ಅನೇಕ ಬಾರಿ ನಾವು ನಮ್ಮ ವೈಯಕ್ತಿಕ ವಿಷಯಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುತ್ತೇವೆ. ಈ ಕಾರಣದಿಂದಾಗಿ, ಅನೇಕ ಬಾರಿ ನಾವು ತೊಂದರೆಯನ್ನು ಎದುರಿಸಬೇಕಾಗುತ್ತದೆ. ನೀವು ಇದನ್ನು ಮಾಡುತ್ತಿದ್ದರೆ, ಇವತ್ತಿನಿಂದಲೆ ಆ ಅಭ್ಯಾಸವನ್ನು ತ್ಯಜಿಸಬೇಕು.
ಪುರುಷರಾಗಲಿ, ಮಹಿಳೆಯರಾಗಲಿ ಕೆಲವೊಮ್ಮೆ ತಮ್ಮ ಎಲ್ಲಾ ವಿಷಯಗಳನ್ನು ಇತರರ ಬಳಿ ಹೇಳುತ್ತಾರೆ. ಅದು ಬೆಸ್ಟ್ ಫ್ರೆಂಡ್ ಆಗಿರಲಿ, ಸಂಬಂಧಿಗಳು ಆಗಿರಲಿ, ಆಪ್ತರು ಆಗಿರಲಿ, ಅವರ ಬಳಿ ಎಲ್ಲವನ್ನೂ ಹೇಳುತ್ತಾರೆ. ಆದರೆ ತಜ್ಞರು ಹೇಳುವಂತೆ ಕೆಲವೊಂದು ವಿಷಯಗಳನ್ನು (do not reveal these secrets with anyone) ನಾವು ಯಾರ ಬಳಿಯೂ ಹೇಳಬಾರದು. ಅದು ಪುರುಷ ಅಥವಾ ಮಹಿಳೆಯಾಗಿರಲಿ, ನೀವು ಕೆಲವು ವಿಷಯಗಳನ್ನು ಎಲ್ಲರಿಂದಲೂ ಮರೆಮಾಡಬೇಕು. ಅಂತಹ ವಿಷಯಗಳು ಯಾವುವು ನೋಡೋಣ.
27
ನಿಮ್ಮ ಜಗಳಗಳ ಬಗ್ಗೆ ಹೇಳಬೇಡಿ
ನೀವು ವಿವಾಹಿತರಾಗಿದ್ದರೆ, ನಿಮ್ಮ ಜಗಳದ ಬಗ್ಗೆ (couple fight) ನೀವು ಎಂದಿಗೂ ಬೇರೆಯವರಿಗೆ ಹೇಳಬಾರದು. ಕೆಲವೊಮ್ಮೆ ಸಣ್ಣ ವಿಷಯಗಳು ಸಹ ತುಂಬಾ ದೊಡ್ಡದಾಗುತ್ತವೆ. ಇನ್ನೊಬ್ಬ ವ್ಯಕ್ತಿಯು ನಿಮ್ಮ ಹಿತೈಷಿಯಾಗಿರಬೇಕೆಂದೇನಿಲ್ಲ. ಕೆಲವೊಮ್ಮೆ ನೀವು ಯಾರ ಬಳಿ ಗುಟ್ಟು ಹೇಳಿದಿರೋ ಅವರೇ ನಿಮ್ಮ ಮಧ್ಯೆ ಹುಳಿ ಹಿಂಡುವ ಕೆಲಸ ಮಾಡಿರುತ್ತಾರೆ
37
ಅನೇಕ ಬಾರಿ ನಾವು ನಮ್ಮ ಅನೇಕ ಸೀಕ್ರೆಟ್ ವಿಷಯವನ್ನು, ಜಗಳವಾದುದನ್ನು ಇತರರಿಗೆ ಹೇಳುತ್ತೇವೆ ಮತ್ತು ಅವರು ಇದಕ್ಕಾಗಿ ನಮ್ಮನ್ನು ಗೇಲಿ ಮಾಡುತ್ತಾರೆ. ಹಾಗಾಗಿ, ನೀವು ಈ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಈ ವಿಷಯವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಗಂಡ ಹೆಂಡತಿ ಜಗಳ ಮನೆಯೊಳಗೆ ಇದ್ದರೇನೆ ಚೆಂದ.
47
ಹಣಕಾಸಿನ ಸಮಸ್ಯೆಯ ಬಗ್ಗೆ ಹೇಳಬೇಡಿ
ಕೆಲವೊಮ್ಮೆ ನಾವು ಹಣಕಾಸಿನ ಸಮಸ್ಯೆಯನ್ನು (money problem) ಎದುರಿಸುತ್ತೇವೆ. ಆ ಸಮಯದಲ್ಲಿ ನಾವು ಅಸಮಾಧಾನಗೊಂಡಿದ್ದೇವೆ ಮತ್ತು ನಮ್ಮ ದುಃಖವನ್ನು ನಮ್ಮ ಕುಟುಂಬ ಅಥವಾ ಸ್ನೇಹಿತರಿಗೆ ಹೇಳುತ್ತೇವೆ. ಇದನ್ನು ಮಾಡುವುದರಿಂದ ನಮಗೆ ಯಾವುದೇ ಪ್ರಯೋಜನವಿಲ್ಲ. ಹೀಗೆ ಹೇಳೋದು ಸಹ ತಪ್ಪು..
57
ನಮ್ಮ ಎಲ್ಲಾ ಸಮಸ್ಯೆಯಲ್ಲೂ ಕುಟುಂಬ ಅಥವಾ ಸ್ನೇಹಿತರು ನಮಗೆ ಸಹಾಯ ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಮ್ಮ ಆರ್ಥಿಕ ಸಮಸ್ಯೆಯ ಬಗ್ಗೆ ನಾವು ಬೇರೆ ಯಾರಿಗೂ ಹೇಳಬಾರದು. ಇದರಿಂದ ಅವರು ಗೇಲಿ ಮಾಡುವ ಸಾಧ್ಯತೆ ಹೆಚ್ಚಿದೆ. ಹಣದ ಸಮಸ್ಯೆ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
67
ಆರೋಗ್ಯ ಸಂಬಂಧಿತ ಸಮಸ್ಯೆಗಳು (health problem)
ನಮ್ಮ ಸಮಾಜವು ಒಪ್ಪಿಕೊಳ್ಳದ ರೋಗವನ್ನು ನೀವು ಹೊಂದಿದ್ದರೆ, ಅಂತಹ ವಿಷಯಗಳನ್ನು ಬೇರೆ ಯಾರಿಗೂ ಹೇಳಬೇಡಿ. ಹೀಗೆ ಮಾಡಿದ್ರೆ ನಿಮ್ಮ ಮರ್ಯಾದೆಯನ್ನು ತೆಗೆಯುವ ಕೆಲಸ ಮಾಡುವರು. ಬೇರೆ ಯಾರು ನಿಮ್ಮ ಸಮಸ್ಯೆಗೆ ಪರಿಹಾರ ನೀಡುವುದಿಲ್ಲ. ನೀವು ಕೆಟ್ಟದ್ದರ ಬಗ್ಗೆ ಮಾತನಾಡಿದರೆ, ಅಂತಹ ಜನರು ನಿಮಗೆ ಕೆಟ್ಟದ್ದನ್ನು ಮಾಡುತ್ತಾರೆ.
77
ನಮ್ಮ ಜೀವನದ ಏಳು - ಬೀಳುಗಳ ಬಗ್ಗೆ ಹೇಳಬಾರದು
ವ್ಯವಹಾರದಲ್ಲಿ ಏಳು -ಬೀಳುಗಳು ಸಾಮಾನ್ಯ (success and failure of life). ಆದರೆ ನಾವು ಬಿದ್ದ ವಿಷಯಗಳನ್ನಾಗಲಿ, ಅಥವಾ ಯಶಸ್ವಿಯಾದ ವಿಷಯವನ್ನಾಗಲಿ ಯಾರ ಬಳಿಯೂ ಹೇಳಬಾರದು. ನಾವು ಯಶಸ್ವಿಯಾದ ವಿಷಯ ಹೇಳಿದರೆ ಅದಕ್ಕೆ ತೊಡಕು ಉಂಟು ಮಾಡುವ ಸಾಧ್ಯತೆ ಇದೆ.