ಆತ ನನ್ನವನಲ್ಲ, ಮನಸ್ಸು ಕೇಳುತ್ತಿಲ್ಲ, ದುರಂತ ಸಾವುಕಂಡ ಯೂಟ್ಯೂಬರ್ ಡೆತ್‌ನೋಟ್‌ಗೆ ಹಲವರು ಭಾವುಕರಾಗಿದ್ದಾರೆ. ಪ್ರೀತಿಯ ಅಗಾಧತೆ ಜೊತೆ ನೋವಿನ ಸಾಲುಗಳು ಹಲವರ ಕಣ್ಣಾಲಿ ತೇವಗೊಲಿಸಿದೆ. ಈಕೆ ಈ ನಿರ್ಧಾರ ಹಿಂದಿನ ಕಾರಣ ಬಹಿರಂಗವಾಗಿದೆ.
21ರ ಹರೆಯದ ಯೂಟ್ಯೂಬರ್, ಸೈನ್ಸ್ ವಿದ್ಯಾರ್ಥಿನಿ ದುರಂತ ಸಾವು ದೇಶಾದ್ಯಂತ ಆಘಾತ ನೀಡಿದೆ. ಹೈದರಾಬಾದ್ ಫ್ಲಾಟ್ ಒಂದರಲ್ಲಿ ಬದುಕು ಅಂತ್ಯಗೊಳಿಸಿದ 21ರ ಹರೆಯದ ಬೋನು ಕೋಮಾಲಿ ಡೆತ್ ನೋಟ್ ಪತ್ತೆಯಾಗಿದೆ. ಈ ಬರಹದಲ್ಲಿ ಆಕೆಯ ಪ್ರೀತಿ, ಅದರಿಂದ ಅನುಭವಿಸುತ್ತಿರುವ ನೋವನ್ನು ಎಳೆಳೆಯಾಗಿ ಬಿಚ್ಚಿಟ್ಟಿದ್ದಾಳೆ. ಈಕೆಯ ಬರಹ ಹಲವರನ್ನು ಭಾವುಕರನ್ನಾಗಿಸಿದೆ.
25
ಪ್ರೀತಿ, ಬ್ರೇಕ್ ಅಪ್, ನೋವು
ಬೋನು ಕೋಮಾಲಿ 3 ವರ್ಷ ರಿಲೇಶನ್‌ಶಿಪ್‌ನಲ್ಲಿದ್ದಳು. ಆದರೆ ಇವರ ಪ್ರೀತಿಯಲ್ಲಿ ಬಿರುಗಾಳಿ ಎದ್ದಿತ್ತು. ಇಬ್ಬರು ದೂರ ದೂರವಾಗಿದ್ದರು. ಈ ಬ್ರೇಕ್‌ಅಪ್‌ನಿಂದ ಕೋಮಾಲಿ ಹೊರಬರಲು ಸಾಧ್ಯವಾಗಲೇ ಇಲ್ಲ. ಅದೆಷ್ಟೇ ಪ್ರಯತ್ನಿಸಿದರೂ ಆತನ ನೆನಪು ಮಾಸಲಿಲ್ಲ, ಪ್ರೀತಿ ಕಡಿಮೆಯಾಗಲಿಲ್ಲ, ನೆನಪುಗಳು ದೂರವಾಗಲಿಲ್ಲ. ಕೊನೆಗೆ ದುಡುಕಿನ ನಿರ್ಧಾರ ಮಾಡಿದ್ದಾಳೆ. ಆದರೆ ಸಾಯುವ ಮುನ್ನ ಆಕೆ ತನ್ನ ಪ್ರೀತಿ ಆಳವನ್ನು ನೋವನ್ನು ತೋಡಿಕೊಂಡಿದ್ದಾಳೆ.
35
ಆಕೆಯ ಕೊನೆಯ ನೋಟ್‌ನಲ್ಲಿ ಏನಿದೆ?
ಆತನ ಪ್ರೀತಿ ಇಲ್ಲದೆ ಮುಂದೆ ಹೆಜ್ಜೆ ಇಡಲು ಭಯವಾಗುತ್ತಿದೆ, ನೋವಾಗುತ್ತಿದೆ. ಕಾರಣ ಅವನು ಮರಳಿ ಬಂದರೆ ಏನು ಮಾಡಲಿ, ಅವನ ಮರೆಯಬೇಕು ಎಂದು ನನಗೆ ಗೊತ್ತು. ಮರೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದೇನೆ. ಅವನು ನನ್ನವನಲ್ಲ ಅನ್ನೋದು ಗೊತ್ತಿದೆ. ಅವನು ನನ್ನ ಜೊತೆ ಉಳಿಯುವ ಪ್ರಯತ್ನ ಮಾಡುತ್ತಿಲ್ಲ ಎಂಬುದು ನನಗೆ ಗೊತ್ತಿದೆ. ಆದರೂ ನನ್ನೊಳಗಿನ ಮನಸ್ಸು ಆತನಿಗಾಗಿ ಕಾಯುತ್ತಿದೆ. ಆತನ ಬರುವಿಕೆಗೆ ಹಂಬಲಿಸಿದೆ. ಮುಂದೊಂದು ದಿನ ಅತ ನನ್ನ ಅವರಿಸಿಕೊಳ್ಳುತ್ತಾನೆ ಎಂದು ಭರವಸೆ ಇಟ್ಟುಕೊಂಡಿದ್ದೇನೆ.
ಆತನ ಸಂಪೂರ್ಣವಾಗಿ ಮರೆತು ಮುಂದೆ ಸಾಗುವುದು ಅಸಾಧ್ಯವಾಗುತ್ತಿದೆ. ಒಂದು ವೇಳೆ ನಾನು ಆತನ ಸಂಪೂರ್ಣವಾಗಿ ಮರೆದು ದೂರ ಸಾಗಿದಾಗ, ಆತ ನನ್ನ ಹಿಂದಿರುಗಿ ಹುಡುಕಿದರೆ ಏನು ಮಾಡಲಿ. ಆತ ಒಂದು ಹುಡುಕಾಟಕ್ಕೆ ನಾನು ಕಾಯುತ್ತಿದ್ದೇನೆ. ಆತ ದಣಿದಾಗ ನೀರಾಗುವ, ಉಲ್ಲಾದಲ್ಲಿ ಹೂವಾಗುವ, ಕುಳಿತಾಗ ಕನಸಾಗುವ, ನಡೆಯುವಾಗ ನೆರಳಾಗುವ ಬಯಕೆ ನನ್ನದು ಎಂದು ಕೋಮಾಲಿ ತನ್ನ ನೋವು ತೋಡಿಕೊಂಡಿದ್ದಾಳೆ.
55
ಕೊನೆಯ ಮೆಸೇಜ್ ತಾಯಿಗೆ
ಕೊನೆಯದಾಗಿ ತಾಯಿಗೆ ಮೆಸೇಜ್ ಮಾಡಿರುವ ಕೋಮಾಲಿ, ಲವ್ ಯೂ ಸೋ ಮಚ್ ಎಂದಿದ್ದಾಳೆ. ನನ್ನ ಸಹೋದರನ ಚೆನ್ನಾಗಿ ನೋಡಿಕೋ ಎಂದಿದ್ದಾಳೆ. ಈ ಮೆಸೇಜ್ ನೋಡಿ ಗಾಬರಿಯಾದ ತಾಯಿ ತಕ್ಷಣೇ ಕರೆ ಮಾಡಿದ್ದಾರೆ. ಆದರೆ ಕೋಮಾಲಿಯಿಂದ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ಕೋಮಾಲಿ ಸ್ನೇಹಿತೆಯರಿಗೆ ಸೂಚನೆ ನೀಡಿದ್ದಾರೆ. ಫ್ಲಾಟ್‌ಗೆ ಬಂದು ನೋಡಿದಾಗ ಕೋಮಾಲಿ ಪ್ರಾಣ ಪಕ್ಷಿ ಹಾರಿ ಹೋಗಿದೆ. ಪ್ರಕರಣ ದಾಖಲಾಗಿದೆ. ಯೂಟ್ಯೂಬ್ ಮೂಲಕ ಭಾರಿ ಜನಪ್ರಿಯತ ಪಡೆದಿದ್ದ ಕೋಮಾಲಿ ದುರಂತ ಅಂತ್ಯಕೊಂಡಿದ್ದಾಳೆ.
ಸೂಚನೆ: ದುಡುಕಿನ ನಿರ್ಧಾರ ಯಾವುದ ಸಮಸ್ಯೆಗೆ ಪರಿಹಾರವಲ್ಲ. ಬದುಕು ಅಂತ್ಯಗೊಳಿಸುವ ಮೊದಲು ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆಯಿರಿ. ಸವಾಲುಗಳನ್ನು ಎದುರಿಸಲು ಪ್ರಯತ್ನಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.