ಹೆಂಡ್ತಿ ಬಗ್ಗೆ ಈ ವಿಷ್ಯ ಒಪ್ಪಿಕೊಂಡ್ರೆ ಸಾಕು, ವಿವಾಹಿತರು ಸಿಕ್ಕಾಪಟ್ಟೆ ಖುಷಿಯಾಗಿರ್ಬಹುದು ನೋಡಿ!

First Published | Feb 4, 2023, 3:52 PM IST

ವಿವಾಹವು ಏಕಮುಖ ಸಂಬಂಧವಲ್ಲ, ಇಬ್ಬರು ಒಬ್ಬರನ್ನೊಬ್ಬರು ಅರಿತು ಜೊತೆಯಾಗಿ ಬಾಳುವ ಬಂಧವಿದು. ಇದರಲ್ಲಿ ಪತಿಗೆ ಮಾತ್ರ ಸಂತೋಷವಾಗಿರಲು ಹಕ್ಕಿದೆ ಎಂದು ಖಂಡಿತವಾಗಿಯೂ ಹೇಳುವಂತಿಲ್ಲ.. ಈ ಸಂಬಂಧದಲ್ಲಿ ಪತಿ -ಪತ್ನಿ ಇಬ್ಬರ ಸಂತೋಷವು ಮುಖ್ಯವಾಗಿದೆ. ಆಗ ಮದುವೆ ಪರಿಪೂರ್ಣವಾಗುತ್ತದೆ.

ವಿವಾಹವು ಬಹಳ ಪವಿತ್ರವಾದ ಬಂಧವಾಗಿದೆ. ಈ ಸಂಬಂಧದಲ್ಲಿ, ಪ್ರೀತಿ ಇರೋದು ಮುಖ್ಯ, ಆದರೆ ಇದರ ಹೊರತಾಗಿ, ರಾಜಿ, ತಿಳುವಳಿಕೆ ಮತ್ತು ಆರೋಗ್ಯಕರ ಸಂಭಾಷಣೆ (healthy conversation) ಹೊಂದಿರುವುದು ಸಹ ಬಹಳ ಮುಖ್ಯ. ಏಕೆಂದರೆ ಇದರಲ್ಲಿ ಒಂದು ವಿಷಯದಲ್ಲಿ ಕೊರತೆ ಕಂಡು ಬಂದರೂ ಈ ಸಂಬಂಧದಲ್ಲಿ ಅಂತರ ಸೃಷ್ಟಿಸುತ್ತದೆ. ಆದ್ದರಿಂದ, ಗಂಡ ಮತ್ತು ಹೆಂಡತಿ ತಮ್ಮ ಸಂಬಂಧದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಸಂತೋಷದ ವೈವಾಹಿಕ ಜೀವನವು (happy married life) ದುಃಖದ ಜೀವನವಾಗಿ ಯಾವಾಗ ಬದಲಾಗುತ್ತದೆ ಎಂದು ಜನರಿಗೆ ತಿಳಿದಿಲ್ಲ ಎಂಬುದು ಸಹ ಇದಕ್ಕೆ ಕಾರಣ.
 

ಗಂಡ ಮತ್ತು ಹೆಂಡತಿ ನಡುವಿನ ಸಂಬಂಧವು (husband and wife relationship) ದುರ್ಬಲವಾಗಿರೋದಿಲ್ಲ, ಆದರೆ ಅವರಿಬ್ಬರ ನಡುವೆ ಅಂತರ ಸೃಷ್ಟಿಸುವಂತಹ ಅನೇಕ ವಿಷಯಗಳು ಹಲವಾರು ಇರುತ್ತವೆ. ಪುರುಷರು (Married Men) ಸಹ ಕೆಲವು ಅಭ್ಯಾಸಗಳನ್ನು ಹೊಂದಿರುತ್ತಾರೆ, ಇದರಿಂದಾಗಿ ಅವರು ತಮ್ಮ ಹೆಂಡತಿಯಿಂದ ದೂರವಿರಲು ಆರಂಭಿಸುತ್ತಾರೆ. ಇದರಿಂದ ಇಬ್ಬರ ನಡುವೆ ಪ್ರೀತಿ ಉಳಿಯೋದೆ ಇಲ್ಲ, ಇದೇ ಮುಂದೆ ವಿಚ್ಚೇದನಕ್ಕೆ ಕಾರಣವಾಗಬಹುದು. ಹಾಗಿದ್ರೆ ವೈವಾಹಿಕ ಜೀವನ ಉಳಿಸಿಕೊಳ್ಳಲು ನೀವೇನು ಮಾಡಬೇಕು? ನೋಡೋಣ. 
 

Tap to resize

ಪತ್ನಿಗೆ ಬೆಂಬಲವಾಗಿ ನಿಲ್ಲಿ

ನೀವು ಎಂದಿಗೂ ನಿಮ್ಮ ಹೆಂಡತಿಯನ್ನು ತೊಂದರೆಯಲ್ಲಿ ಬಿಡಬಾರದು. ಅವ್ರು ಯಾವುದೇ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡರೂ, ನೀವು ಅವರ ಸಮಸ್ಯೆ ಪರಿಹರಿಸಲು ಸಾಧ್ಯವಾಗದಿದ್ದರೂ, ಎಲ್ಲವೂ ಸರಿಹೋಗುತ್ತದೆ ಎಂದು ಭರವಸೆ ನೀಡಿದ್ರೆ ಸಾಕು (support your wife), ಅವರು ನೆಮ್ಮದಿಯಾಗಿರುತ್ತಾರೆ. ಹಾಗಾಗಿ ಕಷ್ಟದ ಪರಿಸ್ಥಿತಿಯಲ್ಲಿ ಅವರ ಜೊತೆಯಾಗಿ ಇರಿ.

ಪತ್ನಿ ಹೇಳುವುದನ್ನು ಕೇಳಲು ಪ್ರಯತ್ನಿಸಿ. ಕಷ್ಟದ ಸಮಯದಲ್ಲಿ ಅವರ ಸಲಹೆಗಾರರಾಗುವುದಕ್ಕಿಂತ ಅವರೊಂದಿಗೆ ನಿಲ್ಲುವುದು ಉತ್ತಮ. ಅವರು ಅಸಮಾಧಾನಗೊಂಡರೆ, ಅವರಿಂದ ದೂರವಾಗುವ ಬದಲು ಅವರೊಂದಿಗೆ ಇರಿ ಧೈರ್ಯ ನೀಡಿ. ನಿಮ್ಮ ಈ ನಡವಳಿಕೆ ಅವರಿಗೆ ಸಾಕಷ್ಟು ಧೈರ್ಯವನ್ನು ನೀಡುತ್ತದೆ.

ಅವರ ಸಂತೋಷದ ಬಗ್ಗೆಯೂ ಇರಲಿ ಗಮನ

ತಮ್ಮ ವೈವಾಹಿಕ ಜೀವನವನ್ನು (married life) ಸಂತೋಷವಾಗಿಡಲು, ಗಂಡ ಮತ್ತು ಹೆಂಡತಿ ಪರಸ್ಪರ ಹೇಗೆ ಕಾಳಜಿ ವಹಿಸಬೇಕೆಂದು ತಿಳಿದಿರಬೇಕು. ಏಕೆಂದರೆ ಹೆಂಡತಿ ತನ್ನ ಗಂಡನ ಸಂತೋಷಕ್ಕಾಗಿ ಎಲ್ಲವನ್ನೂ ಮಾಡುತ್ತಾಳೆ. ಆದರೆ ನಿಮ್ಮನ್ನು ಯಾವಾಗಲೂ ಸಂತೋಷವಾಗಿಡುವುದು ಅವರ ಜವಾಬ್ದಾರಿಯಲ್ಲ. ಪತ್ನಿ ಎಂಬುವಳು ನಿಮಗೆ ಬೇಕೆಂದ ಹಾಗೆ ತಿರುಗಿಸೋ ಕೀ ಅಲ್ಲ.

ವೈವಾಹಿಕ ಜೀವನದಲ್ಲಿ ಇಬ್ಬ ಸಂತೋಷವೂ ತುಂಬಾ ಮುಖ್ಯ. ಪತ್ನಿ ನಿಮ್ಮನ್ನು ಸಂತೋಷವಾಗಿಡಲು ಎಲ್ಲವನ್ನು ಮಾಡುವಂತೆ ನೀವು ಸಹ, ಅವಳು ಯಾವಾಗ ಏನು ಮಾಡಲು ಬಯಸುತ್ತಾಳೆ? ಅವರು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಾರೆ? ಅದನ್ನು ನೋಡಿಕೊಳ್ಳುವುದು ಸಹ ನಿಮ್ಮ ಕೆಲಸ.

ಅವರನ್ನು ಬದಲಾಯಿಸಲು ಪ್ರಯತ್ನಿಸಬೇಡಿ

ಮದುವೆಯ ನಂತರ, ಅನೇಕ ಜನರು ತಮ್ಮ ಹೆಂಡತಿ ತಮಗೆ ಹೊಂದಿಕೊಳ್ಳಬೇಕು. ಅವರು ಬದಲಾಗಬೇಕು ಎಂದು ಬಯಸುತ್ತಾರೆ. ಇದು ಅವರ ವೈವಾಹಿಕ ಜೀವನವನ್ನು ಸಂಪೂರ್ಣವಾಗಿ ಹಾಳುಮಾಡುವ ತಪ್ಪು. ನಿಮ್ಮ ಸಂಗಾತಿಯನ್ನು ಬದಲಾಯಿಸಲು (do not change your wife) ನೀವು ಪ್ರಯತ್ನಿಸುತ್ತಿದ್ದರೆ, ಇದು ಸ್ವಲ್ಪ ಸಮಯದ ನಂತರ ಅವರಿಗೆ ತುಂಬಾ ನಿರಾಶೆಯನ್ನುಂಟು ಮಾಡುತ್ತದೆ. ಅವರು ಹೇಗಿದ್ದಾರೋ ಹಾಗೆಯೇ ಅವರನ್ನು ಇಷ್ಟಪಡಲು ಪ್ರಯತ್ನಿಸಿ.

ನಿಮ್ಮ ಜೀವನ ಸಂಗಾತಿಯನ್ನು ಪ್ರೀತಿಸುತ್ತಲೇ ಇರಿ

ನೀವು ಮದುವೆಯಾಗಿ ಎಷ್ಟು ವರ್ಷಗಳಾಗಿದ್ದರೂ, ನಿಮ್ಮ ಹೆಂಡತಿಯನ್ನು ಎಂದಿಗೂ ಲಘುವಾಗಿ ಪರಿಗಣಿಸಬೇಡಿ. ಅವನನ್ನು ಓಲೈಸುವುದು ಅವಶ್ಯಕ (love your wife). ಏಕೆಂದರೆ ಅವರು ನಿಮಗಾಗಿ ತಮ್ಮ ಮನೆ ಮತ್ತು ಕುಟುಂಬವನ್ನು ತೊರೆದಿದ್ದಾರೆ. ನೀವು ಅವರ ಹೃದಯದ ಯಜಮಾನರು. ಆದ್ದರಿಂದ ಕೆಲವೊಮ್ಮೆ ಅವರನ್ನು ಡೇಟಿಂಗ್ ಗೆ ಮತ್ತು ಕೆಲವೊಮ್ಮೆ ವಾಕಿಂಗ್ ಗೆ ಕರೆದೊಯ್ಯಿರಿ. ಅವರಿಗೆ ಸರ್ಫ್ರೆಸ್ ನೀಡುವ ಅಥವಾ ಪ್ರೀತಿಸುವ ಯಾವುದೇ ಅವಕಾಶ ಕಳೆದುಕೊಳ್ಳಬೇಡಿ. 
 

ಹಣದ ಬಗ್ಗೆ ಚಿಂತೆ ಮಾಡಬೇಡಿ

ಒಬ್ಬ ಮನುಷ್ಯನಿಗೆ ಹಣವನ್ನು ಹೇಗೆ ಉಳಿಸಬೇಕೆಂದು ತಿಳಿದಿರಬೇಕು, ಆದರೆ ಅವನು ತನ್ನ ಹೆಂಡತಿಗಾಗಿ ಖರ್ಚು ಮಾಡುವುದನ್ನು ನಿಲ್ಲಿಸಬೇಕು ಎಂದು ಅರ್ಥವಲ್ಲ. ಏಕೆಂದರೆ ಹಣವು ಕೆಲವೊಮ್ಮೆ ದಂಪತಿ ನಡುವೆ ಸಾಕಷ್ಟು ಅಂತರವನ್ನು ಸೃಷ್ಟಿಸುತ್ತದೆ. ಆದಾಗ್ಯೂ, ಉಳಿತಾಯವು ತಪ್ಪು ಎಂದು ನಾವು ಹೇಳುತ್ತಿಲ್ಲ, ಆದರೆ ನೀವು ಎಲ್ಲಿ ಉಳಿಸಬೇಕು ಮತ್ತು ಅದನ್ನು ಎಲ್ಲಿ ಖರ್ಚು ಮಾಡಬೇಕು ಎಂಬುದನ್ನು ತಿಳಿದಿದ್ದರೆ ಉತ್ತಮ. 

Latest Videos

click me!