ಬಾಲ್ಯ ಸ್ನೇಹಿತರನ್ನೇ ಜೀವನ ಸಂಗಾತಿ ಮಾಡ್ಕೊಳೋದು ಬೆಸ್ಟ್… ಯಾಕ್ ಗೊತ್ತಾ?

Published : Nov 22, 2024, 05:59 PM ISTUpdated : Nov 23, 2024, 07:28 AM IST

ಯಾರನ್ನ ಮದ್ವೆ ಆದ್ರೆ ಜೀವನ ಚೆನ್ನಾಗಿರುತ್ತೆ ಎಂದು ಯೋಚಿಸುವವರಿಗೆ , ಇಲ್ಲಿದೆ ಸಲಹೆ, ನೀವು ಮದ್ವೆ ಆಗೋದಾದ್ರೆ ನಿಮ್ಮ ಬಾಲ್ಯ ಸ್ನೇಹಿತರನ್ನೇ ಮದ್ವೆ ಆಗಿ. ಇದ್ರಿಂದ ಜೀವನ ಚೆನ್ನಾಗಿರುತ್ತೆ.   

PREV
111
ಬಾಲ್ಯ ಸ್ನೇಹಿತರನ್ನೇ ಜೀವನ ಸಂಗಾತಿ ಮಾಡ್ಕೊಳೋದು ಬೆಸ್ಟ್… ಯಾಕ್ ಗೊತ್ತಾ?

ಮದುವೆ ಜೀವನದಲ್ಲಿ ಒಂದು ದೊಡ್ಡ ನಿರ್ಧಾರ. ಒಳ್ಳೆಯ ವ್ಯಕ್ತಿಯನ್ನು ಮದುವೆಯಾದರೆ ಮಾತ್ರ ಜೀವನ ಚೆನ್ನಾಗಿರುತ್ತೆ. ಹಾಗಾಗಿ ಅಪರಿಚಿತ ವ್ಯಕ್ತಿಯ ಬದಲು, ತಮ್ಮ ಬಾಲ್ಯ ಸ್ನೇಹಿತರನ್ನು (marrying childhood friend)ಮದ್ವೆಯಾಗೋದು ಬೆಸ್ಟ್. ಯಾಕೆ ಅನ್ನೋದಕ್ಕೆ ಹಲವಾರು ಕಾರಣಗಳಿವೆ. ಬನ್ನಿ ಆ ಬಗ್ಗೆ ತಿಳಿಯೋಣ. 
 

211

ಉತ್ತಮ ವೈವಾಹಿಕ ಸಂಬಂಧಕ್ಕೆ ಪ್ರೀತಿಯೊಂದಿಗೆ ಸ್ನೇಹವೂ ಮುಖ್ಯ
ಸಂಬಂಧವನ್ನು ಬಲಪಡಿಸಲು, ಪ್ರೀತಿಯೊಂದಿಗೆ ಸ್ನೇಹವನ್ನು (friendhip)ಹೊಂದಿರುವುದು ಅವಶ್ಯಕ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಜನರು ಸ್ನೇಹಿತರನ್ನು ಜೀವನ ಸಂಗಾತಿಗಳನ್ನಾಗಿ ಮಾಡಿಕೊಳ್ಳುತ್ತಾರೆ. ಇದರಿಂದ ತುಂಬಾ ಪ್ರಯೋಜನಗಳನ್ನು ಸಹ ಪಡೆಯಬಹುದು. 

311

ನಟನೆ ಮಾಡಬೇಕಾದ ಅವಶ್ಯಕತೆ ಇಲ್ಲ
ನೀವು ಸ್ನೇಹಿತನನ್ನು ಮದುವೆಯಾದಾಗ ನೀವು ಅವರ ಮುಂದೆ ನಟನೆ ಮಾಡಬೇಕಾಗಿರೋದಿಲ್ಲ. ಮದುವೆಗೆ ಮೊದಲು ನೀವು ಮಾಡುತ್ತಿದ್ದ ಎಲ್ಲಾ ಕೆಲಸಗಳನ್ನು, ಮದುವೆಯ ನಂತರವೂ ನಿಮ್ಮ ಸಂಗಾತಿಯೊಂದಿಗೆ ನೀವು ಮಾಡಬಹುದು. 

411

ನ್ಯೂನತೆಗಳ ಬಗ್ಗೆ ತಲೆ ಕೆಡಿಸೋ ಅವಶ್ಯಕತೆ ಇಲ್ಲ
ಸ್ನೇಹಿತರಾಗಿರುವಾಗ, ನೀವಿಬ್ಬರೂ ಪರಸ್ಪರರ ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ಮದುವೆಯ ನಂತರವೂ ಸಂಬಂಧದ ಮೇಲೆ ನಿಮ್ಮ ನ್ಯೂನ್ಯತೆ ಯಾವುದೇ ಪರಿಣಾಮ ಬೀರೋದಿಲ್ಲ.

511

ಜಗಳಗಳು ಕಡಿಮೆಯಾಗುತ್ತವೆ
ಪ್ರತಿ ದಂಪತಿಗಳು ಒಂದಲ್ಲ ಒಂದು ವಿಷ್ಯಕ್ಕೆ ಜಗಳ ಮಾಡಿಯೇ ಮಾಡ್ತಾರೆ. ಆದರೆ ನಿಮ್ಮ ಸ್ನೇಹಿತ ಜೀವನ ಸಂಗಾತಿಯಾದಾಗ, ಜಗಳಗಳು ಕಡಿಮೆಯಾಗುತ್ತವೆ. ಅಲ್ಲಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. 
 

611

ಹೊಂದಿಕೊಳ್ಳೋದು ಸುಲಭ
ಇಬ್ಬರು ಸ್ನೇಹಿತರಾಗಿರೋದರಿಂದ, ನೀವು ಪರಸ್ಪರರ ಇಷ್ಟಗಳು ಮತ್ತು ಕಷ್ಟಗಳ ಬಗ್ಗೆ ತಿಳಿದಿರುತ್ತೀರಿ, ಈ ಕಾರಣದಿಂದಾಗಿ ನೀವು ಹೊಂದಿಕೊಳ್ಳುವುದು ಸುಲಭವಾಗುತ್ತದೆ.

711

ಒಂದೇ  ರೀತಿಯ ಹವ್ಯಾಸಗಳು
ಸ್ನೇಹಿತರಾಗಿರೋದರಿಂದ ನಿಮ್ಮ ಹವ್ಯಾಸಗಳು ಸಹ ಒಂದೇ ರೀತಿಯಾಗಿರುವ ಸಾಧ್ಯತೆ ಹೆಚ್ಚಾಗಿರುತ್ತೆ. ಇದ್ರಿಂದ ಇಬ್ಬರಿಗೆ ಜೀವನ ಸಾಗಿಸೋದು ಸಹ ಸುಲಭವಾಗುತ್ತೆ. 

811

ಕಡಿಮೆ ಒತ್ತಡ ಮತ್ತು ಹೆಚ್ಚು ಭರವಸೆ
ಹೊಸ ಸಂಬಂಧಗಳಲ್ಲಿ ಒತ್ತಡ ಮತ್ತು ನಿರೀಕ್ಷೆ ಹೆಚ್ಚಾಗಿರುತ್ತವೆ, ಆದರೆ ಸ್ನೇಹಿತನನ್ನು ಮದುವೆಯಾಗುವುದರಿಂದ, ಒತ್ತಡದ ಭಯವಿಲ್ಲ (less stress) ಮತ್ತು ಯಾವುದೇ ನಿರೀಕ್ಷೆಗಳಿರೋದಿಲ್ಲ. ಯಾಕಂದ್ರೆ ಅವರು ಹೇಗೆ ಅನ್ನೋದು ನಿಮಗೆ ಚೆನ್ನಾಗಿ ಗೊತ್ತಿರುತ್ತೆ. 

911

ಫ್ಯಾಮಿಲಿ ಕೂಡ ಚೆನ್ನಾಗಿರುತ್ತೆ
ನಿಮ್ಮ ಸ್ನೇಹಿತರು ಮತ್ತು ಅವರ ಕುಟುಂಬ ಸದಸ್ಯರು ಈಗಾಗಲೇ ನಿಮ್ಮ ಕುಟುಂಬವನ್ನು ತಿಳಿದಿರುತ್ತಾರೆ, ಮತ್ತು ನೀವು ಅವರ ಕುಟುಂಬವನ್ನು ತಿಳಿದುಕೊಳ್ಳುವಿರಿ, ಇದು ಮದುವೆಯ ನಂತರ ಹೊಂದಿಕೊಳ್ಳುವುದನ್ನು ಸುಲಭಗೊಳಿಸುತ್ತದೆ. 
 

1011

ನಂಬಿಕೆ
ಸ್ನೇಹಿತನನ್ನು ಮದುವೆಯಾಗುವುದು ನಿಮಗೆ ನಂಬಿಕೆ ಹೆಚ್ಚಾಗಿರುತ್ತೆ, ಮುಂದೆ ಏನಾಗುತ್ತೆ ಅನ್ನೋ ಭಯ ಇರೋದಿಲ್ಲ. ಏಕೆಂದರೆ ನೀವು ಈಗಾಗಲೇ ಅವರ ಬಗ್ಗೆ ತುಂಬಾನೆ ತಿಳಿದುಕೊಂಡಿರುತ್ತೀರಿ, ಇದು ಸಂಬಂಧವನ್ನು ಬಲಪಡಿಸುತ್ತದೆ. 
 

1111

ಮುಕ್ತ ಸಂಭಾಷಣೆ
ಸ್ನೇಹಿತರನ್ನು ಮದುವೆಯಾದ ನಂತರವೂ, ನೀವು ನಿಮ್ಮ ಭಾವನೆಗಳು ಮತ್ತು ಸಮಸ್ಯೆಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದು, ಆದರೆ ಅರೇಂಜ್ ಮ್ಯಾರೇಜ್ (arrange marriage) ಗಳಲ್ಲಿ ಹಾಗೆ ಮಾಡಲು ಹೆಚ್ಚು ಸಮಯ ಬೇಕಾಗುತ್ತೆ.
 

Read more Photos on
click me!

Recommended Stories