ಮನೆಯೊಳಗೆ ಬಂಧಿಯಾದ ಮನುಜ, ಪ್ರಾಣಿ ಪಕ್ಷಿಗಳ ಸ್ವಚ್ಛಂದ ವಿಹಾರ!

First Published Mar 21, 2020, 4:36 PM IST

ಪ್ರಕೃತಿಯನ್ನೇ ದೇವರೆಂದು ಪೂಜಿಸುವ ಸಂಸ್ಕೃತಿ ಭಾರತೀಯರದ್ದು. ಆದರೆ, ಇರುವುದೆಲ್ಲವನ್ನೂ ನಾಶ ಮಾಡಿ, ಐಷಾರಾಮಿ ಜೀವನ ನಡೆಸುತ್ತಿವೆ ಕೆಲವು ಆಧುನಿಕ ರಾಷ್ಟ್ರಗಳು. ಸ್ವಚ್ಛತೆಗೆ ಎಲ್ಲ ಆಧುನಿಕ ರಾಷ್ಟ್ರಗಳು ಮನ್ನಣೆ ನೀಡುತ್ತವೆ. ಆದರೆ, ಕೊರೋನಾ ವೈರಸ್ ಎಂಬ ಮಹಾಮಾರಿ ಯಾವ ರಾಷ್ಟ್ರವನ್ನೂ ಬಿಡುತ್ತಿಲ್ಲ. ಮನೆಯೊಳಗೆ ಬಂಧಿಯಾಗಿದ್ದಾನೆ ಮನುಷ್ಯ. ಪ್ರಾಣಿ ಪಕ್ಷಿಗಳು ಬಿಂದಾಸ್‌ ಆಗಿ ರಸ್ತೆಗಳಲ್ಲಿ ಓಡಾಡುತ್ತಿವೆ. ಬರೀ ಬ್ಯಾಡ್ ನ್ಯೂಸ್‌ ನಡುವೆ ಪ್ರಾಣಿ ಪಕ್ಷಿಗಳು ಮನುಷ್ಯನ ಕಾಟವಿಲ್ಲದೇ ವಿಹರಿಸುತ್ತಿರುವುದ ಒಮ್ಮೆ ನೋಡಿ....

ನಮ್ಮ ಭೂ ಮಾತೆಯನ್ನು ಎಷ್ಟು ಬೇಕೋ ಅಷ್ಟು ಹಾಳು ಮಾಡಿಯಾಗಿದೆ. ಆದರೀಗ ಮಾಡಿದ್ದೆಲ್ಲವನ್ನೂ ಬಿಟ್ಟ ಮನುಷ್ಯ ಮನೆಯೊಳಗೆ ಬಂಧಿಯಾಗುವ ಪರಿಸ್ಥಿತಿ ಬಂದಿದೆ.
undefined
ಕ್ರೂರ ಮಾನವ ಪ್ರಕೃತಿಯೊಂದಿಗೆ ಸಹಜೀವನ ನಡೆಸುವುದ ಬಿಟ್ಟು, ಪ್ರಾಣಿ-ಪಕ್ಷಿಗಳಿಗೆ ಜಾಗವಿಲ್ಲದಂತೆ ಮಾಡಿದ್ದಾನೆ.
undefined
ಕೊರೋನಾ ವೈರಸ್ ಎಂಬ ಕಾಟ ಪ್ರಕೃತಿ ನಮ್ಮನ್ನು ಶಿಕ್ಷಿಸಲು ಸೃಷ್ಟಿಸಿದ ಕಂಟಕವೆನಿಸುತ್ತೆ.
undefined
ಎಲ್ಲವನ್ನೂ ತಿಂದು, ತೃಪ್ತನಾಗದ ಮನುಷ್ಯ ಇದೀಗ ಸುಖಾ ಸುಮ್ಮನೆ ಮನೆಯೊಳಗೆ ಕೂರುವ ಅನಿವಾರ್ಯತೆ ಸೃಷ್ಟಿಯಾಗಿದೆ.
undefined
ಕೊರೋನಾ ವೈರಸ್ ಹರಡೋ ಮುನ್ನ ಚೀನಾದ ಮಾಲಿನ್ಯವಿದು. ನಂತರ ವಾತಾವರಣವೂ ಕ್ಲೀನ್.
undefined
ಸಮುದ್ರದಲ್ಲಿ ಹಡಗು ಸಂಚಾರವೂ ಬಂದ್. ಇಟಲಿಯ ಡಾಲ್ಫಿನ್‌ಗಳು ಫುಲ್ ಖುಷ್.
undefined
ಇಟಲಿಯ ವೆನಿಸ್‌ನಲ್ಲಿ ಮೀನುಗಳೋ ಫುಲ್ ಖುಷ್.
undefined
ಚಿಕಾಗೋನ ಅಕ್ವೇರಿಯಂಗೆ ನಿರ್ಬಂಧ ಹೇರಲಾಗಿದೆ. ಪೆಂಗ್ವಿನ್‌ಗಳು ತಮ್ಮ ಜಾಗದಲ್ಲಿ ಬಿಂದಾಸ್ ಆಗಿ ವಿಹರಿಸುತ್ತಿವೆ.
undefined
ಫೆಬ್ರವರಿ 14ರಂದು ತೆಗೆದ ಗ್ಲೋಬ್ ಫೋಟೋ.
undefined
ಮಾರ್ಚ್ 7ರಂದು ಹೀಗಾಗಿದೆ ಪರಿಸರ. ವಾತಾರವಣರದ ಸ್ವಚ್ಥತೆಗಾಗಿಯೇ ಪ್ರಕೃತಿಯ ಪಾಠವೇ ಕೊರೋನಾ ವೈರಸ್.
undefined
ಇಟಲಿಯ ಕಾಲುವೆಗಳಲ್ಲಿಲ್ಲ ದೋಣಿ ವಿಹಾರ. ಬಿಡ, ನಮ್ಮದೇ ಸಾಮ್ರಜ್ಯವೆನ್ನುತ್ತಿವೆ ಹಂಸಗಳು.
undefined
ರೋಮ್‌ನಲ್ಲಿ ವಿಹರಿಸುತ್ತಿರುವ ಹಂಸಗಳು.
undefined
ನಮ್ಮನ್ನು ಉರಿದುಕೊಂಡಿದ್ದಾನಲ್ಲ ಮನುಷ್ಯ, ಅನುಭವಿಸಲಿ ಎನ್ನುತ್ತಿವೆಯೇ ಪಕ್ಷಿಗಳು.
undefined
ಇನ್ನಾದರೂ ನಮ್ಮನ್ನೂ ಬದುಕಲು ಬಿಡುತ್ತಾನಾ ಮನುಜ?
undefined
ಅಬ್ಬಾ, ಈ ಜಾಗ ಸದಾ ಪ್ರವಾಸಿಗರಿಂದ ತುಂಬು ತುಳುಕುತ್ತಿತ್ತು.
undefined
ಬಾಯಿ ಮುಚ್ಕೊಂಡು ಮನೆಯಲ್ಲಿ ಕೂತಿದ್ದಾನೆ ಮನುಷ್ಯ. ಮನುಷ್ಯ ಆಕ್ರಮಿತ ಭೂಮಿಯಲ್ಲೀಗ ಪ್ರಾಣಿ-ಪಕ್ಷಿಗಳದ್ದೇ ಕಾರುಬಾರು.
undefined
ಇಡೀ ಇಟಲಿಯೇ ಲಾಕ್‌ಡೌನ್ ಆಗಿದೆ. ಸ್ಥಳೀಯರು ಹೇಳುವ ಪ್ರಕಾರ ಕಾಲವೆಯ ನೀರೀಗ ಕ್ರಿಸ್ಟಲ್ ಕ್ಲೀಯರ್.
undefined
ಕೊರೋನಾ ವೈರಸ್ ಎಂಬ ಮಹಾಮಾರಿಯ ಕೇಂದ್ರ ಸ್ಥಾನವಾದ ವುಹಾನ್ ಸಹ ಇದೀಗ ಫುಲ್ ಕ್ಲೀನ್.
undefined
click me!