ನಿಮ್ಮವರ ಜೊತೆ ಜಗಳ ಮಾಡಿ ಮಾತು ಬಿಟ್ಟಿದ್ದೀರಾ? ಮತ್ತೆ ಮಾತನಾಡಲು ಟಿಪ್ಸ್ ಹೀಗೆ ಮಾಡಿ

First Published | Jun 10, 2023, 3:14 PM IST

ನಿಮ್ಮ ಸಂಗಾತಿ ಜೊತೆ ಯಾವುದೋ ವಿಷ್ಯಕ್ಕೆ ಜಗಳವಾಡಿ, ಮಾತು ಬಿಟ್ಟಿರುತ್ತೀರಿ. ಈಗ ಪರಸ್ಪರ ಸಂಭಾಷಣೆಯನ್ನು ಹೇಗೆ ಪ್ರಾರಂಭಿಸಬೇಕು ಎಂಬುದರ ಬಗ್ಗೆ ಯೋಚಿಸುತ್ತಿದ್ದರೆ, ಇಲ್ಲಿ ನೀಡಲಾದ ಟಿಪ್ಸ್ ನಿಮಗೆ ಸಹಾಯ ಮಾಡಬಹುದು. 
 

ಸಂಬಂಧದಲ್ಲಿ (relationship) ಪ್ರೀತಿಯೊಂದಿಗೆ ಸ್ವಲ್ಪ ಜಗಳ ಇರೋದು ಸಹ ಮುಖ್ಯ ಎಂದು ಹೇಳಲಾಗುತ್ತದೆ. ಆದರೆ ಈ ಸಣ್ಣ ಪುಟ್ಟ ಕೋಪ ದೊಡ್ಡ ಜಗಳ ಆಗಿ ಬದಲಾಗಬಾರದು ಅಷ್ಟೇ. ಅನೇಕ ಬಾರಿ ಜಗಳದ ಸಮಯದಲ್ಲಿ, ಜನರು ಪರಸ್ಪರರ ಬಗ್ಗೆ ಇಷ್ಟವೇ ಇರದ ವಿಷ್ಯಗಳನ್ನು ಹೇಳುತ್ತಾರೆ, ಇದರಿಂದ ಜಗಳ ದೊಡ್ಡದಾಗಬಹುದು. ಆದರೆ ಇದೆಲ್ಲಾ ಆದಮೇಲೆ, ಛೇ ಇಷ್ಟು ಸಣ್ಣ ವಿಷ್ಯಕ್ಕೆ ಯಾಕೆ ಜಗಳ ಮಾಡಿದ್ದು ಎಂದೆನಿಸುತ್ತೆ. 

ನೀವು ವಿವಾಹಿತರಾಗಿದ್ದರೆ ಮತ್ತು ನೀವು ನಿಮ್ಮ ಪತಿ ಅಥವಾ ಹೆಂಡತಿಯೊಂದಿಗೆ ಯಾವುದೋ ವಿಷಯದ ಬಗ್ಗೆ ಜಗಳವಾಡಿದ್ದರೆ, ಈ ಕಾರಣದಿಂದಾಗಿ ಅವರೊಂದಿಗೆ ತುಂಬಾ ದಿನದಿಂದ ಮಾತನಾಡೋದನ್ನೆ ನಿಲ್ಲಿಸಿದ್ದರೆ. ಆದ್ರೆ ಕೋಪ ತಗ್ಗಿದ್ದು, ಹೇಗಪ್ಪಾ ಮತ್ತೆ ಮಾತನಾಡೋದು ಎಂದು ನೀವು ಯೋಚನೆ ಮಾಡುತ್ತಿದ್ರೆ ಇಲ್ಲಿದೆ ನಿಮಗಾಗಿ ಸಿಂಪಲ್ ಟಿಪ್ಸ್. ಇದನ್ನ ಫಾಲೋ ಮಾಡಿದ್ರೆ, ಖಂಡಿತವಾಗಿಯೂ ನಿಮ್ಮವರ ಜೊತೆ ಮಾತನಾಡಲು ಸುಲಭವಾಗುತ್ತೆ. 

Tap to resize

ಪತ್ರ ಬರೆಯುವ ಬಗ್ಗೆ ಯೋಚಿಸಿ (writing letter)
ನಿಮ್ಮಿಬ್ಬರ ನಡುವಿನ ಜಗಳವನ್ನು ಕೊನೆಗೊಳಿಸಲು ನೀವು ಈ ಪತ್ರ ಬರೆಯುವ ಆಲೋಚನೆಯನ್ನು ಸಹ ಪ್ರಯತ್ನಿಸಬಹುದು. ಪೆನ್ ತೆಗೆದುಕೊಂಡು ನಿಮ್ಮ ಭಾವನೆಗಳನ್ನು ಕಾಗದದ ಮೇಲೆ ಹಾಕಿ. ಸ್ವಲ್ಪ ತಮಾಷೆ, ತುಂಬಾ ರೊಮ್ಯಾಂಟಿಕ್ (Romantic), ಜೊತೆಗೆ ಕ್ಷಮೆ (Apologies) ಕೂಡ ಇರಲಿ.

ಈ ಕಲ್ಪನೆಯ ಉತ್ತಮ ಭಾಗವೆಂದರೆ, ನೀವು ಎಷ್ಟೇ ಕೋಪಗೊಂಡರೂ, ಒಮ್ಮೆ ನೀವು ಬರೆಯಲು ಪ್ರಾರಂಭಿಸಿದರೆ, ನಿಮ್ಮ ಮನಸ್ಥಿತಿ ಹಗುರವಾಗಲು ಪ್ರಾರಂಭಿಸುತ್ತದೆ. ಅದೇ ಸಮಯದಲ್ಲಿ, ನಿಮ್ಮ ತಪ್ಪುಗಳು ಸಹ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದನ್ನು ಓದಿದವರು ಸಹ ಖಂಡಿತವಾಗಿಯೂ ನಿಮ್ಮನ್ನು ಕ್ಷಮಿಸುತ್ತಾರೆ. 

SORRY ಕಾರ್ಡ್  (Sorry Card)
ಸರ್ಪ್ರೈಸ್ ಗಳನ್ನು ಹೆಚ್ಚಿನ ಜನರು ಇಷ್ಟಪಡ್ತಾರೆ ಅಲ್ವಾ?. ಹಾಗಾಗಿ ನಿಮ್ಮವರ ಬಳಿ ಕ್ಷಮೆ ಕೇಳಲು, ಹೊಸ ರೀತಿಯಲ್ಲಿ ಯೋಚಿಸಲು ಪ್ರಾರಂಭಿಸಿ. ಜಗಳವನ್ನು ಕೊನೆಗೊಳಿಸಲು, ನೀವು ಸಂಗಾತಿಗೆ SORRY ಕಾರ್ಡ್ ಮಾಡಬಹುದು ಮತ್ತು ಅದನ್ನು ನೀಡಬಹುದು.

SORRY ಕಾರ್ಡ್ ನಲ್ಲಿ ನೀವು ಅವರ ಇಷ್ಟದ ಹಾಡನ್ನು ಸೇರಿಸಿ ಬರೆದು ಕೊಡಿ. ಈ ಕಲ್ಪನೆಯು ಬಹಳಷ್ಟು ಕೆಲಸ ಮಾಡುತ್ತದೆ. ಇದರ ಜೊತೆಗೆ ಒಂದು ಸಣ್ಣ ಗಿಫ್ಟ್ ಇದ್ದರೂ ಓಕೆ. ಹೀಗೆ ಮಾಡೋದರಿಂದ ನಿಮ್ಮವರ ಮುಖದಲ್ಲಿ ನಗು ಮೂಡೋದಂತೂ ಖಂಡಿತಾ. 

ಅಹಂ ಅನ್ನು ಬದಿಗಿಡಿ (Keep your ego aside)
ಜಗಳವಾಗಿ ಎರಡು-ಮೂರು ದಿನಗಳ ನಂತರ ಮತ್ತೆ ಸಂಭಾಷಣೆಯನ್ನು ಪ್ರಾರಂಭಿಸಲು ನೀವು ಬಯಸದಿದ್ದರೆ, ನಿಮ್ಮ ಅಹಂ ಅನ್ನು ಬದಿಗಿಡುವ ಮೂಲಕ ಕ್ಷಮಿಸಿ ಎಂದು ಹೇಳಿ. ಕ್ಷಮೆ ಕೇಳೋದ್ರಿಂದ ನಿಮ್ಮವರ ಮುಂದೆ ನೀವು ಚಿಕ್ಕವರಾಗೋದಿಲ್ಲ. ಇದರಿಂದ ಇಬ್ಬರ ನಡುವಿನ ಪ್ರೀತಿ ಹೆಚ್ಚುತ್ತೆ. 

ಲಂಚ್ ಜೊತೆ ನೋಟ್ (Note with Lunch)
ಇದು ಕೂಡ ಸಾರಿ ಕೇಳಲು ಬೆಸ್ಟ್ ಐಡಿಯಾ ಎನ್ನಬಹುದು. ಇಬ್ಬರ ನಡುವೆ ಜಗಳ ನಡೆದ್ರೆ ನೀವು ಮತ್ತೆ ಅವರ ಜೊತೆ ಮಾತನಾಡಲು ಬಯಸಿದ್ರೆ ಅವರು ಬ್ರೇಕ್ ಫಾಸ್ಟ್ ಮಾಡುವಾಗ ಅಥವಾ ಲಂಚ್ ಬಾಕ್ಸ್ ನಲ್ಲಿ ಅಥವಾ ಡಿನ್ನರ್ ಸಮಯದಲ್ಲಿ ಆಹಾರದ ಜೊತೆಗೆ ಒಂದು ಕ್ಷಮೆ ಕೇಳುವ ಅಥವಾ ಮತ್ತೆ ಮಾತನಾಡಲು ಮನಸ್ಸು ಮಾಡಿರುವ ಬಗ್ಗೆ ಒಂದು ನೋಟ್ ಬರೆದು ಇಡಿ. ಖಂಡಿತಾ ವರ್ಕೌಟ್ ಆಗುತ್ತೆ.

Latest Videos

click me!