ಪುರುಷರು ಹೀಗಿದ್ದರೆ ಮಹಿಳೆಯರು ಆಕರ್ಷಿತರಾಗೋದು ಗ್ಯಾರಂಟಿ!

Suvarna News   | Asianet News
Published : Jan 28, 2021, 04:11 PM IST

ಪುರುಷರು ಮಹಿಳೆಯರನ್ನು ಇಂಪ್ರೆಸ್ ಮಾಡಲು ಹಲವು ರೀತಿಯ ವಿಧಾನವನ್ನು ಅನುಸರಿಸುತ್ತಾರೆ. ಹುಡುಗಿಯರು ತಮ್ಮನ್ನೇ ನೋಡಬೇಕು ಎಂದು ಪುರುಷರು ಜಿಮ್ಮಲ್ಲಿ ಸಿಕ್ಕಾಪಟ್ಟೆ ಬೆವರು ಇಳಿಸುತ್ತಾರೆ. ಆದರೆ ನಿಜವಾಗಿಯೂ ಮಹಿಳೆಯರನ್ನು ಪುರುಷರ ಕಡೆಗೆ ಆಕರ್ಷಿಸುವುದು ಏನು ಎಂಬುದು ಅವರಿಗೆ ತಿಳಿದಿರಲಿಕ್ಕಿಲ್ಲ. ಸುಂದರ ಮಹಿಳೆಯರ ಮೊದಲ ಆಯ್ಕೆಗೆ ಏನು ಗುಣಗಳಿರಬೇಕು ಎಂಬುದನ್ನು ತಿಳಿಯಲು ಪುರುಷರು ಸದಾ ಉತ್ಸುಕರಾಗಿರುತ್ತಾರೆ. ಇಲ್ಲಿದೆ ಮಹಿಳೆಯರು ನಿಜವಾಗಿಯೂ ಪುರುಷರಲ್ಲಿ ಏನು ಇಷ್ಟಪಡುತ್ತಾರೆ ಗೊತ್ತಾ? 

PREV
110
ಪುರುಷರು ಹೀಗಿದ್ದರೆ ಮಹಿಳೆಯರು ಆಕರ್ಷಿತರಾಗೋದು ಗ್ಯಾರಂಟಿ!

ಮಹಿಳೆಯರು ಸುಂದರ ಪುರುಷರನ್ನು ಇಷ್ಟಪಡುತ್ತಾರೆ ಎಂಬುದರ ಬಗ್ಗೆ ಹಲವು ವರ್ಷಗಳಿಂದ ಸಂಶೋಧನೆಗಳು ನಡೆಯುತ್ತಲೇ ಇವೆ. ಕೆಲವರು ಸುಂದರ ಹಂಕ್ ಹುಡುಗಿಯರಿಗೆ ಇಷ್ಟ ಎಂದರೆ, ಇನ್ನೂ ಕೆಲವರು ಜಂಟಲ್ ಮ್ಯಾನ್ ಇಷ್ಟ ಎಂದು ಹೇಳುತ್ತಾರೆ. ಆದರೆ ಮಹಿಳೆಯರು ಸಂವೇದನಾಶೀಲ ಪುರುಷರನ್ನು ಹೆಚ್ಚು ಇಷ್ಟಪಡುತ್ತಾರೆ.

210

ಮಹಿಳೆಯರಿಗೆ ಫ್ಲರ್ಟ್ ಮಾಡುವ ಹುಡುಗರು ಇಷ್ಟವಾಗೋದಿಲ್ಲ. ಆದರೆ ಆರೋಗ್ಯಯುತ ಫ್ಲರ್ಟ್ ಮಾಡುವವರನ್ನು ಇಷ್ಟಪಡುತ್ತಾರೆ ಎಂದು ಸಂಶೋಧನೆ ಹೇಳಿದೆ. ಜೊತೆಗೆ ಅಂತಹ ಪುರುಷರ ಜೊತೆಗೆ ಮಾತನಾಡಿದಾಗ ಆಕೆಗೆ ನಾಚಿಕೆ, ನಗು ಎಲ್ಲವೂ ಜೊತೆ ಜೊತೆಯಾಗಿ ಬರುತ್ತದೆ.

310

ಹಾಸ್ಯಪ್ರಜ್ಞೆಯನ್ನು ಹೊಂದಿರುವ ಪುರುಷರತ್ತ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರೆ. ಇಂತಹ ಪುರುಷರು ಯಾವುದೇ ವಿಷಯಗಳನ್ನು ಸುಲಭವಾಗಿ ನಗುತ್ತಲೇ ಹಂಚಿಕೊಳ್ಳುತ್ತಾರೆ, ಇದು ಸಂಬಂಧವನ್ನು ಪರಿಪೂರ್ಣವಾಗಿಸುತ್ತದೆ.

410

ಮಹಿಳೆಯರು ಅಥವಾ ಪುರುಷರು ಸಮಾನ ಚಿಂತನೆಗಳಿರೋ ಜನರಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ತುಂಬಾ ಆಕರ್ಷಕವಾಗಿರುವ ಹುಡುಗ ಸಿಕ್ಕರೆ, ಇವರಿಗೆ ಬೇರೆಯವರ ಮೇಲೂ ಲವ್ ಆಗಬಹುದು ಎಂಬ ಭಯ ಕಾಡುತ್ತದೆ. ಕಡಿಮೆ ಆಕರ್ಷಕವಾಗಿದ್ದರೆ ಇದಕ್ಕಿಂತ ಸುಂದರವಾಗಿರೋರು ಸಿಗಬಹುದು ಎಂದು ಕೊಳ್ಳುತ್ತಾರೆ. ಅದಕ್ಕಾಗಿ ತಮ್ಮಂತೆ ಇರುವ ವ್ಯಕ್ತಿಯನ್ನೇ ಇಷ್ಟ ಪಡುತ್ತಾರೆ. 

510

ಹೆಚ್ಚಿನ ಮಹಿಳೆಯರು ಚೆನ್ನಾಗಿ ಅಡುಗೆ ಮಾಡುವ ಪುರುಷರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಸಂಶೋಧನೆಯಲ್ಲಿ ಕಂಡುಕೊಂಡಂತೆ 100ರಲ್ಲಿ 80ರಷ್ಟು ಮಹಿಳೆಯರು ತಾವು ಇಷ್ಟ ಪಡುವ ವ್ಯಕ್ತಿ ಕುಕ್ ಆಗಿರಬೇಕು ಎಂದು ಬಯಸಿದ್ದಾರೆ. 

610

ಮಹಿಳೆಯರು ಹೆಚ್ಚಾಗಿ ತಮ್ಮ ವಯಸ್ಸಿಗಿಂತ ಅಧಿಕ ವಯಸ್ಸಿನ ಪುರುಷರತ್ತ ಹೆಚ್ಚಾಗಿ ಆಕರ್ಷಿತರಾಗುತ್ತಾರೆ. ಮಹಿಳೆಯರು ಹೆಚ್ಚಾಗಿ ಪ್ರಬಲ ಮತ್ತು ಹಿರಿಯ ಪುರುಷರೊಂದಿಗೆ ಸಂಬಂಧವನ್ನು ಮಾಡಿಕೊಳ್ಳಲು ಬಯಸುತ್ತಾರೆ

710

ಮಹಿಳೆಯರು ಸಹಾಯ ಮಾಡುವ ಪುರುಷರೆಡೆಗೆ ಸಹಜವಾಗಿಯೇ ಆಕರ್ಷಿತರಾಗುತ್ತಾರೆ. ಇಂತಹ ಪುರುಷರಿಗೆ ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂಬುದು ತಿಳಿದಿರುತ್ತದೆ. ಮಹಿಳೆಯರಿಗೆ ಸಹಾಯ ಮಾಡುವಲ್ಲಿ ಸಹ ಮುಂದೆ ಇದ್ದಾರೆ. 

810

ಮಹಿಳೆಯರಿಗೆ ಬಾಡಿ ಬಿಲ್ಡ್ ಮಾಡಿರುವ ಕಟ್ಟುಮಸ್ತಾದ ಪುರುಷರು ಹೆಚ್ಚು ಹೆಚ್ಚು ಇಷ್ಟವಾಗುತ್ತಾರೆ ಎಂದು ಹೇಳಲಾಗುತ್ತದೆ, ಆದರೆ ಅದು ನಿಜವಲ್ಲ. ಸಾಮಾನ್ಯ ದೇಹ ಹೊಂದಿರುವ ಪುರುಷರನ್ನು ಮಹಿಳೆಯರು ಹೆಚ್ಚು ಹೆಚ್ಚು ಇಷ್ಟಪಡುತ್ತಾರೆ.

910

ಅನೇಕ ಸಂಶೋಧನೆಗಳ ಪ್ರಕಾರ ಮಹಿಳೆಯರು ಫನ್ನಿಯಾಗಿರುವ, ಯಾವಾಗಲೂ ಎಲ್ಲರನ್ನೂ ನಗಿಸುವ ವ್ಯಕ್ತಿಯತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಮಹಿಳೆಯರು ಇಂತಹ ಪುರುಷರೊಂದಿಗೆ ಮುಕ್ತವಾಗಿ ಮಾತನಾಡುತ್ತಾರೆ.
 
1010

ಇತ್ತೀಚಿನ ದಿನಗಳಲ್ಲಿ ಪುರುಷರ ಗಡ್ಡದ ಲುಕ್ ತುಂಬಾ ಟ್ರೆಂಡ್ ಆಗಿದೆ. ಈ ಶೈಲಿ ಮಹಿಳೆಯರನ್ನು ಹೆಚ್ಚು ಸೆಳೆಯುತ್ತದೆ. ಅಧ್ಯಯನದ ಪ್ರಕಾರ ಮಹಿಳೆಯರು ತಿಳಿಯಾದ ಗಡ್ಡ ಹೊಂದಿರುವ ಪುರುಷರತ್ತ ಹೆಚ್ಚು ಆಕರ್ಷಿತರಾಗುತ್ತಾರೆ,  

click me!

Recommended Stories