ರಾಜಸ್ಥಾನದ ವಿಶಿಷ್ಟ ಮದುವೆ ಸಂಪ್ರದಾಯವೊಂದರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಮದುವೆಯ ದಿನ ತಾಯಿ ತನ್ನ ಮಗನಿಗೆ ಎದೆಹಾಲುಣಿಸುವ ಪದ್ಧತಿ ಇದ್ದು, ಇದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಹೆಂಡತಿ ಬಂದ ಮೇಲೆ ತಾಯಿಯನ್ನು ಮರೆಯಬಾರದು ಎಂಬುದೇ ಈ ಸಂಪ್ರದಾಯದ ಹಿಂದಿನ ಉದ್ದೇಶವಾಗಿದೆ.
ಭಾರತ ಎನ್ನುವುದು ವಿವಿಧ ರೀತಿಯ ಸಂಪ್ರದಾಯಗಳನ್ನು ಒಳಗೊಂಡಿರುವ ದೇಶ. ಹತ್ತಾರು ಮೈಲಿಗಳ ದೂರದಲ್ಲಿಯೇ ಭಾಷೆಯಲ್ಲಿ ಬದಲಾವಣೆ ಇದ್ದಂತೆ ಸಂಪ್ರದಾಯಗಳಲ್ಲಿಯೂ ವಿಭಿನ್ನ ರೀತಿಯದ್ದೇ ಇರುತ್ತದೆ. ಇನ್ನು ರಾಜ್ಯಗಳ ವಿಷಯಕ್ಕೆ ಬರುವುದಾದರೆ, ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಪದ್ಧತಿ, ಸಂಪ್ರದಾಯ.
28
ಎಷ್ಟೊಂದು ಸಂಪ್ರದಾಯಗಳು!
ಅದರಲ್ಲಿಯೂ ಮದುವೆಯ ಸಂಪ್ರದಾಯಗಳಂತೂ ಭಾರತದಲ್ಲಿ ಇರುವಷ್ಟು ಎಲ್ಲಿಯೂ ಇರಲು ಸಾಧ್ಯವೇ ಇಲ್ಲವೇನೋ. ಪ್ರತಿಯೊಂದು ರಾಜ್ಯದಲ್ಲಿ, ಪ್ರತಿಯೊಂದು ಜಾತಿ, ಜನಾಂಗಗಳಲ್ಲಿ ಮದುವೆ ಸಂಪ್ರದಾಯಗಳು ಸಂಪೂರ್ಣ ಭಿನ್ನ ಭಿನ್ನ. ಒಂದೊಂದಂತೂ ವಿಚಿತ್ರ ಎನ್ನಿಸುವ ಸಂಪ್ರದಾಯಗಳು.
38
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಈಗ ಅಂಥದ್ದೇ ಒಂದು ಸಂಪ್ರದಾಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದರ ಬಗ್ಗೆ ಪರ-ವಿರೋಧ ನಿಲುವು ವ್ಯಕ್ತವಾಗುತ್ತಿದೆ.
ಅದೇನೆಂದರೆ, ಮದುವೆಯ ದಿನ ಅಮ್ಮ ತನ್ನ ಮಗನಿಗೆ ಅರ್ಥಾತ್ ಮದುಮಗನಿಗೆ ಎಲ್ಲರ ಎದುರು ಎದೆಹಾಲನ್ನು ನೀಡುವುದು. ಹೀಗೆ ಮದುಮಗ ಹಾಲನ್ನು ಕುಡಿಯುವಾಗ ಉಳಿದಿರುವ ಮಹಿಳೆಯರು ಹಾಡು ಹೇಳುತ್ತಾರೆ.
58
ಭಾರಿ ಚರ್ಚೆಗೆ ಗ್ರಾಸ
ಅಷ್ಟಕ್ಕೂ ಅಮ್ಮನ ಎದೆಹಾಲು ಮಗುವಿನ ಅಮೃತದ ಸಮಾನ. ಮಗು ಮತ್ತು ಅಮ್ಮನ ಬಾಂಧವ್ಯಕ್ಕೆ ನಾಂದಿ ಹಾಡುವುದೇ ಈ ಎದೆಹಾಲು ಎನ್ನುವುದು ಸತ್ಯವಾದರೂ ಮದುವೆಯ ದಿನ ಇಂಥದ್ದೊಂದು ಅಚ್ಚರಿಯ ಸಂಪ್ರದಾಯ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
68
ಪರ-ವಿರೋಧ ಚರ್ಚೆ
ರಾಜಸ್ಥಾನದಲ್ಲಿನ ಈ ಸಂಪ್ರದಾಯದ ವಿಡಿಯೋ ಒಂದು ವೈರಲ್ ಆಗುತ್ತಿದ್ದಂತೆಯೇ ಕೆಲವರು ಟೀಕೆ ಮಾಡುತ್ತಿದ್ದಾರೆ. ಇದು ಅಸಭ್ಯ ಸಂಪ್ರದಾಯ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಇದು ಅಮ್ಮ ಮತ್ತು ಮಗನ ಬಾಂಧವ್ಯ ತೋರಿಸುತ್ತದೆ. ನಮ್ಮಲ್ಲಿಯೂ ಈ ಸಂಪ್ರದಾಯ ಇದೆ ಎನ್ನುತ್ತಿದ್ದಾರೆ.
78
ಮುತ್ತು ಕೊಡುವವಳು ಬಂದಾಗ...
ಅಷ್ಟಕ್ಕೂ ಇಂಥದ್ದೊಂದು ಸಂಪ್ರದಾಯಕ್ಕೆ ಕಾರಣವನ್ನೂ ನೀಡಲಾಗಿದೆ. ಅದೇನೆಂದರೆ, ಸಾಮಾನ್ಯವಾಗಿ ಗಂಡುಮಕ್ಕಳು ಮದುವೆಯಾದ ಮೇಲೆ ಬದಲಾಗುತ್ತಾರೆ ಎನ್ನುವ ಭಾವನೆ ಇದೆ. ಮುತ್ತು ಕೊಡುವವಳು ಬಂದಾಗ ತುತ್ತು ಕೊಡುವವಳನ್ನು ಮರೆಯಬೇಡವೋ ಎನ್ನುತ್ತಾರಲ್ಲ, ಇದೂ ಅದೇ ರೀತಿಯದ್ದು.
88
ಅಮ್ಮನ ಪ್ರೀತಿಯ ನೆನಪು
ಮುತ್ತು ಕೊಡುವವಳು ಬರುತ್ತಾಳೆ ಕಣೋ, ಇನ್ನು ಎದೆಹಾಲು ಉಣಿಸಿ ತುತ್ತು ಕೊಟ್ಟವಳ ಮರಿಯಬೇಡ ಎಂದು ಹೇಳುವುದರ ಸಂಕೇತವಾಗಿ ಮದುವೆಯ ದಿನ ಎದೆಹಾಲು ಉಣಿಸಿ ಅಮ್ಮನ ಪ್ರೀತಿಯ ನೆನಪನ್ನು ಮಗನಿಗೆ ಮಾಡಿಸುವುದು ಇದರ ಹಿಂದಿರುವ ಉದ್ದೇಶವಂತೆ!