ಈ ಗುಣ ಪತಿಯಲ್ಲಿದ್ದರೇ ನೀವು ಲಕ್ಕಿ ಅನ್ನೋದರಲ್ಲಿ ಸಂಶಯ ಬೇಡ

First Published | Feb 21, 2021, 12:44 PM IST

ಮದುವೆ ಎಂಬ ಮೂರು ಅಕ್ಷರದಲ್ಲೇ ಜೀವನ ಅಡಗಿದಂತೆ ಅನಿಸುತ್ತದೆ. ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಅದರಲ್ಲಿಯೂ ಹೆಣ್ಣು ತಾನು ಹುಟ್ಟಿ ಬೆಳೆದ ಮನೆ, ಕುಟುಂಬ ತನ್ನವರು ಎಂಬ ಎಲ್ಲಾ ಸಂಬಂಧವನ್ನು ಬಿಟ್ಟು ಇನ್ನೊಂದು ಮನೆಗೆ ಜೀವನ ಪೂರ್ತಿ ಕಳೆಯಲು ಹೋಗಬೇಕು. ಆತ ನಿಮಗೆ ಸರಿಯಾದ ಸಂಗತಿಯಾದರೆ ಸರಿ, ಇಲ್ಲದೇ ಹೋದರೆ ಜೀವನ ಕಷ್ಟವಾಗಿರುತ್ತದೆ. ಆದರೆ ಆತ ಒಳ್ಳೆಯವನೇ ಇಲ್ಲವೇ? ತಿಳಿದುಕೊಳ್ಳುವುದು ಹೇಗೆ? 

ಈ ಗುಣಗಳು ಪತಿಯಲ್ಲಿದ್ದರೆ ಆತ ನಿಮಗೆ ತಕ್ಕುದಾದ ವ್ಯಕ್ತಿ ಎಂದರ್ಥ.
ಉತ್ತಮ ಸ್ನೇಹಿತನಂತೆ, ಹಿತೈಷಿಯಂತೆ ಎಲ್ಲಾ ಸಂದರ್ಭದಲ್ಲೂ ಪತ್ನಿಯ ಸಹಾಯಕ್ಕೆ ಬರುವಂತಹ ಗುಣವಿರಬೇಕು.
Tap to resize

ಆತನ ಮಾತಿನಲ್ಲಿ ತೂಕ, ಎಂದಿಗೂ ಕಡಿಮೆಯಾಗದ ಪ್ರೀತಿ ಅಥವಾ ಆತನ ಪತ್ನಿಗಾಗಿ ಮಾಡುವ ಸಣ್ಣ ಸಣ್ಣ ಕೆಲಸಗಳು ಸಹ ಹೃದಯಕ್ಕೆ ತಟ್ಟುವಂತಿದ್ದರೆ ಆತ ಬೆಸ್ಟ್.
ಪತ್ನಿ ತನ್ನ ಫ್ಯಾಮಿಲಿ ಜೊತೆ ಅಥವಾ ಫ್ರೆಂಡ್ಸ್‌ ಜೊತೆ ಸಮಯ ಕಳೆಯಲು ಬಯಸಿದಾಗ ಪತಿಯಾದ ಆತ ಎಲ್ಲದಕ್ಕೂ ಅಡ್ಡ ಬಾರದೆ ಆಕೆಗೆ ಆಕೆಯ ಅಮೂಲ್ಯ ಸಮಯ ಕಳೆಯಲು ಅವಕಾಶ ಮಾಡಿಕೊಡುವವನಾಗಿರಬೇಕು.
ಜೀವನದಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿ ಸಹಾಯ ಅಥವಾ ಬೆಂಬಲ ಬೇಕಾದಾಗ, ಅಥವಾ ಪತ್ನಿಗೆ ಕಷ್ಟ ಬಂದಾಗ, ಏನಾಗಿದೆ ಎಂಬುದನ್ನು ಅರಿತು ಪತ್ನಿಯ ಬೆನ್ನೆಲುಬಾಗಿ ನಿಲ್ಲವಂತಹ ಗುಣ.
ಅಡುಗೆ ಮನೆ ಎಂದರೆ, ಪಾತ್ರೆ ತೊಳೆಯುವುದು, ಮನೆ ಕೆಲಸ ಮಾಡುವುದು ಖಂಡಿತಾ ಮಹಿಳೆಯರದ್ದು ಮಾತ್ರ ಕೆಲಸ ಅಲ್ಲ. ಅಡುಗೆ ಎಲ್ಲಾ ಮಹಿಳೆಯರೇ ಮಾಡಬೇಕು ಎಂಬುದನ್ನು ಹೇಳದೆ ಯಾವುದೇ ಕೆಲಸದಲ್ಲೂ ಪತ್ನಿಜೊತೆಯಾಗಿ ಕೈ ಜೋಡಿಸಿದರೆ ಒಳಿತು.
ನಿಮಗಾಗಿ ಏನು ಬೇಕಾದರೂ ಮಾಡುವ ವ್ಯಕ್ತಿ, ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ವ್ಯಕ್ತಿ ನಿಮಗೆ ಸಿಕ್ಕಿದರೆ ನೀವೇ ಲಕ್ಕಿ ಗರ್ಲ್‌.
ಜೊತೆಯಾಗಿ ನಡೆಯುತ್ತಿದ್ದರೆ ಸುಮ್ಮನೆ ಕೈ ಹಿಡಿಯುವುದು, ಸಂತಸವಾದಾಗ ಹಣೆ ಮೇಲೋಂದು ಕಿಸ್ ನೀಡುವುದು ಹಾಗೂ ನಿಮ್ಮನ್ನು ಅಪ್ಪಿಕೊಳ್ಳುವ ವ್ಯಕ್ತಿತ್ವ ಅವನದ್ದಾಗಿದ್ದರೆ ಆತ ಉತ್ತಮ ವ್ಯಕ್ತಿ.
ಜಗಳ ದಾಂಪತ್ಯದಲ್ಲಿ ಸಾಮಾನ್ಯ. ಆದರೆ ಯಾವುದೋ ವಿಷಯಕ್ಕೆ ಜಗಳವಾಡಿ ನಂತರ ಮಾತನಾಡದೆ ಇರಲು ಸಾಧ್ಯವಾಗದೆ ಏನಾದರೊಂದು ನೆಪ ಹೇಳಿ ಮಾತನಾಡುವ ಗುಣ ಹೊಂದಿದ ವ್ಯಕ್ತಿ.
ಪತಿ ಮತ್ತು ಪತ್ನಿ ಇಬ್ಬರ ಮಾತು ನಡವಳಿಕೆ ಅಥವಾ ಯೋಚನಾ ಲಹರಿ ಒಂದೇ ರೀತಿ ಆಗಿದ್ದರೆ ಮತ್ತೇನು ಬೇಕು ಸಂಸಾರ ಎಂಬ ದೋಣಿಯನ್ನು ಸಾಗಿಸಲು.
ಕೊನೆಗೆ ಪೂರ್ತಿ ಫ್ಯಾಮಿಲಿಯಲ್ಲಿ ನೀವೆ ಅವರಿಗೆ ನಂ 1 ಸ್ಥಾನ ತುಂಬುವವರಾಗಿದ್ದರೆ... ನೀವು ಸರಿಯಾದ ವ್ಯಕ್ತಿಯ ಜೊತೆ ಮದುವೆಯಾಗಿದ್ದೀರಿ ಎಂದು ಅರ್ಥ.

Latest Videos

click me!