ಲೈಂಗಿಕ ಸುಖ, ಆರ್ಗಸಂ ಪಡೆಯಲು ಈ ತಂತ್ರ ಬೆಸ್ಟ್!

First Published | Jan 11, 2024, 5:37 PM IST

ಲೈಂಗಿಕ ಜೀವನವನ್ನು ಆರೋಗ್ಯಕರವಾಗಿಸಲು ಮತ್ತು ಆರ್ಗಸಂ ಪಡೆಯಲು ಜನರು ಎಡ್ಜಿಂಗ್ ಬಳಸುತ್ತಾರೆ. ಇದರೊಂದಿಗೆ, ಕಪಲ್ಸ್ ದೀರ್ಘಕಾಲದವರೆಗೆ ಸೆಕ್ಸ್ ಎಂಜಾಯ್ ಮಾಡಬಹುದು. ಹಾಗಿದ್ರೆ ಈ  ಎಡ್ಜಿಂಗ್ ಎಂದರೇನು ಮತ್ತು ಅದು ಆರ್ಗಸಂ ಜೊತೆ ಹೇಗೆ ಸಂಬಂಧ ಹೊಂದಿದೆ ತಿಳಿಯೋಣ. 
 

ಲೈಂಗಿಕತೆಯನ್ನು (sex)  ಎಂಜಾಯ್ ಮಾಡಲು ಮತ್ತು ಆರ್ಗಸಂ (orgasam) ಪಡೆಯಲು ಎಷ್ಟು ಸಮಯ ಬೇಕು ಎಂಬ ಪ್ರಶ್ನೆ ಯಾವಾಗಲೂ ಎಲ್ಲರ ಮನಸ್ಸಿನಲ್ಲಿ ಇದ್ದೇ ಇರುತ್ತೆ. ಆದರೆ ಇದಕ್ಕೆ ಯಾವುದೇ ನಿಗದಿತ ಸಮಯ ಇಲ್ಲ. ಆದರೆ ನಿಮ್ಮ ಲೈಂಗಿಕ ಸಮಯ ಮತ್ತು ಸಂತೋಷವನ್ನು ಹೆಚ್ಚಿಸುವ ಕೆಲವು ವಿಷಯಗಳಿವೆ. ಸೆಕ್ಸ್ ನಲ್ಲಿ ಅಂತಹ ಒಂದು ಪದವೆಂದರೆ ಎಡ್ಜಿಂಗ್ . ಲೈಂಗಿಕ ಜೀವನವನ್ನು ಆರೋಗ್ಯಕರವಾಗಿಸಲು ಮತ್ತು ಪರಾಕಾಷ್ಠೆ ಪಡೆಯಲು ಜನರು ಎಡ್ಜಿಂಗ್ ಬಳಸುತ್ತಾರೆ. ಇದರಿಂದ ಸೆಕ್ಸ್ ಎಂಜಾಯ್ ಮಾಡಬಹುದು ಅನ್ನೋದು ಅವರ ಅಭಿಪ್ರಾಯ. ಹಾಗಿದ್ರೆ ಎಡ್ಜಿಂಗ್  ಅಂದರೇನು ಅನ್ನೋದನ್ನು ತಿಳಿಯೋಣ. 
 

Edging ಎಂದರೇನು ಎಂದು ಮೊದಲು ತಿಳಿದುಕೊಳ್ಳಿ
ಸೆಕ್ಸ್ ಆರಂಭಿಸಿದ ಕೆಲವು ಕ್ಷಣಗಳವರೆಗೆ ನಿಂತು ರೊಮ್ಯಾನ್ಸ್ ಮಾಡುತ್ತಾ ಮತ್ತೆ ಪರಾಕಾಷ್ಠೆಯನ್ನು ಪಡೆಯಲು ಮುಂದುವರಿಯುವ ಪ್ರಕ್ರಿಯೆಯನ್ನು ಎಡ್ಜಿಂಗ್ ಎಂದು ಕರೆಯಲಾಗುತ್ತದೆ. ಹೀಗೆ ಮಾಡೊದ್ರಿಂದ ದೀರ್ಘಕಾಲದವರೆಗೆ ಸೆಕ್ಸ್ ಎಂಜಾಯ್ ಮಾಡಬಹುದು. ಇದು ಪ್ರಚೋದನೆಯ ಮಟ್ಟವನ್ನು ಹೆಚ್ಚಿಸುತ್ತದೆ, ಅಷ್ಟೇ ಯಾಕೆ ಕಪಲ್ಸ್ ಮದ್ಯೆ ಇಂಟಿಮೆಸಿ ಹೆಚ್ಚುತ್ತೆ.  

Tap to resize

ಜರ್ನಲ್ ಆಫ್ ಸೆಕ್ಸ್ ಅಂಡ್ ಮ್ಯಾರಿಟಲ್ ಥೆರಪಿ ಪ್ರಕಾರ, 2018 ರ ಅಧ್ಯಯನವು 36 ಪ್ರತಿಶತದಷ್ಟು ಮಹಿಳೆಯರು ಕ್ಲಿಟೋರಲ್ ಆರ್ಗಸಂ ಮೂಲಕ ಪರಾಕಾಷ್ಠೆ ಹೊಂದಿದ್ದರೆ, 18 ಪ್ರತಿಶತದಷ್ಟು ಮಹಿಳೆಯರು ಲೈಂಗಿಕ ಸಂಭೋಗದ (Sexual Intercourse) ಮೂಲಕ ಪರಾಕಾಷ್ಠೆ ಹೊಂದುತ್ತಾರೆ ಎಂದು ತೋರಿಸಿದೆ. ಹಾಗಾಗಿ ಹೆಚ್ಚಿನ ಜನರು ಎಡ್ಜಿಂಗ್ ಇಷ್ಟಪಡ್ತಾರೆ.
 

ಸೆಕ್ಸ್ ಮಾಡೋವಾಗ ಎಡ್ಜಿಂಗ್ ಬಳಸೋದ್ರಿಂದ ಏನೆಲ್ಲಾ ಲಾಭ ಇದೆ?
ಪರಾಕಾಷ್ಠೆಯನ್ನು ತಲುಪುವುದು ಸುಲಭ

ಎಡ್ಜಿಂಗ್ ನಿಂದಾಗಿ ಬೇಗ, ಪರಾಕಾಷ್ಠೆ ಹೊಂದಲು ಸಾಧ್ಯವಾಗುತ್ತೆ. ಮಂದ ಬೆಳಕಿನಲ್ಲಿ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುವ ಮೂಲಕ ಲೈಂಗಿಕ ಅಂಗಗಳನ್ನು ಸ್ಪರ್ಶಿಸಿ (touching body parts), ಉದ್ರೇಕಗೊಂಡ ನಂತರ ಸ್ವಲ್ಪ ಸಮಯ ನಿಲ್ಲಿಸಿ. ಈಗ ಯೋನಿಯಲ್ಲಿ ರಕ್ತವು ವೇಗವಾಗಿ ಪರಿಚಲನೆಯಾಗಲು ಪ್ರಾರಂಭಿಸುತ್ತದೆ. ಸ್ವಲ್ಪ ವೈಟ್ ಮಾಡಿ, ಮತ್ತೆ ಅದನ್ನೆ ಮಾಡಿ, ಇದರಿಂದ ಆರ್ಗಸಂ ಬೇಗ ಹೊಂದಬಹುದು.

ಎಡ್ಜಿಂಗ್ ನಿಂದಾಗಿ ಕಾಮಾಸಕ್ತಿ ಹೆಚ್ಚಾಗುತ್ತದೆಯೇ?
ನಿಮ್ಮ ಸಂಗಾತಿಗೆ ಸೆಕ್ಸ್ ಬಗ್ಗೆ ಹೆಚ್ಚು ಆಸಕ್ತಿ ಇಲ್ಲದೇ ಇದ್ದಾಗ, ಎಡ್ಜಿಂಗ್ ಮೂಲಕ ಈ ಸಮಸ್ಯೆ ಪರಿಹರಿಸಬಹುದು. ಅದರ ನಿರಂತರ ಪ್ರಯತ್ನದಿಂದ, ಕಾಮಾಸಕ್ತಿ ಮತ್ತು ಲೈಂಗಿಕತೆ ಬಗ್ಗೆ ತೀವ್ರತೆ ಎರಡೂ ಹೆಚ್ಚಾಗಲು ಪ್ರಾರಂಭಿಸುತ್ತದೆ. ಲೈಂಗಿಕ ಜೀವನವು (sex life) ಆರೋಗ್ಯಕರವಾಗುತ್ತದೆ ಮತ್ತು ಸಂಗಾತಿಯೊಂದಿಗಿನ ಬಾಂಧವ್ಯ ಹೆಚ್ಚಾಗುತ್ತದೆ.

ಎಂಜಾಯ್ ಮಾಡಬಹುದು
ಎಡ್ಜಿಂಗ್ ಮೂಲಕ, ನೀವು ಲೈಂಗಿಕತೆಯ ಬಗ್ಗೆ ಹೆಚ್ಚು ಜಾಗೃತರಾಗಲು ಪ್ರಾರಂಭಿಸುತ್ತೀರಿ. ಇದು ಉತ್ಸಾಹ, ರೋಮಂಚಕ, ಥ್ರಿಲ್ ಎಲ್ಲವನ್ನೂ ನೀಡುತ್ತದೆ. ಇದರೊಂದಿಗೆ, ವಿವಿಧ ಲೈಂಗಿಕ ಭಂಗಿಗಳ (sexual position) ಬಗ್ಗೆ ಮಾಹಿತಿಯೂ ಸಿಗುತ್ತದೆ, ಇದರಿಂದಾಗಿ ಲೈಂಗಿಕತೆಯು ದೀರ್ಘಕಾಲ ಉಳಿಯಲು ಪ್ರಾರಂಭಿಸುತ್ತದೆ.
 

ಲೈಂಗಿಕ ಸಮಯವನ್ನು ಹೆಚ್ಚಿಸುತ್ತದೆ
ಎಡ್ಜಿಂಗ್ ನಿಂದಾಗಿ ಸೆಕ್ಸ್ ನ್ನು ಹೆಚ್ಚು ಸಮಯದವರೆಗೆ ಎಂಜಾಯ್ ಮಾಡಲು ಸಾಧ್ಯವಾಗುತ್ತದೆ. ಇದು ದೇಹದಲ್ಲಿ ಶಕ್ತಿಯನ್ನು ನಿರ್ಮಿಸಲು ಕಾರಣವಾಗುತ್ತದೆ, ಇದರಿಂದ ಪರಾಕಾಷ್ಠೆಯನ್ನು ಸಾಧಿಸಲು ಸಾಧ್ಯವಾಗುತ್ತದೆ ಮತ್ತು ಲೈಂಗಿಕ ಜೀವನವನ್ನು(sex life) ಆರೋಗ್ಯಕರವಾಗಿಸುತ್ತದೆ. 

ಎಡ್ಜಿಂಗ್ ನಿಂದ ಪರಾಕಾಷ್ಠೆಯನ್ನು ತಲುಪುವುದು ಹೇಗೆ?
ದೀರ್ಘಕಾಲದವರೆಗೆ ಲೈಂಗಿಕ ಸೆಷನ್ ಗಳನ್ನು ಎಂಜಾಯ್ ಮಾಡೋ ಪ್ರಕ್ರಿಯೆಯನ್ನು ಎಡ್ಜಿಂಗ್ ಎಂದು ಕರೆಯಲಾಗುತ್ತದೆ. ಲೈಂಗಿಕ ಕ್ರಿಯೆಗೆ ಮೊದಲು ಲೈಂಗಿಕ ಪ್ರಚೋದನೆಯನ್ನು ಹೆಚ್ಚಿಸಲು ಲೈಂಗಿಕ ಮಾತುಕತೆ (dirty talk)ಮತ್ತು ಸ್ಪರ್ಶವು ಇದರಲ್ಲಿ ಒಳಗೊಂಡಿದೆ. ಇದು ಸಂಗಾತಿಯಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಆನಂದವನ್ನು ನೀಡುತ್ತದೆ.

ಎಡ್ಜಿಂಗ್ ಏಕಾಂಗಿಯಾಗಿ ಅಭ್ಯಾಸ ಮಾಡಬಹುದು 
ಎಡ್ಜಿಂಗ್ ನ್ನು ಆನಂದಿಸಲು ನೀವು ಲೈಂಗಿಕ ಆಟಿಕೆಗಳು ಅಥವಾ ಕೈಗಳನ್ನು ಬಳಸಬಹುದು. ಇದಕ್ಕಾಗಿ, ಮಾನಸಿಕವಾಗಿ ಜಾಗರೂಕರಾಗಿರಬೇಕು ಮತ್ತು ಪರಾಕಾಷ್ಠೆಯನ್ನು ತಲುಪುವ ಮೊದಲು ನಿಲ್ಲಿಸಬೇಕು ಮತ್ತು ದೇಹವನ್ನು ತಂಪಾಗಿಸಲು ಬಿಡಬೇಕು. ಈಗ ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ಮತ್ತೆ ನಿಧಾನವಾಗಿ ಪರಾಕಾಷ್ಠೆಯ ಕಡೆಗೆ ಚಲಿಸಿ ಮತ್ತು ಪರಾಕಾಷ್ಠೆಯನ್ನು ಅನುಭವಿಸಿ.
 

ಸಂಗಾತಿಯೊಂದಿಗೆ ಎಡ್ಜಿಂಗ್ ಮಾಡುವುದು ಹೇಗೆ ?
ಸಂಗಾತಿಯ ಲೈಂಗಿಕ ಅಂಗಗಳು, ಲೈಂಗಿಕ ಆಟಿಕೆಗಳು (sex toys), ಬಾಯಿ ಮತ್ತು ಕೈಗಳನ್ನು ಬಳಸುವ ಮೂಲಕ ಕಾಮಾಸಕ್ತಿ ಹೆಚ್ಚಿಸಬಹೂದು. ಪರಾಕಾಷ್ಠೆಯನ್ನು ಪಡೆಯಲು ನೀವು ವಿಭಿನ್ನ ಭಂಗಿಗಳನ್ನು ಟ್ರೈ ಮಾಡಬಹುದು. ಸ್ಪರ್ಶಿಸಿದ ನಂತರ ಸ್ವಲ್ಪ ಸಮಯ ನಿಲ್ಲಿಸಿ. ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ನಿಯಮಿತಗೊಳಿಸುತ್ತದೆ. ನಂತರ ನಿಧಾನವಾಗಿ ಮುಂದುವರಿಯಿರಿ , ನಂತರ ಸೆಕ್ಸ್ ಎಂಜಾಯ್ ಮಾಡಿ. 

Latest Videos

click me!