ಭಾರತದಲ್ಲಿ ವೀರ್ಯ ದಾನದಿಂದ ಎಷ್ಟು ಹಣ ಸಿಗುತ್ತೆ? ದಾನಿಯ ಫೀ ಹೆಚ್ಚಾಗೋದು ಹೇಗೆ?

Published : Jun 13, 2025, 08:31 PM IST

Cost for Sperm Donation: ವೀರ್ಯದಾನದ ಕುರಿತು ಭಾರತ ಮತ್ತು ವಿದೇಶಗಳಲ್ಲಿನ ವ್ಯತ್ಯಾಸ, ಸಂಭಾವನೆ ಮತ್ತು ಸಾಮಾಜಿಕ ದೃಷ್ಟಿಕೋನಗಳನ್ನು ಈ ಲೇಖನವು ಹೋಲಿಸುತ್ತದೆ. ಭಾರತದಲ್ಲಿ ವೀರ್ಯದಾನಕ್ಕೆ ಸಿಗುವ ಸಂಭಾವನೆ ಮತ್ತು ವಿದೇಶಗಳಲ್ಲಿ ಲಕ್ಷಾಂತರ ರೂಪಾಯಿಗಳ ಸಂಪಾದನೆಯ ಅವಕಾಶಗಳನ್ನು ಚರ್ಚಿಸಲಾಗಿದೆ.

PREV
18

2012ರಲ್ಲಿ ಬಿಡುಗಡೆಯಾದ 'ವಿಕ್ಕಿ ಡೋನರ್' ಸಿನಿಮಾ ವೀರ್ಯದಾನದ ಕುರಿತು ಸಮಾಜದಲ್ಲಿ ಬೆಳಕು ಚೆಲ್ಲಿತ್ತು. ಇಂದಿಗೂ ಸಮಾಜದಲ್ಲಿ ವೀರ್ಯದಾನದ ಕುರಿತು ಅನೇಕ ತಪ್ಪು ಕಲ್ಪನೆಗಳಿವೆ. ಆದ್ರೆ ಅಮೆರಿಕ, ಯುರೋಪ್ ರಾಷ್ಟ್ರಗಳಲ್ಲಿ ಯುವಕರು ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ.

28

ವಿದೇಶಗಳಲ್ಲಿ ವೀರ್ಯದಾನವನ್ನು ಉತ್ತಮ ಸಂಬಳದ ವೃತ್ತಿ ಎಂದು ಪರಿಗಣಿಸಲಾಗುತ್ತದೆ. ಇತ್ತೀಚೆಗೆ ಓರ್ವ ವ್ಯಕ್ತಿ ಭಾರತ ಮತ್ತು ವಿದೇಶಗಳಲ್ಲಿನ ವೀರ್ಯದಾನದ ನಡುವಿನ ವ್ಯತ್ಯಾಸ ಏನು ಎಂದು ವಿವರಿಸಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

38

ಭಾರತದಲ್ಲಿ ವೀರ್ಯದಾನವನ್ನು ತಪ್ಪು ಕಲ್ಪನೆ ಎಂಬ ಭಾವನೆಯಿಂದ ನೋಡಲಾಗುತ್ತದೆ. ವಿದೇಶಗಳಲ್ಲಿ ಜನರು ತಮ್ಮನ್ನು ವೀರ್ಯದಾನಿ ಎಂದು ಹೇಳಿಕೊಳ್ಳುತ್ತಾರೆ. ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಸಹ ವೀರ್ಯದಾನಿಯಾಗಿದ್ದಾರೆ. ಆದ್ರೆ ಭಾರತದಲ್ಲಿ ವೀರ್ಯದಾನವನ್ನು ಬಹುತೇಕರು ನಕಾರಾತ್ಮಕ ಭಾವನೆಯಿಂದ ನೋಡುತ್ತಾರೆ.

48

ಭಾರತದಲ್ಲಿ ಎಷ್ಟು ಹಣ ಸಿಗುತ್ತೆ?

ಕೆಲವು ನೋಂದಾಯಿತ ವೀರ್ಯ ಬ್ಯಾಂಕ್/ಸಂಗ್ರಹಕಾರರು ಮತ್ತು ಫಲವತ್ತತೆಯ ಚಿಕಿತ್ಸಾಲಯಗಳು ದಾನಿಗಳಿಗೆ ಉತ್ತಮ ಹಣವನ್ನು ಪಾವತಿಸುತ್ತವೆ. ಸಾಮಾನ್ಯವಾಗಿ ಭಾರತದಲ್ಲಿ ವೀರ್ಯದಾನಿಗಳು ಒಂದು ದಾನಕ್ಕೆ 500 ರೂ.ಗಳಿಂದ 2,000 ರೂ ಪಡೆಯುತ್ತಾರೆ. ವಾರಕ್ಕೆ ಎರಡು ಬಾರಿ ದಾನ ನೀಡಿದರೆ ತಿಂಗಳಿಗೆ 4 ರಿಂದ 8 ಸಾವಿರ ರೂಪಾಯಿ ಸಂಪಾದಿಸಬಹುದು.

58

ದಾನದ ಹಣ ಹೇಗೆ ನಿರ್ಧರಿತವಾಗುತ್ತೆ?

ಭಾರತದ ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ಮಹಾನಗರಗಳಲ್ಲಿ ವೀರ್ಯಕ್ಕೆ ಹೆಚ್ಚು ಬೇಡಿಕೆ ಇದೆ. ಒಂದು ವೇಳೆ ದಾನ ನೀಡುವ ವ್ಯಕ್ತಿ ಉನ್ನತ ಶಿಕ್ಷಣ (ಎಂಬಿಬಿಎಸ್/ಇಂಜಿನಿಯರಿಂಗ್) ಪಡೆದುಕೊಂಡಿದ್ದರೆ ಆತನಿಗೆ ಹೆಚ್ಚು ಹಣ ಪಾವತಿಸಲಾಗುತ್ತದೆ. ಅದರಲ್ಲಿಯೂ ಸುಂದರ, ವಿಶೇಷ ದೈಹಿಕ ಗುಣ, ಸದೃಢ ಮೈಕಟ್ಟು, ನೀಲಿ ಕಣ್ಣುಗಳು, ಉತ್ತಮ ಎತ್ತರ ಹೊಂದಿದ್ರೆ ಆತನ ದರ ಹೆಚ್ಚಾಗಬಹುದು ಎಂದು ವರದಿಯಾಗಿದೆ.

68

ವಿದೇಶಗಳಲ್ಲಿ ಸಿಗುವ ಹಣ ಎಷ್ಟು?

ಅಮೆರಿಕ, ಯುರೋಪ್ ಮತ್ತು ಆಸ್ಟ್ರೇಲಿಯಾಗಳಲ್ಲಿ ವೀರ್ಯದಾನವನ್ನು ಗೌರವಾನ್ವಿತ ಹುದ್ದೆ ಎಂದು ಪರಿಗಣಿಸಲಾಗುತ್ತದೆ. ವರದಿಗಳ ಪ್ರಕಾರ ಅಮೆರಿಕದ ಸಿಯಾಟಲ್ ವೀರ್ಯ ಬ್ಯಾಂಕ್ ಒಂದು ದಾನಕ್ಕೆ 100 ಡಾಲರ್ (ಅಂದಾಜು 8 ಸಾವಿರ ರೂ) ನೀಡುತ್ತದೆ. ಇಲ್ಲಿಯ ವೀರ್ಯದಾನಿಗಳು ತಿಂಗಳಿಗೆ 1.24 ಲಕ್ಷ ರೂಪಾಯಿ ಸಂಪಾದಿಸುತ್ತಾರೆ.

78

ಇನ್ನು ಕ್ಯಾಲಿಫೋರ್ನಿಯಾದಲ್ಲಿ ಒಂದು ದಾನಕ್ಕೆ 150 ಡಾಲರ್‌ವರೆಗೆ (12,600 ರೂ) ನೀಡುತ್ತದೆ. ಇನ್ನು ಯುರೋಪಿಯನ್ ವೀರ್ಯ ಬ್ಯಾಂಕ್‌ಗಳು €40 (₹3600) ನೀಡುತ್ತದೆ. ಕ್ರಯೋಸ್ ಇಂಟರ್‌ನ್ಯಾಷನಲ್‌ನಂತಹ ದೊಡ್ಡ ವೀರ್ಯ ಬ್ಯಾಂಕ್‌ಗಳು ಸಹ ಬೋನಸ್‌ಗಳು ಮತ್ತು ಹೆಚ್ಚುವರಿ ಪಾವತಿಸುತ್ತದೆ. ಇಲ್ಲಿಯ ದಾನಿಗಳು ತಿಂಗಳಿಗೆ 8 ಲಕ್ಷ ರೂಪಾಯಿಯವರೆಗೆ ಸಂಪಾದಿಸುತ್ತಾರೆ.

88

ವಿದೇಶಗಳಲ್ಲಿ ವೀರ್ಯ ದಾನಿಗಳು ಉಚಿತ ಆರೋಗ್ಯ ತಪಾಸಣೆ, ಫಲವತ್ತತೆ ಪರೀಕ್ಷೆ, ದೈಹಿಯ ಪರೀಕ್ಷೆಯಂತಹ ವಿಶೇಷ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ. ಇಲ್ಲಿ ದಾನಿಗಳ ಹೆಸರನ್ನು ಬಹಿರಂಹಪಡಿಸಲ್ಲ. ವಿದೇಶದಲ್ಲಿ ವೀರ್ಯ ದಾನದಿಂದ ಜನಿಸಿದ ಮಕ್ಕಳು 18 ವರ್ಷದ ನಂತರ ತಮ್ಮ ಜೈವಿಕ ತಂದೆಯನ್ನು ಭೇಟಿಯಾಗಬಹುದು. ಆದ್ರೆ ಮಕ್ಕಳಿಗೂ ಮತ್ತು ದಾನಿಯೂ ಯಾವುದೇ ಸಂಬಂಧ ಇರುವುದಿಲ್ಲ.

Read more Photos on
click me!

Recommended Stories