ನಟ ಸಿದ್ಧಾರ್ಥ ಕೈ ಹಿಡಿದು ನಡೆದ ರಾಶಿ ಖನ್ನಾ ವಿರುದ್ಧ ಸಿಟ್ಟಿಗೆದ್ದ ಕಿಯರಾ ಅಭಿಮಾನಿಗಳು...!

First Published | Feb 26, 2024, 4:43 PM IST

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ  ಹಾಗೂ ಸಹ ನಟಿ ರಾಶಿ ಖನ್ನಾ ಸಿನಿಮಾ ಪ್ರಚಾರಕ್ಕಾಗಿ ಓಡಾಡುವ ವೇಳೆ ಇಬ್ಬರು ಪ್ರೇಮಿಗಳಂತೆ ಜೊತೆಯಾಗಿ ಕೈ ಕೈ ಹಿಡಿದುಕೊಂಡು ಓಡಾಡಿದ್ದು, ಈ ವೀಡಿಯೋ ಪಪಾರಾಜಿ ಸೈಟ್‌ಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇದನ್ನು ನೋಡಿದ  ಸಿದ್ಧಾರ್ಥ ಮಲ್ಹೋತ್ರಾ ಪತ್ನಿ ಹಾಗೂ ನಟಿ ಕೈರಾ ಅಡ್ವಾಣಿ ಅಭಿಮಾನಿಗಳು ಕಾಮೆಂಟ್‌ಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಾಲಿವುಡ್ ನಟ ಹಾಗೂ ನಟಿ ಕೈರಾ ಅಡ್ವಾಣಿ ಪತಿ ಸಿದ್ಧಾರ್ಥ್ ಮಲ್ಹೋತ್ರಾ  ಹಾಗೂ ಸಹ ನಟಿ ರಾಶಿ ಖನ್ನಾ ತಮ್ಮ ಮುಂಬರುವ ಸಿನಿಮಾ 'ಯೋಧ' ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. 

ಸಿನಿಮಾ ಪ್ರಚಾರಕ್ಕಾಗಿ ಓಡಾಡುವ ವೇಳೆ ಇಬ್ಬರು ಪ್ರೇಮಿಗಳಂತೆ ಜೊತೆಯಾಗಿ ಕೈ ಕೈ ಹಿಡಿದುಕೊಂಡು ಓಡಾಡಿದ್ದು, ಈ ವೀಡಿಯೋ ಪಪಾರಾಜಿ ಸೈಟ್‌ಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇದನ್ನು ನೋಡಿದ  ಸಿದ್ಧಾರ್ಥ ಮಲ್ಹೋತ್ರಾ ಪತ್ನಿ ಹಾಗೂ ನಟಿ ಕೈರಾ ಅಡ್ವಾಣಿ ಅಭಿಮಾನಿಗಳು ಕಾಮೆಂಟ್‌ಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Tap to resize


ನಟಿ ರಾಶಿ ಖನ್ನಾ ಹಾಗೂ ಸಿದ್ಧಾರ್ಥ ಮಲ್ಹೋತ್ರಾ ನಟನೆಯ ಯೋಧ ಆಕ್ಷನ್ ಥ್ರಿಲ್ಲರ್‌ ಸಿನಿಮಾವೂ ಮಾರ್ಚ್ 15 ರಂದು ಬಿಡುಗಡೆಯಾಗಲು ಸಿದ್ಧವಾಗಿದ್ದು,  ಸಿನಿಮಾವನ್ನು ಸಾಗರ್ ಅಂಬ್ರೆ ಹಾಗೂ ಪುಷ್ಕರ್ ಝೋಜಾ ಜೊತೆಯಾಗಿ ನಿರ್ದೇಶಿಸಿದ್ದು, 

ಹಿರು ಯಶ್ ಜೋಹರ್ ಕಣ ಜೋಹರ್‌ ಹಾಗೂ ಅಪೂರ್ವ ಮೆಹ್ತಾ ಈ ಸಿನಿಮಾಗೆ ಹಣ ಹಾಕಿದ್ದು, ಧರ್ಮ ಪ್ರೊಡಕ್ಷನ್ ಮೂಲಕ ಈ ಸಿನಿಮಾ ತೆರೆಗೆ ಬರುತ್ತಿದೆ.  ಈ ಸಿನಿಮಾದಲ್ಲಿ ದಿಶಾ ಪಟಾನಿ ಕೂಡ ನಟಿಸಿದ್ದಾರೆ. ಆದರೆ ಈಗ ಕೈರಾ ಅಭಿಮಾನಿಗಳು ನಟಿ ರಾಶಿ ಖನ್ನಾ ಸಿದ್ಧಾರ್ಥ್ ಮಲ್ಹೋತ್ರಾ ಕೈ ಹಿಡಿದು ತಿರುಗಾಡುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಶಿ ಖನ್ನಾ

ಬಾಲಿವುಡ್ ಸಿನಿಮಾ ನಟ ನಟಿಯರು ಸಂಬಂಧಗಳ ವಿಚಾರದಲ್ಲಿ ಸಖತ್ ಬೋಲ್ಡ್ ಆಗಿದ್ದು, ಸಹ ನಟ ನಟಿಯರ ಜೊತೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಸಹ ನಟಿಯರು ನಟರ ಜೊತೆ ತಿರುಗಾಡುವುದು ಅಲ್ಲಿ ಸಾಮಾನ್ಯ ಆಗಿದೆ. ಆದರೆ  ಇವರಿಬ್ಬರ ವಿಚಾರದಲ್ಲಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅನೇಕರು ನಟಿ ರಾಶಿ ಖನ್ನಾ ಮೇಲೆ ಕೆಂಡಕಾರುತ್ತಿದ್ದಾರೆ.
 

ರಾಶಿ ಖನ್ನಾ

ವೈರಲ್ ಆಗಿರುವ ವೀಡಿಯೋದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ರಾಶಿ ಖನ್ನಾ ಜೊತೆಯಾಗಿ ನಡೆದಾಡುತ್ತಿದ್ದು, ಈ ವೇಳೆ ರಾಶಿ ಖನ್ನಾ ಪಕ್ಕದಲ್ಲಿದ್ದ ನಟ ಸಿದ್ಧಾರ್ಥ್ ಮಲ್ಹೋತ್ರಾ ಕೈಯೊಳಗೆ ಕೈ ಸೇರಿಸಿ ಹಿಡಿದುಕೊಂಡಿದ್ದಾಳೆ. ಇದು ಕೈರಾ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. 

ರಾಶಿ ಖನ್ನಾ

ಒಬ್ಬರಂತೂ ಇಬ್ಬರು ಗಂಡ ಹೆಂಡತಿ ತರ ಏಕೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರೆ, ಮತ್ತೊಬ್ಬರು ಇದು ಸತ್ಯವಾಗಿಯೂ ಸ್ವಲ್ಪವೂ ಚೆಂದ ಕಾಣಿಸುತ್ತಿಲ್ಲ, ಇವರ ವರ್ತನೆ ತುಂಬಾ ಕಿರಿಕಿರಿಯುಂಟು ಮಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

ಮತ್ತೆ ಕೆಲವರು ಕಾಮೆಂಟ್‌ನಲ್ಲಿ ಸಿದ್ಧಾರ್ಥ ಮಲ್ಹೋತ್ರಾ ಪತ್ನಿ ಕಿಯಾರಾ ಅಡ್ವಾಣಿಯನ್ನು ಟ್ಯಾಗ್ ಮಾಡಿದ್ದು,  ಬಹುಶಃ ಕೈರಾ ಮನೆಗೆ ಬನ್ನಿ ಆಮೇಲೆ ಮಾತಾಡೋಣ ಅಂತ ಹೇಳ್ತಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಯೋಧ ಸಿನಿಮಾವೂ ಹಲವು ಸಮಯದಿಂದ ಪೋಸ್ಟ್ ಫೋನ್ ಆಗುತ್ತಲೇ ಇದೆ, ಈ ಮೊದಲು 2023ರ ಜುಲೈನಲ್ಲಿ ರಿಲೀಸ್ ಆಗುತ್ತದೆ ಎಂದು ಹೇಳಲಾಗಿತ್ತು. ನಂತರ ಅದೇ ವರ್ಷ ಡಿಸೆಂಬರ್ 8 ರಂದು ರಿಲೀಸ್ ಆಗುತ್ತದೆ ಎನ್ನಲಾಗಿತ್ತು.  ಆದರೆ ಈಗ ಮಾರ್ಷ್ 15 ರಂದು ರಿಲೀಸ್ ಆಗುತ್ತದೆ ಎಂದು ತಿಳಿದು ಬಂದಿದೆ.


ಸಿದ್ಧಾರ್ಥ ಮಲ್ಹೋತ್ರಾ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ  2020ರಲ್ಲಿ ಕಿಯಾರಾ ಅಡ್ವಾಣಿಯ ಜೊತೆ ಪ್ರೀತಿಯಲ್ಲಿದ್ದ ಸಿದ್ದಾರ್ಥ ನಂತರ 2023ರ ಫೆಬ್ರವರಿ 7 ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Latest Videos

click me!