ಮಲೈಕಾ ಪತಿ 2ನೇ ಮದುವೆಗೂ ಮೊದಲು ಅತ್ತಿಗೆಗೆ ವಿಶೇಷ ಸಂದೇಶ ಕಳುಹಿಸಿದ ನಟ ಸಲ್ಮಾನ್ ಖಾನ್

First Published | Dec 24, 2023, 5:30 PM IST

ಬಾಲಿವುಡ್ ನಟ ಸಲ್ಮಾನ್ ಖಾನ್ ಸೋದರ ಹಾಗೂ ನಟಿ ಮಲೈಕಾ ಆರೋರಾ ಮಾಜಿ ಪತಿ ಅರ್ಬಾಜ್ ಖಾನ್ 2ನೇ ಮದುವೆ ಇಂದು ಸುರಾ ಖಾನ್ ಜೊತೆ ನಡೆಯಲಿದ್ದು, ಈ ಮದುವೆಗೂ ಮೊದಲು ನಟ ಸಲ್ಮಾನ್ ಖಾನ್ ತನ್ನ ಅತ್ತಿಗೆ ಹಾಗೂ ಅರ್ಬಾಜ್‌ ಖಾನ್ ಮೊದಲ ಪತ್ನಿ ಮಲೈಕಾ ಆರೋರಾಗೆ ವಿಶೇಷ ಉಡುಗೊರೆಯೊಂದನ್ನು ಕಳುಹಿಸಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಸೋದರ ಹಾಗೂ ನಟಿ ಮಲೈಕಾ ಆರೋರಾ ಮಾಜಿ ಪತಿ ಅರ್ಬಾಜ್ ಖಾನ್ 2ನೇ ಮದುವೆ ಇಂದು ಸುರಾ ಖಾನ್ ಜೊತೆ ನಡೆಯಲಿದ್ದು, ಈ ಮದುವೆಗೂ ಮೊದಲು ನಟ ಸಲ್ಮಾನ್ ಖಾನ್ ತನ್ನ ಅತ್ತಿಗೆ ಹಾಗೂ ಅರ್ಬಾಜ್‌ ಖಾನ್ ಮೊದಲ ಪತ್ನಿ ಮಲೈಕಾ ಆರೋರಾಗೆ ವಿಶೇಷ ಉಡುಗೊರೆಯೊಂದನ್ನು ಕಳುಹಿಸಿದ್ದಾರೆ.

ಸ್ವತಃ ಮಲೈಕಾ ಆರೋರಾ ಮೈದುನ ಸಲ್ಮಾನ್ ಖಾನ್ ಕಳುಹಿಸಿದ ಈ ವಿಶೇಷ ಉಡುಗೊರೆ ಹಾಗೂ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Tap to resize

ಸಾರ್ವಜನಿಕವಾಗಿ ಬಹು ಚರ್ಚಿತವಾದ ತಮ್ಮಿಬ್ಬರ ವಿಚ್ಛೇದನದ ನಂತರ ಅರ್ಬಾಜ್ ಖಾನ್ ಹಾಗೂ ನಟಿ ಮಲೈಕಾ ಆರೋರಾ ಸೌಹಾರ್ದಯುತವಾಗಿಯೇ ಇದ್ದಾರೆ. ಅತ್ತ ಮಲೈಕಾ ನಟ ಅರ್ಜುನ್ ಕಪೂರ್ ಜೊತೆ ಸಂಬಂಧದಲ್ಲಿದ್ದರೆ ಇತ್ತ ಅರ್ಬಾಜ್ ಖಾನ್ ಕೆಲಕಾಲ ಜಾರ್ಜಿಯಾ ಆಂಡ್ರಿಯಾನಿ ಜೊತೆ ಲೀವ್ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು.

ಆದರೆ ಏನಾಯ್ತು ಏನೋ ಪರಸ್ಪರ ಇಬ್ಬರು ಬ್ರೇಕಾಫ್ ಮಾಡ್ಕೊಂಡಿದ್ದಾರೆ. ಈ ಬ್ರೇಕಾಪ್ ನಡೆದು ಹೆಚ್ಚೇನು ದಿನಗಳಾಗಿಲ್ಲ ಆಗಲೇ 56 ವರ್ಷದ ಅರ್ಬಾಜ್ ಖಾನ್ ತನಗಿಂತ 23 ವರ್ಷ ಕಿರಿಯಳಾದ ಶುರಾ ಖಾನ್ ಜೊತೆ ಹಸೆಮಣೆ ಏರಲೂ ಸಿದ್ಧತೆ ನಡೆಸಿದ್ದಾರೆ.

 ಇದಕ್ಕಾಗಿ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಶುರಾ ಖಾನ್ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತ್ತ ತನ್ನ ಮೈದುನ ಸಲ್ಮಾನ್ ಖಾನ್‌ ಕಳುಹಿಸಿದ ಉಡುಗೊರೆ ಹಾಗೂ ಸಂದೇಶವನ್ನು ಪ್ರೀತಿಯಿಂದಲೇ ಸ್ವೀಕರಿಸಿರುವ ಮಲೈಕಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. 

ಸಲ್ಮಾನ್ ಖಾನ್ ನಡೆಸುವ ಎನ್‌ಜಿಒ ಬೀಯಿಂಗ್ ಹ್ಯೂಮನ್ ಲೆಬಲ್ ಈ ಉಡುಗೊರೆ ಮೇಲಿದ್ದು, ಕೆಲ ಸಿಹಿ ತಿನಿಸು, ಬಟ್ಟೆ, ಹಾಟ್ ಚಾಕೋಲೇಟ್‌ ಪೌಡರ್‌, ಸಾಂತಾಕ್ಲಾಸ್ ಟೋಫಿ ಇನ್ನು ಕೆಲವಸ್ತುಗಳನ್ನು ಒಳಗೊಂಡ ಬಾಕ್ಸ್ ಇದಾಗಿದೆ. ಕ್ರಿಸ್ಮಸ್‌ ಹಬ್ಬದ ಅಂಗವಾಗಿ ಈ ಉಡುಗೊರೆ ಕಳುಹಿಸಲಾಗಿದೆ.

ನಿಮಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು, ಈ ಹಬ್ಬ ನಿಮ್ಮಲ್ಲಿ ಖುಷಿ ಸಂತೋಷ ಸಂಭ್ರಮ ತುಂಬಿಸಲಿ, ನಿಮ್ಮ ಅಚಲವಾದ ಸ್ನೇಹ ಮತ್ತು ಬೆಂಬಲಕ್ಕಾಗಿ ನಮ್ಮ ಮೆಚ್ಚುಗೆಯ ಸಂಕೇತವಾಗಿ ಈ ಪುಟ್ಟ ಉಡುಗೊರೆಯನ್ನು ನಿಮಗೆ ಕಳುಹಿಸುತ್ತಿದ್ದೇವೆ. ಇದು ನಿಮ್ಮ ಇರುವಿಕೆಯೂ  ನಮ್ಮ ಮುಖವನ್ನು ಬೆಳಗಿಸುವಂತೆ ಇದು ನಿಮ್ಮ ಮುಖದಲ್ಲಿ ನಗುವನ್ನು ತರಲಿ ಎಂದು ಉಡುಗೊರೆಯ ಜೊತೆ ಕಳುಹಿಸಿದ ಸಂದೇಶದಲ್ಲಿ ಬರೆಯಲಾಗಿದೆ. 

ಇತ್ತ ಅರ್ಬಾಜ್ ಖಾನ್ ಅವರು ಸೋದರಿ ಅರ್ಪಿತಾ ಮನೆಯಲ್ಲಿ ಮದುವೆಗೆ ಸಿದ್ಧರಾಗುತ್ತಿದ್ದಾರೆ.  ಅರ್ಬಾಜ್ ಖಾನ್ ಮುಂದಿನ ಸಿನಿಮಾ ಪಾಟ್ನಾ ಶುಕ್ಲಾದ ಶೂಟಿಂಗ್ ವೇಳೆ ಮೇಕಪ್ ಆರ್ಟಿಸ್ಟ್‌  ಶುರಾ ಖಾನ್ ಜೊತೆ ಪ್ರೀತಿ ಹುಟ್ಟಿತ್ತು. 

ಇತ್ತೀಚೆಗಷ್ಟೇ ಅರ್ಬಾಜ್ ಖಾನ್ ತಾನು 2ನೇ ಮದುವೆಯಾಗುತ್ತಿರುವ ಬಗ್ಗೆ ಸುಳಿವು ನೀಡಿದ್ದರು. ಈ ವೇಳೆ ಪಪಾರಾಜಿಗಳು ಅವರಲ್ಲಿ ಮದುವೆ ಯಾವಾಗ ಎಲ್ಲಿ ಎಂದು ಪ್ರಶ್ನೆ ಕೇಳಿದ್ದು, ನಾಚುತ್ತಲೇ ಉತ್ತರಿಸದೇ ಅರ್ಬಾಜ್  ಖಾನ್ ಮುಂದೆ ಸಾಗಿದ್ದರು. 
 

ಇನ್ನು ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ, ಅವರು 1998ರಲ್ಲಿ ಮದುವೆಯಾಗಿದ್ದು, 4 ವರ್ಷಗಳ ನಂತರ ಮಗ ಅರ್ಹಾನ್‌ ಖಾನ್‌ಗೆ ಪೋಷಕರಾಗಿದ್ದರು.  ಆದರೆ ದಾಂಪತ್ಯದಲ್ಲಿ ವಿರಸದಿಂದಾಗಿ ಇಬ್ಬರೂ 2017ರಲ್ಲಿ ವಿಚ್ಛೇದನ ಪಡೆದಿದ್ದರು.  ಆದರೆ ವಿಚ್ಛೇದನದ ಆಚೆಗೂ ಇಬ್ಬರು ಉತ್ತಮ ಒಡನಾಟ ಹೊಂದಿದ್ದಾರೆ. 

ಅರ್ಜುನ್ ಕಪೂರ್ ಜೊತೆ ಮಲೈಕಾ ಪ್ರೀತಿಯಲ್ಲಿ ಬಿದ್ದ ನಂತರ ಈ ಬೆಳವಣಿಗೆ ನಡೆದಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇತ್ತ ಮಲೈಕಾ ಮತ್ತು ಅರ್ಜುನ್ ತಮ್ಮ ಸಂಬಂಧವನ್ನು 2019 ರವರೆಗೆ ಮಾಧ್ಯಮದ ಕಣ್ಣುಗಳಿಂದ ದೂರವೇ ಇಟ್ಟಿದ್ದರು.

Latest Videos

click me!