ಅಕ್ಟೋಬರ್ 3 ಅನ್ನು ನ್ಯಾಷನಲ್ ಬಾಯ್ ಫ್ರೆಂಡ್ ದಿನವೆಂದು (National Boy Friend Day) ಆಚರಿಸಲಾಗುತ್ತದೆ. ಈ ದಿನ ಹುಡುಗರನ್ನು ಖುಷಿಯಾಗಿಡಲು ಹುಡುಗೀರು ಏನೇನೋ ಮಾಡ್ತಾರೆ, ಪಾರ್ಟಿ, ಫ್ಲವರ್, ಇನ್ನೊಂದು ಮತ್ತೊಂದು ಎಂದು ಸಖತ್ತಾಗಿ ಅರೇಂಜ್ ಮಾಡ್ತಾರೆ. ಆದ್ರೆ ನಿಜವಾಗಿಯೂ ನಿಮ್ಮ ಬಾಯ್ ಫ್ರೆಂಡನ್ನು (Boy friend) ಖುಷಿ ಪಡಿಸಬೇಕು ಅಥವಾ ಸರ್ಪ್ರೈಸ್ ಮಾಡಬೇಕು ಅಂದ್ರೆ, ಆ ದಿನ ಮಾತ್ರವಲ್ಲ, ಯಾವಾಗ್ಲೂ ಅವರೊಂದಿಗೆ ಈ ರೀತಿಯಾಗಿರಿ.
ಮತ್ತೆ ಮತ್ತೆ ಕರೆ ಮಾಡಬೇಡಿ
ನೀವು ಎಲ್ಲಿಗೆ ತಲುಪಿದ್ದೀರಿ, ನೀವು ಏನು ತಿಂದಿದ್ದೀರಿ, ನೀವು ಏಕೆ ತಿನ್ನಲಿಲ್ಲ, ನೀವು ಇಷ್ಟು ಹೊತ್ತು ಆಫೀಸಲ್ಲಿ ಏನು ಮಾಡುತ್ತಿದ್ದೀರಿ? ಈ ರೀತಿಯ ಪ್ರಶ್ನೆಗಳು ಪ್ರೀತಿ ಮತ್ತು ಕಾಳಜಿಯನ್ನು ತೋರಿಸುತ್ತೆ ಎಂದು ನೀವು ಭಾವಿಸಿದ್ರೆ ಅದು ಸಂಪೂರ್ಣ ತಪ್ಪು. ವಾಸ್ತವವಾಗಿ, ಈ ವಿಷಯಗಳು ಕಿರಿಕಿರಿ ಉಂಟುಮಾಡುತ್ತವೆ. ಹುಡುಗಿಯರು ಪದೇ ಪದೇ ಇದನ್ನೇ ಕೇಳುತ್ತಿದ್ರೆ ಹುಡುಗರಿಗೆ ಇಷ್ಟವಾಗೋದೇ ಇಲ್ಲ.
ಬೆಳಗ್ಗೆಯಿಂದ ಸಂಜೆವರೆಗೆ ಏನೇನು ಮಾಡಿದ್ರಿ ಅಂತ ಕೇಳ್ಬೇಡಿ
ಹುಡುಗರು ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೆ ಪ್ರತಿಯೊಂದೂ ವಿವರವನ್ನು ಕೇಳುವ ಅಭ್ಯಾಸ ಇಷ್ಟಪಡುವುದಿಲ್ಲ, ಅವರು ಕೋಪಗೊಳ್ಳಬಹುದು ಮತ್ತು ನಿಮ್ಮನ್ನು ಹೇಗೆ ದೂರ ಮಾಡಬಹುದು ಅನ್ನೋದರ ಬಗ್ಗೆಯೂ ಯೋಚಿಸಬಹುದು. ಹಾಗಾಗಿ ಎಲ್ಲವನ್ನೂ ಕೇಳೊದನ್ನು ಬಿಡಿ.
ಯಾವತ್ತೂ ಅವರನ್ನು ಕಂಟ್ರೋಲ್ ಮಾಡಲೇಬೇಡಿ
ನಡವಳಿಕೆಯನ್ನು ಕಂಟ್ರೋಲ್ (do not control their behaviour) ಮಾಡೋದು ಯಾವುದೇ ಸಂಬಂಧಕ್ಕೆ ಒಳ್ಳೆಯದಲ್ಲ. ಬಾಲ್ಯದಲ್ಲಿ, ತಮ್ಮ ಪೋಷಕರು ಹೇಳಿದ್ದನ್ನು, ಇಷ್ಟ ಇಲ್ಲಾಂದ್ರೆ ಒತ್ತಾಯಪೂರ್ವಕವಾಗಿ ಕೇಳಿರುತ್ತಾರೆ. ಆದರೆ ಸಂಗಾತಿಯೂ ಅದೇ ಸ್ವಭಾವವನ್ನು ಹೊಂದಿದ್ರೆ, ಅವರಿಗೆ ಉಸಿರುಗಟ್ಟಲು ಪ್ರಾರಂಭಿಸುತ್ತದೆ. ಅವರು ಸಂಬಂಧದಿಂದ ಮುಕ್ತರಾಗುವ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ.
ಸ್ಪೇಸ್ ನೀಡಿ
ಪ್ರತಿಯೊಂದು ಸಂಬಂಧದಲ್ಲೂ ಸ್ಪೇಸ್ (give space) ನೀಡೋ ಅಗತ್ಯವಿದೆ. ಸ್ವಲ್ಪ ಸಮಯದವರೆಗೆ ಅವರನ್ನು ಒಂಟಿಯಾಗಿ ಬಿಡಿ. ಅವರು ಇಷ್ಟ ಪಡುವ ಕೆಲಸಗಳನ್ನು ಅವರು ಮಾಡಲಿ. ನಿಮಗಾಗಿ ಸ್ವಲ್ಪ ಸ್ವಾತಂತ್ರ್ಯ ಅಥವಾ ಸಮಯವನ್ನು ಪಡೆದರೂ ನಿಮ್ಮನ್ನು ಮತ್ತು ನಿಮ್ಮ ಸಂಬಂಧವನ್ನು ಚಾರ್ಜ್ ಮಾಡುವುದು ಬಹಳ ಮುಖ್ಯ. ತಮಗೆ ಫ್ರೀ ಇದ್ದಾಗ, ಆ ಸ್ವಾತಂತ್ರ್ಯ ಇದ್ದಾಗ ಹುಡುಗರು ಖಂಡಿತವಾಗಿಯೂ ತಮ್ಮ ಗೆಳೆತಿಯ ಬಗ್ಗೆ ಯೋಚನೆ ಮಾಡ್ತಾರೆ.
ಕೆಣಕಬೇಡಿ
ಪ್ರತಿಯೊಬ್ಬ ವ್ಯಕ್ತಿಯು ಕೆಲವು ನ್ಯೂನತೆಗಳನ್ನು ಹೊಂದಿದ್ದಾನೆ, ಆದರೆ ಅರ್ಹತೆಗಳನ್ನು ಹೊಗಳುವ ಬದಲು, ನೀವು ನ್ಯೂನತೆಗಳನ್ನು ಕೆಣಕಿದರೆ, ಅದು ಖಂಡಿತವಾಗಿಯೂ ನಿಮ್ಮ ಗೆಳೆಯನಿಗೆ ಕೋಪ ತರಿಸುತ್ತೆ, ಇದರಿಂದ ಸಂಬಂಧ ಹಳಸುತ್ತದೆ. ಈ ವಿಷಯವನ್ನು ಸಾಧ್ಯವಾದಷ್ಟು ತಪ್ಪಿಸಿ. ಏನಾದರು ಸಮಸ್ಯೆ ಇದ್ದರೆ ನೇರವಾಗಿ ಮಾತನಾಡಿ ಬಗೆಹರಿಸಿ. ಆದರೆ ಕೆಣಕಲು ಹೋಗಬೇಡಿ.