ಉದ್ಯೋಗ, ಅಧ್ಯಯನ ಮತ್ತು ಇನ್ನೇನೋ ಕಾರಣಗಳಿಂದ ಅನೇಕ ಜೋಡಿಗಳು ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್ ನಲ್ಲಿ (long distance relationship) ವಾಸಿಸುತ್ತಾರೆ.ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್ ಬಗ್ಗೆ ಮಾತನಾಡುವುದು ಸುಲಭ, ಆದರೆ ಅಂತಹ ಸಂಬಂಧವನ್ನು ಉಳಿಸಿಕೊಳ್ಳೋದು ಕಷ್ಟ. ಸಂಗಾತಿ ನಡುವೆ ಸಾಕಷ್ಟು ಅಂತರವಿರುವ ಕಾರಣದಿಂದಾಗಿ, ಜಗಳ ಕೂಡ ಆಗೋ ಸಾಧ್ಯತೆ ಹೆಚ್ಚು. ಹಾಗಿದ್ರೆ ಈ ಲಾಂಗ್ ಡಿಸ್ಟನ್ಸ್ ರಿಲೇಶನ್‌ಶಿಪ್‌ನಲ್ಲಿ ಬರೋ ಜಗಳವನ್ನು ದೂರ ಮಾಡೊದು ಹೇಗೆ? ನೋಡೋಣ.
ಪ್ರತಿದಿನ ಮಾತನಾಡಿ (talk everyday)
ದೂರದ ಸಂಬಂಧದಲ್ಲಿ, ಸಂಗಾತಿಯ ಭೇಟಿ ತುಂಬಾ ಕಡಿಮೆ. ಅಂತಹ ಪರಿಸ್ಥಿತಿಯಲ್ಲಿ, ಸಂಬಂಧ ಗಟ್ಟಿಗೊಳಿಸಲು, ಪ್ರತಿದಿನ ನಿಮ್ಮ ದಿನನಿತ್ಯದ ಆಗುಹೋಗುಗಳನ್ನು ಸಂಗಾತಿ ಜೊತೆ ಹಂಚಿಕೊಳ್ಳುವುದು ಮುಖ್ಯ.. ಇದು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಬಂಧವನ್ನು ಉತ್ತಮವಾಗಿರಿಸುತ್ತದೆ ಮತ್ತು ಜಗಳವಾಡುವ ಸಾಧ್ಯತೆಗಳನ್ನು ಸ್ವಲ್ಪ ಕಡಿಮೆ ಮಾಡುತ್ತದೆ.
ಪರಸ್ಪರರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಿ (understand the feelings)
ಇಬ್ಬರು ವಿಭಿನ್ನ ವ್ಯಕ್ತಿಗಳು ಯಾವುದೇ ವಿಷಯದ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳನ್ನು ಹೊಂದಬಹುದು. ಹೀಗಿರೋವಾಗ ಮ್ಮ ಸಂಗಾತಿಯನ್ನು ನೀವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಒಂದು ವೇಳೆ ಸಂಗಾತಿ ಕೋಪಗೊಂಡಿದ್ದರೆ, ಅವರು ಶಾಂತವಾಗುವವರೆಗೆ ನೀವು ಅವರ ಮಾತನ್ನು ಕೇಳಬೇಕು ಮತ್ತು ಶಾಂತಗೊಂಡ ನಂತರ ನಿಮ್ಮ ಭಾಗವನ್ನು ವಿವರಿಸಲು ಪ್ರಯತ್ನಿಸಬೇಕು.
ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ (know each other)
ಹೆಚ್ಚಿನ ಸಂಬಂಧಗಳಲ್ಲಿ ಜಗಳದ ಹಿಂದಿನ ಕಾರಣವೆಂದರೆ ಪರಸ್ಪರ ಅರ್ಥಮಾಡಿಕೊಳ್ಳದಿರುವುದು. ನಿಮ್ಮ ಸಂಗಾತಿಯ ಯಾವುದೇ ವಿಷಯದ ಬಗ್ಗೆ ಕೋಪಗೊಳ್ಳುವ ಮೊದಲು, ಅವರು ಯಾಕೆ ಹಾಗೆ ಹೇಳುತ್ತಾರೆ, ಮಾಡುತ್ತಾರೆ ಎಂದು ಯೋಚಿಸಿ. ಅನೇಕ ಬಾರಿ, ಕರೆಗಳು / ಸಂದೇಶಗಳನ್ನು ನಿರ್ಲಕ್ಷಿಸುವುದು ಜಗಳಕ್ಕೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ.
ಸಂದೇಹ ಪಡಬೇಡಿ (no place for doubt)
ಲಾಂಗ್ ಡಿಸ್ಟನ್ಸ್ ಇರುವಾಗ ಪರಸ್ಪರ ನಂಬಿಕೆ ಇರೋದು ಮುಖ್ಯ. ಪರಸ್ಪರ ಸಂಶಯ ಇರಲೇಬಾರದು. ನೀವು ನಿಮ್ಮ ಸಂಗಾತಿಯನ್ನು ಅನುಮಾನಿಸುತ್ತಿದ್ದರೆ, ಅದು ಸಂಬಂಧದಲ್ಲಿ ವಿಶ್ವಾಸದ ಸಮಸ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಜಗಳ ಹೆಚ್ಚಾಗಲು ಪ್ರಾರಂಭಿಸುತ್ತದೆ.
ಆನ್ ಲೈನ್ ಡೆಟಿಂಗ್ ಮಾಡಿ (online dating)
ಇಬ್ಬರೂ ದೂರ ದೂರ ಇರುವಾಗ ಪರಸ್ಪರ ಜೊತೆಯಾಗಿ ಸಮಯ ಕಳೆಯಲು ಸಾಧ್ಯವಾಗೋದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಆನ್ ಲೈನ್ ಡೇಟಿಂಗ್ ಮಾಡಬಹುದು. ಇಬ್ಬರೂ ನಿವಿದ್ದೆಡೆ ಕೋಣೆಯನ್ನು ವಿಶೇಷವಾಗಿ ಸಿಂಗರಿಸಿ, ವಿಡಿಯೋ ಕಾಲ್ ಮೂಲಕ ಜೊತೆಯಾಗಿ ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿ.