ಲವ್ ಮ್ಯಾರೇಜ್ ಆದ್ರೂ ದಾಪತ್ಯದಲ್ಲಿ ಕಲಹ ಮೂಡಲು ಕಾರಣ ಏನು?

First Published | Mar 13, 2022, 3:06 PM IST

ನೀವು ಯಾರನ್ನಾದರೂ ಪ್ರೀತಿಸಿದಾಗ, ಎಲ್ಲವೂ ಅದ್ಭುತವಾಗಿರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ನೀವು ನಿಮ್ಮ ಪ್ರತಿಯೊಂದು ಕ್ಷಣವನ್ನು ಆ ವ್ಯಕ್ತಿಯೊಂದಿಗೆ ಕಳೆಯಲು ಬಯಸುತ್ತೀರಿ ಮತ್ತು ನಿಮ್ಮ ಮನಸ್ಸಿನಲ್ಲಿ ನಿಮ್ಮಿಬ್ಬರ ಭವಿಷ್ಯದ ಕುರಿತು ಬಹಳಷ್ಟು ಕನಸುಗಳನ್ನು ಕಾಣುತ್ತೀರಿ. ಕಡೆಗೂ ಪ್ರೀತಿಸಿದವರನ್ನೇ ಮದುವೆಯಾಗುವ ಅದೃಷ್ಟ ನಿಮ್ಮದಾಗುತ್ತದೆ. ಆದರೆ, ಅಷ್ಟೊಂದು ಪ್ರೀತಿಸಿದ ವ್ಯಕ್ತಿಯೊಂದಿಗೆ ವಿವಾಹವಾದ ಮೇಲೆ ಜಗಳಗಳಾಗಲು ಕಾರಣವೇನು?
 

Love

ಮದುವೆಯ ನಂತರ  ದಿನ, ಒಂದಲ್ಲ ಒಂದು ವಿಷಯದ ಬಗ್ಗೆ ಜಗಳ ನಡೆಯುತ್ತದೆ ಮತ್ತು ಅನೇಕ ಬಾರಿ ವಿಷಯವು ತುಂಬಾ ಕೆಟ್ಟದಾಗಬಹುದು, ಅವರು ಸಪರೇಟ್ ಆಗುವ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಕೆಲವು ದಂಪತಿ ವಿಚ್ಛೇದನವನ್ನು (divorce) ತಮ್ಮ ಸಾಂತ್ವನವೆಂದು ಪರಿಗಣಿಸುವ ಪರಿಸ್ಥಿತಿಯಲ್ಲಿ, ಕೆಲವರು ಮಾತ್ರ ಸಂಬಂಧದಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡುತ್ತಾರೆ ಮತ್ತು ಅವರ ನಡುವಿನ ಅನಗತ್ಯ ಜಗಳಗಳನ್ನು ತೊಡೆದುಹಾಕುತ್ತಾರೆ. 

Love

ಯಾವುದನ್ನಾದರೂ ಸುಧಾರಿಸಬಹುದು. ನಿಮ್ಮ ಸಂಗಾತಿಯೊಂದಿಗೆ ವಾಗ್ವಾದ ಅಥವಾ ಜಗಳಕ್ಕೆ (fighting couple) ಅನೇಕ ಕಾರಣಗಳಿರಬಹುದು. ಆದ್ದರಿಂದ ನೀವು ನಿರಂತರವಾಗಿ ಮಾಡುತ್ತಿರುವ ತಪ್ಪುಗಳ ಬಗ್ಗೆ ನಿಮಗೆ ಅರಿವು ಮೂಡಿಸೋಣ. ಅವುಗಳ ಬಗ್ಗೆ ತಿಳಿದು ಅನಗತ್ಯ ಗೊಂದಲಗಳನ್ನು ದೂರ ಮಾಡೋಣ. 

Tap to resize

Love

ಅರ್ಥ ಮಾಡಿಕೊಳ್ಳದೆ ಇರೋದು :
ಮದುವೆಯ ನಂತರ, ದಂಪತಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದಾಗ, ಅವರ ವಿಷಯಗಳು ಸಂಪೂರ್ಣವಾಗಿ ಬದಲಾಗುತ್ತವೆ. ವೈಯಕ್ತಿಕ ಸ್ಥಳದಿಂದ ಹಿಡಿದು ಸಮಯ ನೀಡುವವರೆಗೆ, ಅನೇಕ ವಿಷಯಗಳಿವೆ, ಅಲ್ಲಿ understanding ಕೊರತೆ ಇದೆ. ಇಬ್ಬರು ವ್ಯಕ್ತಿಗಳು ವಿಭಿನ್ನ ಆಲೋಚನೆಗಳನ್ನು ಹೊಂದಬಹುದು ಮತ್ತು ಅಂತಹ ಪರಿಸ್ಥಿತಿಯಲ್ಲಿ, ನೀವಿಬ್ಬರೂ ಪರಸ್ಪರರ ಮಾತುಗಳನ್ನು ಕೇಳಬೇಕು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.

Love

ನೀವು ನಿಮ್ಮ ಸಂಗಾತಿಯನ್ನು ಎಲ್ಲದರಲ್ಲೂ ನಿರ್ಣಯಿಸಲು ಪ್ರಾರಂಭಿಸಿದಾಗ ಮತ್ತು ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದಿದ್ದಾಗ, ಸಂಬಂಧದಲ್ಲಿನ ತಿಳುವಳಿಕೆ ಕಡಿಮೆಯಾಗುತ್ತದೆ. ಇದು ಭವಿಷ್ಯದಲ್ಲಿ ನಿಮ್ಮಲ್ಲಿ ಅಂತರಗಳನ್ನು ಸೃಷ್ಟಿಸಲು ಮತ್ತು ಜಗಳಗಳನ್ನು ಹೆಚ್ಚಿಸುವ  ಕೆಲಸ ಮಾಡುತ್ತದೆ.

Love

ಎಲ್ಲದರ ಬಗ್ಗೆ ಜಗಳ ಒಳ್ಳೆಯದಲ್ಲ
ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಜೀವನ ವಿಧಾನವನ್ನು ಹೊಂದಿದ್ದಾನೆ, ಆದರೆ ಮದುವೆಯ ನಂತರ, ನಾವು ನಮ್ಮ ಸಂಗಾತಿಯಿಂದ ಹೆಚ್ಚು ನಿರೀಕ್ಷಿಸಲು ಪ್ರಾರಂಭಿಸುತ್ತೇವೆ. ನಿಮ್ಮ ಸಂಗಾತಿಯ ಜೀವನಶೈಲಿಯನ್ನು (lifestyle) ಅರ್ಥ ಮಾಡಿಕೊಳ್ಳಬೇಕು ಮತ್ತು ಅದರಲ್ಲಿ ಹೆಚ್ಚು ನಮ್ಮ ನಿಲುವೇ ಅಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. 

Love

ಯಾವುದೇ ವಿಷಯಕ್ಕೆ ಇನ್ನೊಬ್ಬರ ಮೇಲೆ ಒತ್ತಡ (stress) ಹೇರಬಾರದು. ಏಕೆಂದರೆ ನೀವು ಏನನ್ನಾದರೂ ಮಾಡಲು ಸಂಗಾತಿಗೆ ಪದೇ ಪದೇ ಅಡ್ಡಿಪಡಿಸಿದಾಗ, ಅವರಿಗೆ  ಕಿರಿಕಿರಿಯಾಗಲು ಪ್ರಾರಂಭವಾಗುತ್ತದೆ. ಆರೋಗ್ಯಕರ ವಾತಾವರಣ ಮತ್ತು ಸಂಬಂಧವನ್ನು ಕಾಪಾಡಿಕೊಳ್ಳಲು ಸಂಗಾತಿಯನ್ನು ನಿಯಂತ್ರಿಸುವ ಸ್ವಭಾವವನ್ನು ತಪ್ಪಿಸಿ.

Love

ಮಾತುಮಾತಿಗೆ ಅನುಮಾನಿಸಬೇಡಿ 
ನೀವು ನಿಮ್ಮ ಸಂಗಾತಿಯೊಂದಿಗೆ ಯಾವಾಗಲೂ ಇರುವಾಗ, ನೀವು ಅವರ ಪ್ರತಿಯೊಂದು ಚಟುವಟಿಕೆಗಳ ಮೇಲೆ ಕಣ್ಣಿಡುತ್ತೀರಿ (doubting partner). ಇಂತಹ ಪರಿಸ್ಥಿತಿಯಲ್ಲಿ ಅನೇಕ ಬಾರಿ ಇಂತಹ ಸನ್ನಿವೇಶಗಳು ಸೃಷ್ಟಿಯಾಗಿ, ಅಲ್ಲಿ ನಿಮ್ಮ ಮನಸ್ಸಿನಲ್ಲಿ ಬಹಳಷ್ಟು ಆಲೋಚನೆಗಳು ಬರಲು ಪ್ರಾರಂಭಿಸುತ್ತವೆ. 

Love

ಸಂಗಾತಿಯು ಆಗಾಗ್ಗೆ ಸ್ನೇಹಿತರೊಂದಿಗೆ ಎಲ್ಲಿಗಾದರೂ ಹೋಗುವುದು ಅಥವಾ ನಿಮಗೆ ತಿಳಿಸದೆ ಹೊರಡುವುದು ಮಾಡುವುದರಿಂದ ನಿಮಗೆ ಬೇಜಾರಾಗಬಹುದು. ಆದಾಗ್ಯೂ, ಇದು ಸಂಭವಿಸಿದಾಗ, ನಿಮ್ಮ ಸಂಗಾತಿಯನ್ನು ಅನುಮಾನಿಸದೆ  ಅವರೊಂದಿಗೆ ಮುಕ್ತವಾಗಿ ಮಾತನಾಡುವುದು ಮತ್ತು ನಿಮ್ಮ ಸಂದಿಗ್ಧತೆಯನ್ನು ಅವರಿಗೆ ಹೇಳುವುದು ಉತ್ತಮ. ಇದರಿಂದ ಸಂಬಂಧ ಉತ್ತಮವಾಗಿರುತ್ತದೆ. 

Love

ಕಮ್ಯುನಿಕೇಷನ್ ಗ್ಯಾಪ್ ಬರಲು ಬಿಡಬೇಡಿ
ಸಂಗಾತಿಯೊಂದಿಗೆ ಜಗಳವಾಡಿದ ನಂತರ, ಅನೇಕ ಬಾರಿ ನೀವು ಅವರೊಂದಿಗೆ ಹಲವಾರು ದಿನಗಳವರೆಗೆ ಮಾತನಾಡುವುದಿಲ್ಲ ಮತ್ತು ಕ್ರಮೇಣ ನಿಮ್ಮ ನಡುವಿನ communication gap ಹೆಚ್ಚಾಗುತ್ತದೆ. ಸಂಭಾಷಣೆಯ ಸ್ವಲ್ಪ ಸಮಯದ ನಂತರ, ದಂಪತಿಗಳು ಪ್ರೀತಿಯ ಬೆಚ್ಚಗಿನ ಭಾವನೆಯನ್ನು ನಿಲ್ಲಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮದುವೆಯ ನಂತರ ಮತ್ತು ಎಷ್ಟೇ ಜಗಳವಾಡಿದರೂ ಇಂತಹ ತಪ್ಪು ಮಾಡುವುದನ್ನು ತಪ್ಪಿಸಿ, ಆದರೆ ಸಂಗಾತಿಯೊಂದಿಗೆ ಮಾತನಾಡುವುದನ್ನು ಮುಂದುವರಿಸಿ.

Love

ವಾಗ್ವಾದದ ನಂತರ ನೀವು ಅವರೊಂದಿಗೆ ಹೆಚ್ಚು ಮಾತನಾಡಲು ಬಯಸದಿದ್ದರೂ,  ಖಂಡಿತವಾಗಿಯೂ ಊಟದ ಮೇಜಿನ ಬಳಿ ಅದನ್ನು ತರಬೇಡಿ. ಇದು ನಿಮ್ಮ ನಡುವಿನ ಪ್ರೀತಿಯನ್ನು ಉಳಿಸಿಕೊಳ್ಳುತ್ತದೆ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನಲಾಗುತ್ತದೆ. ಆದುದರಿಂದ ಮಲಗುವ ವೇಳೆಗೆ ನಿಮ್ಮೆಲ್ಲಾ ಕಲಹ ದೂರ ಮಾಡಿ ಮನಸು ಬಿಚ್ಚಿ ಮಾತನಾಡಿ. ಇದರಿಂದ ಸಂಬಂಧ ಗಟ್ಟಿಯಾಗುತ್ತದೆ. 

Latest Videos

click me!