ಈ ರೀತಿಯೆಲ್ಲಾ ಇದ್ರೆ…. ನಿಮ್ಮ ವೈವಾಹಿಕ ಜೀವನ ಪರ್ಫೆಕ್ಟ್ ಆಗಿದೆ ಎಂದರ್ಥ

First Published | Apr 7, 2023, 5:26 PM IST

ನಿಮ್ಮ ವೈವಾಹಿಕ ಜೀವನದಲ್ಲೂ ಇಲ್ಲಿ ಕೆಳಗೆ ತಿಳಿಸಿದಂತಹ ವಿಷ್ಯಗಳು ನಡೆಯುತ್ತಿದ್ದರೆ, ನಿಮ್ಮಷ್ಟು ಅದೃಷ್ಟವಂತರು ಬೇರಾರೂ ಇಲ್ಲ. ಯಾಕಂದ್ರೆ ನಿಮ್ಮ ವೈವಾಹಿಕ ಜೀವನ ಅಕ್ಷರಶಃ ಪರ್ಫೆಕ್ಟ್ ಆಗಿದೆ ಅನ್ನೋದನ್ನು ಈ ಚಿಹ್ನೆಗಳು ಸೂಚಿಸುತ್ತವೆ. ಬನ್ನಿ ಆ ಬಗ್ಗೆ ನೋಡೋಣ…

ನಗು (Laughter)
ನೀವಿಬ್ಬರೂ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದು, ಏನಾದರೊಂದು ಜೋಕ್ ಮಾಡಿಕೊಂಡು, ಪರಸ್ಪರ ರೇಗಿಸಿಕೊಂಡು ಜೊತೆಯಾಗಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಿ ಎಂದಾದರೆ ನಿಮ್ಮಂತ ಹ್ಯಾಪಿ ಕಪಲ್ಸ್ ಬೇರಾರೂ ಇಲ್ಲ ನೆನಪಿರಲಿ. 

ಸ್ವಾತಂತ್ರ್ಯ (Independence)
ನೀವಿಬ್ಬರೂ ವೈಯಕ್ತಿಕ ಆಸಕ್ತಿಗಳು ಮತ್ತು ಹವ್ಯಾಸಗಳನ್ನು ಕಾಪಾಡಿಕೊಳ್ಳಬಹುದು ಮತ್ತು ಪರಸ್ಪರರ ಆಸಕ್ತಿಗಳು ಮತ್ತು ಹವ್ಯಾಸಗಳನ್ನು ಬೆಂಬಲಿಸಬಹುದು. ಒಬ್ಬರಿಗೊಬ್ಬರು ತಮ್ಮ ವೈಯಕ್ತಿಕ ಆಸಕ್ತಿಗಳನ್ನು ಪೂರೈಸಲು ಸಂಪೂರ್ಣ ಸ್ವಾತಂತ್ರ್ಯ ಹೊಂದುವುದು ಸಹ ಹ್ಯಾಪಿ ಮ್ಯಾರೀಡ್ ಲೈಫ್ ನ ಲಕ್ಷಣ. 

Tap to resize

ಕ್ಷಮೆ (Forgiveness)
ಇಬ್ಬರಲ್ಲಿ ಯಾರೇ ತಪ್ಪು ಮಾಡಿದ್ರೂ, ಅದನ್ನು ಅರಿತುಕೊಂಡು ತಮ್ಮ ಈಗೋವನ್ನು ಪಕ್ಕಕ್ಕಿಟ್ಟು ಸಾರಿ ಕೇಳೋದು ಇದೆಯಲ್ಲ, ಇದು ಉತ್ತಮ ದಾಂಪತ್ಯ ಜೀವನಕ್ಕೆ ಮುಖ್ಯವಾಗಿ ಬೇಕಾಗಿರೋದು. ಉತ್ತಮ ದಾಂಪತ್ಯ ಜೀವನದಲ್ಲಿ ಕ್ಷಮೆ ಕೇಳೋಕು ಗೊತ್ತಿರಬೇಕು, ಕ್ಷಮಿಸಲು ಗೊತ್ತಿರಬೇಕು. 
 

ಹಂಚಿಕೊಂಡ ಗುರಿಗಳು (Shared goals)
ನೀವಿಬ್ಬರೂ ನಿಮ್ಮ ಭವಿಷ್ಯಕ್ಕಾಗಿ ಸಾಮಾನ್ಯ ಗುರಿಗಳು ಮತ್ತು ಕನಸುಗಳನ್ನು ಒಟ್ಟಿಗೆ ಹಂಚಿಕೊಂಡಾಗ ಮತ್ತು ಆ ಗುರಿಗಳನ್ನು ಸಾಧಿಸಲು ಬದ್ಧರಾಗಿದ್ದಾಗ, ಜೊತೆಗೆ ಗುರಿ ತಲುಪುವ ಬಗ್ಗೆ ಇಬ್ಬರು ಜೊತೆಯಾಗಿ ಯೋಚಿಸಿ ನಿರ್ಧಾರ ಮಾಡುತ್ತೀರಿ ಎಂದಾದರೆ ನಿಮ್ಮದು ಪರ್ಫೆಕ್ಟ್ ಮ್ಯಾರೀಡ್ ಲೈಫ್.

ಪರಸ್ಪರ ಗೌರವ (Mutual respect)
ನೀವಿಬ್ಬರೂ ಪರಸ್ಪರರ ಅಭಿಪ್ರಾಯಗಳು, ಆಲೋಚನೆಗಳು ಮತ್ತು ಭಾವನೆಗಳನ್ನು ಗೌರವಿಸುತ್ತೀರಿ. ಅವರು ಹೇಳಿದ ಮಾತುಗಳಿಗೆ ಕಿವಿಯಾಗುತ್ತೀರಿ. ಜೊತೆಗೆ ಅವರು ಹೇಳಿದ್ದು ನಿಮಗೆ ಇಷ್ಟವಾಗದಿದ್ದರೂ, ಅವರ ಯೋಚನೆಗಳನ್ನು ನೀವು ಗೌರವಿಸುತ್ತೀರಿ ಎಂದರೆ ನಿಮ್ಮ ಜೀವನ ಚೆನ್ನಾಗಿದೆ.

ಮಾತುಕತೆ (Communication)
ನೀವು ಮತ್ತು ನಿಮ್ಮ ಸಂಗಾತಿ ಯಾವುದೇ ತೀರ್ಪು ಅಥವಾ ಟೀಕೆಯ ಭಯವಿಲ್ಲದೆ ಪರಸ್ಪರ ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಸಂವಹನ ನಡೆಸಲು ಸಾಧ್ಯವಾದಾಗ. ಜೊತೆಗೆ ಇಬ್ಬರೂ ಸಮಯದ ಹಂಗಿಲ್ಲದೇ, ಇನ್ನೊಬ್ಬರು ಏನಂದುಕೊಂಡಾರು ಎಂಬ ಭಯವೂ ಇಲ್ಲದೆ ಮತುಕತೆ ನಡೆಸಿದರೆ ನಿಮ್ಮ ವೈವಾಹಿಕ ಜೀವನ ಚೆನ್ನಾಗಿದೆ ಎಂದರ್ಥ.

ಗುಣಮಟ್ಟದ ಸಮಯ (Quality time)
ಇಬ್ಬರೂ ಅದೆಷ್ಟೆ ಬ್ಯುಸಿಯಾಗಿರಲಿ, ನಿಮ್ಮಿಬ್ಬರಿಗಾಗಿ ಪ್ರತಿದಿನವೂ ನೀವು ಒಂದಿಷ್ಟು ಗುಣಮಟ್ಟದ ಸಮಯ ಮೀಸಲಿಟ್ಟೀದ್ದೀರಿ ಎಂದರೆ, ಅದಕ್ಕಿಂತ ಇನ್ನೇನು ಬೇಕು? ಜೊತೆಯಾಗಿ ಊಟ ಮಾಡೋದು, ಜೊತೆಯಾಗಿ ಮೂವಿ ನೋಡೋದು, ಜೊತೆಯಾಗಿ ಪಿಕ್ ನಿಕ್ ಮಾಡೋದು, ಸುಂದರ ದಾಂಪತ್ಯ ಜೀವನಕ್ಕೆ ಈ ಪುಟ್ಟ ವಿಷಯಗಳೇ ಸಾಕು. 

ಪ್ರೀತಿ (Affection)
ನೀವಿಬ್ಬರೂ ಪರಸ್ಪರ ವಾತ್ಸಲ್ಯದಿಂದಿದ್ದಾಗ, ಯಾವುದೇ ಹಿಂಜರಿಕೆಯಿಲ್ಲದೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಪ್ರತಿಯೊಂದು ವಿಷ್ಯದಲ್ಲೂ ಒಬ್ಬರನ್ನೊಬ್ಬರು ಬಿಟ್ಟುಕೊಡದೇ, ಆ ಪ್ರೀತಿಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಹೋದ್ರೆ ಅದೇ ತಾನೆ ಲವ್.

ವಿಶ್ವಾಸ (Trust)
ಜೀವನದಲ್ಲಿ ನಂಬಿಕೆ ಮುಖ್ಯವಾದುದು. ಅದರಲ್ಲೂ ವೈವಾಹಿಕ ಜೀವನ ಚೆನ್ನಾಗಿರಬೇಕು ಅಂದ್ರೆ ನೀವಿಬ್ಬರೂ ಪರಸ್ಪರ ನಂಬಿದಾಗ ಮತ್ತು ಸಂಬಂಧದಲ್ಲಿ 100% ಪ್ರಾಮಾಣಿಕತೆ ಇದೆ ಎಂದು ತಿಳಿದಾಗ ಸುರಕ್ಷಿತವೆಂದು ಭಾವಿಸಿದಾಗ ನಿಮ್ಮ ವೈವಾಹಿಕ ಜೀವನ ಚೆನ್ನಾಗಿದೆ ಎಂದರ್ಥ. .
 

Latest Videos

click me!