ಹೆಂಡ್ತಿ ಮೇಲೆ ಎಲ್ಲಿಲ್ಲದ ಪೊಸೆಸಿವ್‌ನೆಸ್: ಪಾರ್ಟಿಗಳಿಗೂ ಪತ್ನಿ ನೀತು ಕಪೂರ್‌ಗೆ ನಿರ್ಬಂಧ ಹೇರಿದ್ದ ನಟ ರಿಷಿ ಕಪೂರ್

Published : Jan 12, 2024, 02:25 PM IST

ನೀತು ಕಪೂರ್ ಹಾಗೂ ಹಿರಿಯ ನಟಿ ಜೀನತ್ ಅಮನ್ ಅವರು ಕಾಫಿ ವಿತ್ ಕರಣ್ ಸೀಸನ್ 8ರ 12ನೇ ಎಪಿಸೋಡ್‌ಗೆ ಅತಿಥಿಯಾಗಿ ಆಗಮಿಸಿರುವುದು ಗೊತ್ತೆ ಇದೆ. ಈ ಇಬ್ಬರು ಬಾಲಿವುಡ್‌ನ ಹಿರಿಯ ನಟಿಯರು ತಮ್ಮ ವೈಯಕ್ತಿಕ ಜೀವನದ ಹಲವು ಸಿಕ್ರೇಟ್‌ಗಳನ್ನು ಈ ಶೋದಲ್ಲಿ ತೆರೆದಿಟ್ಟಿದ್ದಾರೆ.

PREV
112
ಹೆಂಡ್ತಿ ಮೇಲೆ ಎಲ್ಲಿಲ್ಲದ ಪೊಸೆಸಿವ್‌ನೆಸ್: ಪಾರ್ಟಿಗಳಿಗೂ ಪತ್ನಿ ನೀತು ಕಪೂರ್‌ಗೆ ನಿರ್ಬಂಧ ಹೇರಿದ್ದ ನಟ ರಿಷಿ ಕಪೂರ್

ಕಾಫಿ ವಿತ್ ಕರಣ್ ಶೋದಲ್ಲಿ  ನೀತು ಕಪೂರ್ ಕೂಡ ತಮ್ಮ ವೈಯಕ್ತಿಕ ಬದುಕು ಸಿನಿಮಾ ಕೆರಿಯರ್, ಸಾಂಸಾರಿಕ ಜೀವನ, ಮಕ್ಕಳು, ಸೊಸೆ ಮೊಮ್ಮಗಳ ಬಗ್ಗೆ ಮನಬಿಚ್ಚಿ  ಮಾತನಾಡಿದ್ದಾರೆ. ಇದರ ಜೊತೆಗೆ ಸಿನಿಮಾ ರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಮದ್ವೆಯಾಗಿ ಸಿನಿಮಾರಂಗವನ್ನು ಇಷ್ಟಪಟ್ಟೆ ತೊರೆದಿದ್ದಾಗಿ ಹೇಳಿಕೊಂಡಿದ್ದಾರೆ ನೀತು. 

212

ನಾನು 5 ವರ್ಷದವಳಿರುವಾಗ ಕೆರಿಯರ್ ಆರಂಭಿಸಿದೆ. ದೊ ಕಲಿಯಾನ್ ಸಿನಿಮಾ ಬಂದಾಗ ನನ್ನನ್ನು ಪ್ರತಿಯೊಬ್ಬರು ಇಷ್ಟಪಡುತ್ತಿದ್ದರು.  ನನ್ನ ಕೆರಿಯರ್‌ನ ಆರಂಭದ ದಿನಗಳಲ್ಲೇ ನನಗೆ ಉತ್ತಮ ಮನ್ನಣೆ ಸಿಕ್ಕಿತು.

312

ಇದಾದ ನಂತರ ಕೆಲಸ ಮಾಡುವುದು ನನಗೆ ಉದ್ಯೋಗವಾಗಿ ಬದಲಾಯಿತು. ಆದರೆ ನಾನು ಎದಿರು ನೋಡುತ್ತಿದ್ದಿದ್ದು ಏನೂ ಆಗಿರಲಿಲ್ಲ, ನನ್ನ 5ನೇ ವಯಸ್ಸಿನಿಂದ 21ನೇ ವಯಸ್ಸಿನವರೆಗೆ ನಾನು ಸಾಕಷ್ಟು ಕೆಲಸ ಮಾಡಿದೆ.ಈ ಇಷ್ಟು ವರ್ಷಗಳಲ್ಲಿ ನಾನು 70 ರಿಂದ 80 ಸಿನಿಮಾಗಳಲ್ಲಿ ನಟಿಸಿದೆ ಎಂದ ನೀತು ತಮ್ಮ 5ನೇ ವಯಸ್ಸಿಗೆ ಕೆರಿಯರ್ ಆರಂಭಿಸಿ 21ಕ್ಕೆಲ್ಲಾ ಸಿನಿಮಾ ರಂಗವನ್ನು ತೊರೆದ ಬಗ್ಗೆ ಹೇಳಿಕೊಂಡಿದ್ದಾರೆ.

412

ಇದೇ ವೇಳೆ ಪತಿ ರಿಷಿ ಕಪೂರ್ ಪೊಸೆಸಿವ್‌ನೆಸ್ ಬಗ್ಗೆಯೂ ಮಾತನಾಡಿದ ನೀತು, ನಾನು 15 ವರ್ಷಗಳ ಕಾಲ ನಿರಂತರ ಕೆಲಸ ಮಾಡಿ ದಣಿದಿದ್ದೆ. ಇದೇ ಸಮಯಕ್ಕೆ ಮದುವೆಯೂ ಆಗಿ ಮಕ್ಕಳು ಜನಿಸಿದ್ದರು. ಹೀಗಾಗಿ ನಾನು ನನ್ನ ಮುಂದಿನ ಜೀವನವನ್ನು ಕೇವಲ ನನ್ನ ಮಕ್ಕಳಿಗೆ ಹಾಗೂ ಮನೆಗೆ ಮೀಸಲಿಡಬೇಕು ಎಂದು ನಿರ್ಧರಿಸಿದ್ದೆ. 

512

ನನ್ನ ಗಂಡನೂ ನನ್ನ ಬಗ್ಗೆ ತುಂಬಾ ಪೊಸೆಸಿವ್‌ನೆಸ್ ಹೊಂದಿದ್ದರು. ಹೆಂಡ್ತಿ ಇಡೀ ದಿನ ನನ್ನ ಹಿಂದೆ ಮುಂದೆಯೇ ಓಡಾಡ್ತಿರಬೇಕು ಎಂದು ಬಯಸಿದ್ದರು. ಹೀಗಾಗಿ ಅದೇ ನನ್ನ ಜೀವನವೂ ಆಗಿತ್ತು. ಅದರಲ್ಲೇ ನನಗೆ ಖುಷಿ ಇತ್ತು. ಅಂತಹ ಸುಂದರವಾದ ಮನೆಯನ್ನು ನಾನು ಹೊಂದಿದ್ದೆ.

612
Neetu kapoor & Rishi Kapoor

 ಪ್ರತಿಯೊಬ್ಬರಲ್ಲೂ ತುಂಬಾ ಪ್ರೀತಿ ಇತ್ತು. ಅದರ ಜೊತೆಗೆ ನನ್ನ ಅತ್ತೆಯೂ ಒಬ್ಬರು ಅತ್ಯುತ್ತಮವಾದ ವ್ಯಕ್ತಿಯಾಗಿದ್ದರು. ಹಾಗೆಯೇ ಮಾವನೂ ಒಂದು ಅಚ್ಚರಿ . ನಾವು ಒಂದು ಸಂತೋಷದಿಂದ ಕೂಡಿದ್ದ ಪಂಜಾಬಿ ಕುಟುಂಬದಂತೆ ಇದ್ದೆವು 

712
Neetu kapoor & Rishi Kapoor

ಮತ್ತು ನಾವು ಈ ಕುಟುಂಬದಲ್ಲಿ ತುಂಬಾ ಮೋಜು ಮಾಡಿದ್ದೇವೆ. ನಾನು ಮುಂಬೈನ ಚೆಂಬೂರಿನಲ್ಲಿ ಡಿಯೋನಾರ್ ಕಾಟೇಜ್‌ನಲ್ಲಿ ಉಳಿದುಕೊಂಡಾಗ ಇದ್ದ ದಿನಗಳು ನನ್ನ ಬದುಕಿನ ಅತ್ಯುತ್ತಮ ವರ್ಷಗಳು ಎಂದು ನೀತು ತನ್ನ ಅತ್ತೆ ಮನೆಯ ಕೂಡು ಕುಟುಂಬದೊಂದಿಗೆ ತಾನು ಹೊಂದಿದ್ದ ಅವಿನಾಭಾವ ಸಂಬಂಧವನ್ನು ನೆನೆದಿದ್ದಾರೆ. 

812
Neetu kapoor & Rishi Kapoor

ಇದೇ ವೇಳೆ ರಿಷಿ ಜೊತೆ ಮದುವೆಗೂ ಮೊದಲಿನ ದಿನಗಳನ್ನು ನೆನೆದ ನೀತು ಹಲವು ಸ್ವಾರಸ್ಯಕರ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ರಿಷಿ ಒಬ್ಬ ಸ್ಟ್ರಿಕ್ಟ್‌ ಬಾಯ್‌ಫ್ರೆಂಡ್, ಎಲ್ಲೂ ನನಗೆ ಪಾರ್ಟಿ ಮಾಡುವುದಕ್ಕೆ ಬಿಡುತ್ತಿರಲಿಲ್ಲ, ನಾವು ಯಶ್ ಚೋಪ್ರಾ( ಬಾಲಿವುಡ್‌ನ ಖ್ಯಾತ ನಿರ್ಮಾಪಕ) ಜೊತೆ ಪಾರ್ಟಿ ಮಾಡುತ್ತಾ ತುಂಬಾ ಎಂಜಾಯ್ ಮಾಡುತ್ತಿದ್ದೆವು. 

912

ಆದರೆ ಈ ರಿಷಿ ಕಪೂರ್ ನನಗೆ ಬಾಯ್‌ಫ್ರೆಂಡ್ ಆಗಿ ಸಿಕ್ಕಮೇಲೆ ಮುಂದೆ ಎಂದೂ ನಾನು ಪಾರ್ಟಿ ಮಾಡಲಿಲ್ಲ, ಇದು ಯಾವಾಗಲೂ ನೀನು ಅದು ಮಾಡಬೇಡ, ನೀನು ಇದು ಮಾಡಬೇಡ ಎಂಬ  ನಿರ್ಬಂಧಗಳಿಂದಲೇ ಕೂಡಿತ್ತು.  ಹೀಗಾಗಿ ಬಿಂದಾಸ್ ಆಗಿ ಪಾರ್ಟಿ ಮಾಡುವುದನ್ನು ಆ ದಿನಗಳಲ್ಲಿ ನೋಡಿಯೇ ಇರಲಿಲ್ಲ, 

1012

ನಾನು ಕುಟುಂಬಕ್ಕೆ ಬದ್ಧಳಾಗಿದ್ದೆ. ಜೊತೆಗೆ ನಾನು ಬಹಳ ಕಟ್ಟುನಿಟ್ಟಿನ ಶಿಸ್ತುಬದ್ಧ ತಾಯಿ ಹಾಗೂ ಬಾಯ್‌ಫ್ರೆಂಡ್‌ನ್ನುಹೊಂದಿದ್ದೆ ಹೀಗಾಗಿ ನಾನು ಅವರಿಬ್ಬರ ನಡುವೆ ಸಿಲುಕಿ ನಲುಗಿ ಹೋದೆ ಎಂದು ಹೇಳಿಕೊಂಡಿದ್ದಾರೆ ನೀತು. ಇದೇ ವೇಳೆ ನಿಮ್ಮ ದಾಂಪತ್ಯದಿಂದ ನೀವು ಆಲಿಯಾ ಹಾಗೂ ರಣ್‌ಬೀರ್‌ಗೆ ಏನನ್ನು ತೆಗೆದುಕೊಳ್ಳಲು ಹೇಳುವಿರಿ ಎಂದು ಕರಣ್ ನೀತುಗೆ ಪ್ರಶ್ನೆ ಕೇಳಿದ್ದು, ಇದಕ್ಕೆ ಉತ್ತರಿಸಿದ ನೀತು, ತಟ್ಟನೇ ಏನು ಇಲ್ಲ ಎಂದು ಉತ್ತರಿಸಿದ್ದಾರೆ.

1112

ಏಕೆಂದರೆ ಇಂದಿನ ಕಾಲದಲ್ಲಿ ನಿಮಗೇನು ಮಾಡಬೇಕು ಎನಿಸುತ್ತದೋ ಅದನ್ನು ಮಾಡಿ, ಕೇವಲ ಖುಷಿಯಾಗಿದ್ದರೆ ಸಾಕು, ಪ್ರತಿಯೊಂದು ಜನರೇಷನ್ ಒಂದು ಜನರೇಷನ್‌ಗಿಂತ ವಿಭಿನ್ನ ನಾನು ಅವರಿಂದ ನಮ್ಮಂತೇ ಇರಬೇಕು ಎಂದು ನಿರೀಕ್ಷೆ ಮಾಡಲಾಗುವುದಿಲ್ಲ. ಅವರಿಗೂ ಗೊತ್ತು ಅವರು ಹೇಗೆ ಇರಬೇಕು ಎಂಬುದು ಒಟ್ಟಿನಲ್ಲಿ ಖುಷಿಯಲ್ಲಿ ಇದ್ದರಾಯ್ತು ಎಂದಿದ್ದಾರೆ ನೀತು.

1212

ನೀತು ಕಪೂರ್  ಹಾಗೂ ರಿಷಿ ಕಪೂರ್ ಬಾಲಿವುಡ್‌ನ ಒಂದು ಕಾಲದ ಬಹಳ ಪ್ರಸಿದ್ಧ ಜೋಡಿ. 1979ರಲ್ಲಿ ಪರಸ್ಪರ ಎಂಗೇಜ್ ಆಗುವುದಕ್ಕೂ ಮೊದಲು ಇಬ್ಬರು ಕೆಲ ಕಾಲ ಡೇಟಿಂಗ್ ಮಾಡಿದ್ದರು. ನಂತರ 1980ರ ಜನವರಿ 22 ರಂದು ಈ ಜೋಡಿ ಮದುವೆಯಾಗಿತ್ತು. ಮದುವೆಯ ನಂತರ ಈ ನೀತು ಕಪೂರ್ ಬಹುತೇಕ ಸಿನಿಮಾದಿಂದ ದೂರವೇ ಉಳಿದಿದ್ದರು. ಇವರ ಮಕ್ಕಳೇ ಖ್ಯಾತ ನಟ ರಣ್‌ಬೀರ್ ಕಪೂರ್ ಹಾಗೂ ರಿದ್ಧಿಮ ಕಪೂರ್.

Read more Photos on
click me!

Recommended Stories