ಇತ್ತೀಚಿನ ದಿನಗಳಲ್ಲಿ ಟ್ರೆಂಡಿಂಗ್‌ನಲ್ಲಿ ಇರೋದು ಅಂದ್ರೆ ಅದು ಡೇಟಿಂಗ್ (Dating) ಅಪ್ಲಿಕೇಶನ್ಸ್. ಹೌದು ಈ ಡೇಟಿಂಗ್ ಅಪ್ಲಿಕೇಶನ್‌ಗಳಿಗಾಗಿ ನಾವು ಸಾಕಷ್ಟು ಆಯ್ಕೆಗಳನ್ನು ಹೊಂದಿದ್ದೇವೆ. ಅದರ ಮೂಲಕ ನಾವು ಹೊಸ ಸ್ನೇಹಿತ, ಡೇಟಿಂಗ್ (Dating), ಪ್ರೀತಿ (Love) ಅಥವಾ ಸಂಗಾತಿಯನ್ನು ನಮಗಾಗಿ ಕಂಡುಕೊಳ್ಳಬಹುದು. ಇದು ಡೇಟಿಂಗ್ ಮಾಡಲು, ಲವ್ ಮಾಡಲು ಬೆಸ್ಟ್ ಆಪ್ ಎಂದರೆ ತಪ್ಪಾಗಲ್ಲ.
ಟಿಂಡರ್, ಹಿಂಜ್, ಬಂಬಲ್, ಓಕೆ ಕ್ಯುಪಿಡ್ ಇಂದಿನ ಯೂತ್ ಡೇಟಿಂಗ್‌ಗಾಗಿ ಬಳಸುತ್ತಿರುವ ಕೆಲವು ಪ್ರಮುಖ ಅಪ್ಲಿಕೇಶನ್ಸ್. ಆದರೆ ಈ ಡೇಟಿಂಗ್ ಅಪ್ಲಿಕೇಶನ್ಸ್ ಇತ್ತೀಚಿನ ದಿನಗಳಲ್ಲಿ ಮೋಸದ ಜಾಲ ಬೀಸುವ ತಾಣವಾಗುತ್ತಿವೆ. ಈ ಡೇಟಿಂಗ್ ಅಪ್ಲಿಕೇಶನ್ಸ್‌ಗಳನ್ನು ಬಳಸುವ ಮೂಲಕ ಜನರನ್ನು ಮೋಸ ಮತ್ತು ವಂಚನೆ(Fraud) ಮಾಡಿದ ಅನೇಕ ಪ್ರಕರಣಗಳ ಬಗ್ಗೆ ನಾವು ಕೇಳಿದ್ದೇವೆ. ಈ ಅಪ್ಲಿಕೇಶನ್ ಗಳಲ್ಲಿ ನಿಮ್ಮನ್ನು ನೀವು ಸುರಕ್ಷಿತವಾಗಿರಿಸಿಕೊಳ್ಳುವ ಕೆಲವು ಟ್ರಿಕ್ಸ್ ತಿಳಿದುಕೊಳ್ಳೋಣ.
ಡೇಟಿಂಗ್ ಅಪ್ಲಿಕೇಶನ್ ಅಥವಾ ಇನ್ನಾವುದೇ ಸೋಷಿಯಲ್ ಮೀಡಿಯಾ (Social Media) ಅಪ್ಲಿಕೇಶನ್‌ನಲ್ಲಿ ಪ್ರೊಫೈಲ್ ಅನ್ನು(Profile) ರಚಿಸಿದಾಗಲೆಲ್ಲಾ ಜಾಗರೂಕರಾಗಿರಿಬೇಕು. ಯಾಕೆಂದರೆ ಅದು ಸಾಮಾಜಿಕ ಮಾಧ್ಯಮ. ಇದರಲ್ಲಿ ಎಲ್ಲರೂ ನಿಮ್ಮ ಡಿಟೇಲ್ಸ್ ನೋಡೋದ್ರಿಂದ, ಆಗ ನಾವು ನಮ್ಮ ಭದ್ರತೆ (Security) ಮತ್ತು ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮಾಹಿತಿ ಹಂಚಿಕೊಳ್ಳಬೇಕು.
ಸಾರ್ವಜನಿಕಗೊಳಿಸಬಾರದ ಮಾಹಿತಿಯನ್ನು ಯಾವತ್ತೂ ಹಾಕಲೇಬೇಡಿ, ಇಲ್ಲದಿದ್ದರೆ ಅಪಾಯ. ಯಾವುದೇ ಡೇಟಿಂಗ್ ಅಪ್ಲಿಕೇಶನ್ ನಲ್ಲಿ ನಿಮ್ಮ ಇಮೇಲ್ ಐಡಿ, ಫೋನ್ ನಂಬರ್ (Phone number), ಸೋಷಿಯಲ್ ಮೀಡಿಯಾ ಐಡಿಯನ್ನು ನೀಡಬೇಡಿ. ನೀವು ನಂಬರ್ ಅನ್ನು ಹಂಚಿಕೊಳ್ಳಬೇಕಾದರೂ, ಈ ಅಪ್ಲಿಕೇಶನ್ ಗಳಿಗೆ ಮಾತ್ರ ಪ್ರತ್ಯೇಕ ಸಂಖ್ಯೆಯನ್ನು ಇಟ್ಟುಕೊಳ್ಳೋದು ಉಚಿತ. ಅಗತ್ಯವಿದ್ದರೆ ನೀವು ಅದನ್ನು ಸಹ ಆಫ್ ಮಾಡಬಹುದು.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು(Photo) ಹಾಕೋದನ್ನು ತಪ್ಪಿಸಿ. ಡೇಟಿಂಗ್ ಅಪ್ಲಿಕೇಶನ್ಗಳಲ್ಲಿ ಇತರ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಮಾಡಿದ ಚಿತ್ರಗಳನ್ನು ಪೋಸ್ಟ್ ಮಾಡುವುದನ್ನು ತಪ್ಪಿಸಿ. ಇದು ನಿಮ್ಮ ಫೋಟೋಗಳ ರಿವರ್ಸ್ ಇಮೇಜ್ ಸರ್ಚ್ ಮಾಡುವ ಮೂಲಕ ನಿಮ್ಮ ಸೋಷಿಯಲ್ ಮೀಡಿಯಾ ಪ್ರೊಫೈಲ್ ಪ್ರವೇಶಿಸಲು ಮತ್ತು ನಿಮ್ಮ ಪರ್ಸನಲ್ ವಿಷಯಗಳನ್ನು ಇನ್ನೊಬ್ಬರಿಗೆ ತಿಳಿಸುತ್ತೆ.
5 Online dating blunders that ಈ ವಿಷಯಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ
ಡೇಟಿಂಗ್ ಅಪ್ಲಿಕೇಶನ್ ಗಳಲ್ಲಿ ನೀವು ಭೇಟಿಯಾದ ವ್ಯಕ್ತಿಯೊಂದಿಗೆ ನಿಮ್ಮ ಫೋಟೋಗಳನ್ನು ತುಂಬಾ ವೇಗವಾಗಿ ಹಂಚಿಕೊಳ್ಳಬೇಡಿ. ವೀಡಿಯೊ ಕಾಲ್ (Video call) ಮಾಡುವಾಗ ತುಂಬಾ ಇಂಟಿಮೇಟ್ ದೃಶ್ಯಗಳನ್ನು ರೆಕಾರ್ಡ್ ಮಾಡಬೇಡಿ. ಜೊತೆಗೆ ಒಬ್ಬರ ಬಗ್ಗೆ ಇನ್ನೊಬ್ಬರು ಚೆನ್ನಾಗಿ ತಿಳಿಯೋವರೆಗೂ ಮನೆಯ ಅಡ್ರೆಸ್, ಕಚೇರಿ ಅಡ್ರೆಸ್ ನಂತಹ ಯಾವುದೇ ರೀತಿಯ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಹಣದ ವ್ಯವಹಾರ ಬೇಡವೇ ಬೇಡ… may ruin your relationship
ಮೀಟ್ ಮಾಡೋ ಮುನ್ನ ಎಚ್ಚರವಿರಲಿ
ಡೇಟಿಂಗ್ ಅಪ್ಲಿಕೇಶನ್ನಲ್ಲಿ ಭೇಟಿಯಾದ ವ್ಯಕ್ತಿಯನ್ನು ಮೊದಲ ಬಾರಿಗೆ ಎದುರುಬದುರಾಗಿ ಭೇಟಿಯಾಗಲು ರೆಸ್ಟೋರೆಂಟ್ ಅತ್ಯುತ್ತಮ ಸ್ಥಳ. ಅಲ್ಲಿ ಸುತ್ತಲೂ ಸಾಕಷ್ಟು ಜನರಿರುತ್ತಾರೆ. ಹೊರಡುವ ಮುನ್ನ, ಈ ಮೀಟಿಂಗ್ ನ ಮಾಹಿತಿಯನ್ನು ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಯಾರೊಂದಿಗಾದರೂ ಹಂಚಿಕೊಳ್ಳಿ. ಮೊದಲ-ಎರಡನೆಯ ಮೀಟಿಂಗ್ ನಲ್ಲಿ ಡ್ರಿಂಕ್ಸ್ (Drinks)ಮಾಡೋದು ತಪ್ಪಿಸಿ, ಅಥವಾ ಆ ವ್ಯಕ್ತಿಯನ್ನು ನಿಮ್ಮ ಮನೆಯ ಹತ್ತಿರ ಡ್ರಾಪ್ ಮಾಡಲು ನೀವು ಬಿಡಬೇಡಿ. ಮೊದಲ ಮೀಟಿಂಗ್ ನಲ್ಲಿ ಹೆಚ್ಚು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.
ಫಸ್ಟ್ ಮೀಟಿಂಗ್ ಸಕ್ಸಸ್ ಆಗದೇ ಇದ್ರೆ…?
ನಿಮ್ಮ ಮೊದಲ ಮೀಟಿಂಗ್ ನಿಮಗೆ ಇಷ್ಟವಾಗಿಲ್ಲ ಅಂದ್ರೆ, ಸ್ಪಷ್ಟವಾಗಿ ಅದನ್ನು ಹೇಳಿ. ನಿರಾಕರಿಸಿದರೂ, ನಿಮ್ಮ ಎದುರಿಗಿರುವ ವ್ಯಕ್ತಿಯು ನಿಮಗೆ ಕರೆ ಮಾಡುವ ಮೂಲಕ ಅಥವಾ ಸಂದೇಶ ಕಳುಹಿಸುವ ಮೂಲಕ ಕಿರುಕುಳ ನೀಡುತ್ತಿದ್ದರೆ, ತಕ್ಷಣವೇ ಸೈಬರ್ ಸೆಲ್ ಗೆ(Cyber cell) ದೂರು ಸಲ್ಲಿಸಿ. ಈ ಸಣ್ಣ ವಿಷಯಗಳನ್ನು ನೋಡಿಕೊಳ್ಳುವ ಮೂಲಕ, ನೀವು ಯಾವುದೇ ದೊಡ್ಡ ವಂಚನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.