Monkey and Kitten: ಅರಣ್ಯ ಸಿಬ್ಬಂದಿ ಆಗಮಿಸಿದ ಕೆಲ ಸಮಯದಲ್ಲಿ ಮಂಗನಿಗೆ ಮುನ್ಸೂಚನೆ ಸಿಕ್ಕಂತೆ ಸ್ಥಳದಿಂದ ಕಾಲ್ಕಿತ್ತಿತ್ತು. ಇಂದಿಗೂ ಮಂಗ ಬೆಕ್ಕಿನ ಮರಿಯನ್ನು ಹಿಡಿದುಕೊಂಡು ನಗರಾದ್ಯಂತ ಓಡಾಡುತ್ತಿದ್ದು, ಮಂಗನ ಪ್ರೀತಿ ಜನರ ಮನ ಕಲಕುವಂತಿದೆ.
ಕೆಂಪು ಮುಖದ ಮಂಗವೊಂದು ಬೆಕ್ಕಿನ ಮರಿಯನ್ನು ತನ್ನದೆಂದು ಭಾವಿಸಿ, ಅದನ್ನು ಪಾಲನೆ ಮಾಡುತ್ತಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ಕಂಡುಬಂದಿದೆ.
26
ಬೇರೆಡೆ ತೆರಳುತ್ತಿದೆ...
ಅರಣ್ಯ ಇಲಾಖೆಯವರು ಮಂಗನನ್ನು ಹಿಡಿದು, ಬೆಕ್ಕಿನ ಮರಿಯನ್ನು ಬೇರ್ಪಡಿಸಲು ಪ್ರಯತ್ನಿಸಿದರೂ, ಅರಣ್ಯ ಸಿಬ್ಬಂದಿ ಬಂದ ತಕ್ಷಣ ಮಂಗ ಬೇರೆಡೆ ತೆರಳುತ್ತಿದೆ.
36
ಕಂಕುಳಲ್ಲಿ ಬೆಕ್ಕು
ಕಳೆದ ಒಂದು ವಾರದಿಂದ ಮಂಗವು ಪಟ್ಟಣದ ಹೊಸ ಓಣಿ, ಹೊಂಡದ ಓಣಿ, ಬಸವಣ್ಣ ದೇವಸ್ಥಾನ ಆವರಣದಲ್ಲಿ ಕಂಡುಬಂದಿದೆ. ಕಣ್ಣು ಬಿಡದ ಬೆಕ್ಕಿನ ಮರಿಯು ಮಂಗಣ್ಣನ ಕಂಕುಳಲ್ಲಿದ್ದು, ಯಾವುದೇ ಕಾರಣಕ್ಕೂ ಮಂಗವು ಬೆಕ್ಕಿನ ಮರಿಯನ್ನು ಬಿಡುತ್ತಿಲ್ಲ.
ಜನರ ಸನಿಹ ಬಂದು ಮಂಗ ಕುಳಿತುಕೊಳ್ಳುತ್ತದೆ. ಕೆಲವೊಮ್ಮೆ ಜನರ ಮೈಮೇಲೆ ಏರಿ ಸುಮ್ಮನೆ ಕುಳಿತುಕೊಳ್ಳುತ್ತದೆ. ಆದರೆ, ಬೆಕ್ಕಿನ ಮರಿಯನ್ನು ಮಾತ್ರ ಮುಟ್ಟಲೂ ಬಿಡುವುದಿಲ್ಲ. ಮಂಗವು ಬೆಕ್ಕಿನ ಮರಿಗೆ ತಿನ್ನಿಸುವ, ಮುತ್ತು ಕೊಡುವ, ಮೈ ಸವರುವುದನ್ನು ಮಾಡುತ್ತದೆ.
56
ಅರಣ್ಯ ಸಿಬ್ಬಂದಿಗೆ ಮಾಹಿತಿ
ಬೆಕ್ಕಿನ ಮರಿಯು ಮಂಗನ ಕೈಯಲ್ಲಿ ನಿದ್ರೆ ಮಾಡುತ್ತಿರುವಂತ ಸ್ಥಿತಿಯಲ್ಲಿ ಕುಳಿತಿರುತ್ತದೆ. ಮಕ್ಕಳು, ಮಹಿಳೆಯರಿಗೆ ಮಂಗನಿಂದ ಏನಾದರೂ ತೊಂದರೆ ಆಗದಿರಲಿ ಎಂದು ಅದನ್ನು ಹಿಡಿಸಲು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
66
ಮನ ಕಲಕುವಂತಿದೆ ಮಂಗನ ಪ್ರೀತಿ
ಅರಣ್ಯ ಸಿಬ್ಬಂದಿ ಆಗಮಿಸಿದ ಕೆಲ ಸಮಯದಲ್ಲಿ ಮಂಗನಿಗೆ ಮುನ್ಸೂಚನೆ ಸಿಕ್ಕಂತೆ ಸ್ಥಳದಿಂದ ಕಾಲ್ಕಿತ್ತಿತ್ತು. ಇಂದಿಗೂ ಮಂಗ ಬೆಕ್ಕಿನ ಮರಿಯನ್ನು ಹಿಡಿದುಕೊಂಡು ನಗರಾದ್ಯಂತ ಓಡಾಡುತ್ತಿದ್ದು, ಮಂಗನ ಪ್ರೀತಿ ಜನರ ಮನ ಕಲಕುವಂತಿದೆ.