ವಿವಾಹ ಅನ್ನೋದು ಹೊಸ ಜೀವನದ ಪ್ರಾರಂಭವಾಗಿದೆ. ಅಲ್ಲಿ ಇಬ್ಬರು ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿ ಪರಸ್ಪರ ಜೊತೆಯಾಗಿ ಹೆಜ್ಜೆ ಹಾಕಲು ನಿರ್ಧರಿಸುತ್ತಾರೆ. ಯಾವುದೇ ಸಂಬಂಧವು ಸತ್ಯದಿಂದ ಪ್ರಾರಂಭವಾಗಬೇಕು ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹಳೆಯ ಲವ್ ಲೈಫ್ (old relationship) ಬಗ್ಗೆ ಸಂಗಾತಿ ಬಳಿ ಹೇಳಬೇಕೆ? ಬೇಡವೇ? ಎನ್ನುವ ಪ್ರಶ್ನೆ ಮೂಡುತ್ತದೆ. ಇದಕ್ಕೆ ಉತ್ತರ ತಿಳಿಯಬೇಕೆಂದರೆ ಮುಂದೆ ಓದಿ…
ಕೆಲವೊಮ್ಮೆ ಪರಿಸ್ಥಿತಿಯಿಂದಾಗಿ ಪ್ರೇಮಿ ನಿಮ್ಮಿಂದ ದೂರವಾಗಿರಬಹುದು, ಅಥವಾ ಪೋಷಕರ ಒತ್ತಾಯದ ಮೇರೆಗೆ ನಿಮ್ಮ ಪ್ರೀತಿಯಿಂದ ದೂರವಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಜೀವನ ಸಂಗಾತಿಗೆ ಹಿಂದಿನ ಸಂಬಂಧದ ಬಗ್ಗೆ ಹೇಳಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಹಿಂದಿನ ಜೀವನದ ಕಾರಣದಿಂದಾಗಿ ಭವಿಷ್ಯದ ಜೀವನ (future life) ಹಾಳಾಗಬಹುದು ಎಂಬ ಭಯವೂ ಇರುತ್ತದೆ. ನೀವೂ ಸಹ ಅಂತಹ ಭಯದಲ್ಲಿ ಸಿಲುಕಿಕೊಂಡಿದ್ದರೆ, ನಿಮಗಾಗಿ ಸಲಹೆ ಇಲ್ಲಿದೆ.
ಜೀವನ ಸಂಗಾತಿಗೆ ಹಳೆ ಪ್ರೇಮದ ಬಗ್ಗೆ ಹೇಳಬೇಕೆ?
ಸಂಬಂಧ ತಜ್ಞರ ಪ್ರಕಾರ, ಜೀವನ ಸಂಗಾತಿಯೊಂದಿಗೆ (life partner) ಹೊಸ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ನಿಮ್ಮ ಹಿಂದಿನ ಸಂಬಂಧದ ಬಗ್ಗೆ ಅವರಿಗೆ ಹೇಳಬೇಕು. ಇದು ನಿಮ್ಮ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಗುಣಮಟ್ಟವನ್ನು ತೋರಿಸುತ್ತದೆ, ಇದು ಮದುವೆಯಂತಹ ಸಂಬಂಧಕ್ಕೆ ಬಹಳ ಮುಖ್ಯ.
ಆದರೆ ಹಳೆ ಪ್ರೇಮಕತೆಯನ್ನು ಹಂಚಿಕೊಳ್ಳುವ ಮೊದಲು ಇದನ್ನು ನೆನಪಿನಲ್ಲಿಡಿ
ನಿಮ್ಮ ಹಳೆಯ ಲವ್ ಲೈಫ್ ಬಗ್ಗೆ ಯಾರೊಂದಿಗಾದರೂ ಹಂಚಿಕೊಳ್ಳುವ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ನಿಮ್ಮ ಹಿಂದಿನ ಲವ್ ಲೈಫ್ ಹಾಳಾಗಲು ಕಾರಣ ಏನು? ಅನ್ನೋದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಇದನ್ನು ಸಂಗಾತಿ ಬಳಿ ಹೇಳದೇ ಇರೋದು ಉತ್ತಮ.
ಮೊದಲಿಗೆ ಸಂಗಾತಿಯನ್ನು ಅರ್ಥಮಾಡಿಕೊಳ್ಳಿ (understanding partner) ಮತ್ತು ನಂತರ ಹಳೆಯ ಪ್ರೇಮ ಸಂಬಂಧದ ಬಗ್ಗೆ ಹೇಳಲು ನಿರ್ಧರಿಸಿ
ಹಾಗೆ ಹೇಳುವುದಾದರೆ, ಇಂದಿನ ಜನರು ತುಂಬಾ ಮಾಡರ್ನ್ ಮತ್ತು ಮುಕ್ತ ಮನಸ್ಸಿನವರಾಗಿದ್ದಾರೆ. ಆದರೆ ಇತರರನ್ನು ಅರ್ಥಮಾಡಿಕೊಳ್ಳುವ ವಿಷಯಕ್ಕೆ ಬಂದಾಗ, ಜನರು ಮೊದಲು ತೀರ್ಪು ನೀಡುತ್ತಾರೆ. ಹಾಗಾಗಿ ನಿಮ್ಮ ಸಂಗಾತಿಯ ಮನಸ್ಸು ಹೇಗಿದೆ ಎಂದು ಅರ್ಥ ಮಾಡಿಕೊಂಡು, ಬಳಿಕ ಅವರ ಬಳಿ ಮನಸ್ಸಿನ ಮಾತು ಹೇಳಿ.
ಕೆಲವೊಂದು ಸಂದರ್ಭಗಳಲ್ಲಿ ಇನ್ನು ನೀವು ಹುಡುಗಿಯಾಗಿದ್ದರೆ, ಮತ್ತು ಮದುವೆಗೆ ಮೊದಲು ಪ್ರೇಮ ಸಂಬಂಧದಲ್ಲಿದ್ದರೆ, ನಿಮ್ಮ ಭೂತಕಾಲವನ್ನು ತಿಳಿದ ನಂತರ ನಿಮ್ಮನ್ನು ಚಾರಿತ್ರ್ಯರಹಿತ ಎಂದು ಕರೆಯಬಹುದು. ಆದ್ದರಿಂದ, ಮೊದಲು ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳುವುದು ತುಂಬಾನೆ ಮುಖ್ಯ.
ಮೊದಲ ಭೇಟಿಯಲ್ಲಿಯೇ ಹಳೆ ಕಥೆಗಳನ್ನು ಹೇಳಬೇಡಿ :
ಅನೇಕ ಬಾರಿ ನಾವು ಮುಂದುವರಿಯುವ ಮೊದಲು ನಮ್ಮ ನ್ಯೂನತೆಗಳನ್ನು ಇನ್ನೊಬ್ಬ ವ್ಯಕ್ತಿಯ ಮುಂದೆ ಇಡುತ್ತೇವೆ. ಆದ್ದರಿಂದ ಅವನು ಒಟ್ಟಿಗೆ ಇರಬೇಕೇ ಅಥವಾ ಬೇಡವೇ ಎಂದು ಈ ನಿರ್ಧರಿಸಲು ಸುಲಭವಾಗುತ್ತೆ ಎಂದು ಅಂದುಕೊಳ್ಳುತ್ತೇವೆ. ಆದರೆ ಹಾಗೆ ಮಾಡುವುದು ತಪ್ಪು. ಮೊದಲ ಮೀಟಿಂಗ್ ನಲ್ಲಿ (first meeting) ಯಾವಾಗಲೂ ಪರಸ್ಪರ ತಿಳಿದುಕೊಳ್ಳುವ ಬಗ್ಗೆ ಇರುತ್ತದೆ. ಪರಸ್ಪರರ ಮಾಜಿ ಪ್ರೇಮಿಗಳ ಬಗ್ಗೆ ಮಾತನಾಡಬಾರದು. ಇದರಿಂದ ಸಂಬಂಧ ಮುಂದುವರೆಯುವುದು ಕಷ್ಟವಾಗುತ್ತೆ.
ಹಳೆ ಪ್ರೇಮಿಯ ಬಗ್ಗೆ ಹೇಳುವಾಗ ಜಾಗರೂಕರಾಗಿರಿ
ಸಂಗಾತಿಯು ನಿಮ್ಮ ಹಿಂದಿನ ಪ್ರೇಮ ಸಂಬಂಧವನ್ನು (old love life) ಒಪ್ಪಿಕೊಳ್ಳಬಹುದು ಎಂದು ನೀವು ಭಾವಿಸಿದರೆ, ಅವರಿಗೆ ಆ ಸಂಗತಿಯನ್ನು ಹೇಳಿ. ಆದರೆ ಯಾವುದರ ಬಗ್ಗೆಯೂ ವಿವರವಾಗಿ ಮಾತನಾಡುವುದನ್ನು ತಪ್ಪಿಸಿ. ಏಕೆಂದರೆ ಇದು ನಿಮ್ಮ ಸಂಗಾತಿಗೆ ಇಷ್ಟವಾಗದೇ ಇರಬಹುದು.
ನಿಮ್ಮ ಸಂಗಾತಿಯು ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ. ಅವನು ಎಷ್ಟು ಪ್ರಬುದ್ಧನಾಗಿದ್ದಾನೆ ಎಂದರೆ ನಿಮ್ಮ ಭೂತಕಾಲದ ಆಧಾರದ ಮೇಲೆ ನಿಮ್ಮನ್ನು ನಿರ್ಣಯಿಸದಿದ್ದರೆ, ನಿಮ್ಮ ಹಿಂದಿನ ಸಂಬಂಧದ ಬಗ್ಗೆ ನೀವು ಅವರ ಬಳಿ ಹೇಳಬಹುದು. ಆದರೆ ಅವರ ಅನುಕಂಪ ಗಳಿಸಲು ಮಾತ್ರ ನೀವು ಹಳೆ ಸಂಬಂಧದ ಬಗ್ಗೆ ಹೇಳಬೇಡಿ.