ಮಲೈಕಾ ಟು ಮಲ್ಲಿ! ಬಾಲಿವುಡ್ ಬ್ಯೂಟಿಗೂ, Amruthadhaare ಸುಂದರಿಗೂ ಏನಿದು ಭಾರಿ ಕನೆಕ್ಷನ್​!

Published : Feb 26, 2026, 01:09 PM IST

ಬಾಲಿವುಡ್ ನಟಿ ಮಲೈಕಾ ಅರೋರಾ ತನಗಿಂತ ಕಿರಿಯ ವಯಸ್ಸಿನವರೊಂದಿಗೆ ಡೇಟಿಂಗ್​ ಮಾಡಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಕನ್ನಡದ 'ಅಮೃತಧಾರೆ' ಸೀರಿಯಲ್​ನ ನಾಯಕಿ ಮಲ್ಲಿ ಕೂಡ ಕಿರಿಯ ವಯಸ್ಸಿನ ಹುಡುಗನ ಪ್ರೀತಿಯಲ್ಲಿ ಬಿದ್ದಿದ್ದಾರೆ.

PREV
16
ಮಲೈಕಾ ಅರೋರಾ

ಬಾಲಿವುಡ್​ನ ಬ್ಯೂಟಿ ಎಂದೇ ಫೇಮಸ್​ ಆಗಿರುವವರ ಪೈಕಿ ನಟಿ ಮಲೈಕಾ ಅರೋರಾ (Malaika Arora) ಟಾಪ್​ನಲ್ಲಿ ಇದ್ದಾರೆ. ಇದಕ್ಕೆ ಕಾರಣ, ವಯಸ್ಸು 52 ಆದರೂ ಫಿಟ್​ ಆ್ಯಂಡ್​ ಫೈನ್​ ಆಗಿದ್ದಾರೆ. ಈ ವಯಸ್ಸಿನಲ್ಲಿಯೂ ಸಕತ್​ ವರ್ಕ್​ಔಟ್​ ಮಾಡುತ್ತಾರೆ, ದೇಹವನ್ನು ಫಿಟ್​ ಆಗಿ ಇಟ್ಟುಕೊಂಡಿದ್ದಾರೆ ಎನ್ನುವುದು.

26
ಫಿಟ್​ ದೇಹ

ಅದಕ್ಕಿಂತಲೂ ಹೆಚ್ಚಾಗಿ ಅವರು ಫೇಮಸ್​ ಆಗಿರೋದು, 52ನೇ ವಯಸ್ಸಿನಲ್ಲಿ ಮೂರನೆಯ ಬಾಯ್​ಫ್ರೆಂಡ್​ ಪಡೆದುಕೊಂಡಿರುವುದು. ನಟ ಅರ್ಬಾಜ್​ ಖಾನ್​ ಅವರಿಗೆ ಮಗುವನ್ನು ಪಡೆದ ಬಳಿಕ, ಡಿವೋರ್ಸ್​ ಕೊಟ್ಟ ನಟಿ ಕೊನೆಗೆ ಸಂಬಂಧದಲ್ಲಿ ಇದ್ದುದು ಹತ್ತು ವರ್ಷ ಕಿರಿಯ ನಟ ಅರ್ಜುನ್​ ಕಪೂರ್​ ಜೊತೆ. ದಶಕಗಳ ಕಾಲ ಸಂಬಂಧದಲ್ಲಿದ್ದ ನಟಿ ಕೊನೆಗೆ ಬ್ರೇಕಪ್​ ಆದರು.

36
19 ವರ್ಷ ಕಿರಿಯವ

ಅದಾದ ಬಳಿಕ ಇದೀಗ 52ನೇ ವಯಸ್ಸಿನಲ್ಲಿ 19 ವರ್ಷದ ಕಿರಿಯ ವಜ್ರದ ಉದ್ಯಮಿ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ. ಪ್ರೇಮಕ್ಕ ವಯಸ್ಸಲ್ಲ, ಮನಸ್ಸು ಮುಖ್ಯ ಎನ್ನುವುದು ಅವರ ಧ್ಯೇಯ.

46
ಮಲೈಕಾ ಟು ಮಲ್ಲಿ

ಇದೀಗ ಮಲೈಕಾ ಅರೋರಾಗೂ ಅಮೃತಧಾರೆಯ (Amruthadhaare) ಮಲ್ಲಿಗೂ ಕನೆಕ್ಷನ್​ ಮಾಡಲಾಗುತ್ತಿದೆ. ಇದಕ್ಕೆ ಕಾರಣ, ಮಲ್ಲಿ ತನಗಿಂತ ಸಿಕ್ಕಾಪಟ್ಟೆ ಚಿಕ್ಕ ವಯಸ್ಸಿನ ಹುಡುಗನ ಜೊತೆ ಲವ್​ನಲ್ಲಿ ಬಿದ್ದಿದ್ದಾಳೆ.

56
ಲವ್​ನಲ್ಲಿ ಬಿದ್ದ ಮಲ್ಲಿ

ಈ ಸೀರಿಯಲ್​ನಲ್ಲಿ ಸುನಿ ಮಲ್ಲಿಯನ್ನು ಪ್ರೀತಿಸ್ತಾ ಇರೋದು ನಿಜವಾದರೂ, ಸದ್ಯ ಜೈದೇವನ ಕುತಂತ್ರದಿಂದ ಮೋಸ ಮಾಡುವ ನೆಪದಲ್ಲಿ ಪ್ರೀತಿ ಮಾಡ್ತಿರೋದಾಗಿ ಹೇಳುತ್ತಿದ್ದಾನೆ. ಆದರೆ ಮಲ್ಲಿ ಮಾತ್ರ ನಿಜವಾಗಿಯೂ ಲವ್​ನಲ್ಲಿ ಬಿದ್ದಿದ್ದಾಳೆ.

66
ಇಬ್ಬರಿಗೂ ಲಿಂಕ್​

ಮಲೈಕಾ ಅರೋರಾ ಹೇಳಿದಂತೆಯೇ, ಇಲ್ಲಿ ಗೌತಮ್​ ಕೂಡ ಭೂಮಿಕಾಗೆ ಪ್ರೀತಿಗೆ ವಯಸ್ಸಲ್ಲ, ಮನಸ್ಸು ಮುಖ್ಯ ಎಂದಿದ್ದಾನೆ. ಇದೇ ಕಾರಣಕ್ಕೆ ಬಾಲಿವುಡ್​​ ಮಲೈಕಾ ಮತ್ತು ಅಮೃತಧಾರೆ ಮಲ್ಲಿಗೆ ಲಿಂಕ್​ ಮಾಡಲಾಗುತ್ತಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories