ಲಿಪ್‌ಲಾಕ್ ಮಾಡಿ ಬರ್ತ್ಡೇ ವಿಶ್ ಮಾಡಿದ ಗರ್ಲ್‌ಫ್ರೆಂಡ್ : ಮಾಜಿ ಪತ್ನಿಯಿಂದಲೂ ಒಲವಿನ ಹಾರೈಕೆ

First Published | Jan 11, 2024, 1:51 PM IST

ನಿನ್ನೆಯಷ್ಟೇ ಹೃತಿಕ್ ರೋಷನ್ ತಮ್ಮ 50ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ನಟನೆಯ ಜೊತೆ ಬಾಲಿವುಡ್ ಕಂಡ ಅದ್ಭುತ ಡಾನ್ಸರ್ ಆಗಿರುವ ಹೃತಿಕ್ ನಟನೆಯ ಜೊತೆ ಜೊತೆ ತಮ್ಮ ನೃತ್ಯ ಹಾಗೂ ದೇಹ ಸೌಂದರ್ಯದಿಂದ ಗ್ರೀಕ್ ಗಾಡ್ ಎಂದು ಖ್ಯಾತಿ ಗಳಿಸಿದವರು. ಇಂತಹ ನಟನ ಹುಟ್ಟುಹಬ್ಬಕ್ಕೆ ಒಂದೆಡೆ ಗರ್ಲ್‌ಫ್ರೆಂಡ್ ಸಬಾ ಅಜಾದ್ ತುಟಿಗೆ ತುಟಿಯೊತ್ತಿ ಶುಭಹಾರೈಸಿದ್ದರೆ, ಅತ್ತ ಮಾಜಿ ಪತ್ನಿ ಸುಸಾನೆ ಖಾನ್ ಭಾವುಕ ಬರಹದೊಂದಿಗೆ ಮಾಜಿ ಪತಿಗೆ ವಿಶ್ ಮಾಡಿದ್ದಾರೆ.

ಹೃತಿಕ್‌ ರೋಷನ್ ಗೆಳತಿ ಸಬಾ ಅಜಾದ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದು ಹಳೆಯ ರಜಾ ದಿನಗಳನ್ನು ವೀಡಿಯೋ ಆಗಿದ್ದು, , ಇದರಲ್ಲಿ ಹೃತಿಕ್ ರೋಷನ್‌ ಹಾಗೂ ಸಬಾ ಇಬ್ಬರೂ ಸೆಲ್ಫಿಗೆ ಪೋಸ್ ನೀಡ್ತಿದ್ದಾರೆ. 

Hruthik roshan, Saba Azad, Sussanne Khan,

 ಜೊತೆಗೆ ಇಬ್ಬರು ವೀಡಿಯೋಗೆ ಪೋಸ್ ಕೊಡುತ್ತಲೇ ಕಿಸ್ ಮಾಡಿದ್ದಾರೆ. ಈ ವೀಡಿಯೋವನ್ನು ಸಬಾ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಗೆಳೆಯ ಹೃತಿಕ್ ರೋಷನ್‌ನನ್ನು ತನ್ನ ಬದುಕಿನ ಬೆಳಕು ಎಂದು ಕರೆದಿದ್ದಾರೆ ಸಬಾ

Tap to resize

ಸೂರ್ಯನ ಸುತ್ತಲ 50 ಸುಂಟರಗಾಳಿಗಳು ಮತ್ತು ನೀವು ಎಷ್ಟು ಸುಂದರವಾದ ರೈಡ್‌ನ್ನು ಹೊಂದಿದ್ದೀರಿ, ಇಲ್ಲಿದೆ ಪ್ರತಿದಿನ ಪ್ರೀತಿಯನ್ನು ಆಯ್ಕೆ ಮಾಡುವ ರೀತಿ ಇದು ನೂರಾಗಲಿ. ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿ. ನೀವು ನನ್ನ ಬೆಳಕು ಎಂದು ಆಕೆ ಬರೆದುಕೊಂಡಿದ್ದಾರೆ ಸಬಾ ಅಜಾದ್.

ಇತ್ತ ಮಾಜಿ ಪತ್ನಿ ಹೃತಿಕ್ ಜೊತೆ 14 ವರ್ಷಗಳ ದಾಂಪತ್ಯ ಜೀವನ ನಡೆಸಿ ಬಳಿಕ ವಿಚ್ಛೇದನ ಪಡೆದುಕೊಂಡ ಪತ್ನಿ ಸುಸಾನೇ ಖಾನ್ ಕೂಡ ಮಾಜಿ ಪತಿಗಾಗಿ ಕ್ಯೂಟ್ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. 

ಮುದ್ದಾದ ವೀಡಿಯೋ ಪೋಸ್ಟ್ ಮಾಡಿದ ಸುಸಾನೇ ಇದರಲ್ಲಿ ತಮ್ಮಿಬ್ಬರ ದಾಂಪತ್ಯದಲ್ಲಿ ಜನಿಸಿದ ಮಕ್ಕಳಾದ ಹ್ರೇಹಾನ್ ಹಾಗೂ ಹ್ರಿಧಾನ್ ಅವರು ಇರುವ ಫೋಟೋಗಳಿವೆ. 

ಹೃತಿಕ್ ಓರ್ವ ಒಳ್ಳೆಯ ತಂದೆ ಎಂದು ಹೇಳಿಕೊಂಡಿರುವ ಸುಸಾನೇ, ಆತ ಹೇಗೆ ಮಕ್ಕಳಿಗೆ ಪ್ರೀತಿ ತೋರಿದ ಬುದ್ದಿಯ ಧಾರೆ ಎರೆದ ಎಂಬುದನ್ನು ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಹೃತಿಕ್‌ಗೆ ಖುಷಿ ಸಂತೋಷ ಸಿಗುವಂತಾಗಲಿ ಎಂದು ಹಾರೈಸಿರುವ ಸುಸಾನೇ ಜೊತೆಗೆ 50ರಲ್ಲೂ 30ರಂತೆ ಕಾಣುತ್ತಿದ್ದೀರಿ ಎಂದು ಮೆಚ್ಚುಗೆಯ ಮಾತನಾಡಿದ್ದಾರೆ. 

ಹೃತಿಕ್ ರೋಷನ್ ಅವರ ವೈಯಕ್ತಿಕ ಬದುಕು ಸದಾ ಕಾಲ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತದೆ. ಈ ಹ್ಯಾಂಡ್‌ಸಮ್ ಹಂಕ್ ಹೆಸರು ಈ ಹಿಂದೆಯೂ ಹಲವು ನಟಿಯರ ಜೊತೆ ಕೇಳಿ ಬಂದಿತ್ತು.  ಆದರೂ 2000ನೇ ಇಸವಿಯಲ್ಲಿ ಹೃತಿಕ್ ಹಾಗೂ ಸುಸಾನೇ ಖಾನ್ ವಿಚ್ಛೇದನ ಪಡೆದಿದ್ದರು. ಆದರೂ ಮ್ಕಳಾದ ಹ್ರೆಹಾನ್ ರೋಷನ್ ಹಾಗೂ ಹ್ರಿದಾನ್ ರೋಶನ್ ಅವರಿಗೆ ಇಬ್ಬರು ಕೋ ಪೇರೆಂಟ್‌( ಸಹ ಪೋಷಣೆ) ಆಗಿದ್ದಾರೆ. 

Hruthik roshan, Saba Azad, Sussanne Khan,

ಅಲ್ಲದೇ ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಸುಸ್ಸಾನೇ ವಿಚ್ಛೇದನದ ಕಾರಣದ ಬಗ್ಗೆ ಮಾತನಾಡಿದ್ದರು.  ತಾನು ತಪ್ಪಾದ ಸಂಬಂಧದಲ್ಲಿ ಇರಲು ಎಂದಿಗೂ ಇಷ್ಟಪಡುವುದಿಲ್ಲ,

 ಜೊತೆಗಿದ್ದು ಬಾಧೆ ಪಡುವುದಕ್ಕಿಂತ ದೂರವಿದ್ದು ಖುಷಿಯಾಗಿರುವುದೇ ಉತ್ತಮ ಎಂದು ನಾವು ಭಾವಿಸಿದ್ದೆವು ಹಾಗಾಗಿಯೇ ವಿಚ್ಛೇದನ ಪಡೆದುಕೊಂಡೆವು ಎಂದು ಹೇಳಿಕೊಂಡಿದ್ದಾರೆ. 

ಇದಾದ ನಂತರ ಹೃತಿಕ್ ರೋಷನ್ ಸಬಾ ಅಜಾದ್ ಜೊತೆ ಸಂಬಂಧದಲ್ಲಿದ್ದರೆ, ಇತ್ತ ಸುಸಾನೇ ಖಾನ್ ಅರ್ಸ್ಲಾನ್ ಗೋನಿ ಜೊತೆ ಸಂಬಂಧದಲ್ಲಿದ್ದಾರೆ. 

Hruthik roshan, Saba Azad, Sussanne Khan,

 ಈ ಹಿಂದೆ ಅರ್ಸ್ಲಾನ್ ಗೋನಿ ಹುಟ್ಟುಹಬ್ಬಕ್ಕೆ ನಟ ಹೃತಿಕ್, ಗೆಳತಿ ಸಬಾ ಅಜಾದ್ ಕೂಡ ವಿಶ್ ಮಾಡಿದ್ದರು, ಸಬಾ ಅಜಾದ್ ಹಾಗೂ ಹೃತಿಕ್ ಮದ್ವೆಯಾಗಲಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಆದರೆ ಇಬ್ಬರು ಈ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. 

Latest Videos

click me!