ತಮ್ಮ ದೇಹದ ಸ್ಮೆಲ್ ಮಾಡ್ತಾರೆ:
ಇದು ನಿಮಗೆ ವಿಚಿತ್ರವಾಗಿ ತೋರಬಹುದು, ಆದರೆ ಪುರುಷರು ಹಾಗೆ ಮಾಡುತ್ತಾರೆ. ಅವರು ತಮ್ಮ ಕಂಕುಳನ್ನು ಅಥವಾ ತಮ್ಮ ಒಳಉಡುಪನ್ನು ತಾವು ಮೂಸಿ ನೋಡುತ್ತಾರೆ. ಇದು ಯಾರೂ ಇಲ್ಲದಾಗ ಕೆಲವು ಪುರುಷರು ಮಾಡ್ತಾರೆ. ಬೇಕಿದ್ರೆ ಕೇಳಿ ನೋಡಿ…
ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆಯೋದು:
ಹೆಚ್ಚಿನ ಪುರುಷರು ಶೌಚಾಲಯದಲ್ಲಿ (toilet) ಹೆಚ್ಚು ಸಮಯ ಕುಳಿತುಕೊಳ್ಳೋ ಅಭ್ಯಾಸ ಹೊಂದಿದ್ದಾರೆ. ತಮ್ಮ ಸಂಗಾತಿ ಹತ್ತಿರ ಇಲ್ಲದೇ ಇದ್ದಾಗ, ಅವರು ಅದರ ಲಾಭವನ್ನು ಪಡೆಯುತ್ತಾರೆ ಮತ್ತು ಮೊಬೈಲ್ ಫೋನ್ ನೊಂದಿಗೆ ಟಾಯ್ಲೆಟ್ ನಲ್ಲಿ ಗಂಟೆ ಗಟ್ಟಲೆ ಕುಳಿತುಕೊಳ್ಳುತ್ತಾರೆ.
ನೆಟ್ ನಲ್ಲಿ ಏನೇನೋ ನೋಡ್ತಾರೆ:
ನೀವು ನಿಮ್ಮ ಮನೆಯಿಂದ ಹೊರಬಂದ ತಕ್ಷಣ, ನಿಮ್ಮ ಸಂಗಾತಿ ಮನೆಯಲ್ಲಿ ಏಕಾಂಗಿಯಾಗಿ ಉಳಿಯುತ್ತಾರೆ. ಈ ಟೈಮ್ ನಲ್ಲಿ ಅವರು ರೂಮಲ್ಲಿ ಏಕಾಂಗಿಯಾಗಿ ಕುಳಿತು, ಏಕಾಂತದ ಆನಂದ ಪಡೆಯುತ್ತಾರೆ. ಅಂದ್ರೆ ಅವರು ಅಶ್ಲೀಲ ಚಿತ್ರಗಳನ್ನು ಅಥವಾ ತಮಗೆ ಬೇಕೆನಿಸಿದ ಯಾವ್ಯಾವುದೋ ಸೀರಿಸ್ ಗಳನ್ನು ಅವರು ನೋಡಿ ಎಂಜಾಯ್ ಮಾಡ್ತಾರೆ.
ಆಳ್ತಾರೆ ಗೊತ್ತಾ?:
ನಮ್ಮ ಸಮಾಜದಲ್ಲಿ ಪುರುಷರು ಆಳಬಾರದು ಎನ್ನುತ್ತಾರೆ. ಸಾಮನ್ಯವಾಗಿ ನಾವು ನೋಡಿದ ಹಾಗೆ ಪುರುಷರು ಮಹಿಳೆಯರಂತೆ ಅಳೋದು ಕೂಡ ಕಡಿಮೆ. ಅಪರೂಪಕ್ಕೆ ಎಂಬಂತೆ ಅವರು ಅಳುತ್ತಾರೆ. ಆದರೆ ನಿಜವಾಗಿ ಪುರುಷರು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ತಮ್ಮ ಪ್ರಸ್ಟ್ರೇಷನ್ (frustration), ಸ್ಟ್ರೆಸ್ ಎಲ್ಲವನ್ನೂ ದೂರ ಮಾಡಲು ಜೋರಾಗಿ ಅಳುತ್ತಾರೆ.
ನಿಮ್ಮ ಮೇಕಪ್ ಐಟಮ್ ಟ್ರೈ ಮಾಡ್ತಾರೆ:
ನಿಮ್ಮ ಮೇಕಪ್ ಐಟಂಗಳನ್ನು (makeup item) ಅವರು ಚೆಕ್ ಮಾಡ್ತಾರೆ. ನಿಮ್ಮ ಮೇಕಪ್ ಬಾಕ್ಸ್ ನಲ್ಲಿ ಯಾವ ಐಟಂಗಳಿವೆ ಎಂದು ತಿಳಿಯಲು ನಿಮ್ಮ ಸಂಗಾತಿಗಳು ಸಾಕಷ್ಟು ಕುತೂಹಲ ಹೊಂದಿದ್ದಾರೆ. ನೀವು ಅಲ್ಲಿ ಇಲ್ಲದಿದ್ದಾಗ ಅವರು ಇದೆಲ್ಲವನ್ನೂ ಪರಿಶೀಲಿಸುತ್ತಾರೆ.
ವಿಭಿನ್ನ ಮತ್ತು ವಿಚಿತ್ರ ಆಹಾರ ಟ್ರೈ ಮಾಡೋದು:
ನೀವು ಮನೆಯಲ್ಲಿದ್ದಾಗ ಒಳ್ಳೋಳ್ಳೆ ಆಹಾರ ಮಾಡಿದಾಗ ಸಂಗಾತಿ ಅದನ್ನು ಇಷ್ಟಪಟ್ಟು ಸೇವಿಸುತ್ತಾರೆ. ಆದರೆ ನೀವು ಇಲ್ಲದೇ ಇದ್ದಾಗ ಅವರು ಉಳಿದ ಆಹಾರಗಳ ಯಾವುದೇ ಕಾಂಬಿನೇಶನ್ ನ್ನು ಟ್ರೈ ಮಾಡಿ ಸೇವಿಸುತ್ತಾರೆ. ಅದನ್ನು ನೀವು ಯೋಚಿಸಲು ಸಹ ಸಾಧ್ಯವಿಲ್ಲ. ನೀವು ಅದನ್ನು ಕಂಡರೆ ಛೀ ಎನ್ನುವಿರಿ… ಆದರೆ ಅವರು ಅದನ್ನೆ ಯಮ್ಮೀ ಎನ್ನುತ್ತಾರೆ.