ಅಪ್ಪ ಅರ್ಬಾಜ್ ಖಾನ್ 2ನೇ ಮದ್ವೆಲಿ ಮಿಂಚಿದ ಮಗ : ಅಮ್ಮ ಮಲೈಕಾ ಮದ್ವೆ ಯಾವಾಗ ಕೇಳಿದ ನೆಟ್ಟಿಗರು?

First Published | Dec 25, 2023, 12:44 PM IST

ಬಾಲಿವುಡ್ ನಟ ಸಲ್ಮಾನ್ ಖಾನ್ ಸೋದರ, ಮಲೈಕಾ ಅರೋರಾ ಮಾಜಿ ಗಂಡ ಅರ್ಬಾಜ್ ಖಾನ್ ನಿನ್ನೆ ಅದ್ದೂರಿಯಾಗಿ 2ನೇ ಮದುವೆಯಾಗಿದ್ದು, ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿದೆ. ಬಾಲಿವುಡ್‌ನ ಹಲವು ಗಣ್ಯರ ಈ ಮದುವೆಯಲ್ಲಿ ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಸೋದರ, ಮಲೈಕಾ ಅರೋರಾ ಮಾಜಿ ಗಂಡ ಅರ್ಬಾಜ್ ಖಾನ್ ನಿನ್ನೆ ಅದ್ದೂರಿಯಾಗಿ 2ನೇ ಮದುವೆಯಾಗಿದ್ದು, ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿದೆ. ಬಾಲಿವುಡ್‌ನ ಹಲವು ಗಣ್ಯರ ಈ ಮದುವೆಯಲ್ಲಿ ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ.

56 ವರ್ಷದ ಅರ್ಬಾಜ್ ಖಾನ್ ತನಗಿಂತ 23 ವರ್ಷ ಕಿರಿಯಳಾದ 33ರ ಹರೆಯದ ಮೇಕಪ್ ಆರ್ಟಿಸ್ಟ್ ಆಗಿರುವ ಶುರಾ ಖಾನ್ ಅವರನ್ನು ನಿನ್ನೆ ಮದುವೆಯಾಗಿದ್ದಾರೆ. 

Tap to resize

ಸ್ವತಃ ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ ಪುತ್ರಾರ್ಹಾನ್ ಖಾನ್ ಅಪ್ಪನ 2ನೇ ಮದುವೆಯಲ್ಲಿ ಮಿಂಚಿದ್ದು, ಅರ್ಹಾನ್ ಫೋಟೋಗಳು ಕೂಡ ವೈರಲ್ ಆಗುತ್ತಿವೆ. 

ಸಲ್ಮಾನ್, ಅರ್ಬಾಜ್ ಸೋದರಿ ಅರ್ಪಿತಾ ಖಾನ್ ಮನೆಯಲ್ಲಿ ಈ ಅದ್ದೂರಿ ಮದುವೆ ಸಮಾರಂಭ ನಡೆದಿದ್ದು ಬಾಲಿವುಡ್ ಗಣ್ಯರು ಭಾಗಿಯಾಗಿದ್ದರು.

ಸ್ವತಃ ಅರ್ಬಾಜ್ ಖಾನ್ ತನ್ನ 2ನೇ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ಪ್ರೀತಿ ಪಾತ್ರರ ಸಮ್ಮುಖದಲ್ಲಿ ನಾನು ಹಾಗೂ ನನ್ನವಳು ಕೊನೆವರೆಗೂ ಜೊತೆಗಿರಲು ಹೊಸ ಜೀವನ ಶುರು ಮಾಡಿದ್ದೇವೆ ಎಂದು ಅರ್ಬಾಜ್ ಖಾನ್ ಬರೆದುಕೊಂಡಿದ್ದಾರೆ.

ಈ ನವ ಜೋಡಿಗೆ ಅನೇಕರು ಹೊಸ ಜೀವನಕ್ಕೆ ಶುಭ ಹಾರೈಸಿದ್ದಾರೆ. ಇನ್ನು ಕೆಲವರು ಅರ್ಬಾಜ್ ಪುತ್ರ ಅರ್ಹಾನ್‌ನ್ನು ಟ್ರೋಲ್ ಮಾಡಿದ್ದಾರೆ. ಈ ಹುಡುಗ ಮೊದಲು ಅಪ್ಪನ ಮದುವೆ ನಂತರ ಅಮ್ಮನ ಮದುವೆಯಲ್ಲಿ ಭಾಗಿಯಾಗಲಿದ್ದಾನೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಅರ್ಹಾನ್, ಅರ್ಬಾಜ್ ಹಾಗೂ ಮಲೈಕಾ ಅವರ ಪುತ್ರನಾಗಿದ್ದು, ಇತ್ತ ಮಲೈಕಾ ಕೂಡ ಬೋನಿ ಕಪೂರ್ ಪುತ್ರ ನಟ ಅರ್ಜುನ್ ಕಪೂರ್ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಇದೇ ಕಾರಣಕ್ಕೆ ಈತ ಅಮ್ಮನ ಮದುವೆಯನ್ನು ಸ್ವಲ್ಪ ದಿನಗಳಲ್ಲಿ ನೋಡಲಿದ್ದಾನೆ ಎಂದು ಜನ ಕಾಲೆಳೆಯುತ್ತಿದ್ದಾರೆ.

ಇನ್ನು ಸಲ್ಮಾನ್ ಕುಟುಂಬದ ಸ್ನೇಹಿತೆಯಾಗಿರುವ ನಟಿ ರವೀನಾ ಟಂಡನ್ ಕೂಡ ಈ ಮದುವೆಯಲ್ಲಿ ಭಾಗವಹಿಸಿದ್ದು, ಪಾರ್ಟಿಯೊಂದರ  ವೀಡಿಯೋವೊಂದನ್ನು ಪೋಸ್ಟ್ ಮಾಡಿ ನವಜೋಡಿಗೆ ಶುಭಹಾರೈಸಿದ್ದಾರೆ.

ಇನ್ನು ಅರ್ಬಾಜ್ ಸೋದರ ಬಾಲಿವುಡ್ ನಟ ಸಲ್ಮಾನ್ ಖಾನ್, ಸೊಹೈಲ್ ಖಾನ್ ಸೋದರಿ ಅಲ್ವಿರಾ, ಅಪ್ಪ ಅಮ್ಮ ಸೇರಿಂದತೆ ಹತ್ತಿರದ ಬಂಧುಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಇದರ ಜೊತೆಗೆ ಸಿನಿಮಾ ಇಂಡಸ್ಟ್ರಿಯ ಸ್ನೇಹಿತರಾದ ಫರ್ಹಾ ಖಾನ್, ಸಂಜಯ್ ಕಪೂರ್, ರಿತೇಶ್ ದೇಶ್‌ಮುಖ್ ಹಾಗೂ ಜೆನಿಲಿಯಾ ದೇಶ್‌ಮುಖ್ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

Latest Videos

click me!