ಅನುಷ್ಕಾ ಮಾತ್ರವಲ್ಲ, ವಿರಾಟ್ ಕೊಹ್ಲಿ ಅತ್ತಿಗೆನೂ ಸಖತ್‌ ಬ್ಯೂಟಿಫುಲ್‌!

Published : Oct 07, 2023, 11:48 AM ISTUpdated : Oct 07, 2023, 11:58 AM IST

ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಅವರ ನಟ-ಪತ್ನಿ ಅನುಷ್ಕಾ ಶರ್ಮಾ ಸೆಲೆಬ್ರಿಟಿ ಕಪಲ್. ಯಾವಾಗಲೂ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದ್ರೆ ವಿರಾಟ್ ಹೆಂಡ್ತಿ ಮಾತ್ರವಲ್ಲ ಕೊಹ್ಲಿ ಅತ್ತಿಗೆ ಚೇತನಾ ಕೊಹ್ಲಿ ಕೂಡಾ ಸಖತ್ ಕ್ಯೂಟಾಗಿದ್ದಾರೆ ಗೊತ್ತಾ?

PREV
17
ಅನುಷ್ಕಾ ಮಾತ್ರವಲ್ಲ, ವಿರಾಟ್ ಕೊಹ್ಲಿ ಅತ್ತಿಗೆನೂ ಸಖತ್‌ ಬ್ಯೂಟಿಫುಲ್‌!

ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಅವರ ನಟ-ಪತ್ನಿ ಅನುಷ್ಕಾ ಶರ್ಮಾ ಸೆಲೆಬ್ರಿಟಿ ಕಪಲ್. ಹೀಗಾಗಿಯೇ ಅವರ ಜೀವನದಲ್ಲಿ
ನಡೆಯೋ ಎಲ್ಲಾ ಘಟನೆಗಳು ಆಗಾಗ ಸುದ್ದಿಯಲ್ಲಿರುತ್ತವೆ. ಆದ್ರೆ ಈ ಸ್ಟಾರ್ ದಂಪತಿ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಹೆಚ್ಚು ಮುಕ್ತವಾಗಿರಲು ಇಷ್ಟಪಡುವುದಿಲ್ಲ.

27

ಕುಟುಂಬ ಸದಸ್ಯರ ವಿಷಯಕ್ಕೆ ಬಂದಾಗ, ವಿರುಷ್ಕಾ ಕಡಿಮೆ ಪ್ರೊಫೈಲ್ ಇರಿಸಿಕೊಳ್ಳಲು ಇಷ್ಟಪಡುತ್ತಾರೆ. ತಮ್ಮ ಮನೆ ಮಂದಿ, ಅವರ ಹಸರು, ಉದ್ಯೋಗ, ಅವರ ಜೀವನಶೈಲಿಯ ಬಗ್ಗೆ ಎಲ್ಲಿಯೂ ಚರ್ಚಿಸುವುದಿಲ್ಲ. 
 

37

ಆದರೆ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ದೇಶದಲ್ಲಿ ನಡೆಯುತ್ತಿರುವಾಗ ವಿರಾಟ್ ಕೊಹ್ಲಿ ಕುಟುಂಬದ ಬಗ್ಗೆ ಚರ್ಚಿಸಲು ಇದಕ್ಕಿಂತ ಉತ್ತಮ ಸಮಯ ಯಾವುದು. ಇಂದು ನಾವು ವಿರಾಟ್ ಕೊಹ್ಲಿ ಅವರ ಅತ್ತಿಗೆ ಚೇತನಾ ಕೊಹ್ಲಿ ಬಗ್ಗೆ ಹೇಳಲಿದ್ದೇವೆ.

47

2017ರಲ್ಲಿ ವಿರಾಟ್ ಕೊಹ್ಲಿಯ ಹಿರಿಯ ಸಹೋದರ ವಿಕಾಸ್ ಕೊಹ್ಲಿಯನ್ನು ಚೇತನಾ ವಿವಾಹವಾದರು. ಚೇತನಾ ಮತ್ತು ವಿಕಾಸ್ ಕೊಹ್ಲಿ ವಿರಾಟ್ ಮತ್ತು ಅನುಷ್ಕಾ ಜೊತೆಗೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಕಾಣಲು ಸಿಗುತ್ತಾರೆ. 

57

ವಿರಾಟ್ ಮತ್ತು ಅನುಷ್ಕಾ ಮದುವೆಯ ಆರತಕ್ಷತೆಯ ಸಂದರ್ಭದಲ್ಲಿ ದಂಪತಿಗಳು ಹೆಚ್ಚು ಮುನ್ನಲೆಗೆ ಬಂದರು. ಚೇತನಾ ಮತ್ತು ವಿಕಾಸ್ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಅನುಷ್ಕಾ ಶರ್ಮಾ ಮತ್ತು ಚೇತನಾ ಕೊಹ್ಲಿ ನಡುವೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಪಾರ್ಟಿಗಳು ಮತ್ತು ಸಮಾರಂಭಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಸಿಗುತ್ತಾರೆ.

67

ಚೇತನಾ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ತಾವು ಶೇರ್ ಮಾಡಿಕೊಳ್ಳುವ ಹೆಚ್ಚಿನ ಫೋಟೋಗಳಲ್ಲಿ ತಮ್ಮ ಪತಿ ವಿಕಾಸ್ ಕೊಹ್ಲಿಯೊಂದಿಗೆ ಕಾಣಿಸಿಕೊಂಡಿದ್ದಾರೆ. 

77

ಚೇತನಾ ತನ್ನ ಫಿಟ್‌ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾಳೆ, ಇದು ಸಾಮಾಜಿಕ ಮಾಧ್ಯಮದಲ್ಲಿ ಅವರ ಪೋಸ್ಟ್‌ಗಳಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಚೇತನಾ ಕೊಹ್ಲಿ ಗೃಹಿಣಿಯಾಗಿದ್ದರೂ, ಅವರು ಐಷಾರಾಮಿ ಜೀವನಶೈಲಿಯನ್ನು ಆನಂದಿಸುತ್ತಾರೆ.

Read more Photos on
click me!

Recommended Stories