ನಟಿ ಮೇಘನಾ ರಾಜ್​ ಹುಟ್ಟುಹಬ್ಬ: 'ಸಂಗೀತ ಬಾರ್​ ಆ್ಯಂಡ್​ ರೆಸ್ಟೋರೆಂಟ್'​ನಲ್ಲಿ ನಟಿ ಹೀಗೆ ಕಾಣಿಸಿಕೊಂಡ್ರು

Published : May 03, 2026, 06:33 PM IST

ನಟಿ ಮೇಘನಾ ರಾಜ್ 'ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಈ ಚಿತ್ರದಲ್ಲಿ ರಾಣಿ ಹಾಗೂ ನಾಯಕಿಯಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ವಿವಾಹ ವಾರ್ಷಿಕೋತ್ಸವದಂದು,  ಪತಿ ಚಿರಂಜೀವಿ ಸರ್ಜಾ ಕನಸು ನನಸು ಮಾಡಲು ರಜನಿಕಾಂತ್ ಅವರನ್ನು ಭೇಟಿಯಾಗಿದ್ದರು

PREV
16
ಬಣ್ಣದ ಲೋಕಕ್ಕೆ ಮರಳಿದ ಮೇಘನಾ ರಾಜ್​

ನಟಿ ಮೇಘನಾ ರಾಜ್​ ಸದ್ಯ ಮಗನ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಚಿತ್ರದಲ್ಲಿಯೂ ಆ್ಯಕ್ಟೀವ್​ ಆಗಿದ್ದಾರೆ. ಮಗ ರಾಯನ್​ ಸರ್ಜಾ ಹೊಟ್ಟೆಯಲ್ಲಿ ಇರುವಾಗಲೇ ಮೇಘನಾ ಅವರು ಪತಿ ಚಿರು ಸರ್ಜಾ ಅವರನ್ನು ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದದ್ದೇ. ಅವರು ಅಗಲಿದ ಮೇಲೆ ಕುಟುಂಬಕ್ಕೆ ಬೆಳಕಾಗಿ ಬಂದಿದ್ದು ರಾಯನ್. ಮೇಘನಾ ಹೊಟ್ಟೆಯಲ್ಲಿ ಚಿರು ಹುಟ್ಟಿ ಬರಬೇಕು ಎಂಬ ಅಸಂಖ್ಯ ಅಭಿಮಾನಿಗಳ ಆಸೆ ಈಡೇರಿತ್ತು. 2020ರ ಜೂನ್​ನಲ್ಲಿ ಚಿರು ಅವರು ನಿಧನರಾದರು. ಅಂದಿನಿಂದ ಇಂದಿನವರೆಗೂ ಮೇಘನಾ ರಾಜ್​ ಮಗನ ಆರೈಕೆಯಲ್ಲಿ ಕಾಲ ಕಳೆಯುತ್ತಿರುವ ನಡುವೆಯೇ ಬಣ್ಣದ ಲೋಕಕ್ಕೆ ಪುನಃ ಎಂಟ್ರಿ ಕೊಟ್ಟಿದ್ದಾರೆ.

26
ಸಂಗೀತ ಬಾರ್​ ಆ್ಯಂಡ್​ ರೆಸ್ಟೋರೆಂಟ್

ಸಂಗೀತ ಬಾರ್​ ಆ್ಯಂಡ್​ ರೆಸ್ಟೋರೆಂಟ್ ಚಿತ್ರದಲ್ಲಿ ನಟಿ ನಟಿಸಿದ್ದು, ಇಂದು ಅವರ ಹುಟ್ಟುಹಬ್ಬದ ನಿಮಿತ್ತ ಆ ಫೋಟೋಗಳು ಈಗ ವೈರಲ್​ ಆಗುತ್ತಿವೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಕೋಮಲ್ ಕುಮಾರ್ ಅವರು ಡಬಲ್ ರೋಲ್ ಮಾಡಿದ್ದಾರೆ. ಒಂದು ಪಾತ್ರದಲ್ಲಿ ಆಸ್ಥಾನವೊಂದರ ವರ್ಣಚಿತ್ರ ಕಲಾವಿದನಾಗಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ಸಿನಿಮಾ ನಿರ್ದೇಶಕನ ಪಾತ್ರವನ್ನು ಕೋಮಲ್‌ ಮಾಡಿದ್ದಾರೆ. ಮೇಘನಾ ರಾಜ್‌ ರಾಣಿಯಾಗಿ ಮತ್ತು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

36
ಏನಿದರ ವಿಶೇಷತೆ?

ಕುಂದಾಪುರ, ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ‘ಸಂಗೀತ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌’ ಚಿತ್ರದ ಬಹುತೇಕ ಶೂಟಿಂಗ್ ನಡೆಸಲಾಗಿದೆ. ಅಷ್ಟಕ್ಕೂ ಇದರ ಶೀರ್ಷಿಕೆಯೇ ಕುತೂಹಲ ಮೂಡಿಸಿದೆ. ಈ ಸಿನಿಮಾಗೆ ಎರಡು ಟೈಟಲ್ ಇದೆ ಎಂದು ಚಿತ್ರತಂಡ ಹೇಳಿದೆ. ‘ಸಂಗೀತ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌’ ಎಂಬುದು ಒಂದು ಶೀರ್ಷಿಕೆ. ‘ದೇವರ ತಾಣ’ ಎಂಬುದು ಇನ್ನೊಂದು ಟೈಟಲ್. ಚಿತ್ರದ ಮೊದಲಾರ್ಧ ಬಾರ್‌ನಲ್ಲಿ ಶುರುವಾಗಿ, ದ್ವಿತೀಯಾರ್ಧ ದೇವರ ತಾಣದಲ್ಲಿ ಶುರುವಾಗುತ್ತದೆ. ಆದರೆ ಸೆನ್ಸಾರ್‌ ನಿಯಮದ ಪ್ರಕಾರ ಒಂದು ಸಿನಿಮಾಕ್ಕೆ ಒಂದೇ ಟೈಟಲ್ ಇರಬೇಕು. ಹಾಗಾಗಿ ‘ಸಂಗೀತ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌’ ಶೀರ್ಷಿಕೆಯಲ್ಲಿ ಬಿಡುಗಡೆ ಮಾಡುವುದಾಗಿ ನಿರ್ದೇಶಕರು ಇದಾಗಲೇ ಹೇಳಿದ್ದಾರೆ.

46
ನಿನ್ನೆಯಷ್ಟೇ ವಿವಾಹ ವಾರ್ಷಿಕೋತ್ಸವ

ನಿನ್ನೆ ಅರ್ಥಾತ್​ ಮೇ 2 ಚಿರು ಜೊತೆಗೆ ದಾಂಪತ್ಯ ಜೀವನಕ್ಕೆ ಮೇಘನಾ ಕಾಲಿಟ್ಟ ದಿನ. 2018ರಲ್ಲಿ ಇವರ ಮದುವೆಯಾಗಿತ್ತು. ಇಂದು ಚಿರು ಬದುಕಿದ್ದರೆ, 8ನೇ ವಿವಾಹ ವಾರ್ಷಿಕೋತ್ಸವವನ್ನು ಒಟ್ಟಿಗೇ ಆಚರಿಸಿಕೊಳ್ಳುತ್ತಿತ್ತು ಜೋಡಿ. ಆದರೆ ವಿಧಿಯಾಟವೇ ಬೇರೆಯಾಗಿದೆ. ಆದರೆ ಪತಿಯ ಕನಸನ್ನು ಈ ಬಾರಿಯ ವಿವಾಹ ವಾರ್ಷಿಕೋತ್ಸವದಂದು ನನಸು ಮಾಡಿದ್ದಾರೆ ನಟಿ.

56
ಚಿರು ಕನಸು ನನಸು

ಚಿರಂಜೀವಿ ಸರ್ಜಾ ಅವರು ಆರಾಧಿಸುತ್ತಿದ್ದ ರಜನಿಕಾಂತ್‌ ಅವರನ್ನು ಭೇಟಿಯಾಗುವ ಮೂಲಕ ಮೇಘನಾ ಪತಿಯ ಕನಸನ್ನು ನನಸು ಮಾಡಿದ್ದಾರೆ. ಈ ವೇಳೆ ರಜನಿಕಾಂತ್​ ಅವರು ತಮ್ಮ ಒಂದು ಪ್ರತಿಕೃತಿಯನ್ನು ಮೇಘನಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ ನಟಿ. ಈ ವಿವಾಹ ವಾರ್ಷಿಕೋತ್ಸವ ಕೇವಲ ಒಂದು ದಿನಾಂಕವಲ್ಲ, ಚಿರು... ಅದು ಒಂದು ಭಾವನೆ. ನಿಮ್ಮ ಮತ್ತು ನನ್ನ ಕನಸುಗಳು ಇನ್ನು ಮುಂದೆ ಬೇರೆಯಾಗುವುದಿಲ್ಲ - ನಾವು ಒಂದೇ ಎಂದು ನಾವು ನಿರ್ಧರಿಸಿದ ದಿನ ಎಂದು ಬರೆದುಕೊಂಡಿದ್ದಾರೆ.

66
ಪ್ರತಿಯೊಂದು ಹೆಜ್ಜೆಯಲ್ಲೂ ಇದೆ ಅನುಭವ

ನಾನು ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ನಿಮ್ಮನ್ನು ಅನುಭವಿಸುತ್ತೇನೆ... ನೀವು ದೇವರಿಗೆ ಹತ್ತಿರವಾಗಿದ್ದೀರಿ, ಆದರೆ ನನಗೆ ಇನ್ನೂ ಹತ್ತಿರವಾಗಿದ್ದೀರಿ - ನನ್ನ ಮೂಲಕ ಬದುಕುತ್ತಿದ್ದೀರಿ, ಪದಗಳಿಂದ ವಿವರಿಸಲಾಗದ ರೀತಿಯಲ್ಲಿ ನಾನಾಗುತ್ತಿದ್ದೇನೆ. ನೀವು ಅವರನ್ನು ಆರಾಧಿಸಿದ್ದೀರಿ, ಮತ್ತು ನಾನು ಕನಸು ಕಾಣದ ರೀತಿಯಲ್ಲಿ ಭಾರತೀಯ ಚಿತ್ರರಂಗದ ದೇವರನ್ನು ಭೇಟಿಯಾಗುವಂತೆ ಮಾಡಿದ್ದೀರಿ ಎಂದಿದ್ದಾರೆ ನಟಿ. ಇಂದು, ನಾವು ಒಮ್ಮೆ ಒಟ್ಟಿಗೆ ಕನಸು ಕಂಡಿದ್ದನ್ನು ನಾನು ಜೀವಂತಗೊಳಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಈ ಯಶಸ್ಸು, ಈ ಮೈಲಿಗಲ್ಲು, ಈ ಚಿತ್ರ ನಿಮಗೆ ಸೇರಿದ್ದು. ವಾರ್ಷಿಕೋತ್ಸವದ ಶುಭಾಶಯಗಳು, ನನ್ನ ಬೇಬಿಮಾ ಎಂದಿದ್ದಾರೆ ಮೇಘನಾ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories