ಮದುವೆಯಂತಹ ಸಂಬಂಧದಲ್ಲಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಬಾಳಬೇಕಾದುದು ನಿಜ. ಆದರೆ ಇದರ ಜೊತೆಗೆ, ಯಾವಾಗ ತಲೆಬಾಗಬೇಕು ಮತ್ತು ನಿಮಗಾಗಿ ಯಾವಾಗ ಧ್ವನಿ ಎತ್ತಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಸಂಬಂಧಗಳು ಸರಿ ಅಥವಾ ತಪ್ಪಿನಿಂದ ನಡೆಯುವುದಿಲ್ಲ ಆದರೆ ಹೊಂದಾಣಿಕೆಯಿಂದ ನಡೆಯುತ್ತವೆ. ಇದನ್ನು ಹೆಚ್ಚಿನ ಜನರು 'ರಾಜಿ' (compromise) ಎಂದು ಭಾವಿಸುವ ತಪ್ಪನ್ನು ಮಾಡುತ್ತಾರೆ. ಇದು ಮಾತ್ರವಲ್ಲ, ಕೆಲವೊಮ್ಮೆ ಜನರು ಸಂಬಂಧವನ್ನು ಉಳಿಸಲು ಎಲ್ಲ ವಿಷಯಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಾರೆ, ಇದರಿಂದ ಅವರು ತನ್ನತನವನ್ನು ಕಳೆದುಕೊಳ್ಳುತ್ತಾರೆ.
ಎಲ್ಲಾದಕ್ಕೂ ರಾಜಿ ಮಾಡಿಕೊಳ್ಳುವ ಅಭ್ಯಾಸ ಮದುವೆಯಾದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತೆ. ಹೆಚ್ಚು ಭಾವನಾತ್ಮಕವಾಗಿರುವುದರಿಂದ, ಸಂಗಾತಿಯನ್ನು ಸಂತೋಷವಾಗಿಡಲು ಅವಳು ಕೆಲವೊಮ್ಮೆ ತನ್ನ ಎಲ್ಲಾ ಸಂತೋಷವನ್ನು ತ್ಯಾಗ ಮಾಡಲು ಒಪ್ಪುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ಮಾರ್ಚ್ 8 ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ (international womens day) ಸಂದರ್ಭದಲ್ಲಿ, ನಿಮ್ಮನ್ನು ಭಾವನಾತ್ಮಕವಾಗಿ ಸಬಲೀಕರಣಗೊಳಿಸಲು ನೀವು ಯಾವ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂಬುದರ ಬಗ್ಗೆ ಹೇಳ್ತೀವಿ ಕೇಳಿ. ಅಷ್ಟೇ ಅಲ್ಲ, ನೀವು ಇದ್ದಂತೆ ನಿಮ್ಮನ್ನು ಇಷ್ಟ ಪಡುವವನು ಪರ್ಫೆಕ್ಟ್ ಪತಿ ಅನ್ನೋದನ್ನು
ಆತ್ಮಗೌರವದಲ್ಲಿ ರಾಜಿ ಮಾಡಿಕೊಳ್ಳಬೇಡಿ
ಆತ್ಮಗೌರವವನ್ನು (self respect) ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು. ಆತ್ಮಗೌರವವಿಲ್ಲದ ವ್ಯಕ್ತಿಯು ಸತ್ತ ವ್ಯಕ್ತಿಯಂತೆ ಎಂದು ನಂಬಲಾಗಿದೆ. ಸಂಗಾತಿಯು ನಿಮ್ಮ ಆತ್ಮಗೌರವವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಗೆ ನಿಮ್ಮನ್ನು ಕರೆತಂದರೆ, ನೀವು ಅವರೊಂದಿಗಿನ ಸಂಬಂಧವನ್ನು ಮುರಿಯುವುದು ಉತ್ತಮ. ಏಕೆಂದರೆ ನಿಮ್ಮ ಆತ್ಮ ಗೌರವದೊಂದಿಗೆ ರಾಜಿ ಮಾಡಿಕೊಳ್ಳಬೇಕಾದ್ರೆ, ಅದಕ್ಕಿಮ್ತ ಕೆಟ್ಟ ವಿಷ್ಯ ಬೇರಿಲ್ಲ.
ನಿಮ್ಮನ್ನು ನೀವು ಮರೆಯಬೇಡಿ (make your own identity)
ಪ್ರೀತಿಯಲ್ಲಿ ಬಿದ್ದ ನಂತರ, ಅಥವಾ ಮದುವೆಯಾದ ಬಳಿಕ ಮಹಿಳೆಯರು ಹೆಚ್ಚಾಗಿ ತಮ್ಮನ್ನು ತಾವು ಗರ್ಲ್ ಫ್ರೆಂಡ್, ಹೆಂಡತಿಯ ಸ್ಥಾನಕ್ಕೆ ಮಾತ್ರ ಸೀಮಿತಗೊಳಿಸುತ್ತಾರೆ. ಆದರೆ ಹಾಗೆ ಮಾಡುವುದು ತಪ್ಪು. ನೀವು ಇಂದು ನಿಮ್ಮನ್ನು ಮರೆತಿರುವಂತೆ, ನಾಳೆ ನಿಮ್ಮ ಸಂಗಾತಿ ನಿಮ್ಮನ್ನು ಮರೆತು ಬೇರೆಯವರ ಜೊತೆ ಹೋದರೆ ಏನು ಮಾಡೋದು? ಅದಕ್ಕಾಗಿ ನಿಮ್ಮ ವಿಭಿನ್ನ ಗುರುತನ್ನು ಸಹ ರೂಪಿಸಿಕೊಳ್ಳೋದು ಮುಖ್ಯ.
ಕುಟುಂಬ ಸ್ನೇಹಿತರಿಂದ ಅಂತರ ಕಾಯ್ದುಕೊಳ್ಳಬೇಡಿ (do not stay away from family , friends)
ನಿಮ್ಮ ಸಂಗಾತಿಯನ್ನು ನೀವು ಎಷ್ಟೇ ಪ್ರೀತಿಸಿದರೂ, ಅವರ ಆಜ್ಞೆಯ ಮೇರೆಗೆ ನಿಮ್ಮ ಕುಟುಂಬ ಮತ್ತು ಸ್ನೇಹಿತರಿಂದ ಎಂದಿಗೂ ದೂರವಿರಬೇಡಿ. ಮದುವೆಯ ನಂತರ ನಿಮ್ಮ ಜೀವನದಲ್ಲಿ ಕುಟುಂಬ, ಸ್ನೇಹಿತರ ಪಾತ್ರವು ಕಡಿಮೆಯಾಗಬಹುದು, ಏಕೆಂದರೆ ನೀವು ಈಗ ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತಿದ್ದೀರಿ. ಆದರೆ ನಿಮ್ಮ ಸಂಗಾತಿಯ ಕಾರಣದಿಂದಾಗಿ ಅವರೊಂದಿಗೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಮೂರ್ಖತನ.
ಲೈಂಗಿಕ ಅನುಕೂಲದ ಬಗ್ಗೆ ಕಾಳಜಿ ವಹಿಸಿ
ಗಂಡನನ್ನು ಸಂತೋಷವಾಗಿಡುವುದು ಹೆಂಡತಿಯ ಧರ್ಮವಾಗಿದೆ' ಇದನ್ನು ನಮ್ಮ ದೇಶದ ಮಹಿಳೆಯರು ಮೊದಲಿನಿಂದಲೂ ರೂಢಿ ಮಾಡಿಕೊಂಡು ಬಂದಿದ್ದಾರೆ. ಇದರಿಂದ ಮಹಿಳೆಯರು ಹೆಚ್ಚಾಗಿ ತನ್ನ ಸಂತೋಷದ ಬಗ್ಗೆ ಚಿಂತಿಸದೆ ತನ್ನ ಸಂಗಾತಿಯನ್ನು ಸಂತೋಷವಾಗಿರಿಸಲು ಎಲ್ಲವನ್ನೂ ಮಾಡುತ್ತಾರೆ. ಆದರೆ ಇದು ತಪ್ಪು.
ಒಬ್ಬ ಮಹಿಳೆ ತನ್ನ ಲೈಂಗಿಕ ಸುಖಕ್ಕಾಗಿ (sex desire) ಧ್ವನಿ ಎತ್ತಿದಾಗ, ಅವಳನ್ನು ಚಾರಿತ್ರ್ಯಹೀನ ಎಂದು ಕರೆಯಲಾಗುತ್ತದೆ. ನಿಮ್ಮ ಸಂಗಾತಿ ಕೂಡ ಅದೇ ರೀತಿಯ ಆಲೋಚನೆಯನ್ನು ಹೊಂದಿದ್ದರೆ, ಮತ್ತು ಮಲಗುವ ಕೋಣೆಯಲ್ಲಿ ನಿಮ್ಮ ಇಷ್ಟಗಳು ಮತ್ತು ಇಷ್ಟವಿಲ್ಲದಿರುವ ಬಗ್ಗೆ ಅವರು ಕಾಳಜಿ ವಹಿಸದಿದ್ದರೆ, ಈ ಸಂಬಂಧದಲ್ಲಿ ನಿಮ್ಮ ಅಸ್ತಿತ್ವ ನಗಣ್ಯ ಎಂದು ಅರ್ಥಮಾಡಿಕೊಳ್ಳಿ.
ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ
ನೀವು ಭಾರತದಂತಹ ದೇಶದಲ್ಲಿ ಜನಿಸಿದ್ದರೆ, ಬೆಳಿಗ್ಗೆಯಿಂದ ರಾತ್ರಿಯವರೆಗೆ, ನಿಮ್ಮ ತಾಯಿ ಮನೆ ಕೆಲಸ ಮಾಡುವುದನ್ನು ಮತ್ತು ನಿಮ್ಮ ತಂದೆಯ ಎಲ್ಲಾ ಅಗತ್ಯಗಳನ್ನು ಪೂರೈಸುವುದನ್ನು ನೀವು ನೋಡಿರಬೇಕು. ಏಕೆಂದರೆ ನಮ್ಮ ದೇಶದ ಮಹಿಳೆಯರು ತಮ್ಮ ಗಂಡಂದಿರನ್ನು ದೇವರು ಎಂದು ಕರೆಯುವುದು ಮಾತ್ರವಲ್ಲ, ಅವರನ್ನು ದೇವರುಗಳೆಂದು ಪರಿಗಣಿಸಿದ್ದಾರೆ.
ಅಂತಹ ಪರಿಸ್ಥಿತಿಯಲ್ಲಿ, ಮಹಿಳೆ ಹಾಸಿಗೆಯ ಮೇಲೆ ಬೀಳುವವರೆಗೆ ಪ್ರತಿಯೊಂದು ಸಂದರ್ಭದಲ್ಲೂ ತನ್ನ ಗಂಡನ ಅಗತ್ಯಗಳನ್ನು ಪೂರೈಸುವಲ್ಲಿ ನಿರತಳಾಗುತ್ತಾಳೆ. ಆದರೆ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ಸಮಾನವಾಗಿರಬೇಕು ಎಂಬುದನ್ನು ನೀವು ನೆನಪಿನಲ್ಲಿಡಬೇಕು. ಅಲ್ಲಿ ನಿಮ್ಮ ಸಂಗಾತಿಯ ಆರೋಗ್ಯದಷ್ಟೇ ನಿಮ್ಮ ಆರೋಗ್ಯವೂ ಮುಖ್ಯವಾಗಿರಬೇಕು (women health is important) ಅನ್ನೋದನ್ನು ನೆನಪಿಡಿ.