ರೊಮ್ಯಾಂಟಿಕ್‌ ಜೀವನವನ್ನು ಸಂಪೂರ್ಣವಾಗಿ ಬಿಚ್ಚಿಡುತ್ತೆ ಬಣ್ಣಗಳ ಸೈಕಾಲಜಿ

First Published | Feb 20, 2021, 12:45 PM IST

ಪ್ರೀತಿ ಅನ್ನೋದೇ ಅದ್ಭುತ ಭಾವನೆ, ಪ್ರೀತಿ ಎಂದ ಮೇಲೆ ಅದರಲ್ಲಿ ಆಕರ್ಷಣೆ, ರೋಮ್ಯಾನ್ಸ್ ಎಲ್ಲವೂ ಇರುತ್ತದೆ. ಆದರೆ ಸಂಗಾತಿಯಲ್ಲಿನ ಗುಣಗಳನ್ನು ಬಗ್ಗೆ ತಿಳಿದುಕೊಳ್ಳುವುದು ತುಂಬಾನೇ ಕಷ್ಟ, ಸಂಗಾತಿಯ ಪ್ರೀತಿಯಲಿ ಕಳೆದು ಹೋಗುವ ಮುನ್ನ ಅವರ ಗುಣಗಳನ್ನು ತಿಳಿದುಕೊಳ್ಳಿ.. 

ಬಣ್ಣ ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ಅದಕ್ಕೆ ಪ್ರೀತಿಯನ್ನು ಬಣ್ಣಗಳು ತುಂಬಿದ ಕಾಮನಬಿಲ್ಲಿಗೆ ಹೋಲಿಸುತ್ತಾರೆ. ಯಾಕೆಂದರೆ ಆ ಸಮಯದಲ್ಲಿ ಮನಸ್ಸಿನಲ್ಲಿ ಕಲರ್‌ಫುಲ್‌ ಕನಸುಗಳು ತುಂಬಿರುತ್ತವೆ. ಬಣ್ಣ ಮತ್ತು ರೋಮ್ಯಾನ್ಸ್ಗೆ ಏನೂ ಸಂಬಂಧ. ಸೈಕಾಲಜಿ ಎಕ್ಸ್‌ಪರ್ಟ್‌ ಪ್ರಕಾರ ನಿಮ್ಮ ಇಷ್ಟದ ಬಣ್ಣ ರೊಮ್ಯಾಂಟಿಕ್‌ ಲೈಫ್‌ನ ಗುಟ್ಟನ್ನು ಹೇಳುತ್ತದೆ.
ನಿಮ್ಮ ಫೆವರಿಟ್‌ ಬಣ್ಣ ಯಾವುದು ಎಂದು ನೋಡಿ ಎಷ್ಟು ರೊಮ್ಯಾಂಟಿಕ್‌ ಎಂದು ತಿಳಿದುಕೊಳ್ಳಿ...
Tap to resize

ನೀಲಿ ಬಣ್ಣ : ನೀಲಿ ಬಣ್ಣ ಇಷ್ಟಪಡುವವರು ಅತ್ಯುತ್ತಮ ರೊಮ್ಯಾಂಟಿಕ್‌ ಸಂಗಾತಿಯಾಗಿರುತ್ತಾರೆ. ಅವರಿಗೆ ಸಂಬಂಧವನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಕಲೆ ಗೊತ್ತಿದೆ. ಅಲ್ಲದೇ ಇವರು ತುಂಬಾ ಲವಿಂಗ್‌ ಮತ್ತು ಸೆನ್ಸಿಟೀವ್‌ ಆಗಿರುತ್ತಾರೆ.
ಕೇಸರಿ ಬಣ್ಣ: ಈ ಬಣ್ಣ ಇಷ್ಟಪಡುವವರು ರೊಮ್ಯಾಂಟಿಕ್‌ ಲೈಫ್‌ ಸ್ವಲ್ಪ ಹೆಚ್ಚಾಗಿಯೇ ಆಕರ್ಷಿತರಾಗುತ್ತಾರೆ. ಲೈಫ್‌ ಎಂಜಾಯ್‌ ಮಾಡುತ್ತಾ ಜೀವಿಸುವುದು ಹಾಗೂ ಇನ್ನೊಬ್ಬರಿಗೆ ಜೀವಿಸಲು ಕಲಿಸುವುದು ಇವರ ಇಷ್ಟದ ಕೆಲಸವಾಗಿರುತ್ತದೆ. ಅಲ್ಲದೇ ಸ್ವಲ್ಪ ಹಿಂಸಾತ್ಮಕ ಸ್ವಭಾವದವರು ಸಹ ಆಗಿರುತ್ತಾರೆ.
ಬಿಳಿ ಬಣ್ಣ : ಇವರಿಗೆ ಇಂಟಿಮೇಟ್‌ ಆಗುವುದು ತುಂಬಾ ಕಷ್ಟದ ಕೆಲಸ. ಇವರು ಇಂಟಿಮೇಟ್‌ ಆಗುವ ಬಗ್ಗೆ ಹಲವಾರು ರಿಸರ್ಚ್‌ಗಳನ್ನು ನಡೆಸುತ್ತಾರೆ. ನಂತರ ಸೆಕ್ಸ್‌ ಬಗೆಗಿನ ಇವರ ಯೋಚನೆ ತುಂಬಾ ಡರ್ಟಿಯಾಗಿರುತ್ತದೆ.
ಕೆಂಪು ಬಣ್ಣ : ಕೆಂಪು ಬಣ್ಣ ಇಷ್ಟ ಪಡುವವರು ರೋಮ್ಯಾನ್ಸ್ ಅ‌ನ್ನು ಇಮೋಶನ್‌ ಜೊತೆ ಸೇರಿಸುತ್ತಾರೆ. ರೊಮ್ಯಾನ್ಸ್‌ ಬಗ್ಗೆ ಅಪ್ರೋಚ್‌ ಇನ್ನೊಸೆಂಟ್‌ ಅಥವಾ ಫ್ರೆಶ್‌ ಆಗಿರುತ್ತದೆ. ಕೆಂಪು ಬಣ್ಣ ಇಷ್ಟಪಡುವವರು ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ.
ಪಿಂಕ್‌: ಇದು ಹೆಚ್ಚಾಗಿ ಎಲ್ಲಾ ಮಹಿಳೆಯರ ಫೆವರಿಟ್.ಈ ಬಣ್ಣ ಇಷ್ಟಪಡುವವರು ರೊಮ್ಯಾನ್ಸ್‌ ಬಗ್ಗೆ ಸ್ಥಿರವಾಗಿರುವುದಿಲ್ಲ. ಇವರು ಯಾವಾಗಲೂ ಸಿಡಿ ಮಿಡಿಗೊಳ್ಳುತ್ತಾ ಅಥವಾ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ರೊಮ್ಯಾನ್ಸ್‌ ಬಗ್ಗೆ ಮಾತು ಬಂದಾಗ ಇವರು ತಮ್ಮ ಮಾತಿನಲ್ಲಿದ್ದಂತೆ ಕಾರ್ಯದಲ್ಲಿ ತೋರಿಸುವುದಿಲ್ಲ.
ಕಪ್ಪು: ಬ್ಲ್ಯಾಕ್‌ ಬಣ್ಣ ಇಷ್ಟ ಪಡುವವರು ರೊಮ್ಯಾನ್ಸ್‌ ಬಗ್ಗೆ ಅಷ್ಟೊಂದು ಉತ್ಸುಕರಾಗಿರುವುದಿಲ್ಲ. ಅವರು ಮೂಡಿಯಾಗಿರುವ ಕಾರಣ ತಮಗೆ ಇಷ್ಟ ಬಂದಂತೆ ಪ್ರೀತಿಯನ್ನು ತೋರಿಸುತ್ತಾರೆ

Latest Videos

click me!