ಪ್ರೀತಿ ಹೇಳು ಮಾತೇ ಬೇಕಿಲ್ಲ... ಒಂದು ಕಿರು ನೋಟ, ನಗು, ಸ್ಪರ್ಶವೂ ಸಾಕು

First Published | Mar 24, 2021, 7:06 PM IST

ಮಾತಿಗಿಂತ ಪವರ್ಫುಲ್ ಆಗಿರೋದು ಭಾವನೆ. ಮುಖದಲ್ಲಿ ಮೂಡುವ ಭಾವನೆ ಅಥವಾ ಆಂಗಿಕ ಭಾಷೆ ಎಲ್ಲವನ್ನೂ ಎದುರಿದ್ದವರಿಗೆ ತಿಳಿಸಿ ಬಿಡುತ್ತದೆ. ಪ್ರೀತಿಯಲ್ಲಿ ಆಂಗಿಕ ಭಾಷೆಯೂ ಮುಖ್ಯ. ನಿಮ್ಮವರನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದರೆ ಅಥವಾ ಅವರೊಂದಿಗೆ ರೊಮ್ಯಾನ್ಸ್ ಮಾಡಲು ಮನಸು ಹಾತೊರೆಯುತ್ತಿದ್ದರೆ ಅದನ್ನು ಮಾತಿನಲ್ಲಿ ಹೇಳುವ ಬದಲು ಹೀಗೆ ವ್ಯಕ್ತಪಡಿಸಿ. 
 

ಕಣ್ಣೋಟ : ಮೊದಲಿಗೆ ಕಣ್ಣೋಟದಿಂದ ಅವರನ್ನು ಸೆಳೆಯಬೇಕು. ಪತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ ನಸು ನಕ್ಕು ಬಿಡಿ. ಅವರಿಗೆ ಎಲ್ಲವೂಅರ್ಥವಾಗುತ್ತದೆ.
ಲಿಪ್ಸ್ ಜೊತೆ ಫ್ಲರ್ಟ್ ಮಾಡಿ: ಪತಿಯನ್ನು ರೊಮ್ಯಾಂಟಿಕ್ ಮೂಡ್‌ಗೆ ಕೊಂಡೊಯ್ಯಲು ತುಟಿಯ ಮೇಲೆ ಕೈ ಬೆರಳನ್ನು ಆಡಿಸುತ್ತಾ, ಅವರ ಕಡೆಗೊಂದು ಮಾದಕ ನೋಟ ಬೀರಿ. ಇಲ್ಲವಾದರೆ ಕೆಳ ತುಟಿಯನ್ನು ಮೆಲ್ಲಗೆ ಕಚ್ಚಿ. ಇನ್ನು ರೊಮ್ಯಾಂಟಿಕ್ ಆಗಿರಲು ರೆಡ್ ಲಿಪ್ ಸ್ಟಿಕ್ ಹಚ್ಚಿ.
Tap to resize

ಕೂದಲಿನ ಜೊತೆ ಆಟ : ಕೂದಲು ದೇಹದ ಒಂದು ಆಕರ್ಷಕ ಭಾಗ. ಅಲ್ಲದೇ ಇದು ಫ್ಲರ್ಟಿಂಗ್ ಮಾಡಲು ಉಪಯೋಗಿಸುವ ವಸ್ತುವು ಆಗಿದೆ. ಸಂಗಾತಿ ಸುಮ್ಮನೆ ಕುಳಿತಿದ್ದಾಗ ಆತನ ಎದುರು ಕೂದಲನ್ನು ಕೈಗಳಿಂದ ಸುರುಳಿ ಮಾಡುತ್ತೀರಿ. ಇಲ್ಲವೇ ಆತನ ಬಳಿಗೆ ಹೋಗಿ ಕುತ್ತಿಗೆ, ಕಿವಿಬಳಿ ಕೂದಲಿನಿಂದ ಕಚಗುಳಿ ಇಡಿ. ಜೊತೆಗೆ ಅವರ ಕೂದಲಿನ ಮೇಲೆ ಕೈಯಾಡಿಸುತ್ತ ಮುದ್ದು ಮಾಡಿ.
ಕೈಗಳನ್ನು ಉಪಯೋಗಿಸಿ : ರೊಮ್ಯಾಂಟಿಕ್ ಆ್ಯಕ್ಟಿವಿಟಿ ಮೂಲಕ ನಿಮ್ಮವರ ಗಮನ ಸೆಳೆಯಬಹುದು. ಹೇಗೆ ಅಂದರೆ ನಿಮ್ಮ ಕೈ, ಕಾಲು, ಅಥವಾ ಮುಖವನ್ನು ನಿಧಾನವಾಗಿ ಟಚ್ ಮಾಡುವುದು. ಇದರಿಂದ ಅವರಿಗೂ ನನ್ನ ಹೆಂಡ್ತಿ ರೊಮ್ಯಾಂಟಿಕ್ ಆಗಿದ್ದಾಳೆ ಅನ್ನೋದು ತಿಳಿಯುತ್ತದೆ.
ಫೇಷಿಯಲ್ ಎಕ್ಸ್‌ಪ್ರೆಷನ್: ಹೌದು, ಮುಖದ ಹಾವ ಭಾವದ ಮೂಲಕ ಆಕರ್ಷಿಸಬಹುದು. ಇದಕ್ಕೆ ಸ್ವಲ್ಪ ಬೋಲ್ಡ್ ಆಗಿರಬೇಕು. ಪತಿಗೆ ಹೇಗೆ ಮಾಡಿದರೆ ಇಷ್ಟವಾಗುತ್ತದೆ ಅನ್ನೋದು ತಿಳಿದಿರಬೇಕು.
ಸ್ಮೈಲ್ : ನಗು ಎಂತವರನ್ನೂ ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಹೊಂದಿರುವಆಯುಧ. ಒಂದು ಸುಂದರನಗು, ಸೆಕ್ಸಿ ಸ್ಮೈಲ್, ಸ್ವೀಟ್ ಸ್ಮೈಲ್, ಹ್ಯಾಪಿ ಸ್ಮೈಲ್, ಮುಗ್ದನಗು ಹೀಗೆ ಎಲ್ಲಾ ರೀತಿಯ ನಗುವಿನಲ್ಲೂ ಸಂಗತಿಯನ್ನು ಸೆಳೆಯುವ ಶಕ್ತಿ ಇರುತ್ತದೆ.
ಕಣ್ಣು ಹೊಡೆಯಿರಿ: ತಪ್ಪೇನಿಲ್ಲ ಬಿಡಿ, ಪತಿ ಏನಾದರೂ ಮಾಡುತ್ತಿದ್ದಾಗ, ಅವನೆಡೆಗೆ ಒಮ್ಮೆ ನೋಡಿ, ಅವರು ನಿಮ್ಮನ್ನು ನೋಡಿದಾಗ ಕಣ್ಣು ಹೊಡೆಯಿರಿ.
ಟಚ್ ಮಾಡಿ: ಕೊನೆಯದಾಗಿ ಅವರಿಗೆ ಮಸಾಜ್ ಮಾಡಿ. ಭುಜದ ಮೇಲೆ ಮಸಾಜ್, ನಂತರ ಬೆನ್ನಿನ ಮೇಲೆ ನಿಧಾನವಾಗಿ ಮಸಾಜ್ ಮಾಡಲು ಆರಂಭಿಸಿ. ಮುಂದೆ ಅವರೇ ಅದನ್ನು ಮುಂದುವರೆಸಿಕೊಂಡು ಹೋಗುತ್ತಾರೆ ನೋಡಿ.

Latest Videos

click me!