ಡೇಟಿಂಗ್ ಪರಿಭಾಷೆಯು ದಿನದಿಂದ ದಿನಕ್ಕೆ ಬದಲಾಗುತ್ತಲೇ ಇರುತ್ತದೆ. ಹಿಂದೆ ಪ್ರೀತಿ, ವಾತ್ಸಲ್ಯ, ಪ್ರೇಮ, ಸಾಮರಸ್ಯ ಇದ್ದದ್ದು, ಈಗ ಪ್ರೀತಿ, ಕಾಮ ಮತ್ತು ಭಾವೋದ್ರೇಕವು ಅದರ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಸಮಯದಲ್ಲಿ ಪ್ರೇಮಿಗಳು ಹೊಸ ಹೊಸ ಪದಗಳನ್ನು ಬಳಕೆ ಮಾಡ್ತಾ ಇದ್ದಾರೆ. ಆದರೆ ಅನೇಕ ಜನರಿಗೆ ಇನ್ನೂ ಈ ಪದಗಳ ಅರ್ಥ ತಿಳಿದಿಲ್ಲ. ನೀವು ಡೇಟಿಂಗ್ ವಿಷ್ಯದಲ್ಲಿ ಅಪ್ ಡೇಟ್ ಆಗಿರಬೇಕು ಅನ್ನೋದಾದ್ರೆ ಈ ಪದಗಳನ್ನು ತಿಳಿದುಕೊಂಡಿರಿ.