ಸಂಗಾತಿ ಹೀಗ್ ಮಾಡಿದಾಗ ಸುಮ್ಮನಿದ್ರೆ ಜೀವನ ಹಾಳಾಗೋದು ಗ್ಯಾರಂಟಿ

First Published | Jun 7, 2023, 5:12 PM IST

ಸಂಬಂಧವು ಕೇವಲ ಪ್ರೀತಿಯಿಂದ ಮಾತ್ರ ಚಲಿಸುವುದಿಲ್ಲ, ಸಂಬಂಧವನ್ನು ನಡೆಸಲು ಅಗತ್ಯ ಇತರೆ ಕೆಲವು ವಿಷಯಗಳಿವೆ, ಅವುಗಳಲ್ಲಿ ಒಂದು ನಡವಳಿಕೆ. ನಿಮ್ಮ ಸಂಗಾತಿಯ ನಡವಳಿಕೆ ನಿಮ್ಮೊಂದಿಗೆ ಸರಿಯಾಗಿಲ್ಲದಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಯಾಕಂದ್ರೆ ಇಂದು ನಿಮಗೆ ಸರಿ ಅನಿಸಿದ ಕೆಲವು ವಿಷಯ ಮುಂದೆ ಸಮಸ್ಯೆಯನ್ನುಂಟು ಮಾಡಬಹುದು. 

ಡೇಟಿಂಗ್ (dating) ವೇಳೆ, ಕಪಲ್ಸ್ ಸಂಪೂರ್ಣವಾಗಿ ಪ್ರೀತಿಯಲ್ಲಿ ಬಿದ್ದಿರುತ್ತಾರೆ. ಇದರಿಂದಾಗಿ ಅನೇಕ ಬಾರಿ ಪರಸ್ಪರರ ನಡವಳಿಕೆಯನ್ನು ಸಹ ನಿರ್ಲಕ್ಷಿಸುತ್ತಾರೆ. ನಿಮ್ಮ ನಡುವೆ ಎಷ್ಟೇ ಪ್ರೀತಿ ಇದ್ದರೂ, ಅವರ ಗುಣ-ನಡವಳಿಕೆ ಬಗ್ಗೆ ಈಗಲೇ ನೀವು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ಯಾಕಂದ್ರೆ ಕೆಲವೊಂದು ಗುಣಗಳನ್ನು ನೀವು ಆರಂಭದಲ್ಲಿ ಇಗ್ನೋರ್ ಮಾಡಿದ್ರೆ ಮುಂದೆ ನೀವು ಅದೇ ವಿಷ್ಯದಿಂದಾಗಿ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ. 

ನಿಮ್ಮ ಸಂಗಾತಿಯು ಎಷ್ಟು ಭಾವನಾತ್ಮಕ ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ನೋಡುವುದು ಮುಖ್ಯ. ನಿಮ್ಮ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಅವರೊಂದಿಗೆ ಹಂಚಿಕೊಂಡಾಗ, ಅವರು ಅದನ್ನು ಅರ್ಥಮಾಡಿಕೊಳ್ಳುತ್ತಾರೆಯೇ ಅಥವಾ ನಿರ್ಲಕ್ಷಿಸುತ್ತಾರೆಯೇ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

Tap to resize

ನಿಮ್ಮ ಆವುದೇ ಸಮಸ್ಯೆಗೂ ಸಂಗಾತಿಯಿಂದ ಯಾವುದೇ ಭಾವನಾತ್ಮಕ ಬೆಂಬಲವಿಲ್ಲ (emotional support) ಎಂದು ಭಾವಿಸಿದರೆ, ಸಾಧ್ಯವಾದಷ್ಟು ಬೇಗ ಸಂಬಂಧವನ್ನು ಕೊನೆಗೊಳಿಸುವುದು ಉತ್ತಮ. ಇಲ್ಲವಾದರೆ ನಿಮ್ಮ ಜೀವನ ನರಕಕ್ಕಿಂತ ಕಡೆಯಾಗಬಹುದು, ಈ ಬಗ್ಗೆ ಆಲೋಚನೆ ಮಾಡೋದು ಮುಖ್ಯ. 

ಇನ್ನು ಸಂಗಾತಿಯು ನಿಮ್ಮನ್ನು ನಿಯಂತ್ರಿಸಲು (controlling behaviour) ಪ್ರಯತ್ನಿಸಿದರೆ, ಇದು ಸಹ ನೀವು ಸಹಿಸದ ನಡವಳಿಕೆಯಾಗಿದೆ. ನೀವು ಎಲ್ಲಿಗೆ ಹೋಗಬೇಕು, ಯಾರನ್ನು ಭೇಟಿ ಮಾಡಬೇಕು, ಹೇಗೆ ಉಡುಗೆ ತೊಡಬೇಕು ಎಂಬುದರ ಮೇಲೆ ನಿಮಗೆ ನಿಯಂತ್ರಣ ಇಲ್ಲದಿದ್ದರೆ, ಅದು ಸರಿಯಲ್ಲ. 

ಸಣ್ಣ ವಿಷಯಗಳ ಮೇಲಿನ ನಿರ್ಬಂಧ ಹೇರುವುದು ಮುಂದೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸಬಹುದು. ಅಂತಹ ವ್ಯಕ್ತಿಯೊಂದಿಗೆ ನಿಮ್ಮ ಜೀವನವನ್ನು ಕಳೆಯಲು ನೀವು ಯೋಚಿಸುತ್ತಿದ್ದರೆ, ಮತ್ತೊಮ್ಮೆ ಆ ಬಗ್ಗೆ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳೋದು ಒಳ್ಳೆಯದು. 

ಸಂಗಾತಿಯು ಮಾತು ಮಾತಿಗೂ ನಿಮ್ಮನ್ನು ಟೀಕಿಸಿದರೆ, ಈ ನಡವಳಿಕೆಯು ಸಂಬಂಧಕ್ಕೆ ತುಂಬಾ ವಿಷಕಾರಿಯಾಗುತ್ತೆ. ಒಂದು ವೇಳೆ ಅವರು ನೀವು ಮಾಡುವ ಕೆಲಸ ಸರಿಯಲ್ಲ, ಅದಕ್ಕಿಂತ ಚೆನ್ನಾಗಿ ಮಾಡಬಹುದು ಎಂದು ಮಾರ್ಗ ದರ್ಶನ ನೀಡಿದ್ರೆ ಓಕೆ. ಅವರನ್ನು ಒಪ್ಪಿಕೊಳ್ಳಬಹುದು. 

ಸಂಗಾತಿಯೂ ನಿಮ್ಮ ಪ್ರತಿ ಕೆಲಸಕ್ಕೂ ಅಡ್ಡಿ ಪಡಿಸುತ್ತಿದ್ದರೆ, ನೀವು ಅವರಿಗಾಗಿ ಏನೇ ಮಾಡಿದರೂ ಅದಕ್ಕೆ ಕೊಂಕು ನುಡಿಯುತ್ತಿದ್ದರೆ, ನಿಮ್ಮನ್ನು ಇತರರಿಗೆ ಹೋಲಿಕೆ ಮಾಡಿ ಬೈಯ್ಯುತ್ತಿದ್ದರೆ ಅಂತಹ ಸಂಗಾತಿಯಿಂದ ದೂರ ಇರೋದೆ ಒಳ್ಳೆಯದು ಅನ್ನೋದನ್ನು ನೀವು ಅರ್ಥ ಮಾಡಿಕೊಳ್ಳಬೇಕು. 
 

Latest Videos

click me!