ಸ್ನೇಹಿತನ ರೂಪದ ಶತ್ರುಗಳು ಇದ್ದಾರೆಯೇ? ಹೀಗೆ ಕಂಡು ಹಿಡಿಯಿರಿ

First Published | Feb 25, 2024, 4:09 PM IST

ನಾವೆಲ್ಲರೂ ನಮ್ಮ ಜೀವನದಲ್ಲಿ ನಮ್ಮ ಸಂತೋಷ, ದುಃಖದಲ್ಲಿ ಜೊತೆ ನಿಲ್ಲುವಂತಹ ನಿಜವಾದ ಸ್ನೇಹಿತರು ಇರಬೇಕೆಂದು ಬಯಸುತ್ತೇವೆ ಅಲ್ವಾ? ಆದರೆ ಕೆಲವೊಮ್ಮೆ ಸ್ನೇಹದ ಮುಖವಾಡ ಧರಿಸಿ ನಮ್ಮ ಬಳಿ ಇರುವ ಜನರು ಇರುತ್ತಾರೆ. ಆದರೆ ಅವರು ಫ್ರೆಂಡ್ ಆಗಿರದೇ ಫ್ರೆಂಡ್ ರೂಪದಲ್ಲಿರುವ ಶತ್ರು ಆಗಿರ್ತಾರೆ.ಅವರನ್ನು ನಾವು 'ಫ್ರೆನಾಮಿ' ಎಂದು ಕರೆಯುತ್ತೇವೆ 
 

ನಾವೆಲ್ಲರೂ ನಮ್ಮ ಜೀವನದಲ್ಲಿ ಒಬ್ಬರು ಅಥವಾ ಇಬ್ಬರು ಸ್ನೇಹಿತರನ್ನು ಹೊಂದಿದ್ದೇವೆ, ಅವರನ್ನು ನಾವು ನಮ್ಮ ಬಿಎಫ್ಎಫ್ ಅಂದರೆ ಉತ್ತಮ ಸ್ನೇಹಿತ ಎಂದು ಕರೆಯುತ್ತೇವೆ. ಆದರೆ ಈ ಸ್ನೇಹಿತರು ನಿಜವಾಗಿಯೂ ನಿಮ್ಮ ಸ್ನೇಹಿತರೇ ಅಥವಾ ಸ್ನೇಹಿತರಂತೆ ನಟಿಸುತ್ತಿದ್ದಾರೆಯೇ? ನಟಿಸುವ ಜನರನ್ನು ಇಂಗ್ಲಿಷ್ ನಲ್ಲಿ 'ಫ್ರೆನೆಮಿ' (frenemy) ಎಂದು ಕರೆಯಲಾಗುತ್ತದೆ.
 

ಸರಳ ಪದಗಳಲ್ಲಿ 'ಫ್ರೆನೆಮಿ' ಅನ್ನು ಹೇಳೋದಾದರೆ, ಅದು ಸ್ನೇಹಿತನ ರೂಪದಲ್ಲಿ ಶತ್ರು ಎಂದರ್ಥ. ನಿಮ್ಮ ಆ ಸ್ಪೆಷಲ್ ಫ್ರೆಂಡ್ (special friend) ನಿಮ್ಮ ಮುಂದೆ ಸ್ನೇಹಿತನಂತೆ ನಟಿಸುತ್ತಾನೆ ಆದರೆ ಬೆನ್ನ ಹಿಂದೆ ನಿಮ್ಮ ಬಗ್ಗೆ ವಿರುದ್ಧವಾಗಿ ಹೇಳುತ್ತಾನೆ ಮತ್ತು ಕೆಟ್ಟದ್ದನ್ನು ಮಾಡುತ್ತಾನೆ. ಅಂತಹ ಜನರನ್ನು ಡಬಲ್ ಕ್ಯಾರೆಕ್ಟರ್ ವ್ಯಕ್ತಿ ಎಂದು ಕರೆಯಬಹುದು.  ನಿಮ್ಮ ಜೊತೆಗೆ ಇರುವವರು ನಿಮ್ಮ ಸ್ನೇಹಿತರೇ? ಅಲ್ಲವೇ? ಅನ್ನೋದನ್ನು ಈ ಸಂಕೇತಗಳ ಮೂಲಕ ತಿಳಿಯಿರಿ. 
 

Latest Videos


ಬೆನ್ನ ಹಿಂದೆ ಗಾಸಿಪ್ ಮಾಡೋದು
ಈ ಜನರು ನಿಮ್ಮ ಮುಂದೆ ಸ್ವೀಟ್ ಆಗಿ ಮಾತನಾಡುತ್ತಾರೆ, ಆದರೆ ನಿಮ್ಮ ಬೆನ್ನ ಹಿಂದೆ ಅವರು ನಿಮ್ಮ ಎಲ್ಲಾ ರಹಸ್ಯಗಳನ್ನು (gossip) ಮತ್ತು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸುತ್ತಾರೆ. ನೀವು ಅಲ್ಲಿ ಇಲ್ಲದಿದ್ದಾಗ, ಅಂತಹ ಜನರು ನಿಮ್ಮ ಬಗ್ಗೆ ಸುಳ್ಳು ವದಂತಿಗಳನ್ನು ಹರಡುವ ಮೂಲಕ ನಿಮ್ಮ ಇಮೇಜ್ ಹಾಳುಮಾಡಲು ಪ್ರಯತ್ನಿಸುತ್ತಾರೆ.

ಫ್ರೆನಾಮಿಯನ್ನು ಗುರುತಿಸುವುದು ಹೇಗೆ?
ಫ್ರೆನಾಮಿ ನಿಮ್ಮ ಶತ್ರು, ಅವನು ತನ್ನನ್ನು ನಿಮ್ಮ ಉತ್ತಮ ಸ್ನೇಹಿತ ಎಂದು ಕರೆದುಕೊಳ್ಳುತ್ತಾನೆ. ಅಂತಹ ವ್ಯಕ್ತಿ ನಿಮ್ಮ ಕಷ್ಟದ ಸಮಯದಲ್ಲಿ ನಿಮಗೆ ಸಹಾಯ ಮಾಡುವವರಂತೆ ನಟಿಸುತ್ತಾರೆ, ಆದರೆ ಅವರ ಹೃದಯದಲ್ಲಿ ನಿಮ್ಮ ಬಗ್ಗೆ ಅಸೂಯೆ ಮತ್ತು ಸೇಡಿನ ಭಾವನೆ ಇರುತ್ತದೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ ಅದರ ಬಗ್ಗೆ ತಿಳಿದುಕೊಳ್ಳಬಹುದು. 
 

ಕಿರಿಕಿರಿ ಭಾವನೆ
ಒಬ್ಬ ಸ್ನೇಹಿತನು ನಿಮ್ಮ ಪ್ರಗತಿ ಬಗ್ಗೆ ಅಸೂಯೆಪಟ್ಟರೆ ಅಥವಾ ಸಂತೋಷವಾಗಿರುವಂತೆ ನಟಿಸಿದರೆ, ಅವನು ಖಂಡಿತಾ ನಿಮ್ಮ ಸ್ನೇಹಿತರಾಗಲು ಸಾಧ್ಯವೇ ಇಲ್ಲ. ನಿಮ್ಮ ಯಶಸ್ಸು ಅಂತಹ ಸ್ನೇಹಿತರಿಗೆ ಅಸುರಕ್ಷಿತ (unsafe) ಭಾವನೆಯನ್ನುಂಟು ಮಾಡುತ್ತದೆ. ಅಲ್ಲದೆ, ನಿಮ್ಮ ಯಶಸ್ಸನ್ನು ನೋಡಿ, ಈ ಜನರು ಇದ್ದಕ್ಕಿದ್ದಂತೆ ದೂರ ಸರಿಯುತ್ತಾರೆ ಮತ್ತು ನಿಮ್ಮ ಸಂತೋಷದಲ್ಲಿ ಪಾಲು ಪಡೆಯಲು ಇಷ್ಟಪಡೋದಿಲ್ಲ.

Image: Getty

ಅತಿರೇಕದ ಭಾವನೆ
ಮೋಸಗಾರ ಸ್ನೇಹಿತರು ತುಂಬಾ ಸ್ಪರ್ಧಾತ್ಮಕವಾಗಿರುತ್ತಾರೆ. ಅದು ನಿಮ್ಮ ವೈಯಕ್ತಿಕ ಸಂತೋಷವಾಗಿರಲಿ ಅಥವಾ ಯಾವುದೇ ವೃತ್ತಿ ಜೀವನದ (Career) ಸಾಧನೆಯಾಗಿರಲಿ, ಅವರು ಯಾವಾಗಲೂ ನಿಮ್ಮ ಸಾಧನೆಗಳನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಅಲ್ಲದೆ, ನೀವು ಅವರನ್ನು ಭೇಟಿಯಾದಾಗಲೆಲ್ಲಾ, ತಾವು ಮಾಡಿದ್ದು ಸರಿ ಅನ್ನೋದನ್ನು ಬಿಂಬಿಸಲು ಪ್ರಯತ್ನಿಸುತ್ತಾರೆ. 

ಗಲಾಟೆ ಮಾಡುವ ಅಭ್ಯಾಸ
ಸ್ನೇಹಿತರ ನಡುವೆ ಆಗಾಗ್ಗೆ ಜಗಳ ಆಗುತ್ತೆ ನಿಜಾ, ಆದರೆ ಅದು ಯಾವುದೇ ವಿಷಾದವಿಲ್ಲದೆ ಕೊನೆಗೊಳ್ಳುತ್ತದೆ. ಆದರೆ ಈ ಫ್ರೆಂಡ್ ರೂಪದ ಶತ್ರು ಆಕ್ರಮಣಕಾರಿ ಗುಣ ಹೊಂದಿರುತ್ತಾರೆ. ಅಂತಹ ಜನರು ವಿಷಯವನ್ನು ನಿರ್ಲಕ್ಷಿಸುವ ಅಥವಾ ಕೊನೆಗೊಳಿಸುವುದಕ್ಕಿಂತ ದೊಡ್ಡ ಯುದ್ಧವನ್ನೇ ಮಾಡುತ್ತಾರೆ. ಇದರಿಂದ ಸ್ನೇಹ ಮುರಿಯುವ ಸಾಧ್ಯತೆಯೂ ಇದೆ. 

ಸುಳ್ಳು ಸಲಹೆ ನೀಡುವುದು
ಅಂತಹ ಜನರು ನಿಮ್ಮನ್ನು ನೇರವಾಗಿ ಟೀಕಿಸುವುದಿಲ್ಲ. ಅವರು ನಿಮ್ಮಲ್ಲಿ ಕೆಟ್ಟದ್ದನ್ನು ಹುಡುಕಲು ಯತ್ನಿಸುತ್ತಾರೆ. ಕೆಲವು ವಿಷಯಗಳಲ್ಲಿ ನಿಮ್ಮ ನ್ಯೂನತೆಗಳನ್ನು ಎತ್ತಿ ತೋರಿಸುತ್ತಾರೆ ಮತ್ತು ನಿಮ್ಮ ವೈಫಲ್ಯಕ್ಕೆ (failure) ಕಾರಣವನ್ನು ಹೇಳಲು ಪ್ರಾರಂಭಿಸುತ್ತಾರೆ. ಉದಾಹರಣೆಗೆ, ನೀವು ಹೊಸ ಕೆಲಸ ಪ್ರಾರಂಭಿಸಲು ಯೋಚಿಸುತ್ತಿದ್ದರೆ, "ಇದು ತುಂಬಾ ಕಷ್ಟ, ನೀವು ಅದನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ" ಎಂದು ಹೇಳುವ ಮೂಲಕ ಅವರು ನಿಮ್ಮನ್ನು ನಿರುತ್ಸಾಹಗೊಳಿಸುತ್ತಾರೆ. "

ಪ್ರತಿ ಕೆಲಸದಲ್ಲೂ ನಿರುತ್ಸಾಹ
ಯಶಸ್ಸನ್ನು ಪಡೆಯುವ ಅವಕಾಶಗಳಿಂದ ನಿಮ್ಮನ್ನು ದೂರವಿರಿಸಲು ಈ ಜನರು ಯಾವಾಗಲೂ ಸಿದ್ಧರಿರುತ್ತಾರೆ. ತಾವು ಉತ್ತಮ ಸ್ನೇಹಿತರು ಎಂದು ಹೇಳಿಕೊಳ್ಳುತ್ತಲೇ ಅವರು ಯಾವುದೇ ಹೊಸ ಅವಕಾಶದ ನಕಾರಾತ್ಮಕ (negativity) ಅಂಶಗಳನ್ನು ಒತ್ತಿ ಒತ್ತಿ ಹೇಳಲು ಪ್ರಾರಂಭಿಸುತ್ತಾರೆ.  ಆ ಮೂಲಕ ನಿಮಗೆ ಯಶಸ್ಸನ್ನು ಸಿಗದಂತೆ ತಡೆಯುತ್ತಾರೆ. 

ಎಲ್ಲದರ ಬಗ್ಗೆಯೂ ಅಪಹಾಸ್ಯ
ಫ್ರೆನಾಮಿ ನಿಮ್ಮನ್ನು ಹೊಗಳುವಂತೆ ನಟಿಸುತ್ತಾರೆ, ಆದರೆ ಅವರ ಅಭಿನಂದನೆಗಳಲ್ಲಿ ಯಾವಾಗಲೂ ವ್ಯಂಗ್ಯ ಅಡಗಿರುತ್ತದೆ. ನಿಮ್ಮಲ್ಲಿರುವ ಸಾಧನೆಯನ್ನು ಅವರು ಪ್ರಶಂಸಿಸಿದಾಗ, "ನೀವು ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡಿದ್ದರೆ ಚೆನ್ನಾಗಿತ್ತು" ಎಂದು ಅವರು ಹೇಳುತ್ತಾರೆ. ಅಥವಾ, "ನಿಮಗೆ ಅದೃಷ್ಟದ ಬೆಂಬಲ ಮಾತ್ರ ಸಿಕ್ಕಿದೆ ಎಂದೆಲ್ಲಾ ಹೇಳುವ ಮೂಲಕ ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಲು ಯತ್ನಿಸುತ್ತಾರೆ. 
 

click me!