International Day Of Families 2022: ಕುಟುಂಬದ ಜೊತೆ ಹಂಚಿಕೊಳ್ಳಲು ಶುಭಾಶಯಗಳು ಮತ್ತು ಸಂದೇಶಗಳು

Published : May 15, 2022, 09:47 AM ISTUpdated : May 15, 2022, 09:51 AM IST

ಪ್ರತಿಯೊಬ್ಬರ ಜೀವನ (Life)ದಲ್ಲೂ ಕುಟುಂಬಕ್ಕೆ ಹೆಚ್ಚಿನ ಮಹತ್ವವಿದೆ. ತಂದೆ-ತಾಯಿ, ಮಕ್ಕಳು, ಅಣ್ಣ-ತಂಗಿ ಎಲ್ಲವೂ ಅತ್ಯಮೂಲ್ಯ ಸಂಬಂಧಗಳಾಗಿವೆ. ಕುಟುಂಬ ಸದಸ್ಯರು ಖುಷಿಯಲ್ಲಿ, ದುಃಖದಲ್ಲಿ ಜೊತೆಯಾಗಿರುತ್ತಾರೆ. ಹೀಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ (Indian Culture) ಫ್ಯಾಮಿಲಿ (Family) ಹೆಚ್ಚು ಮಹತ್ವವವನ್ನುಪಡೆದುಕೊಳ್ಳುತ್ತದೆ.

PREV
15
International Day Of Families 2022: ಕುಟುಂಬದ ಜೊತೆ ಹಂಚಿಕೊಳ್ಳಲು  ಶುಭಾಶಯಗಳು ಮತ್ತು ಸಂದೇಶಗಳು

ಸ್ನೇಹಪರ ಕುಟುಂಬವನ್ನು ಹೊಂದಿರುವುದು ವ್ಯಕ್ತಿಯ ಪ್ರಮುಖ ಮಾನಸಿಕ (Mental) ಅಗತ್ಯಗಳಲ್ಲಿ ಒಂದಾಗಿದೆ. ಫ್ಯಾಮಿಲಿ ನಮ್ಮ ಖುಷಿಯಲ್ಲಿ, ದುಃಖದಲ್ಲಿ ಒಂದಾಗಿ ಜೊತೆಗೆ ನಿಂತು ಸಾಥ್ ನೀಡುತ್ತದೆ.ಹೀಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ (Indian Culture) ಫ್ಯಾಮಿಲಿ (Family) ಹೆಚ್ಚು ಮಹತ್ವವ ಪಡೆದುಕೊಳ್ಳುತ್ತದೆ.

25

ಯುಎನ್ ಜನರಲ್ ಅಸೆಂಬ್ಲಿ, ಕುಟುಂಬ ಮೌಲ್ಯಗಳಿಗೆ ಬೆಂಬಲವಾಗಿ, ಮೇ 15, 1993ರಂದು ಅಂತಾರಾಷ್ಟ್ರೀಯ ಕುಟುಂಬ  ದಿನವನ್ನು ಸ್ಥಾಪಿಸಿತು. ಅಂದಿನಿಂದ, ಈ ದಿನಾಂಕವನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ.

35

ಅಂತಾರಾಷ್ಟ್ರೀಯ ಕುಟುಂಬಗಳ ದಿನ (International Day Of Family )ವನ್ನು ಪ್ರತಿ ವರ್ಷ ಮೇ 15ರಂದು ಆಚರಿಸಲಾಗುತ್ತದೆ. ಇದು ಪ್ರಭಾವ ಬೀರುವ ಸಾಮಾಜಿಕ ಮತ್ತು ಆರ್ಥಿಕ ರಚನೆಗಳ ಬದಲಾವಣೆಯ ನಡುವೆ ಪ್ರಪಂಚದಾದ್ಯಂತ ಕುಟುಂಬಗಳು, ಸಮಾಜಗಳು ಮತ್ತು ಸಂಸ್ಕೃತಿಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ. 

45

ಸಂತೋಷದ (Happy) ಕುಟುಂಬವು ಸಂತೋಷದ ಸಮಾಜದ (Society) ಆಧಾರಸ್ತಂಭವಾಗಿದೆ. ನಾವೆಲ್ಲರೂ ಒಗ್ಗೂಡಿ ನಮ್ಮ ಪ್ರೀತಿ ಮತ್ತು ಸಹೋದರತ್ವದಿಂದ ಕುಟುಂಬದ ಸೌಹಾರ್ದತೆಯನ್ನು ಉಳಿಸೋಣ. ಪರಿಪೂರ್ಣ ಕುಟುಂಬ ಎಂಬುದೇ ಇಲ್ಲ. ಕುಟುಂಬ ಸದಸ್ಯರು ಮಾಡುವ ತಪ್ಪನ್ನು ಸರಿಪಡಿಸುತ್ತಾ ಯಾವಾಗಲೂ ಒಗ್ಗಟ್ಟಾಗಿರಬೇಕು.

55

ಅಂತಾರಾಷ್ಟ್ರೀಯ ಕುಟುಂಬ ದಿನದ ಸಂದೇಶಗಳು
ವಿಶ್ವ ಶಾಂತಿಯನ್ನು ಉತ್ತೇಜಿಸಲು ನೀವು ಏನು ಮಾಡಬಹುದು. ಮನೆಗೆ ಹೋಗಿ ಮತ್ತು ನಿಮ್ಮ ಕುಟುಂಬವನ್ನು ಪ್ರೀತಿಸಿ- ಮದರ್ ತೆರೇಸಾ

ಕುಟುಂಬ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು, ಆದರೆ ಕುಟುಂಬಕ್ಕಿಂತ ಏನೂ ಮುಖ್ಯವಲ್ಲ-ಕೊಕೊ

ಸಂತೋಷದ ಕುಟುಂಬವು ಸ್ವರ್ಗಕ್ಕಿಂತ ಮಿಗಿಲು- ಜಾರ್ಜ್ ಬರ್ನಾರ್ಡ್ ಶಾ

Read more Photos on
click me!

Recommended Stories