ಸಾಮಾನ್ಯವಾಗಿ ತಂದೆ ತಾಯಂದಿರು ಹೇಳುವ ಮಾತುಗಳನ್ನು ಬುದ್ಧಿವಂತಿಕೆಯಿಂದ ಕೇಳುವ ಮಕ್ಕಳು ಭವಿಷ್ಯದಲ್ಲಿ ಒಳ್ಳೆಯ ಸ್ಥಾನದಲ್ಲಿ ಇರುತ್ತಾರೆಂದು ದೊಡ್ಡವರು ಹೇಳುತ್ತಾರೆ. ತಂದೆ ತಾಯಂದಿರು ಕೂಡ ಮಕ್ಕಳು ತಾವು ಹೇಳಿದ ಹಾಗೆ ಕೇಳಬೇಕೆಂದು ಬಯಸುತ್ತಾರೆ. ಆದರೆ ಕೆಲ ಮಕ್ಕಳು ಪೇರೆಂಟ್ಸ್ ಮಾತು ಸ್ವಲ್ಪವೂ ಕೇಳುವುದಿಲ್ಲ. ಮಕ್ಕಳು ಯಾವಾಗಲೂ ತಂದೆ ತಾಯಿಯ ಮಾತು ಕೇಳದಿದ್ದರೆ ಅದಕ್ಕೆ ಕೆಲವು ವಿಷಯಗಳು ಕಾರಣವಾಗಿರಬಹುದು. ಅದೆನೋ ಅಂತ ಇಲ್ಲಿ ನೋಡೋಣ.
ಕೊಟ್ಟ ಮಾತು..
ತುಂಬಾ ಜನ ತಂದೆ ತಾಯಂದಿರು ಮಕ್ಕಳಿಗೆ ಕೊಟ್ಟ ವಾಗ್ದಾನಗಳನ್ನು ನೆರವೇರಿಸುವುದಿಲ್ಲ. ಹೇಳುವುದು ಒಂದು ಮಾಡುವುದು ಇನ್ನೊಂದು ಆಗಿರುತ್ತದೆ ಇದರಿಂದ ಮಕ್ಕಳು ತಂದೆ ತಾಯಂದಿರು ಹೇಳುವುದು ಮಾಡುವುದಿಲ್ಲ ಎಂದು ನಂಬಲು ಶುರು ಮಾಡ್ತಾರೆ. ಆದ್ದರಿಂದ ಮಕ್ಕಳಿಗೆ ಏನಾದರೂ ಮಾತು ಕೊಟ್ಟರೆ.. ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ.
ಒಂಟಿತನ
ಮಕ್ಕಳು ಹಸಿವು, ನಿದ್ರೆ, ಒಂಟಿತನ, ಬೇಸರ, ಕೋಪದಂತಹ ಭಾವನೆ ಅನುಭವಿಸಿದಾಗ ತಂದೆ ತಾಯಿಯ ಮಾತು ಕೇಳುವುದಿಲ್ಲ. ಇದರಿಂದ ತಂದೆ ತಾಯಿಯ ಕಂಟ್ರೋಲ್ ಅಲ್ಲಿ ಮಕ್ಕಳು ಇಲ್ಲ ಅಂತ ಅನಿಸಬಹುದು. ಆದರೆ ತಂದೆ ತಾಯಿಯ ಪ್ರೀತಿ, ವಾತ್ಸಲ್ಯ ಅವರನ್ನು ಬದಲಾಯಿಸುತ್ತವೆ.
ಬಲವಂತ ಮಾಡುವುದು
ಮಕ್ಕಳನ್ನು ಬಲವಂತ ಮಾಡುವುದರಿಂದ ಅವರು ಮಾತು ಕೇಳದ ಮಕ್ಕಳಾಗಿ ಬೆಳೆಯುತ್ತಾರೆ. ಹಾಗೆಯೇ ಅವರು ಹೇಳುವುದೆಲ್ಲಾ ಮಾಡುವ ತಂದೆ ತಾಯಂದಿರು ಇದ್ದರೂ ಸ್ವಲ್ಪ ಕಷ್ಟವೇ. ಮಕ್ಕಳಿಗೆ ಕೆಲವು ಸಲ ನೋ ಎಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ
ಪ್ರಾಮುಖ್ಯತೆ ಕೊಡಬೇಕು
ಮಕ್ಕಳಿಗೆ ವಿಶೇಷವಾದ ಇಷ್ಟಗಳು ಕೆಲವು ಇರುತ್ತವೆ. ತಂದೆ ತಾಯಂದಿರು ಅವುಗಳನ್ನು ಖಂಡಿತವಾಗಿ ಗುರುತಿಸಬೇಕು. ತಂದೆ ತಾಯಂದಿರು ಕೆಲಸಕ್ಕೆ ಹೋಗುವುದು, ದುಡ್ಡು ಸಂಪಾದಿಸುವುದು, ಮಕ್ಕಳಿಗೆ ಬೇಕಾದ್ದು ಕೊಡುವುದೇ ಅಲ್ಲ. ಅವರ ಜೊತೆ ಪ್ರೀತಿಯಿಂದ ಇರಬೇಕು. ಅವರ ಪ್ರಾಮುಖ್ಯತೆಗಳನ್ನು ತಿಳಿದುಕೊಳ್ಳಬೇಕು.
ಬಲವಾದ ಬಾಂಧವ್ಯ
ಈ ವಿಷಯಗಳಲ್ಲಿ ಯಾವುದಾದರೂ ಒಂದು ನೀವು ಮಾಡುತ್ತಿದ್ದರೆ ಅದನ್ನು ಬದಲಾಯಿಸಿಕೊಳ್ಳುವುದು ಒಳ್ಳೆಯದು. ನಿಮ್ಮ ಮಕ್ಕಳ ಹಾಗೂ ನಿಮಗೆ ಮಧ್ಯೆ ಬಾಂಧವ್ಯ ಬಲವಾಗಿ ಇದ್ದಾಗ ಮಾತ್ರ ಅವರು ನಿಮ್ಮ ಮಾತಿಗೆ ಬೆಲೆ, ಗೌರವ ಕೊಡ್ತಾರೆ.