ಸೆಕ್ಸ್ ಲೈಫಲ್ಲಿ ಈ ಬದಲಾವಣೆ ಮಾಡಿದ್ರೆ ವೈವಾಹಿಕ ಜೀವನವೇ ಸಖತ್ತಾಗಿರುತ್ತೆ

First Published | Feb 22, 2023, 5:31 PM IST

ಮದುವೆಯಾಗಿ ವರ್ಷಗಳ ಬಳಿಕವೂ ಲೈಂಗಿಕ ಜೀವನದಲ್ಲಿ ಸ್ಪಾರ್ಕ್ ಹಾಗೆಯೇ ಉಳಿಯಬೇಕು ಅನ್ನೋದಾದ್ರೆ ನೀವು ನಿಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕು. ಯಾವ ರೀತಿ ಬದಲಾವಣೆ ಮಾಡೊದ್ರಿಂದ ವೈವಾಹಿಕ ಜೀವನ ಚೆನ್ನಾಗಿರುತ್ತೆ ನೋಡೋಣ. 

ಕೆಲವು ಜನಕ್ಕೆ ಮದುವೆಯಾದ (after marriage) ಬಳಿಕ ಒಂದೇ ರೀತಿಯ ಜೀವನ ನಡೆಸಿ ಬೋರ್ ಹೊಡೆಯುತ್ತದೆ. ವಿಶೇಷವಾಗಿ ಲೈಂಗಿಕತೆಯ ವಿಷಯಕ್ಕೆ ಬಂದಾಗ ಈ ರೀತಿ ನಡೆಯುವುದು ಸಾಮಾನ್ಯ. ಮದುವೆಯಾದ ಬಳಿಕ ನಿಮ್ಮ ಜೀವನದುದ್ದಕ್ಕೂ ನೀವು ಒಬ್ಬ ವ್ಯಕ್ತಿಯೊಂದಿಗೆ ಇದ್ದಾಗ, ಲೈಂಗಿಕತೆಯು ನಿಜವಾಗಿಯೂ ನೀರಸ, ಆಸಕ್ತಿಹೀನವಾಗಿ ತೋರುತ್ತದೆ. ಹಾಗಾಗಿ ವೈವಾಹಿಕ ಜೀವನದಲ್ಲಿ ಮಸಾಲೆ ಮತ್ತು ಕಿಡಿಯನ್ನು ಜೀವಂತವಾಗಿಡುವುದು ಎಲ್ಲಾ ದಂಪತಿಗಳು ಗಮನ ಹರಿಸಬೇಕಾದ ಅಗತ್ಯ ಅಂಶ. ಸಂಬಂಧವನ್ನು ಉಳಿಸಿಕೊಳ್ಳುವಲ್ಲಿ ದೈಹಿಕ ಅನ್ಯೋನ್ಯತೆಯು ಬಹಳ ಮುಖ್ಯವಾಗಿರುವುದರಿಂದ ದಂಪತಿಗಳು ತಮ್ಮ ಲೈಂಗಿಕ ಜೀವನದಲ್ಲಿ(sex life) ಸ್ಮಾರ್ಕ್ ಇರುವಂತೆ ನೋಡಿಕೊಳ್ಳಬೇಕು. ಎಲ್ಲಾ ವಿವಾಹಿತ ದಂಪತಿಗಳು ತಮ್ಮ ಲೈಂಗಿಕ ಜೀವನದಲ್ಲಿ ಖಂಡಿತವಾಗಿಯೂ ಮಾಡಬೇಕಾದ ಕೆಲವು ಬದಲಾವಣೆಗಳ ಬಗ್ಗೆ ಇಲ್ಲಿ ನೀಡಲಾಗಿದೆ.

ಸೆಕ್ಸ್ ಗೆ ಸಮಯವನ್ನು ನಿಗದಿಪಡಿಸಿ (fix time for sex)
ನೀವು ಮತ್ತು ನಿಮ್ಮ ಸಂಗಾತಿಗೆ ಲೈಂಗಿಕತೆಗೆ ಎಂದಿಗೂ ಸಮಯವಿಲ್ಲ ಎಂದು ತೋರಿದರೆ, ನೀವು ಸೆಕ್ಸ್ ಗೆ ಸಮಯ ನಿಗದಿಪಡಿಸಬೇಕು! ಇದು ವಿಚಿತ್ರ ಎಂದು ನಿಮಗೆ ಅನಿಸಬಹುದು. ಆದರೆ ಇದು ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯ ಲೈಂಗಿಕ ಜೀವನವನ್ನು ಮತ್ತೆ ಸರಿಹಾದಿಗೆ ತರಲು ನೆರವಾಗಬಹುದು. ನೀವು ಸೆಕ್ಸ್ ಗೆ ಸಮಯವನ್ನು ನಿಗದಿಪಡಿಸಿದಾಗ, ಇತರ ವಿಷಯಗಳು ನಿಮಗೆ ತೊಂದರೆ ನೀಡುವುದಿಲ್ಲ ಏಕೆಂದರೆ ನಿಮ್ಮ ಮನಸ್ಸನ್ನು ಇದರ ಮೇಲೆ ಕೇಂದ್ರೀಕರಿಸುತ್ತೀರಿ.

Tap to resize

ಸೆಕ್ಸ್ ಹಿಂದೆ ಓಡಬೇಡಿ 
ಯಾವಾಗಲೂ ಸೆಕ್ಸ್, ಸೆಕ್ಸ್ ಎಂದು ಸಂಗಾತಿಯ ಹಿಂದೆ ಬೀಳಬೇಡಿ (do not rush towards sex). ನಿಮ್ಮ ಸಂಗಾತಿಗೆ ಲೈಂಗಿಕತೆಯಲ್ಲಿ ಆಸಕ್ತಿ ಇಲ್ಲದಿದ್ದರೆ ಮತ್ತು ನಿಮಗೆ ಇದ್ದರೆ, ಸೆಕ್ಸ್ ಗಾಗಿ ನಿಮ್ಮ ಸಂಗಾತಿಯನ್ನು ಕಾಡುವುದನ್ನು ತಪ್ಪಿಸಿ. ನೀವು ಅವರನ್ನು ಪದೇ ಪದೇ ಕೇಳುವ ಬದಲು ಅವರು ಸ್ವಂತವಾಗಿ ಸೆಕ್ಸ್ ಬಗ್ಗೆ ಆಸಕ್ತಿ ಹೊಂದಲು ಬಿಡಿ. ನಿಮ್ಮ ಸಂಗಾತಿಯು ಕೆಲವೊಮ್ಮೆ ಸೆಕ್ಸ್ ಗೆ ಸಿದ್ಧವಾಗಿರದೇ ಇರಬಹುದು. ನೀವು ಒತ್ತಾಯಿಸಿದರೆ ಜಗಳಕ್ಕೆ ಕಾರಣವಾಗಬಹುದು.

ಸೆಕ್ಸ್ ಎಂದರೆ ಕಿಸ್, ಹಗ್ ಕೂಡ ಹೌದು…
ಪಿನೆಟ್ರೇಶನ್ (penetration) ಮಾತ್ರ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಅಂತಿಮ ಗುರಿಯಾಗಬಾರದು. ಫೋರ್ ಪ್ಲೇ, ಓರಲ್ ಸೆಕ್ಸ್ ಮತ್ತು ಸರಳ ಚುಂಬನ ಮತ್ತು ಸ್ಪರ್ಶದ ಮೂಲಕವೂ ನೀವು ರೊಮ್ಯಾನ್ಸ್ ಮಾಡಬಹುದು. ನಿಮ್ಮ ಸೆಕ್ಸ್ ಡೈರಿಯಲ್ಲಿ ಫೋರ್ ಪ್ಲೇ ಸೇರಿಸುವುದು ಪಿನೆಟ್ರೇಶನ್ ನ್ನು ಹೆಚ್ಚು ಸುಲಭಗೊಳಿಸಲು ಉತ್ತಮ ಮಾರ್ಗವಾಗಿದೆ ಏಕೆಂದರೆ ಇದು ಸೆಕ್ಸ್ ನ್ನು ನೋವುರಹಿತ ಮತ್ತು ಹೆಚ್ಚು ಆನಂದದಾಯಕವಾಗಿಸುತ್ತದೆ.
 

Image: Getty Images

ಡೇಟ್ ನೈಟ್ಸ್ ಗೆ ಹೋಗಿ (date night)
ದಂಪತಿಗಳು ತಮ್ಮ ದಾಂಪತ್ಯದಲ್ಲಿ ಕಿಡಿಯನ್ನು ಜೀವಂತವಾಗಿಡಲು ಡೇಟ್ ನೈಟ್ಸ್ ನಿಜವಾಗಿಯೂ ಬಹಳ ಮುಖ್ಯ. ಇದು ರೊಮ್ಯಾಂಟಿಕ್, ವಿನೋದ ಮತ್ತು ಸ್ವಯಂಪ್ರೇರಿತ ಡೇಟ್ ನೈಟ್ ಆಗಿದ್ದಾಗ, ಕಪಲ್ಸ್ ನಿಜವಾಗಿಯೂ ಒಬ್ಬರ ಸಂಗವನ್ನು ಇನ್ನೊಬ್ಬರು ಎಂಜಾಯ್ ಮಾಡಬಹುದು. ಪುರುಷರು ಮತ್ತು ಮಹಿಳೆಯರಲ್ಲಿ ಭಾವನೆಗಳು ಮತ್ತು ಪ್ರಚೋದನೆಯನ್ನು ಉತ್ತೇಜಿಸುವಲ್ಲಿ ಪರಿಸರವು ದೊಡ್ಡ ಅಂಶವಾಗಿದೆ.

ನಿಯಂತ್ರಣ ತೆಗೆದುಕೊಳ್ಳಿ (take control)
ಕೆಲವೊಮ್ಮೆ, ನಿಮ್ಮ ಸಂಗಾತಿಯು ಸೆಕ್ಸ್ ಪ್ರಾರಂಭಿಸದಿದ್ದರೆ ನೀವೇ ಕಂಟ್ರೋಲ್ ತೆಗೆದುಕೊಳ್ಳುವುದು ಉತ್ತಮ.ನೀವೇ ಮುಂದಾದಾಗ, ಅದು ಸಕ್ಸಸ್ ಆಗಿಲ್ಲ ಅಂದ್ರೆ ಯೋಚನೆ ಮಾಡಬೇಡಿ. ನಿಧಾನವಾಗಿ ಮುಂದುವರೆದರೆ ಎಲ್ಲವೂ ಚೆನ್ನಾಗಿ ಆಗುತ್ತದೆ, ಇದರಿಂದ ವೈವಾಹಿಕ ಜೀವನವೂ ಚೆನ್ನಾಗಿರುತ್ತದೆ. 
 

ಪ್ರೀತಿ, ಸ್ನೇಹ, ವಾತ್ಸಲ್ಯ ಮುಖ್ಯ
ನೀವು ಮತ್ತು ನಿಮ್ಮ ಸಂಗಾತಿ ವಾತ್ಸಲ್ಯದಿಂದ (affectionate) ಇರುವುದನ್ನು ಅಭ್ಯಾಸ ಮಾಡಬೇಕು ಏಕೆಂದರೆ ಅದು ದಾಂಪತ್ಯದಲ್ಲಿ ಕಳೆದುಹೋದ ಅನ್ಯೋನ್ಯತೆಯನ್ನು ಮರಳಿ ತರುತ್ತದೆ. ನೀವಿಬ್ಬರೂ ಮೈಮರೆಯುವಂತೆ ಸ್ಪರ್ಶಿಸಿದಾಗ, ಹಿಡಿದಾಗ ಅಥವಾ ಚುಂಬಿಸಿದಾಗ, ಇಬ್ಬರ ನಡುವೆ ಫೋರ್ಪ್ಲೇ ಮತ್ತು ಸೆಕ್ಸ್ ಸುಲಭವಾಗಿ ನಡೆಯುತ್ತೆ. ಇದು ವೈವಾಹಿಕ ಜೀವನದಲ್ಲಿ ರೋಮ್ಯಾನ್ಸ್ ಹೆಚ್ಚಲು ಸಹಾಯ ಮಾಡುತ್ತೆ. 

Latest Videos

click me!