳಿದುಕೊಳ್ಳಬಹುದು.
 

ಗಂಡ ಆಫೀಸ್‌ಗೆ ಕೆಲಸಕ್ಕೆ ಹೋಗುವಾಗತುಂಬಾ ಸೊಗಸಾಗಿ ಕಾಣಲು ಇಷ್ಟಪಡುತ್ತಾನೆ. ಹೇರ್‌ ಸ್ಟೈಲ್‌ ತುಂಬಾ ವಿಶಿಷ್ಟವಾಗಿರಲು ಬಯಸುತ್ತಾನೆ. ತನ್ನ ಶರ್ಟ್‌ಗಳನ್ನು ಇಸ್ತ್ರಿ ಮಾಡಲು ಪ್ರಾರಂಭಿಸುತ್ತಾನೆ.  ಒಟ್ಟಾರೆಯಾಗಿ ಹೆಚ್ಚು ಆಕರ್ಷಕ ವ್ಯಕ್ತಿಯಾಗುತ್ತಾನೆ ಎಂಬುದನ್ನು ಹೆಂಡತಿ ಗಮನಿಸಬಹುದು.
 

ಗಂಡನು ತನ್ನ ಹಾವಬಾವಗಳನ್ನು ಬದಲಾಯಿಸುತ್ತಾನೆ.ದೈಹಿಕವಾಗಿ ಉತ್ತಮವಾಗಿ ಕಾಣುತ್ತಾನೆ ಮತ್ತು ಚೆನ್ನಾಗಿ ತಿನ್ನುತ್ತಾನೆ. ಅವನ ಜೀವನ ಶೈಲಿ ಉತ್ತಮವಾಗುತ್ತಾ ಹೋಗುತ್ತದೆ.
 

Tap to resize

ಇದ್ದಕ್ಕಿದ್ದಂತೆ ಗಂಡ ಬಹಳಷ್ಟು ಕೆಲಸ ಮಾಡುತ್ತಾನೆ.ಅತ್ಯುತ್ತಮ ಫಿಟ್ನೆಸ್ ಹೊಂದಲು ಇಷ್ಟ ಪಡುತ್ತಾನೆ. ಜಿಮ್ ಗೆ ಹೋಗುತ್ತಾನೆ. ದೈಹಿಕವಾಗಿ ಸದೃಢವಾಗಿ ಕಾಣಲು ಇಷ್ಟ ಪಡುತ್ತಾರೆ. ಫಿಟ್‌ನೆಸ್ ಮತ್ತು ವರ್ಕ್‌ಔಟ್‌ನಲ್ಲಿನ ಈ ಹೊಸ ಆಸಕ್ತಿಯು ಜಾಗಿಂಗ್, ಬೈಕಿಂಗ್, ಸೈಕ್ಲಿಂಗ್‌ಗೂ ತಿರುಗಬಹುದು.
 

ಯಾವುದೇ ಪ್ರಮುಖ ಕಾರಣ ವಿಲ್ಲದೆ ತನ್ನ ಹೆಂಡತಿಯನ್ನು ಸದಾ ಟೀಕಿಸುತ್ತಾನೆ ಇರುತ್ತಾರೆ. ಮೂರನೇ ವ್ಯಕ್ತಿಯ ಎದುರಿಗೆ ಹೆಂಡತಿಯನ್ನು ಕೀಳಾಗಿ ನೋಡುತ್ತಾನೆ.

ಗಂಡನು ತನ್ನ ಹೆಂಡತಿಯ ಮೇಲೆ ಆಸಕ್ತಿಯನ್ನು ಕಳೆದು ಕೊಳ್ಳುತ್ತಾನೆ. ನಿಮ್ಮ ದಿನ ಹೇಗಿತ್ತು ಎಂದು ನಿಮ್ಮ ಬಗ್ಗೆ ಯೋಚನೆ ಮಾಡವುದಿಲ್ಲ ದಿನಗಳು ಕಳೆದಂತೆ ನಿಮ್ಮ ಮೇಲೆ ಪ್ರೀತಿ ಕಮ್ಮಿಯಾಗುತ್ತಾ ಹೋಗುತ್ತದೆ.

ಇನ್ನೊಬ್ಬ ಮಹಿಳೆಹಿಂದ ಬಿದ್ದ ವಿವಾಹಿತ ಪುರುಷನು ತನ್ನ ವೈವಾಹಿಕ ಜೀವನದಲ್ಲಿ ಲೈಂಗಿಕ ಸುಖವನ್ನು ಅನುಭವಿಸುವುದಿಲ್ಲ. ಯಾಕೆಂದರೆ ಆಳವಾದ ಮಟ್ಟದಲ್ಲಿ, ಅವನು ಇನ್ನೊಬ್ಬ ಮಹಿಳೆಯೊಂದಿಗೆ ಭಾವನಾತ್ಮಕವಾಕಿ ಲೀನವಾಗಿರುತ್ತಾನೆ.

Latest Videos

click me!