ವಿಶ್ವದ ಲೈಂಗಿಕ ತೃಪ್ತಿಯ ಟಾಪ್ 10 ದೇಶಗಳ ಪಟ್ಟಿ ಪ್ರಕಟ, ಭಾರತಕ್ಕೆ ಎಷ್ಟನೇ ಸ್ಥಾನ?

Published : Jan 26, 2026, 09:07 PM IST

ವಿಶ್ವದ ಲೈಂಗಿಕ ತೃಪ್ತಿಯ ಟಾಪ್ 10 ದೇಶಗಳ ಪಟ್ಟಿ ಪ್ರಕಟ, ಈ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಕೆಲ ಅಚ್ಚರಿ ಸತ್ಯಗಳು ಹೊರಬಂದಿದೆ. ಲೈಂಗಿಕ ತೃಪ್ತಿ, ರೋಮ್ಯಾನ್ಸ್ ಲೈಫ್‌ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ.

PREV
15
ಸರ್ವೆಯಲ್ಲಿ ಅಚ್ಚರಿ ಮಾಹಿತಿ ಬಯಲು

ಮದುವೆ, ದಾಂಪತ್ಯ ಜೀವನ ಪ್ರತಿ ದೇಶದ ಪ್ರಗತಿಯಲ್ಲೂ ಕೊಡುಗೆ ನೀಡುತ್ತದೆ. ಇತ್ತೀಚಿಗೆನ ಟ್ರೆಂಡ್‌ಗಳಲ್ಲಿ ಮದುವೆ ಹಾಗೂ ಡಿವೋರ್ಸ್ ಹೆಚ್ಚಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಇದರ ನಡುವೆ ಹಲವು ಸಂಸ್ಥೆಗಳು ಮದುವೆ, ಜೀವನ, ಪ್ರೀತಿ, ಲೈಂಗಿಕತೆ ಸೇರಿದಂತೆ ಹಲವು ವಿಚಾರಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಿದೆ. ಇದೀಗ ಲೈಂಗಿಕ ತೃಪ್ತಿ ದೇಶಗಳ ಪಟ್ಟಿ ಬಿಡುಗಡೆಯಾಗಿದೆ.

25
ರೊಮ್ಯಾಂಟಿಕ್ ಲೈಫ್‌ನಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

ಇದು ಅಚ್ಚರಿಯಾದರೂ ಸತ್ಯ. ರೊಮ್ಯಾಂಟಿಕ್ ಲೈಫ್, ಲೈಂಗಿಕ ತೃಪ್ತಿ ದೇಶಗಳಲ್ಲಿ ಭಾರತಕ್ಕೆ ಮೊದಲ ಸ್ಥಾನ. ಈ ಅಧ್ಯಯನ ವರದಿ ಪ್ರಕಾರ ಭಾರತದಲ್ಲಿ ಅತೀ ಹೆಚ್ಚಿನ ಜೋಡಗಳು ಲೈಂಗಿಕ ತೃಪ್ತಿ ಹೊಂದಿದೆ ಎಂದಿದೆ. ಭಾರತದಲ್ಲಿ ಶೇಕಡಾ 88 ರಷ್ಟು ಜನ ಲೈಂಗಿಕ ತೃಪ್ತಿ ಇದೆ ಎಂದಿದ್ದಾರೆ ಎಂದು ಅಧ್ಯಯನ ವರದಿ ಹೇಳಿದೆ.

35
ಸಂಬಂಧಗಳಿಗೆ ಮಹತ್ವ

ಭಾರತದಲ್ಲಿ ಸಂಬಂಧಗಳಿಗೆ ಅತೀವ ಮಹತ್ವ ನೀಡಲಾಗುತ್ತದೆ. ಜೊತೆಗೆ ಪ್ರತಿ ಸಂಬಂಧಗಳನ್ನು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಭಾರತದಲ್ಲಿ ಜೋಡಿಗಳ ಲೈಂಗಿಕ ತೃಪ್ತಿಯೂ ಹೆಚ್ಚಿದೆ ಎಂದು ವರದಿ ಹೇಳುತ್ತಿದೆ. ಈ ವರದಿ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಯಾವ ಆಧಾರದಲ್ಲಿ ಈ ವರದಿ ತಯಾರಿಸಲಾಗಿದೆ ಎಂದು ಹಲವರು ಪ್ರಶ್ನಿಸಿದ್ದಾರೆ. ಇತ್ತ ಕೆಲವರು ಇದೇ ಕಾರಣದಿಂದ ಭಾರತ ಜನಸಂಖ್ಯೆಯಲ್ಲಿ ನಂಬರ್ 1 ಎಂದು ಕಿಚಾಯಿಸಿದ್ದಾರೆ.

45
ಲೈಂಗಿಕ ತೃಪ್ತಿಯ ಟಾಪ್ 10 ದೇಶ
  • ಭಾರತ
  • ಮೆಕ್ಸಿಕೋ
  • ಬ್ರೆಜಿಲ್
  • ಫಿಲಿಪೈನ್ಸ್
  • ಕೊಲೊಂಬಿಯಾ
  • ಸೌತ್ ಆಫ್ರಿಕಾ
  • ಚೀನಾ
  • ಆಸ್ಟ್ರೇಲಿಯಾ
  • ಸ್ಪೇನ್
  • ಗ್ರೀಸ್
55
ಡಿವೋರ್ಸ್ ರೇಟ್ ಅತೀ ಕಡಿಮೆ

ವಿಶ್ವದಲ್ಲಿ ಅತೀ ಕಡಿಮೆ ಡಿವೋರ್ಸ್ ರೇಟ್ ಅಂದರೆ ಅತೀ ಕಡಿಮೆ ವಿಚ್ಚೇದನ ಆಗತ್ತಿರುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಭಾರತದ ಡಿವೋರ್ಸ್ ರೇಟ್ ಸಾವಿರಕ್ಕೆ 0.01. ಈ ಮೂಲಕ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಡಿವೋರ್ಸ್ ಪ್ರಮಾಣ ಕೂಡ ಕಡಿಮೆ.

ಡಿವೋರ್ಸ್ ರೇಟ್ ಅತೀ ಕಡಿಮೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories