ಕೋವಿಡ್​ ಟೈಮ್​ನಲ್ಲಿ ಲವ್ ಶುರು: ಆರು ವರ್ಷದಿಂದ ಸಾಕಾಗಿ ಹೋಗಿದೆ ಎಂದು ನಟಿ ಸ್ಪಂದನಾ ಸೋಮಣ್ಣ ಬೇಸರ

Published : Oct 11, 2026, 05:15 PM IST

ನಟಿ ಸ್ಪಂದನಾ ಸೋಮಣ್ಣ ತಮ್ಮ ಭಾವಿ ಪತಿ ವರುಣ್ ಮುನಿರಾಜು ಜೊತೆಗಿನ 6 ವರ್ಷಗಳ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಶುರುವಾದ ಇವರ ಪ್ರೇಮಕಥೆ ಲಾಂಗ್ ಡಿಸ್ಟೆನ್ಸ್ ರಿಲೇಷನ್‌ಶಿಪ್‌ನಿಂದಾಗಿ ಸಾಕಷ್ಟು ಕಷ್ಟ-ಸುಖಗಳನ್ನು ಕಂಡಿದ್ದು, ಅದರ ಬಗ್ಗೆ ನಟಿ ಹೇಳಿದ್ದೇನು?

PREV
16
ಸ್ಪಂದನಾ ಸೋಮಣ್ಣ ಮದುವೆ

ಬಳಿಕ ಸ್ಪಂದನಾ ಸೋಮಣ್ಣ (Spandana Somanna) ತಮ್ಮ ಮದುವೆಯ ಕುರಿತು ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ಮತ್ತು ಸಸ್ಪೆನ್ಸ್‌ಗಳಿಗೆ ತೆರೆ ಎಳೆದಿದ್ದರು. ಇದೀಗ ತಮ್ಮ ಭಾವಿ ಪತಿ ವರುಣ್‌ರನ್ನು ಅಧಿಕೃತವಾಗಿ ಸೋಶಿಯಲ್‌ ಮೀಡಿಯಾ ಮೂಲಕ ಈಚೆಗಷ್ಟೇ ಪರಿಚಯಿಸಿದ್ದರು. ವರುಣ್ ಮುನಿರಾಜು (@varun_muniraju) ಎಂಬುವವರನ್ನೇ ಸ್ಪಂದನಾ ಶೀಘ್ರದಲ್ಲೇ ಮದುವೆಯಾಗುತ್ತಿದ್ದು, ಇಬ್ಬರೂ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ವರುಣ್ ಜೊತೆಗಿನ ರೋಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿರುವ ಸ್ಪಂದನಾ, ತಮಗಿಬ್ಬರ ನಡುವಿನ 6 ವರ್ಷಗಳ ಸುದೀರ್ಘ ಕಷ್ಟ-ಸುಖಗಳ ಪ್ರೇಮ ಪಯಣವನ್ನು ಕಣ್ಣಿಗೆ ಕಟ್ಟುವಂತೆ ಬರೆದುಕೊಂಡಿದ್ದರು.

26
ಒಂದೊಂದೇ ವಿಡಿಯೋ

ಇದೀಗ ಅವರು ತಮ್ಮ ಪ್ರೀತಿಯ ವಿಷ್ಯ ಹಾಗೂ ಲವ್​ ಆರಂಭವಾದ ದಿನಗಳ ಬಗ್ಗೆ ಮತ್ತೊಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ನಟಿ, ತಮ್ಮ ಪ್ರೀತಿಯ ವಿಷಯದಲ್ಲಿ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇದೆ ಎನ್ನುವ ಕಾರಣಕ್ಕೆ, ಒಂದೇ ಬಾರಿ ಎಲ್ಲವನ್ನೂ ಹೇಳದೇ ಹಂತ ಹಂತವಾಗಿ ವಿಭಿನ್ನ ವಿಡಿಯೋ ಮಾಡುವ ಮೂಲಕ, ಅಭಿಮಾನಿಗಳ ಕುತೂಹಲ ಕೆರಳಿಸುತ್ತಿದ್ದಾರೆ.

36
ಕೋವಿಡ್​ನಲ್ಲಿ ಲವ್​ ಶುರು

ಇದೀಗ ನಟಿ, ತಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರು. ಆದರೆ ಕಾಲೇಜಿನ ಟೈಮ್​ನಲ್ಲಿ ಮಾತನಾಡಿರಲಿಲ್ಲ. ಆದರೆ ಕೋವಿಡ್​ ಟೈಮ್​ನಲ್ಲಿ ಮಾತನಾಡಿದ್ವಿ. ಅಲ್ಲಿಂದಲೇ ಲವ್​ ಶುರುವಾಯ್ತು ಎಂದಿದ್ದಾರೆ. ಆ ಸಮಯದಲ್ಲಿ ನಾನು ಇಷ್ಟು ಫೇಮಸ್​ ಆಗಿರಲಿಲ್ಲ. ಸೀರಿಯಲ್​ ಹುಡುಕಾಟದಲ್ಲಿ ಇದ್ದೆ. ಆಡಿಷನ್​ ಕೊಡುತ್ತಿದ್ದೆ. ಸ್ಟ್ಯಾಂಡ್​ ಆಗಿರಲಿಲ್ಲ. ಆ ಟೈಮ್​ನಲ್ಲಿ ಲವ್​ ಆಗಿದ್ದು ಎಂದಿದ್ದಾರೆ.

46
ಗೊಂದಲದಲ್ಲಿ ಭಾವಿ ಪತಿ

ಅವನು ಕೂಡ ಲಂಡನ್​ನಲ್ಲಿ ಎಂಎಸ್​ ಮಾಡಿದ್ದ. ಕೆಲಸ ಸಿಕ್ಕರೂ ಕೋವಿಡ್​ನಿಂದ ಹೋಗಲು ಆಗಿರಲಿಲ್ಲ. ಲಂಡನ್​ನಲ್ಲಿಯೇ ಇರಬೇಕೋ, ಬೇರೆ ಕಂಟ್ರಿಗೆ ಹೋಗಬೇಕೋ ಅಥ್ವಾ ಭಾರತಕ್ಕೆ ಬರಬೇಕೋ ಎನ್ನುವ ಗೊಂದಲದಲ್ಲಿ ಇದ್ದ. ಹೀಗೆ ಆರು ವರ್ಷ ನಮ್ಮ ಲವ್​ಸ್ಟೋರಿ ನಡೆಯುತ್ತಿದೆ ಎಂದಿದ್ದಾರೆ.

56
ತುಂಬಾ ಸುಸ್ತಾಗಿ ಹೋಗಿದೆ

ನಾನಿಲ್ಲಿ, ಅವನು ಅಲ್ಲಿ. ಆರು ವರ್ಷಗಳ ಲವ್​. ತುಂಬಾ ಸುಸ್ತಾಗಿ ಹೋಗಿದೆ, ಸಾಕು ಸಾಕಾಗಿ ಬಿಟ್ಟಿದೆ ನನಗೆ. ಏನಾದರೂ ಹೇಳಿಕೊಳ್ಳೋಣ ಎಂದರೆ ಆತ ಇರೋದ ಅಷ್ಟು ದೂರದಲ್ಲಿ. ಭಾರತದಲ್ಲಿ ಒಂದು ಟೈಮ್​, ಅಲ್ಲಿ ಇನ್ನೊಂದು ಟೈಮ್​. ಟೈಮ್​ ಕೂಡ ಅಡ್ಜಸ್ಟ್​ ಆಗಲ್ಲ. ಖುಷಿ, ನೋವು ಹಂಚಿಕೊಳ್ಳುವ ಟೈಮ್​ನಲ್ಲಿ ಜೊತೆಯಲ್ಲಿ ಇರಬೇಕು ಎಂದರೆ ಸಿಗಲ್ಲ. ತುಂಬಾ ಬೇಸರವಾಗುತ್ತದೆ ಎಂದಿದ್ದಾರೆ ಸ್ಪಂದನಾ ಸೋಮಣ್ಣ. ಅದೇ ರೀತಿ ಆತ ನನಗೆ ತುಂಬಾ ಸಪೋರ್ಟಿವ್​ ಆಗಿದ್ದಾನೆ ಎಂದೂ ಹೇಳಿದ್ದಾರೆ.

66
ತುಂಬಾ ಸಪೋರ್ಟಿವ್

ಅದೇ ರೀತಿ ಆತ ನನಗೆ ತುಂಬಾ ಸಪೋರ್ಟಿವ್​ ಆಗಿದ್ದಾನೆ. ನಾನು ಇನ್ನೂ ಆಡಿಷನ್​ ಅಂತ ಓಡಾಡುತ್ತಿದ್ದ ಟೈಮ್​ನಲ್ಲಿಯೂ ಆತ ನನ್ನ ಬೆಂಬಲಕ್ಕೆ ನಿಂತಿದ್ದ. ಆದರೂ ಇಬ್ಬರೂ ತುಂಬಾ ದೂರ ಎನ್ನುವ ಕಾರಣದಿಂದ ತುಂಬಾ ಬೇಸರ ಆಗುತ್ತದೆ ಎಂದೂ ಹೇಳಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories