ಸಲಿಂಗಿ ವಿವಾಹ ಬಂಧನದಲ್ಲಿ ಮಿಸ್​ ಅರ್ಜೆಂಟೀನಾ, ಮಿಸ್ ಪ್ಯೂರ್ಟೋರಿಕೋ ಬ್ಯೂಟೀಸ್‌

Published : Nov 03, 2022, 12:29 PM ISTUpdated : Nov 03, 2022, 12:58 PM IST

2020ರಲ್ಲಿ ಮಿಸ್​ ಅರ್ಜೆಂಟೀನಾ ಮತ್ತು ಮಿಸ್​ ಪ್ಯೂರ್ಟೋರಿಕಾ ಆಗಿ ಕಿರೀಟ ಧರಿಸಿದ್ದ ಸುಂದರಿಯರು ಮದುವೆಯಾಗಿದ್ದಾರೆ. ಇಷ್ಟು ದಿನ ಅವರು ತಮ್ಮ ಪ್ರೇಮಸಂಬಂಧವನ್ನು ಗುಟ್ಟಾಗಿ ಕಾಪಾಡಿಕೊಂಡಿದ್ದರು. ಸದ್ಯ ಅಧಿಕೃತವಾಗಿ ಮದುವೆಯಾಗಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

PREV
17
ಸಲಿಂಗಿ ವಿವಾಹ ಬಂಧನದಲ್ಲಿ ಮಿಸ್​ ಅರ್ಜೆಂಟೀನಾ, ಮಿಸ್ ಪ್ಯೂರ್ಟೋರಿಕೋ ಬ್ಯೂಟೀಸ್‌

ಮಿಸ್ ಅರ್ಜೆಂಟೀನಾ ಮರಿಯಾನಾ ವರೆಲಾ ಮತ್ತು ಮಿಸ್​ ಪ್ಯೂರ್ಟೋರಿಕೋ ಫ್ಯಾಬಿಯೋಲಾ ವ್ಯಾಲೆಂಟಿನ್ ವಿವಾಹವಾಗಿದ್ದಾರೆ.​ ಇವರಿಬ್ಬರೂ ತಮ್ಮ ಪ್ರೇಮಸಂಬಂಧವನ್ನು (Relationship) ಇಷ್ಟು ದಿನ ಗುಟ್ಟಾಗಿ ಇಟ್ಟಿದ್ದರು. ಇದೀಗ ಪರಸ್ಪರ ಉಂಗುರ ಬದಲಾಯಿಸಿಕೊಂಡು ಸಾಮಾಜಿಕ ಜಾಲತಾಣದ (Social media) ಮೂಲಕ ತಮ್ಮ ಮದುವೆ (Marriage)ಯನ್ನು ಘೋಷಿಸಿಕೊಂಡಿದ್ದಾರೆ. 

27

ಅರ್ಜೆಂಟೀನಾ ಮತ್ತು ಪೋರ್ಟೊ ರಿಕೊವನ್ನು ಪ್ರತಿನಿಧಿಸುವ ಇಬ್ಬರು ಸೌಂದರ್ಯ ರಾಣಿಯರಾದ ಮರಿಯಾನಾ ವರೆಲಾ ಮತ್ತು ಫ್ಯಾಬಿಯೊಲಾ ವ್ಯಾಲೆಂಟ್ನ್ ಪರಸ್ಪರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರು Instagram ನಲ್ಲಿ ಫೋಟೋ ಮತ್ತು ವೀಡಿಯೋ ಹಂಚಿಕೊಂಡಿದ್ದು,  ನೆಟ್ಟಿಗರು ಇವರ ಮದುವೆ ವಿಡಿಯೋಗಳನ್ನು ನೋಡಿ ಶುಭಹಾರೈಸಿದ್ದಾರೆ.

37

ಥೈಲ್ಯಾಂಡ್​ನಲ್ಲಿ ನಡೆದ 2020 ರ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಮರಿಯಾನಾ ವರೆಲಾ ಮತ್ತು ಫ್ಯಾಬಿಯೋಲಾ ವ್ಯಾಲೆಂಟಿನ್ ಪರಸ್ಪರ ಭೇಟಿಯಾಗಿದ್ದರು. ಅಲ್ಲಿ ಅವರು ಕ್ರಮವಾಗಿ ಅರ್ಜೆಂಟೀನಾ ಮತ್ತು ಪೋರ್ಟೊ ರಿಕೊವನ್ನು ಪ್ರತಿನಿಧಿಸಿದ್ದರು. ಇಬ್ಬರೂ ಸಹ ಸ್ಪರ್ಧೆಯ (Competition) ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದ್ದರು. ನಂತರ ಇಬ್ಬರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಲೇ ಇದ್ದರು. 

47

ಈ ಇಬ್ಬರು ವಿಶ್ವ ಸುಂದರಿಯರು ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎಂದೇ ಅಭಿಮಾನಿಗಳು ಗುಸುಗುಸು ಮಾತನಾಡುತ್ತಿದ್ದರು. ಇದೀಗ ಮಿಸ್ ಅರ್ಜೆಂಟೀನಾ, ಮಿಸ್ ಪ್ಯೂರ್ಟೋರಿಕೋ ಪರಸ್ಪರ ಮದುವೆಯಾಗಿರುವುದಾಗಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಪ್ಯೂರ್ಟೋರಿಕೋದ ಮ್ಯಾರೇಜ್​ ಬ್ಯೂರೋ ಒಂದರಲ್ಲಿ ಇವರಿಬ್ಬರೂ ವಿವಾಹವಾಗಿದ್ದಾರೆ. ಇಬ್ಬರೂ ಬಿಳಿ ಉಡುಗೆಗಳನ್ನು ಧರಿಸಿ ಮಿಂಚಿದ್ದಾರೆ.

57

ಮೂರು ದಿನಗಳ ಹಿಂದೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮದುವೆಯ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ಇಬ್ಬರೂ ಒಟ್ಟಾಗಿ ವಿಹರಿಸಿದ ರೀಲ್ಸ್​ಗಳನ್ನೂ ಶೇರ್ ಮಾಡಿದ್ದರು. ವಿವಿಧ ಕ್ಷೇತ್ರಗಳ ಖ್ಯಾತನಾಮರು ಇವರಿಗೆ ಶುಭ ಹಾರೈಸಿದ್ದಾರೆ. 1.5 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ  ಇಷ್ಟಪಟ್ಟಿದ್ದಾರೆ. 

67

'ನಿಮ್ಮಿಬ್ಬರಿಗೂ ಅಭಿನಂದನೆಗಳು. MGIO ಯಾವಾಗಲೂ ಗಡಿಗಳಿಲ್ಲದೆ ಪ್ರೀತಿಯನ್ನು ಬೆಂಬಲಿಸುತ್ತದೆ' ಎಂದು ಮಿಸ್ ಗ್ರಾಂಡ್ ಇಂಟರ್ನ್ಯಾಷನಲ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಗಾಯಕ ಅಬೆನಾ ಅಕುಬಾ, ಫ್ಯಾಷನ್ ಮಾಡೆಲ್ ಮೋನಿಕ್ ಸಹ ನೂತನ ಜೋಡಿಗೆ ಶುಭಾಶಯಗಳನ್ನು ತಿಳಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

77

ಮೂರು ದಿನಗಳ ಹಿಂದೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು ಇದು ಹಲವಾರು ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ಮಿಸ್ ಅರ್ಜೆಂಟೀನಾ 2020ರ ಮರಿಯಾನಾ ವರೆಲಾ ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಎಲ್ಲಾ ಪ್ರೀತಿಗೆ ಧನ್ಯವಾದಗಳು. ನಿಮ್ಮ ಆಶೀರ್ವಾದದಿಂದ ನಾವು ಸಂತೋಷಗೊಂಡಿದ್ದೇವೆ' ಬರೆದಿದ್ದಾರೆ. 

Read more Photos on
click me!

Recommended Stories