ಸಿಂಗಲ್ ಆಗಿರೋರು ಮಾಡುವ ಸಾಮಾನ್ಯ ತಪ್ಪುಗಳಿವು

First Published | Jan 16, 2021, 1:02 PM IST

ಸಿಂಗಲ್‌ ಆಗಿದ್ದರೆ ಫ್ರೆಂಡ್ಸ್‌ಗಳು ಹಾಗೂ ರಿಲೇಟಿವ್ಸ್‌ಗಳು ಕೇಳುವ ಸಾಮಾನ್ಯ ಪ್ರಶ್ನೆ ಎಂದರೆ ಮದುವೆ ಯಾವಾಗಾ? ಯಾವಾಗ ಸಿಹಿ ಸುದ್ದಿ ಕೊಡುತ್ತೀರಿ ಎಂದು ಕೇಳಿ ಕೇಳಿ ತಲೆ ತಿನ್ನುತ್ತಾರೆ.  ಅವುಗಳಿಗೆ ಉತ್ತರ ಕೊಡುವುದು ಸಹ ಅಷ್ಟೊಂದು ಸುಲಭವಾಗಿರೋದಿಲ್ಲ. ಜೊತೆಗೆ ಅಯ್ಯೋ ಇವರಿಗೆ ಏನಪ್ಪಾ ಉತ್ತರ ನೀಡಲಿ ಎಂಬ ಗೊಂದಲ ಸಹ ಇರುತ್ತದೆ.

ಕೆಲವು ಜನರು ಹಲವಾರು ಪ್ರಯತ್ನಗಳನ್ನು ಮಾಡಿದ ನಂತರವೂ ಸಿಂಗಲ್‌ ಆಗಿಯೇ ಇರುತ್ತಾರೆ. ನೀವು ಕೂಡ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಬೇಕು. ಹಲವಾರು ಕಾರಣಗಳಿಂದಾಗಿ ಸಿಂಗಲ್ ಗಳಾಗಿ ಉಳಿಯುತ್ತಾರೆ.ನೀವೇ ಮಾಡುವತಪ್ಪುಗಳಿಂದ ನೀವು ಸಿಂಗಲ್ ಆಗಿ ಉಳಿಯುತ್ತೀರಿ. ಅವು ಏನೇನು..?
undefined
ಸಿಂಗಲ್‌ಗಳು ಮಾಡುವ ತಪ್ಪುಗಳು :ಕನಸಿನ ರಾಜಕುಮಾರ: ನನ್ನ ಕನಸಿನ ರಾಜಕುಮಾರ ಅಥವಾ ರಾಜಕುಮಾರಿ ಹೀಗಿರಬೇಕು, ನನಗಾಗಿ ಹೀಗೆಲ್ಲಾ ಮಾಡಬೇಕೆಂದು ಕನಸು ಕಾಣುತ್ತ ಕುಳಿತರೆ ಅದು ಸಾಧ್ಯವಾಗೋದೆ ಇಲ್ಲ. ಯಾಕೆಂದರೆ ವಾಸ್ತವಕ್ಕೂ, ಕನಸಿಗೂ ಹೊಂದೋದು ಭಾರೀ ಕಷ್ಟ. ವಾಸ್ತವಕ್ಕೂ ಕನಸಿಗೂ ನಡುವಿನ ಅಂತರವನ್ನು ತಿಳಿದುಕೊಳ್ಳಬೇಕು. ಆವಾಗ ಮಾತ್ರ ಸಮಸ್ಯೆಗಳ ಪರಿಹಾರ ಸಾಧ್ಯ.
undefined

Latest Videos


ಈ ಸ್ವಭಾವದವರಿಗೆ ಕಷ್ಟ:ತುಂಬಾ ನಾಚಿಕೆ ಸ್ವಭಾವದವರಾಗಿದ್ದು ಲೆಕ್ಕಕ್ಕಿಂತ ಹೆಚ್ಚು ಅಗ್ರೆಸಿವ್‌ ಆಗಿದ್ದರೆ ಹುಡುಗಿ ಸಿಗೋದು ಕಷ್ಟವಾಗುತ್ತದೆ. ಯಾರೊಂದಿಗೂ ಫೀಲಿಂಗ್‌ ಶೇರ್‌ ಮಾಡದೆ ಇದ್ದರೆ ಇತರರಿಗೆ ನಿಮ್ಮ ಬಗ್ಗೆ ತಿಳಿಯಲು ಕಷ್ಟವಾಗುತ್ತದೆ. ಇದಲ್ಲದೆ ಹೆಚ್ಚು ಅಹಂ ಇದ್ದರೂ ಸಹ ಜೀವನಸಂಗಾತಿ ಸಿಗೋದು ಕಷ್ಟವಾಗುತ್ತದೆ.
undefined
ಈ ಭಯ ಕೂಡ ಕಾರಣ :ಹಲವಾರು ಜನ ಹೀಗೂ ಯೋಚನೆ ಮಾಡುತ್ತಾರೆ ಒಂದು ವೇಳೆ ಜೀವನದಲ್ಲಿ ಸಂಗಾತಿ ಬಂದರೆ ನಮ್ಮ ಕಡೆಗೆ ಗಮನ ಹರಿಸಲು ಸಾಧ್ಯವಾಗೋದಿಲ್ಲ ಎಂದು. ಈ ಕಾರಣದಿಂದಾಗಿ ಕೆಲವರು ಸಂಬಂಧದಲ್ಲಿರಲು ಇಷ್ಟಪಡೋದಿಲ್ಲ. ಅವರಿಗೆ ಜೀವನ ಸಂಗಾತಿ ಬೇಕು, ಆದರೆ ಅವರು ಹೆಚ್ಚು ಭಯಪಡುತ್ತಾರೆ.
undefined
ಒಬ್ಬಂಟಿಯಾಗಿರಲು ಇಷ್ಟಪಡುವವರು :ಕೆಲವು ಜನರು ಒಬ್ಬಂಟಿಯಾಗಿರಲು ಇಷ್ಟಪಡುತ್ತಾರೆ, ಅವರಿಗೆ ಒಬ್ಬಂಟಿಯಾಗಿರಲು ಎಷ್ಟು ಇಷ್ಟ ಎಂದರೆ ಅವರು ಫ್ರೆಂಡ್ಸ್‌ ಮತ್ತು ಜನರೊಂದಿಗೆ ಸ್ನೇಹ ಬೆಳೆಸಲು ಸಹ ಭಯ ಪಡುತ್ತಾರೆ.
undefined
ಸ್ವತಂತ್ರ್ಯಕಳೆದುಕೊಂಡರೆ ಎಂಬ ಭಯ :ರಿಲೇಶನ್‌ಶಿಪ್‌ನಲ್ಲಿದ್ದರೆ ನಾವು ಸ್ವತಂತ್ರ್ಯ ಕಳೆದುಕೊಳ್ಳುತ್ತೇವೆ ಎಂಬ ಭಯ ಅವರಲ್ಲಿ ಕಾಡುತ್ತದೆ. ಆದುದರಿಂದ ಅವರು ತಾವು ಸಿಂಗಲ್‌ ಆಗಿರುವುದೆ ಬೆಸ್ಟ್‌ ಎಂದುಕೊಂಡು ಜೀವನ ಸಾಗಿಸುತ್ತಾರೆ.
undefined
ಅಹಂ ಸ್ವಭಾವದ ವ್ಯಕ್ತಿ :ಅಹಂ ಸ್ವಭಾವದ ವ್ಯಕ್ತಿ ಯಾವಾಗಲೂ ತನ್ನ ಬಗ್ಗೆ ಯೋಚನೆ ಮಾಡುತ್ತಾರೆ. ಇನ್ನೊಬ್ಬರ ಫೀಲಿಂಗ್ಸ್ ಬಗ್ಗೆ ಗೌರವ ಕೊಡೋದೇ ಇಲ್ಲ. ಇವರನ್ನು ನೋಡುವಾಗಲೇ ಅಥವಾ ಅವರ ಜೊತೆ ಮಾತನಾಡುವಾಗಲೇ ಎಂತಹ ಅಹಂ ಹೊಂದಿದ ವ್ಯಕ್ತಿ ಎಂದು ತಿಳಿಯುತ್ತದೆ. ಇಂತಹ ವ್ಯಕ್ತಿಯನ್ನು ಇಷ್ಟಪಡೋದಿಲ್ಲ.
undefined
ಕೋಪಿಷ್ಟ ವ್ಯಕ್ತಿ :ಮಾತು ಮಾತಿಗೆ ಕೋಪ ಮಾಡಿಕೊಂಡು ರೇಗುವ ವ್ಯಕ್ತಿಯನ್ನು ಯಾರು ಹತ್ತಿರ ಸೇರಿಸುವುದಿಲ್ಲ. ಆದುದರಿಂದ ಇಂತವರು ರಿಲೇಶನ್ ಶಿಪ್ ನಲ್ಲಿ ಬೀಳೋದು ತುಂಬಾನೆ ಕಷ್ಟ.
undefined
ಸಂಶಯದ ಹುಳು :ಪ್ರತಿಯೊಂದನ್ನೂ ಸಂಶಯದಲ್ಲೇ ನೋಡುವಂತಹ ವ್ಯಕ್ತಿಯ ಬಳಿ ಮಾತನಾಡುವುದೇ ಭಯ ಹುಟ್ಟಿಸುತ್ತದೆ. ಇನ್ನು ಇಂತಹ ವ್ಯಕ್ತಿ ಜೊತೆ ಪ್ರೀತಿ, ರಿಲೇಶನ್ ಶಿಪ್ ಎಲ್ಲಾ ಹೇಗೆ?
undefined
ಇಂತಹ ವ್ಯಕ್ತಿತ್ವ ನಿಮ್ಮಲ್ಲೂ ಇದ್ದರೆ, ಇವತ್ತಿಂದಲೇ ಅದರಿಂದ ಹೊರ ಬನ್ನಿ ಹಾಗೂ ಉತ್ತಮ ವ್ಯಕ್ತಿಯಾಗಿ. ಇದರಿಂದ ಪ್ರೀತಿಯಲ್ಲೂ ಸಹ ಬೇಗನೇ ಬೀಳಬಹುದು.
undefined
click me!