ನಿಶ್ಚಿತಾರ್ಥ ಆಗಿದ್ಯಾ? ಮದ್ವೆಗೂ ಮುನ್ನ ಈ ತಪ್ಪನ್ನೆಲ್ಲ ಅಪ್ಪಿತಪ್ಪಿಯೂ ಮಾಡ್ಬೇಡಿ…

First Published | Mar 8, 2023, 5:01 PM IST

ನಿಶ್ಚಿತಾರ್ಥ ಮತ್ತು ಮದುವೆ ನಡುವಿನ ಈ ಸಮಯವು ಯುವ ದಂಪತಿಗಳಿಗೆ ಎಷ್ಟು ಮುಖ್ಯವೋ, ಇದು ಎರಡೂ ಕುಟುಂಬಕ್ಕೂ ಅಷ್ಟೇ ಮುಖ್ಯ. ಎರಡೂ ಕಡೆಯವರು ಸಂಬಂಧದಲ್ಲಿ ಆರಾಮದಾಯಕವಾಗಿರಲು ಪ್ರಯತ್ನಿಸುತ್ತಾರೆ. ಆದರೆ ಈ ಸಮಯದಲ್ಲಿ, ಕೆಲವು ವಿಷಯಗಳು ಸಂಭವಿಸದಂತೆ ನೋಡಿಕೊಳ್ಳೋದು ಮುಖ್ಯ. ಯಾಕಂದ್ರೆ ಈ ರೀತಿಯಾದ್ರೆ ಸಂಬಂಧವು ಮದುವೆವರೆಗೆ ಮುಂದುವರೆಯುವ ಸಾಧ್ಯತೆ ಕಡಿಮೆ ಇರುತ್ತೆ. ಆದುದರಿಂದ ಈ ಸಮಯದಲ್ಲಿ ಏನು ಮಾಡಬೇಕು? ಅನ್ನೋದನ್ನು ತಿಳಿಯೋಣ. 

ನೀವು ಹೇಗಿದ್ದೀರೋ ಹಾಗೆಯೇ ಇರಿ (be yourself)
ನಿಶ್ಚಿತಾರ್ಥದ ನಂತರ ಹುಡುಗರು ಮತ್ತು ಹುಡುಗಿಯರು ಭೇಟಿಯಾಗುವುದು ಅಥವಾ ಮಾತನಾಡುವುದು ಸಾಮಾನ್ಯ. ಪರಸ್ಪರರ ಬಗ್ಗೆ ತಿಳಿದುಕೊಳ್ಳಲು ಹೀಗೆ ಮಾಡ್ತಾರೆ ನಿಜ. ಆದರೆ ಇದರಿಂದ ಸಮಸ್ಯೆಯೂ ಉಂಟಾಗಬಹುದು. ಹೆಚ್ಚಾಗಿ ಸಂಗಾತಿಯನ್ನು ಮೆಚ್ಚಿಸಲು ಅವರಿಗೆ ಇಷ್ಟ ಬಂದಂತೆ ಇರಲು ಆರಂಭಿಸುತ್ತೇವೆ. ಆದರೆ ಮುಂದೆ ನೀವು ಹಾಗೆ ಇಲ್ಲ ಎಂದು ತಿಳಿದಾಗ ಜಗಳ ಹೆಚ್ಚಾಗಬಹುದು. ಹಾಗಾಗಿ ನೀವು ನೀವಾಗಿರಲು ಪ್ರಯತ್ನಿಸಿ.
 

ನೀವೇ ಮಾಲೀಕರಂತೆ ವರ್ತಿಸಬೇಡಿ 
ಮದುವೆಗೆ ಮುನ್ನವೇ ಸಂಗಾತಿಯ ಮೇಲೆ ಕಾಮಾಂಡ್ ಮಾಡೋದನ್ನು ಮಾಡಬೇಡಿ. ಅವರು ಈಗ ಅವರ ತಂದೆಯ ಮನೆಯಲ್ಲಿರುತ್ತಾರೆ, ಅವರಿಗೆ ಅವರದೇ ಆದ ಆಯ್ಕೆ ಸ್ವಾತಂತ್ರ್ಯ ಇದೆ. ತಾನು ಏನು ಮಾಡಬೇಕು? ಏನು ಮಾಡಬಾರದು ಅನ್ನೋದು ಅವರಿಗೂ ತಿಳಿದಿದೆ. ಹಾಗಾಗಿ ಅವರನ್ನು ಗುಲಾಮರಂತೆ ನಡೆಸೋದನ್ನು ಬಿಟ್ರೆ ಉತ್ತಮ. 

Tap to resize

ಮಾತುಕತೆ ಇತಿಮಿತಿಯಲ್ಲಿರಲಿ
ಮದುವೆಗೆ ಮೊದಲು ನೀವು ಪರಸ್ಪರ ಹತ್ತಿರವಾದಷ್ಟೂ, ಹೆಚ್ಚಿನ ವಿಷಯಗಳು ಸಂಭವಿಸುತ್ತವೆ (limited conversation). ಹೆಚ್ಚು ಭೇಟಿಯಾಗುವುದರಿಂದ, ನೀವು ಪರಸ್ಪರ ಅರ್ಥಮಾಡಿಕೊಳ್ಳುವುದು ಹೆಚ್ಚಿ, ಜೊತೆಗೆ ಏನಾದರೂ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು. ಆದ್ದರಿಂದ ನಿಶ್ಚಿತಾರ್ಥ ಮತ್ತು ಮದುವೆಯ ನಡುವಿನ ಅವಧಿಯಲ್ಲಿ ಸಂಬಂಧ ತನ್ನದೇ ಆದ ವೇಗದಲ್ಲಿ ನಡೆಯಲಿ. ಮೀಟಿಂಗ್ ಮತ್ತು ಫೋನಿನಲ್ಲಿ ಮಾತನಾಡುವುದನ್ನು ಮಿತಿಗೊಳಿಸಿ. ಆಗಾಗ್ಗೆ ಹುಡುಗಿಯರು ಫೋನ್ ನಲ್ಲಿ ಮಾತನಾಡುವಾಗ ಹುಡುಗನ ಮುಂದೆ ತಮ್ಮನ್ನು ಸಂಪೂರ್ಣವಾಗಿ ತೆರೆದುಕೊಳ್ಳುತ್ತಾರೆ. ಇವುಗಳನ್ನು ತಪ್ಪಿಸಿ.
 

ಫ್ಲರ್ಟಿಂಗ್ ನಿಲ್ಲಿಸಿ (stop flirting)
ಅನೇಕ ಜನರು ಆಗಾಗ್ಗೆ ಫ್ಲರ್ಟಿಂಗ್ ಮಾಡುವ ಅಭ್ಯಾಸ ಹೊಂದಿರುತ್ತಾರೆ ಮತ್ತು ನಿಶ್ಚಿತಾರ್ಥದ ನಂತರವೂ ಅದು ಮುಂದುವರೆಯುತ್ತೆ. ಆದರೆ ಈ ಅಭ್ಯಾಸವು ನಿಮ್ಮ ಭಾವಿ ಸಂಗಾತಿಯ ದೃಷ್ಟಿಯಲ್ಲಿ ನಿಮ್ಮ ಬಗ್ಗೆ ಕೀಳು ಭಾವನೆ ಮೂಡಿಸಬಹುದು. ನಿಮ್ಮ ಫ್ಲರ್ಟಿಂಗ್ ಅಭ್ಯಾಸ ನಿಮ್ಮ ಸಂಬಂಧಕ್ಕೆ ತುಂಬಾ ಮಾರಕವಾಗಬಹುದು. ಆದುದರಿಂದ ಈ ಅಭ್ಯಾಸ ನಿಲ್ಲಿಸಿ.

ದುಂದು ವೆಚ್ಚಕ್ಕೆ ಕಡಿವಾಣ
ಮದುವೆಗೆ ಮುಂಚಿತವಾಗಿ, ಜನರು ವಿಪರೀತ ಉತ್ಸಾಹದಿಂದ ಪರಸ್ಪರ ಉಡುಗೊರೆಗಳನ್ನು ನೀಡಲು ಪ್ರಾರಂಭಿಸುತ್ತಾರೆ, ಪ್ರಯಾಣದ ಹೆಸರಿನಲ್ಲಿ ಅನಗತ್ಯ ಹಣ ಖರ್ಚು ಮಾಡುತ್ತಾರೆ (do not waste money), ಇದು ನೇರವಾಗಿ ಅನಗತ್ಯ ಖರ್ಚುಗಳಲ್ಲಿ ಬರುತ್ತದೆ. ಇದರಿಂದ ನಿಮಗೂ ನಿಮ್ಮ ಮನೆಯವರಿಗೂ ಆರ್ಥಿಕ ನಷ್ಟ ಉಂಟಾಗಬಹುದು. ಹಣದ ಮಹತ್ವವನ್ನು ಅರ್ಥಮಾಡಿಕೊಂಡು, ಅದನ್ನು ನಿಮ್ಮ ಭವಿಷ್ಯಕ್ಕಾಗಿ ಎತ್ತಿಡಿ. ಇದರಿಂದ ಎಲ್ಲವೂ ಚೆನ್ನಾಗಿರುತ್ತೆ. 

ದೈಹಿಕ ಸಂಬಂಧಗಳಿಂದ ಅಂತರ 
ನಿಶ್ಚಿತಾರ್ಥ ಮತ್ತು ಮದುವೆ ನಡುವೆ ಸಾಕಷ್ಟು ಸಮಯವಿದ್ದಾಗ, ಒಬ್ಬರನ್ನೊಬ್ಬರು ಹೆಚ್ಚು ತಿಳಿದುಕೊಂಡು, ಇಬ್ಬರು ಭಾವನಾತ್ಮಕವಾಗಿ ಹತ್ತಿರವಾದಾಗ ದೈಹಿಕ ಸಂಬಂಧಗಳು ನಡೆಯುವ ಸಾಧ್ಯತೆ ಇದೆ. ಆದರೆ ಇದು ಮುಂದೆ ಸಂಬಂಧದಲ್ಲಿ ಹುಳಿ ಹಿಂಡಬಹುದು. ಹಾಗೆ ಮಾಡುವುದರಿಂದ ನಿರ್ದಿಷ್ಟವಾಗಿ ಹುಡುಗಿಯರ ಮೇಲೆ ಬೊಟ್ಟು ಮಾಡುತ್ತಾರೆ. ಈ ಸಂದರ್ಭದಲ್ಲಿ, ಸಮಾಜವು ಹುಡುಗಿಯನ್ನು ಮಾತ್ರ ದೂಷಿಸುತ್ತದೆ, ಹುಡುಗನನ್ನು ಸಂಪೂರ್ಣವಾಗಿ ಕ್ಷಮಿಸುತ್ತಾನೆ. ಆದ್ದರಿಂದ, ಮದುವೆಗೆ ಮೊದಲು ದೈಹಿಕ ಸಂಬಂಧಗಳನ್ನು (physical relationship) ಹೊಂದುವುದನ್ನು ತಪ್ಪಿಸಿ.
 

ಒಬ್ಬರಿಗೊಬ್ಬರು ಗೌರವ ನೀಡಿ (respect each other)
ಅದು ಹುಡುಗ ಅಥವಾ ಹುಡುಗಿಯಾಗಿರಲಿ, ಅವನು ತನ್ನ ಸಂಗಾತಿಯಿಂದ ಗೌರವವನ್ನು ನಿರೀಕ್ಷಿಸುತ್ತಾನೆ. ನಿಶ್ಚಿತಾರ್ಥದ ನಂತರ, ಮಾತುಕತೆ, ಭೇಟಿ ಆರಂಭವಾಗುತ್ತೆ. ಈ ಸಮಯದಲ್ಲಿ, ನೀವು ಅವರನ್ನು ಗೌರವಿಸದೇ ಇದ್ದರೆ, ಮದುವೆವರೆಗೂ ಸಂಬಂಧ ಮುಂದುವರೆಯೋದು ಕಷ್ಟ. ಸಂಬಂಧವು ಅಲ್ಲಿಗೆ ಕೊನೆಗೊಳ್ಳುತ್ತದೆ. ಆದ್ದರಿಂದ ನಿಶ್ಚಿತಾರ್ಥ ಮತ್ತು ಮದುವೆ ಸಮಯದಲ್ಲಿ ಪರಸ್ಪರ ಗೌರವ ನೀಡಿ. ಈ ಅಭ್ಯಾಸ ಮದುವೆಯ ನಂತರ ನಿಮ್ಮ ಜೀವನವನ್ನು ಸಂತೋಷ ಮತ್ತು ಬಲಪಡಿಸುತ್ತದೆ.

ರೋಮಾಂಚಕತೆ ಉಳಿಸಿಕೊಳ್ಳೋದು ಮುಖ್ಯ
ಅನೇಕ ಜೋಡಿಗಳು ಮದುವೆಗೂ ಮೊದಲು ತಮ್ಮ ಸಂಗಾತಿ ಜೊತೆ ಮಾತನಾಡಲು ಎಷ್ಟು ಉತ್ಸುಕರಾಗಿರುತ್ತಾರೆ ಅಂದ್ರೆ ಅವರು ತಮ್ಮ ಹೆಚ್ಚಿನ ಸಮಯವನ್ನು ಪರಸ್ಪರ ಮಾತನಾಡೋದ್ರಲ್ಲಿ ಕಳೆಯುತ್ತಾರೆ. ಸಂಭಾಷಣೆ ಒಳ್ಳೆಯದು, ಆದರೆ ಮದುವೆ ನಂತರ, ಇಬ್ಬರ ನಡುವೆ ರಸವತ್ತಾಗಿ ಮಾತನಾಡಲು ಏನು ಉಳಿಯೋದೇ ಇಲ್ಲ. ಅದಕ್ಕಾಗಿ ಮದುವೆಗೂ ಮುನ್ನ ಎಲ್ಲಾ ಸಣ್ಣ ಪುಟ್ಟ ವಿಷಯ ಹೇಳಬೇಡಿ. ಅದನ್ನೆಲ್ಲಾ ಹೇಳಲು ಮದುವೆಯ ಬಳಿಕ ಸಮಯ ಇದೆ.

Latest Videos

click me!