Engagement - Marriage ಮಧ್ಯೆ ತುಂಬಾ ಗ್ಯಾಪ್ ಇದ್ರೆ ಈ ಗೋಲ್ಡನ್ ಅವಕಾಶ ಮಿಸ್ ಮಾಡ್ಬೇಡಿ

Published : Nov 04, 2022, 01:14 PM IST

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಒಂದು ಮುಖ್ಯವಾದ ಘಟನೆಯಾಗಿದೆ. ಯಾಕೆಂದರೆ ಜೀವನಪೂರ್ತಿ ನಾವು ನಮ್ಮ ಜೀವನವನ್ನು ಅದೇ ಸಂಗಾತಿಯೊಂದಿಗೆ ಕಳೆಯಬೇಕು. ಆದುದರಿಂದ ಮದುವೆಗೂ ಮುನ್ನ ಒಬ್ಬರನ್ನೊಬ್ಬರು ಸರಿಯಾಗಿ ತಿಳಿದುಕೊಳ್ಳೋದು ಮುಖ್ಯ. ನಿಶ್ಚಿತಾರ್ಥ ಮತ್ತು ಮದುವೆಯ ನಡುವಿನ ಸಮಯವು ತುಂಬಾ ಅಮೂಲ್ಯವಾಗಿರುತ್ತೆ. ಈ ಸಮಯದಲ್ಲಿ, ಇಬ್ಬರು ವ್ಯಕ್ತಿಗಳು ಪರಸ್ಪರ ಮಾತನಾಡುವುದಲ್ಲದೆ, ಪರಸ್ಪರ ಭೇಟಿಯಾಗುವ ಮೂಲಕ ತಮ್ಮ ಸಂಬಂಧವನ್ನು ಬಲಪಡಿಸುತ್ತಾರೆ. ಈ ಸಮಯವನ್ನು ನೀವು ಸರಿಯಾಗಿ ಉಪಯೋಗಿಸಿದ್ರೆ ನಿಮ್ಮ ವೈವಾಹಿಕ ಜೀವನ ಮಧುರವಾಗಿರೋದ್ರಲ್ಲಿ ಸಂಶಯವೇ ಇಲ್ಲ. ಅದಕ್ಕಾಗಿ ಏನು ಮಾಡಬೇಕು ಅನ್ನೋದನ್ನು ನೋಡೋಣ. 

PREV
110
Engagement - Marriage ಮಧ್ಯೆ ತುಂಬಾ ಗ್ಯಾಪ್ ಇದ್ರೆ ಈ ಗೋಲ್ಡನ್ ಅವಕಾಶ ಮಿಸ್ ಮಾಡ್ಬೇಡಿ

ನೀವು ನಿಶ್ಚಿತಾರ್ಥ (engagement) ಮಾಡಿಕೊಂಡಿದ್ದೀರಾ? ನಿಶ್ಚಿತಾರ್ಥ ಮತ್ತು ಮದುವೆಯ ನಡುವೆ ತುಂಬಾ ಸಮಯವಿದೆಯೇ? ಹೌದು ಎಂದಾದಲ್ಲಿ, ನೀವು ನಿಮ್ಮ ಜೀವನದ ತುಂಬಾ ಸುಂದರವಾದ ಸಮಯ ಹೊಂದಿದ್ದೀರಿ. ನಿಶ್ಚಿತಾರ್ಥದಿಂದ ಮದುವೆಯವರೆಗಿನ ಪ್ರಯಾಣವು ತುಂಬಾನೆ ಚೆನ್ನಾಗಿರುತ್ತೆ. ಈ ಸಮಯದಲ್ಲಿ ಎಲ್ಲವೂ ಫಿಲ್ಮೀ ಕಥೆಗಳಂತೆ ತೋರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಭಾವಿ ಪತಿಯನ್ನು ತುಂಬಾ ಹತ್ತಿರದಿಂದ ತಿಳಿದುಕೊಳ್ಳುವುದು ಮಾತ್ರವಲ್ಲದೆ, ಈ ಸಮಯದಲ್ಲಿ ಅವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹ ಅವಕಾಶ ಪಡೆಯುತ್ತೀರಿ.

210

ಆದರೆ ಈ ಸಮಯವು ತುಂಬಾ ಕಷ್ಟಕರವಾದದ್ದೂ ಆಗಿರುತ್ತೆ. ಏಕೆಂದರೆ ಇದು ಪರಸ್ಪರ ಡೇಟಿಂಗ್ (dating) ಮಾಡುವ ಸಮಯವಲ್ಲ. ಬದಲಾಗಿ ನೀವು ಹೊಸ ಸಂಬಂಧವನ್ನು ಪ್ರವೇಶಿಸುತ್ತಿರುವ ಸಮಯ, ಅಂದರೆ ಮದುವೆ ಬಗ್ಗೆ ಸರಿಯಾಗಿ ಯೋಚನೆ ಮಾಡುವಂತಹ ಸಮಯವಾಗಿದೆ. ಇಷ್ಟೇ ಅಲ್ಲ, ಈ ಸಮಯದಲ್ಲಿ ನಿಮ್ಮ ಭಾವಿ ಸಂಗಾತಿಯೊಂದಿಗೆ ಉತ್ತಮ ಸಂಬಂಧ ಹೊಂದಲು ಅವಕಾಶ ಸಹ ಪಡೆಯುತ್ತೀರಿ. ಹಾಗಾದ್ರೆ ಈ ಸಮಯದಲ್ಲಿ ನೀವೇನು ಮಾಡಬೇಕು?

310

ಇತರ ವಿಷಯಗಳನ್ನು ಚರ್ಚಿಸಿ
ನಿಶ್ಚಿತಾರ್ಥದ ನಂತರದ ಹೆಚ್ಚಿನ ಸಮಯವು ಮದುವೆ ಬಗ್ಗೆ ಪ್ಲ್ಯಾನ್ (planning of marriage) ಮಾಡೋದ್ರಲ್ಲೇ ಕಳೆದು ಹೋಗುತ್ತದೆ. ಆದರೆ ನೀವು ನಿಮ್ಮ ಸಂಬಂಧವನ್ನು ಬಲಪಡಿಸಲು ಬಯಸಿದರೆ, ಮದುವೆಯ ದಿನದ ಬಗ್ಗೆ ಮಾತನಾಡೋದನ್ನು ಬಿಟ್ಟು ಬೇರೆ ಏನನ್ನಾದರೂ ಚರ್ಚಿಸಿ. ನಿಮ್ಮ ಹನಿಮೂನ್ ಡೆಸ್ಟಿನೇಶನ್ (honeymoon destination) ಬಗ್ಗೆ ಚರ್ಚಿಸಬಹುದು. ಜೊತೆಯಾಗಿ ಸೇರಿ ಏನಾದರೂ ಆಕ್ಟಿವಿಟಿ ಸಹ ಮಾಡಬಹುದು, ಇದರಿಂದಾಗಿ ಒತ್ತಡ ಕಡಿಮೆಯಾಗುತ್ತದೆ.

410

ಭವಿಷ್ಯದ ಯೋಜನೆ
ಪ್ರತಿಯೊಬ್ಬರೂ ಅಲ್ಪಾವಧಿಯ ಅಥವಾ ದೀರ್ಘಕಾಲೀನ ಕನಸನ್ನು ಹೊಂದಿರುತ್ತಾರೆ, ಅದನ್ನು ಅವರು ಮದುವೆಗೆ ಮೊದಲು ಅಥವಾ ನಂತರ ಈಡೇರಿಸಲು ಬಯಸುತ್ತಾರೆ. ಈ ಕನಸುಗಳನ್ನು ನಿಮ್ಮ ಸಂಗಾತಿಯೊಂದಿಗೆ (share your dream) ಹಂಚಿಕೊಳ್ಳಿ. ಹೀಗೆ ಮಾಡೊದ್ರಿಂದ, ನೀವಿಬ್ಬರೂ ನಿಮ್ಮ ಕನಸುಗಳನ್ನು ಮೂಟೆ ಕಟ್ಟಿ ಎಸೆಯಬೇಕಾಗಿಲ್ಲ, ಆದರೆ ಪರಸ್ಪರರ ಬಯಕೆಗಳನ್ನು ಗೌರವಿಸುವ ಮೂಲಕ ನೀವು ಸಂಬಂಧವನ್ನು ಬಲಪಡಿಸಬಹುದು.

510

ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡ್ಕೊಳಿ
ನಿಶ್ಚಿತಾರ್ಥದ ನಂತರ ನೀವು ನಿಜವಾಗಿಯೂ ನಿಮ್ಮ ಸಂಗಾತಿಯನ್ನು ಚೆನ್ನಾಗಿ ತಿಳಿದುಕೊಳ್ಳಲು (understanding) ಪ್ರಯತ್ನಿಸಬೇಕು. ಇಷ್ಟೇ ಅಲ್ಲ, ಈ ಸಮಯದಲ್ಲಿ ನೀವು ಸ್ಟ್ರಾಂಗ್ ರಿಲೇಶನ್ ಶಿಪ್ ಬಿಲ್ಡ್ ಮಾಡಲು ಪ್ರಯತ್ನಿಸಬೇಕು. ಏಕೆಂದರೆ ನೀವು ನಿಮ್ಮ ಇಡೀ ಜೀವನವನ್ನು ಈ ವ್ಯಕ್ತಿಯೊಂದಿಗೆ ಕಳೆಯಲಿದ್ದೀರಿ. ಹಾಗಾಗಿ, ನೀವು ಮದುವೆಯಾಗೋ ಹುಡುಗನಿಗೆ ಏನು ಇಷ್ಟ, ಏನು ಇಷ್ಟ ಇಲ್ಲ ಅನ್ನೋದನ್ನು ತಿಳಿಯಲು ಪ್ರಯತ್ನಿಸಿ. ಇದರಿಂದ ಬಾಂಧವ್ಯ ಗಟ್ಟಿಯಾಗುತ್ತೆ.

610

ಒಬ್ಬರಿಗೊಬ್ಬರು ಪ್ರಾಮಾಣಿಕರಾಗಿರಿ
ವಿವಾಹವು ಪ್ರಾಮಾಣಿಕತೆ ಮತ್ತು ನಂಬಿಕೆಯ ಅಡಿಪಾಯದ ಮೇಲೆ ನಿಂತಿದೆ. ನಿಮ್ಮ ಸಂಬಂಧವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಿಮ್ಮೊಂದಿಗೆ ಪ್ರಾಮಾಣಿಕರಾಗಿರುವುದು ಅಷ್ಟೇ ಮುಖ್ಯ. ಅನೇಕ ಬಾರಿ ಜನರು ಒಬ್ಬರ ಬಗ್ಗೆ ಇನ್ನೊಬ್ಬರು ತಿಳಿಯದೇ ಮದುವೆಯಾಗುತ್ತಾರೆ. ಆದರೆ ಅವರು ಅರಿತುಕೊಳ್ಳುವ ಹೊತ್ತಿಗೆ, ತುಂಬಾ ತಡವಾಗಿರುತ್ತೆ. ನಿಮಗೆ ಏನಾದರೂ ತೊಂದರೆಯಾಗುತ್ತಿದ್ದರೆ, ಅದನ್ನು ನೀವು ಮದುವೆಯಾಗಲಿರುವ ಹುಡುಗನ ಜೊತೆ ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಿ. ಇದರಿಂದ ಸಮಸ್ಯೆ ಶೀಘ್ರವೆ ಪರಿಹಾರವಾಗಬಹುದು.

710

ಸಂಬಂಧದಲ್ಲಿ ಬದ್ಧರಾಗಿರಿ
ನಿಶ್ಚಿತಾರ್ಥ ಮತ್ತು ಮದುವೆಯ ನಡುವೆ, ನಿಮ್ಮ ಸಂಗಾತಿಯು ಸಂಬಂಧಕ್ಕೆ ಬದ್ಧರಾಗಿದ್ದಾರೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಪ್ರಯತ್ನಿಸಿ. ಅವರು ಯಾವುದೇ ಹಿಂಜರಿಕೆಯಿಲ್ಲದೆ ನಿಮ್ಮೊಂದಿಗೆ ಜೀವನವನ್ನು ಕಳೆಯುವ(spending life) ಬಗ್ಗೆ ಮಾತನಾಡುತ್ತಾರೆಯೇ? ಇದೆಲ್ಲವನ್ನೂ ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಸಂಗಾತಿಗೆ ನೀವು ಅವರಿಗೆ ಮತ್ತು ಈ ಸಂಬಂಧಕ್ಕೆ ಎಷ್ಟು ಪ್ರಾಮಾಣಿಕರಾಗಿದ್ದೀರಿ ಎಂದು ತೋರಿಸುವ ಸಮಯ ಇದು.

810

ಕುಟುಂಬ ಸದಸ್ಯರನ್ನು ತಿಳಿದುಕೊಳ್ಳಿ
ನೀವು ನಿಮ್ಮ ಸಂಗಾತಿಯೊಂದಿಗೆ ಜೀವನವನ್ನು ಕಳೆಯುವುದನ್ನು ಕಲ್ಪಿಸಿಕೊಳ್ಳುತ್ತಿದ್ದರೂ ಸಹ. ಈ ಎಲ್ಲದರ ಮಧ್ಯೆ ಕುಟುಂಬವನ್ನು ನಿರ್ಲಕ್ಷಿಸಬೇಡಿ. ಹ್ಯಾಪಿ ಮ್ಯಾರೀಡ್ ಲೈಫ್ (happy married life) ನಿಮ್ಮದಾಗಲು ಕುಟುಂಬ ಸದಸ್ಯರೊಂದಿಗೆ ಬಲವಾದ ಬಂಧ ಹೊಂದಿರುವುದು ಸಹ ಮುಖ್ಯ. ಅವರ ಹೃದಯವನ್ನು ಗೆಲ್ಲಲು ನಿಮ್ಮ ಸಂಗಾತಿ ಏನು ಮಾಡುತ್ತಾರೆಂದು ಕಂಡುಹಿಡಿಯಲು ಪ್ರಯತ್ನಿಸಿ. ನಿಮ್ಮ ಸಂಗಾತಿಯ ಕುಟುಂಬವನ್ನು ಉತ್ತಮವಾಗಿ ತಿಳಿದುಕೊಳ್ಳಲು ನೀವು ಅವರೊಂದಿಗೆ ಡಿನ್ನರ್ ಪ್ಲ್ಯಾನ್ ಮಾಡಬಹುದು.

910

ಫ್ಯಾಮಿಲಿ ಪ್ಲ್ಯಾನಿಂಗ್ ಬಗ್ಗೆ ಮಾತನಾಡಿ
ನಿಶ್ಚಿತಾರ್ಥದ ನಂತರದ ಜೀವನವು ಕೇವಲ ಡೇಟಿಂಗ್, ಸುತ್ತಾಟಕ್ಕೆ ಮಾತ್ರ ಸೀಮಿತವಾಗಿರೋದು ಸರಿಯಲ್ಲ, ಇದರ ಜೊತೆ, ಜೊತೆಗೆ ನೀವು ಫ್ಯಾಮಿಲಿ ಪ್ಲ್ಯಾನಿಂಗ್ (family planning) ಬಗ್ಗೆ ಚರ್ಚಿಸಬೇಕಾದ ಸಮಯವಾಗಿದೆ. ನಿಮ್ಮ ಸಂಗಾತಿಗೆ ಮಕ್ಕಳಲ್ಲಿ ಆಸಕ್ತಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಇದು ತೋರಿಸುತ್ತದೆ. ಇಷ್ಟೇ ಅಲ್ಲ, ಈ ಸಮಯದಲ್ಲಿ ಹಿಂದಿನ ಅನೇಕ ವಿಷಯಗಳು ನಿಮ್ಮ ಪ್ರಸ್ತುತ ಸಂಬಂಧದ ಮೇಲೆ ಪರಿಣಾಮ ಬೀರಬಹುದು.

1010

ಒಟ್ಟಲ್ಲಿ ಹೇಳಬೇಕೆಂದರೆ ಅನ್ಯೋನ್ಯತೆಯಿಂದ ಕೂಡಿದ ಬಾಂಧವ್ಯಕ್ಕಾಗಿ ನಿಮ್ಮ ವೈವಾಹಿಕ ಜೀವನಕ್ಕೆ ಅಡ್ಡಿಯಾಗುವ ಯಾವುದನ್ನಾದರೂ ನಿಮ್ಮ ಸಂಗಾತಿಗೆ ಮುಕ್ತವಾಗಿ ತಿಳಿಸಿ. ಈ ಸಮಯದಲ್ಲಿ ಅವರಿಗೆ ಬೇಕಾದ ರೀತಿಯಲ್ಲಿ ನೀವು ನಡೆದುಕೊಳ್ಳುವುದು ಸರಿಯಲ್ಲ, ನಿಮ್ಮ ಕುರಿತಾಗಿ ಮುಕ್ತವಾಗಿ ಅವರ ಬಳಿ ಹೇಳೋದು ಮುಖ್ಯ. ಇದರಿಂದ ಮ್ಯಾರೀಡ್ ಲೈಫ್ ತುಂಬಾನೆ ಚೆನ್ನಾಗಿರುತ್ತೆ. 

Read more Photos on
click me!

Recommended Stories